Pahalgam Terror Attack: ಇದು ತಪ್ಪು ವಾಘಾ ಅಟ್ಟಾರಿ ಗಡಿ ಮುಚ್ಚಬಾರದಿತ್ತು.... ಪಾಕಿಸ್ತಾನ ಪ್ರಜೆಗಳಿಂದ ಆಗ್ರಹ
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ 26 ಜನರ ಸಾವಿಗೆ ಕಾರಣವಾದ ಭಯೋತ್ಪಾದಕ ದಾಳಿಯ ನಂತರ ಭಾರತವು ಪಾಕಿಸ್ತಾನದ ವಿರುದ್ಧ ತನ್ನ ರಾಜತಾಂತ್ರಿಕ ಮತ್ತು ಕಾರ್ಯತಂತ್ರದ ನಿಲುವನ್ನು ಬಿಗಿಗೊಳಿಸಿದೆ. ಭಾರತ ಅಟ್ಟಾರಿ- ವಾಘಾ ಗಡಿಯಲ್ಲಿ ಬಂದ್ ಮಾಡಿ ಆದೇಶ ಹೊರಡಿಸಿದೆ.


ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ (Pahalgam Terror Attack) 26 ಜನರ ಸಾವಿಗೆ ಕಾರಣವಾದ ಭಯೋತ್ಪಾದಕ ದಾಳಿಯ ನಂತರ ಭಾರತವು ಪಾಕಿಸ್ತಾನದ ವಿರುದ್ಧ ತನ್ನ ರಾಜತಾಂತ್ರಿಕ ಮತ್ತು ಕಾರ್ಯತಂತ್ರದ ನಿಲುವನ್ನು ಬಿಗಿಗೊಳಿಸಿದೆ. ಭಾರತ ಅಟ್ಟಾರಿ- ವಾಘಾ ಗಡಿಯಲ್ಲಿ ಬಂದ್ ಮಾಡಿ ಆದೇಶ ಹೊರಡಿಸಿದೆ. ಭಾರತದ ಈ ನಿರ್ಧಾರವನ್ನು ಪಾಕಿಸ್ತಾನಿ ಪ್ರಜೆಗಳು ಖಂಡಿಸಿದ್ದಾರೆ. ಭಾರತದಲ್ಲಿರುವ ಪಾಕ್ ಪ್ರಜೆಗಳಿಗೆ ಸರ್ಕಾರ ಭಾರತ ತೊರೆಯುವಂತೆ 48 ಗಂಟೆಗಳ ಗಡುವನ್ನು ನೀಡಿದೆ. ಈಗಾಗಲೇ ಬೇರೆ ಬೇರೆ ಕಾರಣಕ್ಕಾಗಿ ಪಾಕಿಸ್ತಾನದಿಂದ ಭಾರತಕ್ಕೆ 45 ದಿನಗಳ ಸಂದರ್ಶಕ ವೀಸಾ ಮೇಲೆ ಬಂದಿರುವ ಪಾಕ್ ಪ್ರಜೆಗಳು ಈ ನಿರ್ಧಾರವನ್ನು ಖಂಡಿಸಿವೆ.
ಖಾಸಗಿ ವಾಹಿನಿಯೊಂದರ ಜೊತೆ ಮಾತನಾಡಿದ ಪಾಕ್ ಪ್ರಜೆಯೊಬ್ಬರು ನಾವು ಒಂದು ಕಾರ್ಯಕ್ರಮದಲ್ಲಿ ಭಾಗವಹಿಸಲು ಇಲ್ಲಿಗೆ ಬಂದಿದ್ದೇವೆ. ನಮಗೆ 45 ದಿನಗಳ ವೀಸಾ ಇತ್ತು, ಆದರೆ ಈ ಸ್ಥಿತಿಯಲ್ಲಿ ನಾವು ಭಾರತವನ್ನು ಬಿಡಬೇಕಾಗಿದೆ. ನಾವು ಏಪ್ರಿಲ್ 15 ರಂದು ಇಲ್ಲಿಗೆ ಬಂದಿದ್ದೇವೆ ಎಂದು ಹೇಳಿದ್ದಾರೆ. ಗಡಿ ಮುಚ್ಚುವುದು ತಪ್ಪು ಎರಡು ರಾಷ್ಟ್ರಗಳ ನಡುವೆ ಸಹೋದರತ್ವ ಇರಬೇಕು. ಆದರೆ ಏನಾಗುತ್ತಿದೆಯೋ ಅದು ತಪ್ಪು" ಎಂದು ಹೇಳಿದರು.
Pakistani citizen departs for home via the Attari-Wagah border, after India set a 48-hour deadline for Pakistani nationals holding SVES visas to exit
— WION (@WIONews) April 24, 2025
.
.
.
.
Video: news agency ANI pic.twitter.com/k05kADf7Zp
ದಾಳಿಗೆ ಪ್ರತಿಕ್ರಿಯೆಯಾಗಿ ಪಾಕಿಸ್ತಾನಕ್ಕೆ ಭಾರತ ಶಾಕ್ ನೀಡಿದೆ. ಅಟ್ಟಾರಿ-ವಾಘಾ ಗಡಿಯನ್ನು ತಕ್ಷಣ ಮುಚ್ಚುವಂತೆ ಆದೇಶ ನೀಡಲಾಗಿದೆ. ಇತ್ತೀಚೆಗೆ ಭಾರತಕ್ಕೆ ಪ್ರವೇಶಿಸಿದ ಮಾನ್ಯ ಪ್ರಯಾಣ ದಾಖಲೆಗಳನ್ನು ಹೊಂದಿರುವ ಎಲ್ಲಾ ಪಾಕಿಸ್ತಾನಿ ಪ್ರಜೆಗಳು ಮೇ 1, 2025 ರೊಳಗೆ ಪಾಕಿಸ್ತಾನಕ್ಕೆ ಹಿಂತಿರುಗಬೇಕು ಎಂದು ಅಧಿಕಾರಿಗಳು ನಿರ್ದೇಶಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Pahalgam Terror Attack: ಪಹಲ್ಗಾಮ್‌ನಲ್ಲಿ ಉಗ್ರರ ದಾಳಿ; ಪಾಕಿಸ್ತಾನ ಹೈಕಮಿಷನ್ ಹೊರಗೆ ಭಾರಿ ಪ್ರತಿಭಟನೆ
ಸಿಂಧೂ ನದಿ ಒಪ್ಪಂದವನ್ನು ಅತ್ಯಂಗೊಳಿಸಲು ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ. ಪಾಕ್‌ಗೆ ದೊಡ್ಡ ಆಘಾತ ನೀಡಿರುವ ಭಾರತ ಪಾಕಿಸ್ತಾನದ ರಾಜತಾಂತ್ರಿಕ ಅಧಿಕಾರಿಗಳಿಗೆ ಭಾರತವನ್ನು ತೊರೆಯಲು ಸೂಚಿಸಿದ್ದು, 48 ಗಂಟೆಗಳ ಗಡುವನ್ನು ನೀಡಿದೆ. ವಾಘಾ ಅಟ್ಟಾರಿ ಬಾರ್ಡರ್‌ನನ್ನು ಮುಚ್ಚಲು ಸೂಚಿಸಲಾಗಿದೆ. ದೇಶದಲ್ಲಿರುವ ಪಾಕಿಸ್ತಾನ ಪ್ರಜೆಗಳನ್ನು ಭಾರತ ಸರ್ಕಾರ 48 ಗಂಟೆಗಳಲ್ಲಿ ದೇಶ ತೊರೆಯುವಂತೆ ಘೋಷಿಸಿದೆ. ಘಟನೆ ಬಳಿಕ ಕೇಂದ್ರ ಸರ್ಕಾರ ಕೈಗೊಂಡ ವಿವಿಧ ಕ್ರಮಗಳಲ್ಲಿ ಪಾಕ್ ರಾಯಭಾರಿ ಕಚೇರಿ ತೊರೆಯುವಂತೆ ಪಾಕಿಸ್ತಾನ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಪಾಕಿಸ್ತಾನ ಸರ್ಕಾರದ ಅಧಿಕೃತ X ಖಾತೆಯನ್ನು ಭಾರತದಲ್ಲಿ ತಡೆಹಿಡಿಯಲಾಗಿದೆ.