ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಪಾಕಿಸ್ತಾನ ಉಗ್ರರಿಂದ ಸಂವಹನಕ್ಕೆ ಅಶ್ಲೀಲ ವೆಬ್‌ಸೈಟ್‌, ಎನ್‌ಕ್ರಿಪ್ಟ್ ಮಾಡಲಾದ ಆ್ಯಪ್‌ ಬಳಕೆ; ಕುತಂತ್ರ ಬಯಲಿಗೆಳೆದ ಭದ್ರತಾ ಸಂಸ್ಥೆ

Terrorists Using Encrypted Apps: ಭಯೋತ್ಪಾದಕರು ಮತ್ತು ಅವರ ಹ್ಯಾಂಡ್ಲರ್‌ಗಳು ರಹಸ್ಯವಾಗಿ ಸಂವಹನ ನಡೆಸಲು ಬಳಸುತ್ತಿದ್ದ ಹೊಸ ತಂತ್ರವನ್ನು ಭದ್ರತಾ ಸಂಸ್ಥೆಗಳು ಪತ್ತೆಹಚ್ಚಿವೆ. ಟಾರ್ ನೆಟ್‌ವರ್ಕ್ ಬಳಸುವ ಪ್ಲಾಟ್‌ಫಾರ್ಮ್‌ಗಳನ್ನು ಪತ್ತೆಹಚ್ಚುವುದು ಅತ್ಯಂತ ಕಷ್ಟ ಎಂದು ಭದ್ರತಾ ತಜ್ಞರು ತಿಳಿಸಿದ್ದಾರೆ. ಉಗ್ರರು ಸಂವಹನಕ್ಕಾಗಿ ಅಶ್ಲೀಲ ವೆಬ್‌ಸೈಟ್‌, ಎನ್‌ಕ್ರಿಪ್ಟ್ ಮಾಡಲಾದ ಆ್ಯಪ್‌ ಬಳಸುತ್ತಿರುವುದು ಕಂಡು ಬಂದಿದೆ.

ಸಾಂದರ್ಭಿಕ ಚಿತ್ರ

ನವದೆಹಲಿ, ಆ. 30: ಭಯೋತ್ಪಾದಕರು (Terrorists) ಮತ್ತು ಅವರ ಹ್ಯಾಂಡ್ಲರ್‌ಗಳು ರಹಸ್ಯವಾಗಿ ಸಂವಹನ ನಡೆಸಲು ಬಳಸುತ್ತಿದ್ದ ಹೊಸ ತಂತ್ರವನ್ನು ಭದ್ರತಾ ಸಂಸ್ಥೆಗಳು ಪತ್ತೆಹಚ್ಚಿದೆ. ಸೂಚನೆಗಳನ್ನು ರವಾನಿಸಲು ಈಗ ಅಶ್ಲೀಲ ವೆಬ್‌ಸೈಟ್‌ಗಳು (Porn sites) ಮತ್ತು ಎನ್‌ಕ್ರಿಪ್ಟ್ ಮಾಡಲಾದ ಪ್ರತ್ಯೇಕ ಆ್ಯಪ್‌ಗಳನ್ನು ಬಳಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣಗಳ ಮೇಲಿಟ್ಟಿರುವ ಹದ್ದಿನ ಕಣ್ಣಿನಿಂದ ತಪ್ಪಿಸಿಕೊಳ್ಳಲು ಭಯೋತ್ಪಾದಕ ಸಂಘಟನೆಗಳು ಮತ್ತು ಪಾಕಿಸ್ತಾನದ ಗುಪ್ತಚರ ಸಂಸ್ಥೆಯಾದ ಐಎಸ್‌ಐ (ISI), ಈ ಮಾರ್ಗಗಳನ್ನು ಬಳಸಿಕೊಳ್ಳುತ್ತಿವೆ ಎಂದು ಸಂಸ್ಥೆಗಳು ಹೇಳಿವೆ.

ಬಳಕೆದಾರರು ತಮ್ಮ ಹತ್ತಿರದಲ್ಲೇ ಡೇಟಿಂಗ್ ಮಾಡಲು ನೆರವಾಗುವ ಸಾಧನಗಳಂತೆ ಬಿಂಬಿಸಿಕೊಳ್ಳುವ, ಲೈವ್ ಚಾಟ್ ವೈಶಿಷ್ಟ್ಯಗಳನ್ನು ಹೊಂದಿರುವ ಅಶ್ಲೀಲ ಪ್ಲಾಟ್‌ಫಾರ್ಮ್‌ಗಳು ಹಾಗೂ ಬಳಕೆದಾರರ ಗುರುತನ್ನು ಮರೆಮಾಚುವ ಗೌಪ್ಯತೆ-ಕೇಂದ್ರಿತ ಮೆಸೇಜಿಂಗ್ ಆ್ಯಪ್‌ಗಳು ಈ ರಹಸ್ಯ ಜಾಲದಲ್ಲಿ ಒಳಗೊಂಡಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಧಿಕಾರಿಗಳ ಪ್ರಕಾರ, ಬಳಕೆದಾರರ ಗುರುತನ್ನು ಮರೆಮಾಚಲು ಎನ್‌ಕ್ರಿಪ್ಟ್ ಮಾಡಲಾದ ನೋಡ್‌ಗಳ ಮೂಲಕ ಡೇಟಾವನ್ನು ರವಾನಿಸುವ ಕೋಟೆಕ್ಸ್ ಮತ್ತು ಕೋನಿಯನ್‌ನಂತಹ ಟಾರ್-ಆಧಾರಿತ ಮೆಸೇಜಿಂಗ್ ಆ್ಯಪ್‌ಗಳನ್ನು ಹ್ಯಾಂಡ್ಲರ್‌ಗಳು ಬಳಸುತ್ತಿದ್ದಾರೆ. ಕೋನಿಯನ್ ಆ್ಯಪ್‌ನ ಎಪಿಕೆ ಫೈಲ್ ಡೌನ್‌ಲೋಡ್ ಮಾಡುವುದನ್ನು ಭಾರತದಲ್ಲಿ ನಿರ್ಬಂಧಿಸಲಾಗಿದೆ. ಇದರೊಂದಿಗೆ, ಸಿಮ್ ಕಾರ್ಡ್ ಅಥವಾ ಫೋನ್ ನಂಬರ್ ಇಲ್ಲದೆಯೇ ಎಂಡ್-ಟು-ಎಂಡ್ ಎನ್‌ಕ್ರಿಪ್ಟ್ ಮಾಡಿದ ಸಂದೇಶ ರವಾನೆಗೆ ಅವಕಾಶ ನೀಡುವ ಫ್ರಾನ್ಸ್ ಮೂಲದ ಆ್ಯಪ್ ಒಂದರ ಮೇಲೆಯೂ ತನಿಖಾ ಸಂಸ್ಥೆಗಳು ನಿಗಾ ಇಟ್ಟಿದ್ದು, ಇದು ಬಳಕೆದಾರರನ್ನು ಪತ್ತೆಹಚ್ಚುವುದನ್ನು ಇನ್ನಷ್ಟು ಕಷ್ಟವಾಗಿಸಿದೆ.

ಮಕ್ಕಳ ಕೈಗೆ ಮೊಬೈಲ್‌ ಕೊಡುವ ಮುನ್ನ ಎಚ್ಚರ; ಆನ್‌ಲೈನ್ ಆಟಗಳ ಮೂಲಕ ಸೆಳೆಯುತ್ತಿದ್ದಾರೆ ಭಯೋತ್ಪಾದಕರು

ಚೀನಾ ಮೂಲದ್ದೆಂದು ಶಂಕಿಸಲಾದ ಮತ್ತು ಸಾಂಪ್ರದಾಯಿಕ ನೋಂದಣಿ ಪ್ರಕ್ರಿಯೆಯನ್ನೇ ಮರೆಮಾಚುವ ಮಾಡುವ ಪಿಜಿಪಿ-ಎನ್‌ಕ್ರಿಪ್ಟ್ ಆವೃತ್ತಿಗಳು ಸೇರಿ ವಿಯೆಟ್ನಾಂ ಮೂಲದ ಆ್ಯಪ್‌ಗಳು ಮತ್ತು ಮೂನ್‌ಚಾಟ್‌ನಂತಹ ಅನಾಮಧೇಯ ಪ್ಲಾಟ್‌ಫಾರ್ಮ್‌ಗಳ ಮೇಲೆಯೂ ಅಧಿಕಾರಿಗಳು ನಿಗಾ ಇಟ್ಟಿದ್ದಾರೆ.

ಮೂನ್‌ಚಾಟ್ ಆ್ಯಪ್ ತನ್ನ ಹತ್ತಿರದಲ್ಲೇ ಇರುವ ಅವಿವಾಹಿತರನ್ನು ಪತ್ತೆಹಚ್ಚಲು ಬಳಸಲಾಗುವ ಹಲವಾರು ಆವೃತ್ತಿಗಳನ್ನು ಹೊಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭಾರತದಲ್ಲಿ ಈಗಾಗಲೇ ನಿಷೇಧಿಸಲಾಗಿರುವ ಆ್ಯಪ್‌ಗಳನ್ನು ಇಂಟರ್‌ನೆಟ್‌ ವಿಳಾಸಗಳನ್ನು ಮರೆಮಾಚುವ ಮತ್ತು ಆನ್‌ಲೈನ್ ಚಟುವಟಿಕೆಗಳ ಪತ್ತೆಯನ್ನು ಇನ್ನಷ್ಟು ಕಷ್ಟವಾಗಿಸುವ ವಿಪಿಎನ್ ಸೇವೆಗಳ ಮೂಲಕ ಕಾನೂನುಬಾಹಿರವಾಗಿ ಡೌನ್‌ಲೋಡ್ ಮಾಡಿಕೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಟಾರ್ ನೆಟ್‌ವರ್ಕ್ ಬಳಸುವ ಪ್ಲಾಟ್‌ಫಾರ್ಮ್‌ಗಳನ್ನು ಪತ್ತೆಹಚ್ಚುವುದು ಅತ್ಯಂತ ಕಷ್ಟ ಎಂದು ಭದ್ರತಾ ತಜ್ಞರು ತಿಳಿಸಿದ್ದಾರೆ. ಎನ್‌ಕ್ರಿಪ್ಟ್ ಮಾಡಲಾದ ಮಾಹಿತಿ ವಿಶ್ವದಾದ್ಯಂತ ಇರುವ ಹಲವು ರಿಲೇ ಪಾಯಿಂಟ್‌ಗಳ ಮೂಲಕ ಹಾದುಹೋಗುತ್ತದೆ. ಇದರಿಂದಾಗಿ ಡೇಟಾ ಎಲ್ಲಿಂದ ಬರುತ್ತಿದೆ ಮತ್ತು ಎಲ್ಲಿಗೆ ಹೋಗುತ್ತಿದೆ ಎಂಬುದನ್ನು ಪತ್ತೆ ಹಚ್ಚುವುದು ದೊಡ್ಡ ಸವಲಾಗುತ್ತದೆ.