ಮಕ್ಕಳ ಕೈಗೆ ಮೊಬೈಲ್ ಕೊಡುವ ಮುನ್ನ ಎಚ್ಚರ; ಆನ್‌ಲೈನ್ ಆಟಗಳ ಮೂಲಕ ಸೆಳೆಯುತ್ತಿದ್ದಾರೆ ಭಯೋತ್ಪಾದಕರು
ಭಯೋತ್ಪಾದಕ ಸಂಘಟನೆಗಳು ಮಕ್ಕಳನ್ನು ಸೆಳೆಯಲು ಪ್ರಯತ್ನಿಸುತ್ತಿದೆ. ಇದಕ್ಕಾಗಿ ಅವರಿಗೆ ಆನ್‌ಲೈನ್ ಆಟಗಳ ಆಮಿಷವೊಡ್ಡುತ್ತಿದ್ದಾರೆ. ಹೀಗಾಗಿ ಮಕ್ಕಳನ್ನು ಆನ್‌ಲೈನ್ ಆಟಗಳಿಂದ ದೂರವಿಡಿ ಎಂದು ರಾಜಸ್ಥಾನ ಸೈಬರ್ ಸೆಲ್ ಹೇಳಿದೆ. ದೇಶದಲ್ಲಿ 11 ರಿಂದ 17 ವರ್ಷ ವಯಸ್ಸಿನ ಮಕ್ಕಳು ಹೆಚ್ಚು ಅಪಾಯದಲ್ಲಿದ್ದಾರೆ ಎಂದು ಡಿಐಜಿ ವಿಕಾಸ್ ಕುಮಾರ್ ತಿಳಿಸಿದ್ದಾರೆ.
ಸಂಗ್ರಹ ಚಿತ್ರ -
ಜೈಪುರ: ದೇಶದಲ್ಲಿ 11 ರಿಂದ 17 ವರ್ಷ ವಯಸ್ಸಿನ ಮಕ್ಕಳು ಹೆಚ್ಚು ಅಪಾಯದಲ್ಲಿದ್ದಾರೆ. ಭಯೋತ್ಪಾದಕ ಸಂಘಟನೆಗಳು (Terrorist organizations) ಆನ್‌ಲೈನ್ ಆಟಗಳ (online games) ಮೂಲಕ ಮಕ್ಕಳ ದಾರಿ ತಪ್ಪಿಸುತ್ತವೆ. ಹೀಗಾಗಿ ಪೋಷಕರು ತಮ್ಮ ಮಕ್ಕಳ ಮೇಲೆ ನಿಗಾ ಇರಿಸಬೇಕು. ಅವರು ಮೊಬೈಲ್ ಫೋನ್‌ಗಳಲ್ಲಿ ಏನು ಆಡುತ್ತಿದ್ದಾರೆ ಎಂಬುದನ್ನು ನೋಡಬೇಕು. ಭಯೋತ್ಪಾದಕ ಸಂಘಟನೆಗಳು ಆನ್‌ಲೈನ್ ಆಟಗಳನ್ನು ಆಡುವ ಮಕ್ಕಳನ್ನು ಸೆಳೆಯಲು ಪ್ರಯತ್ನಿಸುತ್ತಿವೆ. ಇದಕ್ಕಾಗಿ ರೋಬ್ಲಾಕ್ಸ್, ಮೈನ್‌ಕ್ರಾಫ್ಟ್ ಮತ್ತು ಡಿಸ್ಕಾರ್ಡ್‌ನಂತಹ ವೇದಿಕೆಗಳನ್ನು ಬಳಸುತ್ತಿವೆ ಎಂದು ರಾಜಸ್ಥಾನ ಸೈಬರ್ ಸೆಲ್ (Rajasthan Cyber Cell) ಎಚ್ಚರಿಸಿದೆ.
ಸ್ಯಾಂಡ್‌ಬಾಕ್ಸ್ ಆಟಗಳು ಮಕ್ಕಳಿಗೆ ಬೆದರಿಕೆಯಾಗಿದೆ. ಅಲ್ಲಿ ಮಕ್ಕಳು ಮುಕ್ತ ಚಾಟ್ ಸ್ವಾತಂತ್ರ್ಯವನ್ನು ಹೊಂದಿದ್ದು, ಅವರು ಸುಲಭವಾಗಿ ಭಯೋತ್ಪಾದಕರ ಬಲೆಗೆ ಬೀಳುತ್ತಾರೆ. ಭಯೋತ್ಪಾದಕ ಸಂಘಟನೆಗಳು ಮಕ್ಕಳ ಮುಗ್ಧತೆಯನ್ನು ಬಳಸಿಕೊಂಡು ಅವರ ಬ್ರೈನ್‌ವಾಶ್ ಮಾಡಲು ಪ್ರಾರಂಭಿಸುತ್ತವೆ.
ಮಣ್ಣಿನ ಮಡಿಕೆ ಮಾರುವ ಕುಂಬಾರನಿಗೆ 1.2 ಕೋಟಿ ರುಪಾಯಿ ಜಿಎಸ್‌ಟಿ ನೋಟಿಸ್
ಮಕ್ಕಳನ್ನು ಸೆಳೆಯಲು ಭಯೋತ್ಪಾದಕ ಸಂಘಟನೆಗಳು ಮೊದಲು ಗೇಮಿಂಗ್ ಚಾಟ್ ರೂಮ್‌ನಲ್ಲಿ ಮಕ್ಕಳ ಸ್ನೇಹ ಬೆಳೆಸುತ್ತಾರೆ. ಬಳಿಕ ಖಾಸಗಿ ಚಾಟ್ ಮೂಲಕ ಸಣ್ಣ ಕೆಲಸಗಳನ್ನು ನೀಡುತ್ತಾರೆ. ಅನಂತರ ಆಟದ ನೆಪದಲ್ಲಿ ಮಿಷನ್ ನೀಡಿ ಮಕ್ಕಳನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತಾರೆ ಎಂದು ಸೈಬರ್ ಸೆಲ್ ಡಿಐಜಿ ವಿಕಾಸ್ ಕುಮಾರ್ ತಿಳಿಸಿದ್ದಾರೆ.
ಪೋಷಕರು ತಮ್ಮ ಮಕ್ಕಳ ಮೊಬೈಲ್ ಫೋನ್‌ಗಳು ಮತ್ತು ಅವರು ಬಳಸುತ್ತಿರುವ ಅಪ್ಲಿಕೇಶನ್‌ಗಳ ಮೇಲೆ ನಿಗಾ ಇಡಬೇಕು. ಮಕ್ಕಳು ತಮ್ಮ ಮೊಬೈಲ್ ಫೋನ್‌ಗಳಲ್ಲಿ ನಡೆಸುವ ಪ್ರತಿಯೊಂದು ಚಟುವಟಿಕೆಯನ್ನು ಮೇಲ್ವಿಚಾರಣೆ ಮಾಡಬೇಕು. ಈ ಮೂಲಕ ಅವರನ್ನು ಇಂತಹ ಅಪರಾಧದ ಜಾಲದಿಂದ ದೂರವಿಡಬಹುದು ಎಂದು ತಿಳಿಸಿದ್ದಾರೆ.