ಪಣಜಿ: ಸಾಮಾನ್ಯವಾಗಿ ಕಾಗೆಗಳು ಮನೆಯ ಬಳಿ ಕೂಗುವುದು, ಬಿದ್ದ ಆಹಾರವನ್ನು ತಿನ್ನುವುದನ್ನು ನೀವೆಲ್ಲಾ ನೋಡಿರುತ್ತೀರಿ. ಆದರೆ ಕಾಗೆ ಎಂದಾದರೂ ಫುಟ್ಬಾಲ್ ಆಡುವುದನ್ನು ನೀವು ನೋಡಿದ್ದೀರಾ? ಕಾಗೇ ಪುಟ್ಬಾಲ್ ಆಡುತ್ತಾ? ಎಂದು ನೀವು ಕೂಡ ಆಶ್ಚರ್ಯಪಡುತ್ತಿದ್ದೀರಾ? ಹೌದು ಇಲ್ಲೊಂದು ಕಾಗೆ(Crow) ಹುಡುಗನೊಬ್ಬನ ಜೊತೆ ಫುಟ್ಬಾಲ್ (Football) ಆಡಿದೆ. ಈ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ. ಇದನ್ನು ಕಂಡು ನೆಟ್ಟಿಗರು ಶಾಕ್ ಆಗಿದ್ದಾರೆ.
ವೈರಲ್ ಆದ ವಿಡಿಯೊದಲ್ಲಿ ಕಾಗೆ ಹುಡುಗನೊಂದಿಗೆ ಫುಟ್ಬಾಲ್ ಆಡುವುದು ಸೆರೆಯಾಗಿದೆ. ಈ ವಿಡಿಯೊವನ್ನು ಗೋವಾದಲ್ಲಿ ರೆಕಾರ್ಡ್ ಮಾಡಲಾಗಿದೆ ಎನ್ನಲಾಗಿದೆ. ಇದರಲ್ಲಿ ಬಾಲಕ ತನ್ನ ಕಾಲಿನ ಕೆಳಗೆ ಸಣ್ಣ ಚೆಂಡನ್ನು ಇಟ್ಟು ಆಡುತ್ತಿರುವಾಗ ಅಲ್ಲಿದ್ದ ಕಾಗೆ ತನ್ನ ಕೊಕ್ಕನ್ನು ಬಳಸಿ, ಚೆಂಡನ್ನು ಹುಡುಗನ ಕಡೆಗೆ ತಳ್ಳಿದೆ ಮತ್ತು ಅವನು ಅದನ್ನು ಅಷ್ಟೇ ಎಚ್ಚರಿಕೆಯಿಂದ ನಿಧಾನವಾಗಿ ಕಾಗೆಯ ಕಡೆಗೆ ತಳ್ಳಿದ್ದಾನೆ. ಅವರಿಬ್ಬರು ಸೇರಿ ತಮ್ಮ ಮನೆಯ ಅಂಗಳದಲ್ಲಿ ಫುಟ್ಬಾಲ್ ಆಟವನ್ನು ಎಂಜಾಯ್ ಮಾಡಿದ್ದಾರೆ.
ವಿಡಿಯೊ ಇಲ್ಲಿದೆ ನೋಡಿ...
ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ನೆಟ್ಟಿಗರು ಕಾಗೆಯ ಈ ಆಟವನ್ನು ನೋಡಿ ಫುಲ್ ಖುಷಿಯಾಗಿ ಕಾಮೆಂಟ್‌ಗಳ ಸುರಿಮಳೆಗೈದಿದ್ದಾರೆ. "ಕಾಗೆಯನ್ನು ಅಖಿಲ ಭಾರತ ಫುಟ್ಬಾಲ್ ಫೆಡರೇಶನ್‌ಗೆ ಸೇರಿಸಿ" ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.
ಕಾಗೆ ಮನುಷ್ಯರಂತೆ ನಡೆದುಕೊಂಡಿದ್ದು ಇದೇ ಮೊದಲಲ್ಲ. ಈ ಹಿಂದೆ, ಮಹಾರಾಷ್ಟ್ರದ ಪಾಲ್ಘರ್‌ನಲ್ಲಿ ಕಾಗೆಯೊಂದು ಮನುಷ್ಯನಂತೆ ಮಾತನಾಡುವ ಸಾಮರ್ಥ್ಯಕ್ಕಾಗಿ ವೈರಲ್ ಆಗಿತ್ತು. ವೈರಲ್ ಆಗಿರುವ ವಿಡಿಯೊದಲ್ಲಿ, ಕಾಗೆ ಮನುಷ್ಯರ ಧ್ವನಿಯನ್ನು ಅನುಕರಿಸುತ್ತಾ "ಪಾಪಾ" ಎಂದು ಹೇಳುವುದನ್ನು ಕೇಳಬಹುದು.
ಈ ಸುದ್ದಿಯನ್ನೂ ಓದಿ:Viral Video: ವಿದೇಶಿ ಯುವತಿಯ ಡೇಟಿಂಗ್ ಆಫರ್ ತಿರಸ್ಕರಿಸಿದ ಯುವಕ; ಕಾರಣವೇನು?
ವರದಿ ಪ್ರಕಾರ, ಪಾಲ್ಘರ್‌ನ ವಾಡಾ ತಾಲೂಕಿನ ಗ್ರಾಮವೊಂದರಲ್ಲಿ ತನುಜಾ ಮುಕ್ನೆ ಎಂಬ ಮಹಿಳೆ ಮೂರು ವರ್ಷಗಳ ಹಿಂದೆ ಈ ಕಾಗೆಯನ್ನು ಸಾಕಿದ್ದರು. ಅವರು ಸಾಕಿದ ಕಾಗೆ ಮನುಷ್ಯನಂತೆ ಮಾತನಾಡಲು ಶುರು ಮಾಡಿದ್ದನ್ನು ಕಂಡು ಸ್ಥಳೀಯರಿಗೆ ಅಚ್ಚರಿಯಾಗಿತ್ತು.