ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ದೀಪಾವಳಿ ದಿನವೇ ಘೋರ ದುರಂತ; ಪಟಾಕಿ ಎಂದು ಭಾವಿಸಿ ಸ್ಫೋಟಕ ಮದ್ದಿಗೆ ಬೆಂಕಿ ಹಚ್ಚಿದ 15 ವರ್ಷದ ಬಾಲಕನ ತಲೆ ಛಿದ್ರ ಛಿದ್ರ

Kalaburagi News: ಪಟಾಕಿ ಎಂದು ಭಾವಿಸಿ ಸ್ಫೋಟಕ ವಸ್ತುವಿಗೆ ಬೆಂಕಿ ಹಚ್ಚಿದ 15 ವರ್ಷದ ಬಾಲಕನ ತಲೆ ಛಿದ್ರ ಛಿದ್ರವಾಗಿದ್ದು, ದೀಪಾವಳಿ ಸಂಭ್ರಮದಲ್ಲಿದ್ದ ಕುಟುಂಬ ಶೋಕ ಸಾಗರದಲ್ಲಿ ಮುಳುಗಿದೆ. ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಹಂದರಕಿ ಗ್ರಾಮದಲ್ಲಿ ಈ ಘೋರ ದುರಂತ ನಡೆದಿದೆ.

ಪಟಾಕಿ ಎಂದುಕೊಂಡು ಸ್ಫೋಟಕ ಮದ್ದಿಗೆ ಬೆಂಕಿ ಹಚ್ಚಿದ ಬಾಲಕ ಸಾವು

ಸಾಂದರ್ಭಿಕ ಚಿತ್ರ -

Ramesh Ballamoole
Ramesh Ballamoole Nov 8, 2026 10:09 PM

ಕಲಬುರಗಿ, ನ. 8: ದೇಶಾದ್ಯಂತ ಸಂಭ್ರಮದಿಂದ ದೀಪಾವಳಿ ಆಚರಿಸಲಾಗುತ್ತಿದೆ. ಜತೆಗೆ ಪಟಾಕಿ ಸದ್ದೂ ಜೋರಾಗಿದೆ. ಈ ಮಧ್ಯೆ ಹಬ್ಬದ ಸಂಭ್ರಮದಲ್ಲಿದ್ದ ಕಲಬುರಗಿಯ ಕುಟುಂಬವೊಂದಕ್ಕೆ ಭಾರಿ ಆಘಾತ ಎದುರಾಗಿದೆ. ಪಟಾಕಿ ಎಂದು ಭಾವಿಸಿ ಸ್ಫೋಟಕ ವಸ್ತುವಿಗೆ ಬೆಂಕಿ ಹಚ್ಚಿದ ಬಾಲಕನ ತಲೆ ಛಿದ್ರ ಛಿದ್ರವಾಗಿದ್ದು, ಕುಟುಂಬ ಶೋಕ ಸಾಗರದಲ್ಲಿ ಮುಳುಗಿದೆ (Kalaburagi News). ಆ ಮೂಲಕ ಬೆಳಕಿನ ಹಬ್ಬ ಇವರ ಬಾಳಿಕೆ ಅಂಧಕಾರ ಕವಿದಿದೆ. ಜಿಲ್ಲೆಯ ಸೇಡಂ ತಾಲೂಕಿನ ಹಂದರಕಿ ಗ್ರಾಮದಲ್ಲಿ ಈ ಘೋರ ದುರಂತ ನಡೆದಿದೆ. ಮೃತ ಬಾಲಕನನ್ನು ಭೀಮರಾಯ ಎಂದು ಗುರುತಿಸಲಾಗಿದೆ.

ಕಾಡುಹಂದಿಗಳಿಗಾಗಿ ತಂದಿಟ್ಟಿದ್ದ ಸ್ಫೋಟಕ ಮದ್ದನ್ನು ಪಟಾಕಿ ಎಂದು ತಪ್ಪಾಗಿ ಭಾವಿಸಿ ಭೀಮರಾಯ ಅದಕ್ಕೆ ಬೆಂಕಿ ಹಚ್ಚಿದ್ದು, ಸ್ಫೋಟದ ತೀವ್ರತೆಗೆ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಮೂಲಗಳು ತಿಳಿಸಿವೆ.

ಘಟನೆ ವಿವರ

ವಿಪರೀತ ಕಾಡುಹಂದಿಯ ಹಾವಳಿಯಿಂದ ಬೇಸತ್ತು ಭೀಮರಾಯನ ಮನೆಯವರು ಸ್ಫೋಟಕ ಮದ್ದನ್ನು ತಂದಿದ್ದರು. ಅದರ ಬಗ್ಗೆ ಗೊತ್ತಿರದ ಭೀಮರಾಯ ಅದೂ ಒಂದು ಪಟಾಕಿ ಎಂದು ಭಾವಿಸಿದ್ದ. ಸುತ್ತಮುತ್ತ ಪಟಾಕಿ ಸದ್ದು ಕೇಳಿ ಬಂದಾಗ ತಾನೂ ಪಟಾಕಿ ಹೊಡೆಯುತ್ತೇನೆಂದು ಆ ಸ್ಫೋಟಕ ಮದ್ದಿಗೆ ಬೆಂಕಿ ಹಚ್ಚಿದ್ದಾನೆ. ಅಷ್ಟೇ ಅದರ ತೀವ್ರತೆಗೆ ಕ್ಷಣಾರ್ಧದಲ್ಲೇ ಆತನ ಪ್ರಾಣ ಹೋಗಿದೆ. ಸ್ಫೋಟ ಎಷ್ಟು ಶಕ್ತಿಯುತವಾಗಿತ್ತು ಎಂದರೆ ಹಲವು ಕಿಲೋ ಮೀಟರ್‌ಗಳಷ್ಟು ದೂರಕ್ಕೆ ಶಬ್ದ ಕೇಳಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಕರ್ತವ್ಯದ ವೇಳೆಯೇ ರೈಫಲ್‌ನಿಂದ ಗುಂಡು ಹಾರಿಸಿಕೊಂಡು ಕಾನ್‌ಸ್ಟೇಬಲ್‌ ಆತ್ಮಹತ್ಯೆ!

ಸ್ಫೋಟಕ ವಸ್ತು ಅಪಾಯಕಾರಿ ಎಂದು ತಿಳಿಸದಿದ್ದರೂ ಮಕ್ಕಳ ಕೈಗೆ ಸಿಗುವಂತೆ ಇರಿಸಲಾಗಿತ್ತೆ ಎನ್ನುವ ಅನುಮಾನ ಮೂಡಿದೆ. ಘಟನೆ ಬಗ್ಗೆ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ. ಯಾರೂ ಮಕ್ಕಳ ಕೈಗೆ ಸಿಗುವಂತೆ ಅಪಾಯಕಾರಿ ವಸ್ತುಗಳನ್ನು ಇಡಬೇಡಿ ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ. ಜತೆಗೆ ಪಟಾಕಿ ಸಿಡಿಸುವಾಗ ಎಚ್ಚರದಿಂದಿರುವಂತೆ ಸೂಚಿಸಿದ್ದಾರೆ.

ರಾಜ್ಯದ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.