ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಟೈಗರ್‌ ಶ್ರಾಫ್‌ ಮೇಲೆ ಗುಂಡಿನ ದಾಳಿ ಕೇಸ್‌: ದೇವಸ್ಥಾನಕ್ಕೆ ಹೋದವನನ್ನು ಬಂಧಿಸಲಾಗಿದೆ ಎಂದು ಕಣ್ಣೀರಿಟ್ಟ ಆರೋಪಿ ತಾಯಿ

ಬಾಲಿವುಡ್ ನಟ ಟೈಗರ್ ಶ್ರಾಫ್ ವಿರುದ್ಧ ಮುಂಬೈನಲ್ಲಿ ನಡೆದ ಗುಂಡಿನ ದಾಳಿ ಘಟನೆಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಇತ್ತೀಚೆಗೆ ಬಂಧಿಸಿದ ನಾಲ್ವರಲ್ಲಿ ಒಬ್ಬನಾದ ಆರೋಪಿ ಸುಮಿತ್ ತಾಯಿ ತಮ್ಮ ಮಗ ನಿರಪರಾಧಿ ಎಂದು ಹೇಳಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 19 ವರ್ಷದ ಸುಮಿತ್ ರಾಜಸ್ಥಾನದ ಖಾತು ಶ್ಯಾಮ್ ದೇವಸ್ಥಾನಕ್ಕೆ ಹೋಗಿದ್ದ.

ಸಂಗ್ರಹ ಚಿತ್ರ

ಮುಂಬೈ: ಬಾಲಿವುಡ್ ನಟ ಟೈಗರ್ ಶ್ರಾಫ್ (Tiger Shroff) ವಿರುದ್ಧ ಮುಂಬೈನಲ್ಲಿ ನಡೆದ ಗುಂಡಿನ ದಾಳಿ ಘಟನೆಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಇತ್ತೀಚೆಗೆ ಬಂಧಿಸಿದ ನಾಲ್ವರಲ್ಲಿ ಒಬ್ಬನಾದ ಆರೋಪಿ ಸುಮಿತ್ ತಾಯಿ ತಮ್ಮ ಮಗ ನಿರಪರಾಧಿ ಎಂದು ಹೇಳಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 19 ವರ್ಷದ ಸುಮಿತ್ ರಾಜಸ್ಥಾನದ ಖಾತು ಶ್ಯಾಮ್ ದೇವಸ್ಥಾನಕ್ಕೆ ಹೋಗಿದ್ದ. ಈ ಪ್ರಕರಣಕ್ಕೂ ಆತನಿಗೂ ಯಾವುದೇ ಸಂಬಂಧಿವಿಲ್ಲ, ಆತನ ವಿರುದ್ಧ ಸುಳ್ಳು ಆರೋಪ ಮಾಡಲಾಗುತ್ತಿದೆ ಎಂದು ಹೇಳಿದರು.

ದೆಹಲಿ ಪೊಲೀಸ್ ವಿಶೇಷ ದಳವು ಅಕ್ಟೋಬರ್ 20 ರಂದು ಹರಿಯಾಣದ ಸೋನಿಪತ್ ಜಿಲ್ಲೆಯ ಸುಮಿತ್ ಮತ್ತು ಕುನಾಲ್ (21) ನನ್ನು ಬಂಧಿಸಿದೆ. ಇತರ ಇಬ್ಬರು ಆರೋಪಿಗಳಾದ ರಾಧಾ (23) ಮತ್ತು ಬಬಿತಾ (23) ಅವರನ್ನು ನವದೆಹಲಿ ರೈಲು ನಿಲ್ದಾಣದಲ್ಲಿ ಬಂಧಿಸಲಾಯಿತು. ನಂತರ ನಾಲ್ವರನ್ನು ಮಹಾರಾಷ್ಟ್ರ ಪೊಲೀಸರ ಅಪರಾಧ ತನಿಖಾ ಇಲಾಖೆ (ಸಿಐಡಿ) ಔಪಚಾರಿಕವಾಗಿ ಬಂಧಿಸಿ ಹೆಚ್ಚಿನ ತನಿಖೆಗಾಗಿ ಮುಂಬೈ ಪೊಲೀಸರಿಗೆ ಹಸ್ತಾಂತರಿಸಲಾಗಿದೆ.

ವಿಡಿಯೋ ನೋಡಿ



ತನ್ನ ಮಗನ ಬಂಧನದ ಬಗ್ಗೆ ಮಾತನಾಡಿದ ಸುಮಿತ್ ತಾಯಿ, ವಿವಾದದ ಬಗ್ಗೆ ಪ್ರಶ್ನಿಸುವ ನೆಪದಲ್ಲಿ ಪೊಲೀಸರು ಅವನನ್ನು ಕರೆದುಕೊಂಡು ಹೋಗಿದ್ದಾರೆ ಎಂದು ಹೇಳಿದರು. ಅವನು ಭಾಗಿಯಾಗಿದ್ದಾನೆ ಎನ್ನಲಾದ ಪ್ರಕರಣದ ಬಗ್ಗೆ ಅಧಿಕಾರಿಗಳು ಆರಂಭದಲ್ಲಿ ವಿವರಿಸಲಿಲ್ಲ ಎಂದು ಅವರು ಆರೋಪಿಸಿದರು. ನನ್ನ ಮಗ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಾನೆ ಮತ್ತು ಸುಮಾರು ಮೂರು ವರ್ಷಗಳಿಂದ ಅಲ್ಲಿ ಕೆಲಸ ಮಾಡುತ್ತಿದ್ದಾನೆ. ಅವನು 9 ನೇ ತರಗತಿಯವರೆಗೆ ಓದಿದ್ದಾನೆ. ಅವನು ಖಾತು ಶ್ಯಾಮ್‌ಗೆ ಹೋಗುವುದಾಗಿ ಹೇಳಿದ್ದನು," ಎಂದು ಅವರು ಹೇಳಿದರು.

ಹಲಿ ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಅಕ್ಟೋಬರ್ 18 ರಂದು ಮುಂಬೈನ ಜುಹುವಿನಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಭಾಗಿಯಾದ ಶೂಟರ್‌ಗಳಿಗೆ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವ್ಯವಸ್ಥೆ ಮಾಡುವಲ್ಲಿ ಸುಮಿತ್‌ ಪಾತ್ರ ಇದೆ ಎಂದು ಆರೋಪಿಸಲಾಗಿದೆ. ಕುನಾಲ್ ಅಮೃತಸರದಿಂದ ಪಿಸ್ತೂಲ್ ಮತ್ತು 20 ಸುತ್ತು ಮದ್ದುಗುಂಡುಗಳನ್ನು ಸಂಗ್ರಹಿಸಿದ್ದಾನೆ ಮತ್ತು ಸುಮಿತ್ ಅವನ ಜೊತೆಗಿದ್ದ ಎಂದು ಪೊಲೀಸರು ಆರೋಪಿಸಿದ್ದಾರೆ. ರಾಧಾ ಮತ್ತು ಬಬಿತಾ ಆಯುಧವನ್ನು ಮುಂಬೈಗೆ ಕೊಂಡೊಯ್ದಿದ್ದಾರೆ ಎಂದು ಆರೋಪಿಸಲಾಗಿದೆ.

ಕೊನೆ ಕ್ಷಣದಲ್ಲಿ ಪ್ಲಾನ್‌ ಚೇಂಜ್‌; ಸಲ್ಮಾನ್‌ ಖಾನ್‌ ಮನೆ ಟಾರ್ಗೆಟ್‌ ಮಾಡಿದ್ದ ಹಂತಕರು ಟೈಗರ್‌ ಶ್ರಾಫ್‌ ಕಡೆ ತಿರುಗಿದ್ದೇಕೆ?

ಪ್ರಸ್ತುತ ದೆಹಲಿ ನ್ಯಾಯಾಲಯವು ಸುಮಿತ್ ಸೇರಿದಂತೆ ನಾಲ್ವರು ಆರೋಪಿಗಳನ್ನು ಮುಂಬೈ ಪೊಲೀಸರ ವಶಕ್ಕೆ (ಟ್ರಾನ್ಸಿಟ್ ರಿಮಾಂಡ್) ನೀಡಿದ್ದು, ಮುಂಬೈ ಕ್ರೈಂ ಬ್ರಾಂಚ್ ಈ ಜಾಲದಲ್ಲಿ ಆತನ ನಿಖರ ಪಾತ್ರದ ಬಗ್ಗೆ ಹೆಚ್ಚಿನ ವಿಚಾರಣೆ ನಡೆಸುತ್ತಿದೆ.

Vishakha Bhat Heggar

View all posts by this author