ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ವಿದೇಶಿ ಯುವತಿಯ ಡೇಟಿಂಗ್ ಆಫರ್‌ ತಿರಸ್ಕರಿಸಿದ ಯುವಕ; ಕಾರಣವೇನು?

ವಿದೇಶಿ ಯುವತಿಯೊಬ್ಬಳು ಸೈಕಲ್‍ನಲ್ಲಿ ನಿಂತಿದ್ದ ಹರಿಯಾಣದ ಹುಡುಗನಿಗೆ, “ನಿಮಗೆ 100 ಡಾಲರ್‌ ಬೇಕೇ ಅಥವಾ ನನ್ನೊಂದಿಗೆ ಡೇಟ್ ಮಾಡಬೇಕೆ?” ಎಂದು ಕೇಳಿದ್ದಾಳೆ. ಆ ಹುಡುಗ ನೀಡಿದ ಉತ್ತರ ಕೇಳಿ ಯುವತಿ ಶಾಕ್‌ ಆಗಿದ್ದಾಳೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಈ ಕಾರಣಕ್ಕೆ ವಿದೇಶಿ ಯುವತಿಯ ಡೇಟಿಂಗ್ ಆಫರ್‌ ತಿರಸ್ಕರಿಸಿದ ಯುವಕ

-

Profile
pavithra Jun 4, 2025 5:57 PM

ಚಂಡೀಗಢ: ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆಗಲು ಜನರು ಯಾವುದ್ಯಾವುದೋ ರೀಲ್‌ಗಳನ್ನು ಮಾಡುತ್ತಿರುತ್ತಾರೆ. ಇದೀಗ ಅಂಥದ್ದೇ ಒಂದು ವಿಡಿಯೊ ಸಿಕ್ಕಾಪಟ್ಟೆ ವೈರಲ್‌ ಆಗಿದೆ. ವಿದೇಶಿ ಯುವತಿಯೊಬ್ಬಳು ಸೈಕಲ್‍ನಲ್ಲಿ ನಿಂತಿದ್ದ ಹರಿಯಾಣದ ಹುಡುಗನಿಗೆ ವಿಶೇಷ ಆಫರ್ ಅನ್ನು ನೀಡಿ ಅಚ್ಚರಿ ಮೂಡಿಸಿದ್ದಾಳೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ (Viral Video) ಆಗಿದೆ. ಈ ವಿಡಿಯೊವನ್ನು ಸ್ವತಃ ರೂಬಿ ಹೆಕ್ಸ್ ಎಂಬ ಯುವತಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾಳೆ. ಈ ವಿಡಿಯೊದಲ್ಲಿ ಆಕೆ ಅಪರಿಚಿತರ ಬಳಿ ಹೋಗಿ ಹಣ ಬೇಕೆ ಅಥವಾ ತನ್ನ ಜತೆ ಡೇಟಿಂಗ್‌(Dating) ಇವೆರಡರಲ್ಲಿ ಯಾವುದನ್ನು ಆಯ್ಕೆ ಮಾಡುತ್ತೀರಾ ಎಂದು ಕೇಳಿದ್ದಾಳೆ. ಹೆಚ್ಚಿನ ಜನರು ಹಣವನ್ನು ಆಯ್ಕೆ ಮಾಡಿದ್ದಾರೆ. ಆದರೆ ಹರಿಯಾಣದ ಈ ಹುಡುಗ ನೀಡಿದ ಉತ್ತರದಿಂದ ಆಕೆ ಶಾಕ್‌ ಆಗಿದ್ದಾಳೆ.

ವೈರಲ್ ವಿಡಿಯೊದಲ್ಲಿ ರೂಬಿ ಕೈಯಲ್ಲಿ ಮೈಕ್ ಹಿಡಿದು ಸೈಕಲ್‍ನಲ್ಲಿ ನಿಂತು ಫೋನ್‍ನಲ್ಲಿ ಸಹೋದರನೊಂದಿಗೆ ಮಾತನಾಡುತ್ತಿದ್ದ ಹುಡುಗನ ಬಳಿ ಹೋಗಿ "ನಿಮಗೆ 100 ಡಾಲರ್‌ (8,500 ರೂ.) ಬೇಕೇ ಅಥವಾ ನನ್ನ ಜೊತೆ ಡೇಟಿಂಗ್‌ ಮಾಡಲು ಇಷ್ಟಪಡುತ್ತೀರಾ?ʼʼ ಎಂದು ಕೇಳಿದ್ದಾಳೆ. ಆದರೆ ಆ ಹುಡುಗ ಅವಳು ನೀಡಿದ ಎರಡೂ ಆಯ್ಕೆಯನ್ನು ತಿರಸ್ಕರಿಸುವ ಮೂಲಕ ಶಾಕ್‌ ನೀಡಿದ್ದಾನೆ.

ವಿಡಿಯೊ ಇಲ್ಲಿದೆ ನೋಡಿ...

ಈ ಸುದ್ದಿಯನ್ನೂ ಓದಿ:Viral Video: ಚಲಿಸುವ ರೈಲು ಹತ್ತುವ ಸಾಹಸಕ್ಕೆ ಹೋಗಬಾರದು; ಯಾಕೆ ಎನ್ನುವುದಕ್ಕೆ ಈ ವಿಡಿಯೊ ನೋಡಿ

ಈ ವಿಡಿಯೊ ಈಗಾಗಲೇ 55 ಲಕ್ಷಕ್ಕೂ ಹೆಚ್ಚು ವ್ಯೂವ್ಸ್ ಗಳಿಸಿದೆ. ಅನೇಕ ನೆಟ್ಟಿಗರು ಆ ಹುಡುಗನ ನಡವಳಿಕೆಯನ್ನು ಮೆಚ್ಚಿಕೊಂಡಿದ್ದಾರೆ. ಒಬ್ಬರು "ಅವನು ಅವಳನ್ನು ತುಂಬಾ ಗೌರವದಿಂದ ತಿರಸ್ಕರಿಸಿದ್ದಾನೆ" ಎಂದು ಕಾಮೆಂಟ್ ಮಾಡಿದ್ದಾರೆ. ಒಟ್ಟಾರೆ ಆ ಹುಡುಗನ ಸರಳತೆ ಮತ್ತು ಗೌರವಯುತ ಮನೋಭಾವವು ಅನೇಕರ ಹೃದಯಗಳನ್ನು ಗೆದ್ದಿದೆ.