ಪಟನಾ: ಬಿಹಾರ ವಿಧಾನಸಭಾ ಚುನಾವಣೆ (Bihar Assembly Election 2025) ಎರಡೂ ಹಂತ ಮಕ್ತಾಯಗೊಂಡಿದೆ. ನಾಳೆ (ನವೆಂಬರ್ 14) ರಂದು ಫಲಿತಾಂಶ ಹೊರಬೀಳಲಿದೆ. ಸಮೀಕ್ಷೆಗಳು ಎನ್‌ಡಿಎ ಪರವಾಗಿದ್ದು, ನಿತೀಶ್ ಕುಮಾರ್ (Nitish Kumar) ಮತ್ತೆ ಬಿಹಾರದ ಗದ್ದುಗೆ ಏರಲಿದ್ದಾರಾ ಎಂಬುದಕ್ಕೆ ನಾಳೆ ಉತ್ತರ ಸಿಗಲಿದೆ. ರಾಜಕೀಯದ ಸೂಕ್ಷ್ಮ ಸಮತೋಲನವನ್ನು ಕರಗತ ಮಾಡಿಕೊಂಡವರಲ್ಲಿ ಬಿಹಾರದ ಆಧುನಿಕ ಇತಿಹಾಸದಲ್ಲಿ ಅತ್ಯಂತ ಶಾಶ್ವತ ರಾಜಕೀಯ ವ್ಯಕ್ತಿ ನಿತೀಶ್ ಕುಮಾರ್ ಕೂಡ ಒಬ್ಬರು.
ಬಿಹಾರದ ಇತಿಹಾಸದಲ್ಲಿ ನಿತೀಶ್ ಕುಮಾರ್ ಹೊಸ ದಾಖಲೆ ಬರೆದಿದ್ದರು. ಮೊದಲ ಬಾರಿಗೆ 1985ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಹೀಗೆ ರಾಜಕೀಯ ಬದುಕು ಆರಂಭಿಸಿದ ನಿತೀಶ್ ಕುಮಾರ್ ಮತ್ತೆ ಹಿಂತಿರುಗಿ ನೋಡಲಿಲ್ಲ. 1987ರಲ್ಲಿ ಲೋಕ ದಳ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡರು. 1989ರಲ್ಲಿ ಜನತಾ ದಳದ ಮುಖ್ಯಕಾರ್ಯದರ್ಶಿಯಾಗಿ ನಿತೀಶ್ ಕುಮಾರ್ ನೇಮಕಗೊಂಡಿದ್ದಲ್ಲೇ ಸಂಸದರಾಗಿ ಆಯ್ಕೆಯಾದರು.
1990ರಲ್ಲಿ ಮೊದಲ ಬಾರಿಗೆ ಕೃಷಿ ಮತ್ತು ಸಹಕಾರಿ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಬಳಿಕ ವಾಜಪೇಯಿ ಸರ್ಕಾರದಲ್ಲಿ ರೈಲ್ವೆ ಸಚಿವರಾಗಿ ಅಧಿಕಾರ ವಹಿಸಿಕೊಂಡ ಬಳಿಕ ನಿತೀಶ್ ಮತ್ತಷ್ಟು ಶಕ್ತಿಶಾಲಿ ರಾಜಕಾರಣಿಯಾಗಿ ಹೊರಹೊಮ್ಮಿದರು. 2000 ನೇ ಇಸವಿಯಲ್ಲಿ ಬಿಹಾರದ ರಾಜ್ಯ ರಾಜಕಾರಣಕ್ಕೆ ಧುಮುಕಿದ ನಿತೀಶ್ ಮೊದಲ ಪ್ರಯತ್ನದಲ್ಲಿ ಗೆಲುವು ಕಂಡಿದ್ದರೂ, ಮುಖ್ಯಮಂತ್ರಿ ಆಗಿ ಪ್ರಮಾಣವಚನ ಸ್ವೀಕರಿಸಿ, ಬಹುಮತ ಸಾಬೀತುಪಡಿಸುವಲ್ಲಿ ಸೋತರು. ಇದರ ಪರಿಣಾಮ 8 ದಿನಗಳಲ್ಲೇ ಸರ್ಕಾರವು ಪತನಗೊಂಡಿತು. ಬಳಿಕ ಮತ್ತೆ 2005 ರಲ್ಲಿ ಬಿಜೆಪಿ ಜೊತೆ ಕೈಗೂಡಿಸಿದ ನಿತೀಶ್ ಮುಖ್ಯಮಂತ್ರಿ ಆಗಿ ಪ್ರಮಾಣವಚನ ಸ್ವೀಕರಿಸಿದರು.
2010ರ ನವೆಬಂರ್.26ರಂದು ಮೂರನೇ ಬಾರಿಗೆ ನಿತೀಶ್ ಕುಮಾರ್ ಮುಖ್ಯಮಂತ್ರಿ ಆಗಿ ಪ್ರಮಾಣವಚನ ಸ್ವೀಕರಿಸಿದ್ದರು. ಆದರೆ ಮೂರನೇ ಬಾರಿ ಸಿಎಂ ಆಗಿ ಪೂರ್ಣಾವಧಿ ಪೂರೈಸಲಿಲ್ಲ. 2014 ರ ಚುನಾವಣೆಯಲ್ಲಿ ಜೆಡಿಯು ಸೋಲು ಕಂಡಿತ್ತು. ಸೋಲು ಕಂಡ ಹಿನ್ನೆಲೆ ತಮ್ಮ ಸಿಎಂ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಬಿಹಾರ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ 9 ತಿಂಗಳಿನಲ್ಲೇ ಮತ್ತೆ ನಿತೀಶ್ ಕುಮಾರ್ ಸಿಎಂ ಕುರ್ಚಿಗೆ ಏರಿದರು.
ಈ ಸುದ್ದಿಯನ್ನೂ ಓದಿ: Bihar Election Result 2025: ಯಾರಿಗೊಲಿಯಲಿದೆ ಬಿಹಾರದ ಗದ್ದುಗೆ? ಈ ಕ್ಷೇತ್ರಗಳೇ ನಿರ್ಣಾಯಕ
ಫೆಬ್ರವರಿ.22, 2015ರಲ್ಲಿ ನಾಲ್ಕನೇ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು. 2015ರ ನವೆಂಬರ್.20ರಂದು ಐದನೇ ಬಾರಿಗೆ ಮುಖ್ಯಮಂತ್ರಿ ಆಗಿ ನಿತೀಶ್ ಕುಮಾರ್ ಅಧಿಕಾರಕ್ಕೇರಿದರು. ಅಂದು ಅತ್ಯಂತ ಯುವ ಉಪಮುಖ್ಯಮಂತ್ರಿಯಾಗಿ ತೇಜಸ್ವಿ ಯಾದವ್ ಪ್ರಮಾಣವಚನ ಸ್ವೀಕರಿಸಿದ್ದರು. 2017ರಲ್ಲಿ ರಾಷ್ಟ್ರೀಯ ಜನತಾದಳದ ಜೊತೆಗಿನ ಮೈತ್ರಿ ಕಡಿದುಕೊಂಡ ನಿತೀಶ್ ಕುಮಾರ್ ಸಿಎಂ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. 2020 ರಲ್ಲಿ ನಡೆದ ಚುನಾವಣೆಯಲ್ಲಿ ಗೆಲುವು ಸಾಧಿಸಿ ಮತ್ತೆ ಅಧಿಕಾರಕ್ಕೆ ಬಂದಿದ್ದರು.
2025 ರ ಕತೆಯೇನು?
ಬಹುತೇಕ 100 % ಸಮೀಕ್ಷೆಗಳು NDA ಗೆ ಅನುಕೂಲಕರ ಗೆಲುವು ಸಿಗುತ್ತದೆ ಎಂದು ಭವಿಷ್ಯ ನುಡಿದಿವೆ , ಮಹಾಘಟಬಂಧನ್ ಎರಡನೇ ಸ್ಥಾನದಲ್ಲಿದೆ. ಬಹುಮತವು NDA ಗೆ 130–160 ಸ್ಥಾನಗಳು ಮತ್ತು ವಿರೋಧ ಮೈತ್ರಿಕೂಟಕ್ಕೆ 70–105 ಸ್ಥಾನಗಳ ನಡುವೆ ಭವಿಷ್ಯ ನುಡಿದಿದೆ. ಏಜೆನ್ಸಿಯ ಪ್ರಕಾರ, ಎನ್‌ಡಿಎ 121 ರಿಂದ 141 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆ ಇದೆ, ಮಹಾಘಟಬಂಧನ್ 98 ರಿಂದ 118 ಸ್ಥಾನಗಳನ್ನು ಪಡೆಯುವ ಸಾಧ್ಯತೆ ಇದೆ.