ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಮಹಾರಾಷ್ಟ್ರದಲ್ಲಿ ಬೆಟ್ಟದಿಂದ ಬಿದ್ದು ಒಂದೇ ಕುಟುಂಬದ ಮೂವರು ಮೃತಪಟ್ಟ ಪ್ರಕರಣಕ್ಕೆ ಮತ್ತೆ ಟ್ವಿಸ್ಟ್‌; ಐಫೋನ್‌ ಇಎಂಐ ಬಗ್ಗೆ ಸಂಬಂಧಿಕರಿಂದ ಶಾಕಿಂಗ್‌ ವಿಚಾರ ಬಯಲು

Maharashtra cliff accident: ಮಹಾರಾಷ್ಟ್ರದಲ್ಲಿ ಬೆಟ್ಟದಿಂದ ಬಿದ್ದು ತಂದೆ, ತಾಯಿ ಮತ್ತು ಪುತ್ರ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಷ್ಟು ಮಾಹಿತಿ ಹೊರಬಂದಿದೆ. ಐಫೋನ್‌ ಇಎಂಐ ವಿಚಾರವಾಗಿ ಪುತ್ರ ಕುನಾಲ್‌ ಬೆಟ್ಟದ ತುದಿಯಲ್ಲಿ ನಿಂತು ಆತ್ಮಹತ್ಯೆ ಮಾಡುವುದಾಗಿ ಬೆದರಿಸುತ್ತಿದ್ದ ಎನ್ನಲಾಗಿತ್ತು. ಆದರೆ ಇದು ಸುಳ್ಳು, ಇದೊಂದು ವದಂತಿಯಷ್ಟೇ ಎಂದು ಮೃತ ಸಂಗೀತಾ ಅವರ ಸಹೋದರಿ ಪಲ್ಲವಿ ಪಾಟೀಲ್ ಹೇಳಿದ್ದಾರೆ. ಅವರು ಸಾವಿನ ನಿಜವಾದ ಕಾರಣ ವಿವರಿಸಿದ್ದಾರೆ.

ಪಲ್ಲವಿ ಪಾಟೀಲ್ ಮತ್ತು ಮಹಾರಾಷ್ಟ್ರದಲ್ಲಿ ಬೆಟ್ಟದಿಂದ ಬಿದ್ದು ಮೃತಪಟ್ಟ ಮೂವರು (ಸಂಗ್ರಹ ಚಿತ್ರ)

ಮುಂಬೈ, ಆ. 24: ಮಹಾರಾಷ್ಟ್ರದಲ್ಲಿ ಬೆಟ್ಟದಿಂದ ಬಿದ್ದು ತಂದೆ, ಮಗ, ತಾಯಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಷ್ಟು ಮಾಹಿತಿ ಹೊರಬಂದಿದೆ. ಐಫೋನ್‌ಗಾಗಿ ಪುತ್ರ ಬೆಟ್ಟದ ತುದಿಯಲ್ಲಿ ನಿಂತು ಆತ್ಮಹತ್ಯೆ ಮಾಡುವುದಾಗಿ ಬೆದರಿಸುತ್ತಿದ್ದ (Maharashtra cliff accident). ಕೊನೆಗೆ ಕಾಪಾಡಲು ಬಂದ ತಂದೆಯನ್ನು ಎಳೆದೊಯ್ದು ಬೆಟ್ಟದಿಂದ ಧುಮುಕಿದ್ದ. ಇದನ್ನು ನೋಡಿದ ತಾಯಿ ಸಂಗೀತಾ ಕೂಡ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದಲ್ಲಿ ಈ ಘಟನೆ ನಡೆದಿತ್ತು. ಆದರೆ ಈ ಘಟನೆಗೆ ಐಫೋನ್‌ ಇಎಂಐ ಒಂದೇ ಕಾರಣವಲ್ಲ ಎಂದು ಇದೀಗ ಮೃತ ಸಂಗೀತಾ ಅವರ ಸಹೋದರಿ ಪಲ್ಲವಿ ಪಾಟೀಲ್ ಹೇಳಿದ್ದಾರೆ.

ಐಫೋನ್‌ಗಾಗಿ ಕುನಾಲ್‌ ಬೆಟ್ಟದಿಂದ ಜಿಗಿದಿದ್ದು ಸುಳ್ಳು, ಇದೊಂದು ವದಂತಿಯಷ್ಟೇ ಎಂದು ಪಲ್ಲವಿ ಪಾಟೀಲ್ ತಿಳಿಸಿದ್ದಾರೆ. ಇಂತಹ ಸುಳ್ಳು ಸುದ್ದಿಗಳನ್ನು ಹರಡುವವರಿಗೆ ಏನೂ ತಿಳಿದಿಲ್ಲ ಎಂದು ಅವರು ಹೇಳಿದ್ದಾರೆ. ತಮ್ಮ ಸಹೋದರಿ, ಸೋದರಳಿಯ ಮತ್ತು ಬಾವ ಮುರಳೀಧರ್ ಅವರ ಚಿತಾಭಸ್ಮವನ್ನು ಸಂಗ್ರಹಿಸಿ ಪಲ್ಲವಿ ಮನೆಗೆ ಹಿಂದಿರುಗುತ್ತಿದ್ದಾಗ ಕುಟುಂಬವು ಎದುರಿಸುತ್ತಿದ್ದ ಕಷ್ಟ ಮತ್ತು ನೋವನ್ನು ವಿವರಿಸಿ ವಿಡಯೊ ಮಾಡಿದ್ದಾರೆ.

“ಬೆಟ್ಟದಿಂದ ಮೃತಪಟ್ಟ ಸಂಗೀತಾ ಚಾಂದ್‌ಗುಡೆ, ಕುನಾಲ್ ಚಾಂದ್‌ಗುಡೆ ಮತ್ತು ಮುರಳೀಧರ್ ಚಾಂದ್‌ಗುಡೆ ಬೇರೆ ಯಾರೂ ಅಲ್ಲ, ನನ್ನ ಅಕ್ಕ, ಅಕ್ಕನ ಮಗ ಮತ್ತು ನನ್ನ ಬಾವ. ಇಂದು ಆ ಮೂವರನ್ನೂ ಕಳೆದುಕೊಂಡ ನಂತರ ನಾವು ಯಾವ ಪರಿಸ್ಥಿತಿಯಲ್ಲಿದ್ದೇವೆ ಎಂಬುದು ನಮಗೆ ಮಾತ್ರ ಗೊತ್ತಿದೆ” ಎಂದು ಅವರು ಹೇಳಿದ್ದಾರೆ.

ಐಫೋನ್‌ ಇಎಂಐ ಕಟ್ಟಲು ಸಾಧ್ಯವಾಗದೆ ಯಮುನಾ ನದಿಗೆ ಹಾರಿದ ಶಿಕ್ಷಕ

ಐಫೋನ್ ಇಎಂಐ ವಿಚಾರವಾಗಿ ಕುನಾಲ್ ತನ್ನ ಹೆತ್ತವರನ್ನು ಸಾಯುವಂತೆ ಮಾಡಿದ ಎಂದು ಹರಡುತ್ತಿರುವ ಸುದ್ದಿ ಕೇವಲ ಸುಳ್ಳು, ವದಂತಿಗಳನ್ನು ಹರಡಬೇಡಿ ಎಂದು ಅವರು ಮನವಿ ಮಾಡಿದ್ದಾರೆ. ನೀವು ಹೇಳುತ್ತಿರುವ ವಿಷಯಗಳು ನಮಗೆ ಅಪಾರ ನೋವನ್ನುಂಟುಮಾಡುತ್ತಿವೆ ಎಂದು ತಿಳಿಸಿದ್ದಾರೆ

“ನೀವು ವಿಡಿಯೊಗಳ ಮೂಲಕ ನಿಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದೀರಿ. ಆದರೆ ನಿಮಗೆ ಏನೂ ತಿಳಿದಿಲ್ಲ. ನಿಮಗೆ ನಮ್ಮ ಬಗ್ಗೆ ತಿಳಿದಿಲ್ಲ. ಘೋರ ದುರಂತದ ಹಿಂದಿನ ಸತ್ಯದ ಬಗ್ಗೆಯೂ ನಿಮಗೆ ತಿಳಿದಿಲ್ಲ. ಆದರೂ ನೀವು ಸುಳ್ಳನ್ನು ಹರಡುತ್ತಲೇ ಇದ್ದೀರಿ. ಈ ವಿಡಿಯೊಗಳು ನನ್ನ ಹೆತ್ತವರಿಗೆ ಎಷ್ಟು ನೋವನ್ನುಂಟುಮಾಡುತ್ತಿವೆ ಎಂದು ನಿಮಗೆ ತಿಳಿದಿದೆಯೇ?” ಎಂದು ಅವರು ಪ್ರಶ್ನಿಸಿದ್ದಾರೆ.

ನಾಲ್ವರು ಮಕ್ಕಳಲ್ಲಿ ಸಂಗೀತಾ ಹಿರಿಯವಳು. ಯಾವುದೇ ವಿಡಿಯೊ ಮಾಡುವ ಮೊದಲು ಕುಟುಂಬದ ಬಗ್ಗೆ ಯೋಚಿಸಿ ಅವರು ಸಲಹೆ ನೀಡಿದ್ದಾರೆ. ಮುರಳೀಧರ್ ಟ್ರಕ್ ಚಾಲಕರಾಗಿದ್ದರೆ, ಸಂಗೀತಾ ಗೃಹಿಣಿಯಾಗಿದ್ದರು. ದಂಪತಿ ಆರು ವರ್ಷಗಳ ಹಿಂದೆ ತಮ್ಮ ಹಿರಿಯ ಮಗನನ್ನು ಕಳೆದುಕೊಂಡಿದ್ದರು. ಮೂಲಗಳ ಪ್ರಕಾರ, ಅವರ ಮಗನ ಮರಣವು ಕೌಟುಂಬಿಕ ಕಲಹಕ್ಕೆ ಕಾರಣವಾಯಿತು. ಇಬ್ಬರೂ ಪ್ರತ್ಯೇಕವಾಗಿ ವಾಸಿಸುತ್ತಿದ್ದರು ಎನ್ನಲಾಗಿದೆ.

ಕಳೆದ ಮೂರು ತಿಂಗಳಿನಿಂದ ಊರಿನಿಂದ ಹೊರಗೆ ಇದ್ದ ಮುರಳೀಧರ್, ಘಟನೆ ನಡೆಯುವ ಎರಡು ದಿನಗಳ ಮೊದಲು ಮನೆಗೆ ಮರಳಿದ್ದರು. ಇದರಿಂದಾಗಿ ಇಬ್ಬರ ನಡುವೆ ಜಗಳವಾಗಿತ್ತು ಎನ್ನಲಾಗಿದೆ.