ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ದೀಪಾವಳಿ ಸಮಯದಲ್ಲೇ ದೆಹಲಿಯಲ್ಲಿ ಹೆಚ್ಚಿದ ವಾಯು ಮಾಲಿನ್ಯ; 400 ದಾಟಿದ ಗಾಳಿ ಗುಣಮಟ್ಟ

ದೀಪಾವಳಿ ಹಬ್ಬದ ಸಂದರ್ಭದಲ್ಲಿಯೇ ರಾಷ್ಟ್ರ ರಾಜಧಾನಿ ದೆಹಲಿ ಹಾಗೂ ಸುತ್ತಮುತ್ತಲಿನ ಎನ್‌ಸಿಆರ್ (NCR) ಪ್ರದೇಶದ ಭಾರಿ ಹೊಗೆ ಮತ್ತು ಮಂಜಿನ (Smog) ದಟ್ಟ ಗಾಳಿಯಿಂದ ಆವೃತವಾಗಿದೆ . ಸೋಮವಾರ ಬೆಳಗಿನ ಜಾವ ಇಡೀ ನಗರವನ್ನು ದಟ್ಟವಾದ ಹೊಗೆ ಆವರಿಸಿದ್ದರಿಂದ ವಾಹನ ಸವಾರರ ದೃಷ್ಟಿ ಗೋಚರತೆ ತೀರಾ ಕಡಿಮೆಯಾಗಿತ್ತು.

ಸಂಗ್ರಹ ಚಿತ್ರ

ನವದೆಹಲಿ: ದೀಪಾವಳಿ ಹಬ್ಬದ ಸಂದರ್ಭದಲ್ಲಿಯೇ ರಾಷ್ಟ್ರ ರಾಜಧಾನಿ ದೆಹಲಿ ಹಾಗೂ ಸುತ್ತಮುತ್ತಲಿನ ಎನ್‌ಸಿಆರ್ (NCR) (Delhi Pollution) ಪ್ರದೇಶದ ಭಾರಿ ಹೊಗೆ ಮತ್ತು ಮಂಜಿನ (Smog) ದಟ್ಟ ಗಾಳಿಯಿಂದ ಆವೃತವಾಗಿದೆ . ಸೋಮವಾರ ಬೆಳಗಿನ ಜಾವ ಇಡೀ ನಗರವನ್ನು ದಟ್ಟವಾದ ಹೊಗೆ ಆವರಿಸಿದ್ದರಿಂದ ವಾಹನ ಸವಾರರ ದೃಷ್ಟಿ ಗೋಚರತೆ ತೀರಾ ಕಡಿಮೆಯಾಗಿತ್ತು. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (CPCB) ಮಾಹಿತಿ ಪ್ರಕಾರ, ದೆಹಲಿಯ ಪ್ರಮುಖ ಪ್ರದೇಶಗಳಲ್ಲಿ ವಾಯು ಗುಣಮಟ್ಟ ಸೂಚ್ಯಂಕ (AQI) 400ರ ಗಡಿ ದಾಟುವ ಮೂಲಕ ಪರಿಸ್ಥಿತಿ ತೀರಾ ಗಂಭೀರ ಮಟ್ಟವನ್ನು ತಲುಪಿದೆ.

ಸೋಮವಾರ ಮುಂಜಾನೆ 4:20ರ ಸುಮಾರಿಗೆ ದೆಹಲಿಯ ಐಟಿಒ ಪ್ರದೇಶದಲ್ಲಿ ವಾಯು ಗುಣಮಟ್ಟ ಸೂಚ್ಯಂಕವು 406 ಕ್ಕೆ ಏರಿಕೆಯಾಗಿತ್ತು. ಇನ್ನು ಭಾನುವಾರ ಸಂಜೆ ಜಹಾಂಗೀರ್‌ಪುರಿಯಲ್ಲಿ ಗರಿಷ್ಠ 460 AQI ದಾಖಲಾಗಿತ್ತು. ಮಾಲಿನ್ಯಕ್ಕೆ ಪ್ರಮುಖ ಕಾರಣಗಳು: ದೀಪಾವಳಿ ಹಬ್ಬದ ಪಟಾಕಿಗಳ ಹೊಗೆ, ವಾಹನಗಳ ಸರಣಿ ಹೊರಸೂಸುವಿಕೆ ಹಾಗೂ ನೆರೆಹೊರೆಯ ರಾಜ್ಯಗಳಲ್ಲಿ ಒಣಹುಲ್ಲು ಸುಡುವಿಕೆ ಮಾಲಿನ್ಯದ ತೀವ್ರತೆಯನ್ನು ಹೆಚ್ಚಿಸಿದೆ. ಗಾಳಿಯ ವೇಗ ಕಡಿಮೆಯಿರುವುದರಿಂದ ಈ ಮಾಲಿನ್ಯಕಾರಕ ಕಣಗಳು ವಾತಾವರಣದಲ್ಲೇ ಹೆಪ್ಪುಗಟ್ಟಿವೆ.

ದೆಹಲಿಯ ಅಲಿಪುರ್, ಬವಾನಾ, ಬುರಾರಿ, ಚಾಂದಿನಿ ಚೌಕ್, ಮುಂದ್ಕಾ, ಪಂಜಾಬಿ ಬಾಗ್, ರೋಹಿಣಿ ಮತ್ತು ವಿವೇಕ್ ವಿಹಾರ್ ಮುಂತಾದ ಕಡೆಗಳಲ್ಲಿ ವಾಯು ಗುಣಮಟ್ಟ ತೀವ್ರವಾಗಿ ಹದಗೆಟ್ಟಿದೆ. ದೆಹಲಿ ಮಾತ್ರವಲ್ಲದೆ ನೋಯ್ಡಾ (AQI 319), ಗಾಜಿಯಾಬಾದ್ (AQI 360), ಫರೀದಾಬಾದ್ (AQI 297) ಮತ್ತು ಗುರುಗ್ರಾಮ್ (AQI 280) ನಗರಗಳಲ್ಲೂ ಗಾಳಿಯ ಗುಣಮಟ್ಟ 'ಖರಾಬ್' (Very Poor) ಮಟ್ಟದಲ್ಲೇ ಮುಂದುವರಿದಿದೆ.

ದೆಹಲಿ-ಎನ್‌ಸಿಆರ್ ವ್ಯಾಪ್ತಿಯಲ್ಲಿ ವಾಯು ಗುಣಮಟ್ಟವು ತೀವ್ರವಾಗಿ ಹದಗೆಡುತ್ತಿರುವುದನ್ನು ತಡೆಯಲು ಏರ್ ಕ್ವಾಲಿಟಿ ಮ್ಯಾನೇಜ್‌ಮೆಂಟ್ ಆಯೋಗವು ಕಟ್ಟುನಿಟ್ಟಿನ GRAP ಹಂತ-3 (Stage III) ರ ಅಡಿಯಲ್ಲಿ ತಕ್ಷಣದಿಂದ ಜಾರಿಗೆ ಬರುವಂತೆ ಬಿಗಿಯಾದ ನಿರ್ಬಂಧಗಳನ್ನು ವಿಧಿಸಿದೆ. ದೆಹಲಿ ಮತ್ತು ಎನ್‌ಸಿಆರ್ ವ್ಯಾಪ್ತಿಯ ಜಿಲ್ಲೆಗಳಾದ ಗುರುಗ್ರಾಮ್, ಫರೀದಾಬಾದ್, ಘಾಜಿಯಾಬಾದ್ ಮತ್ತು ಗೌತಮ್ ಬುದ್ಧ ನಗರ (ನೋಯ್ಡಾ) ಜಿಲ್ಲೆಗಳಲ್ಲಿ 5ನೇ ತರಗತಿಯವರೆಗಿನ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಭೌತಿಕ ತರಗತಿಗಳ ಬದಲಾಗಿ ಆನ್‌ಲೈನ್ ಅಥವಾ ಹೈಬ್ರಿಡ್ ಮೋಡ್ ಮೂಲಕ ಶಿಕ್ಷಣ ನೀಡಲು ಸೂಚಿಸಲಾಗಿದೆ.

ದೀಪಾವಳಿ ದಿನವೇ ಘೋರ ದುರಂತ; ಪಟಾಕಿ ಎಂದು ಭಾವಿಸಿ ಸ್ಫೋಟಕ ಮದ್ದಿಗೆ ಬೆಂಕಿ ಹಚ್ಚಿದ 15 ವರ್ಷದ ಬಾಲಕನ ತಲೆ ಛಿದ್ರ ಛಿದ್ರ

ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಸಾರ್ವಜನಿಕ, ಮುನ್ಸಿಪಲ್ ಹಾಗೂ ಖಾಸಗಿ ಕಚೇರಿಗಳು ಶೇ. 50 ರಷ್ಟು ಸಿಬ್ಬಂದಿಯೊಂದಿಗೆ ಕೆಲಸ ಮಾಡಲು ಮತ್ತು ಉಳಿದವರಿಗೆ ಮನೆಯಿಂದಲೇ ಕೆಲಸ ಮಾಡಲು (Work From Home) ಅನುಮತಿ ನೀಡುವ ನಿರ್ಧಾರವನ್ನು ತೆಗೆದುಕೊಳ್ಳಲು ಆಯಾ ರಾಜ್ಯ ಸರ್ಕಾರಗಳಿಗೆ CAQM ಅಧಿಕಾರ ನೀಡಿದೆ

Vishakha Bhat Heggar

View all posts by this author