ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಸಂಸತ್ತಿನಲ್ಲಿಯೇ ಸಿಗರೇಟ್‌ ಸೇದಿದ ಟಿಎಂಸಿ ಸಂಸದ; ವಿಡಿಯೋ ವೈರಲ್‌

ರಾಷ್ಟ್ರ ರಾಜಧಾನಿಯಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿದೆ. ಲೋಕಸಭೆಯಲ್ಲಿ ಇ-ಸಿಗರೇಟ್ ಬಳಕೆಯ ಬಗ್ಗೆ ತೀವ್ರ ಚರ್ಚೆಯ ನಡುವೆಯೇ, ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದೆ ಸೌಗತ ರಾಯ್ ಗುರುವಾರ ಸಂಸತ್ತಿನ ಹೊರಗೆ ಸಿಗರೇಟ್ ಸೇದುತ್ತಿರುವುದು ಕಂಡುಬಂದಿದ್ದು ಭಾರೀ ವಿವಾದಕ್ಕೆ ಕಾರಣವಾಗಿದೆ.

ಟಿಎಂಸಿ ಸಂಸದ

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿದೆ. ಲೋಕಸಭೆಯಲ್ಲಿ ಇ-ಸಿಗರೇಟ್ ಬಳಕೆಯ ಬಗ್ಗೆ ತೀವ್ರ ಚರ್ಚೆಯ ನಡುವೆಯೇ, ತೃಣಮೂಲ ಕಾಂಗ್ರೆಸ್ (ಟಿಎಂಸಿ) (Viral Video) ಸಂಸದ ಸೌಗತ ರಾಯ್ (Saugata Roy) ಗುರುವಾರ ಸಂಸತ್ತಿನ ಹೊರಗೆ ಸಿಗರೇಟ್ ಸೇದುತ್ತಿರುವುದು ಕಂಡುಬಂದಿದ್ದು ಭಾರೀ ವಿವಾದಕ್ಕೆ ಕಾರಣವಾಗಿದೆ. ಸದನದಲ್ಲಿ ಸಂಸದ ಗಿರಿರಾಜ್‌ ಸಿಂಗ್‌ ಮತ್ತು ಗಜೇಂದ್ರ ಸಿಂಗ್‌ ಶೇಖಾವತ್‌ ಅವರು ಸಾರ್ವಜನಿಕ ಆರೋಗ್ಯ ಮತ್ತು ಸದನದ ಘನತೆಯ ಬಗ್ಗೆ ಮಾತನಾಡುತ್ತಾ, "ನೀವು ಸಾರ್ವಜನಿಕ ಆರೋಗ್ಯಕ್ಕೆ ಅಪಾಯವನ್ನುಂಟು ಮಾಡುತ್ತಿದ್ದೀರಿ ದಾದಾ" ಎಂದು ನೇರವಾಗಿ ಸಂಸದನ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.

ಬಳಿಕ ಬಿಜೆಪಿ ಸಂಸದ ಅನುರಾಗ್‌ ಠಾಕೂರ್ ಮಾತನಾಡಿ, 2019ರಲ್ಲಿ ಇ-ಸಿಗರೇಟ್‌ಗಳನ್ನು ನಿಷೇಧಿಸಲಾಗಿದ್ದು, ಸಂಸದರು ಸದನದೊಳಗೆ ಇ-ಸಿಗರೇಟ್‌ ಸೇದಿದರೆ ಅದು ಸದನಕ್ಕೆ ಗೌರವಕ್ಕೆ ಧಕ್ಕೆಯನ್ನುಂಟು ಮಾಡುತ್ತದೆ. ಇದು ದುರದೃಷ್ಟಕರ ಘಟನೆ. ಅವರು ಸದನವನ್ನು ಎಷ್ಟು ಗೌರವಿಸುತ್ತಾರೆ ಎಂದು ತೋರಿಸುತ್ತದೆ ಎಂದು ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಸಿಗರೇಟ್‌ ಸೇದಿದ್ದ ಟಿಎಂಸಿ ಸಂಸದ ಸೌಗತ್‌ ರಾಯ್‌, "ನಾನು ಅದರ ಬಗ್ಗೆ ಏನೂ ಹೇಳಲಾರೆ, ಏಕೆಂದರೆ ನಾನು ಸದನದಲ್ಲಿರಲಿಲ್ಲ. ಯಾರು ಧೂಮಪಾನ ಮಾಡಿದ್ದಾರೆ ಮತ್ತು ದೂರು ನೀಡಿದ್ದಾರೆ ಎಂಬುದು ನನಗೆ ತಿಳಿದಿಲ್ಲ. ಸದನದ ನಿಯಮಗಳ ಉಲ್ಲಂಘನೆಯಾಗಿದ್ದರೆ ವಿಚಾರಣೆ ನಡೆಸಿ ಕ್ರಮ ಕೈಗೊಳ್ಳಬೇಕು ಅದು ಸ್ಪೀಕರ್‌ ಅವರಿಗೆ ಬಿಟ್ಟ ವಿಚಾರ. ಇದಕ್ಕೆ ರಾಜಕೀಯ ಲೇಪನ ಬಳಿಯುವುದು ಬೇಡ," ಎಂದಿದ್ದಾರೆ.

ವೈರಲ್‌ ವಿಡಿಯೋ



ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ನಾವು ಸದನದ ಹೊರಗಡೆ ಇ-ಸಿಗರೇಟ್‌ ಸೇದಬಹುದು. ನಾವು ಕಟ್ಟಡದ ಒಳಗೆ ಧೂಮಪಾನ ಮಾಡುವಂತಿಲ್ಲ. ಆದರೆ, ಹೊರಗೆ ಮಾಡಬಹುದು ಎಂದು ಹೇಳಿದ್ದಾರೆ.

ಧುರಂಧರ್' ಸ್ಟೈಲ್‌ನಲ್ಲಿ ಮೋದಿ; ಪುಟಿನ್‌, ಟ್ರಂಪ್‌ ಜೊತೆಗಿನ ವಿಡಿಯೋ ಸಖತ್‌ ವೈರಲ್‌

ಸದನದಲ್ಲಿ ಉಭಯ ಪಕ್ಷಗಳ ಸಂಸದರ ನಡುವೆ ಮಾತಿನ ಚಕಮಕಿ

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ಸಂಸದ ಗಜೇಂದ್ರ ಸಿಂಗ್‌ ಶೇಖಾವತ್‌ "ಒಬ್ಬ ಜವಾಬ್ದಾರಿಯುತ ಸಂಸತ್ ಸದಸ್ಯನಾಗಿ, ಅವರು ಈ ರೀತಿಯ ನಡವಳಿಕೆ ಮತ್ತು ನಡವಳಿಕೆಯ ಮೂಲಕ ಈ ದೇಶದ ಜನರಿಗೆ ಯಾವ ರೀತಿಯ ಸಂದೇಶವನ್ನು ಕಳುಹಿಸುತ್ತಿದ್ದಾರೆ ಎಂಬುದರ ಕುರಿತು ಯೋಚಿಸಬೇಕು. ಅವರ ಕಾರ್ಯಗಳು ದೆಹಲಿಯ ಮಾಲಿನ್ಯವನ್ನು ಹೆಚ್ಚಿಸುತ್ತಿವೆಂ ಅದನ್ನು ಕಡಿಮೆ ಮಾಡಲು ಸಹಾಯ ಮಾಡುತ್ತಿವೆಯೇ ಎಂಬುದನ್ನು ಅವರು ಪರಿಗಣಿಸಬೇಕು" ಎಂದು ಹೇಳಿದರು.

ಈ ಬಗ್ಗೆ ಬಿಜೆಪಿ ಸಂಸದರು ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿ ಸಂಸದರು ಪ್ರಸ್ತಾಪಿಸಿದಾಗ ಸ್ಪೀಕರ್‌ ಓಂ ಬಿರ್ಲಾ ಅವರು ಲಿಖಿತ ದೂರು ನೀಡಿದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಸಂಸತ್ತಿನ ಘನತೆ ಕಾಪಾಡಿಕೊಳ್ಳಿ ಎಂದು ಸಂಸದರಿಗೆ ಹೇಳಿದರು. ಇನ್ನು ಈ ಬಗ್ಗೆ ಸಂಸದ ಅನುರಾಗ್‌ ಠಾಕೂರ್‌ ಲೋಕಸಭೆ ಸ್ಪೀಕರ್‌ ಅವರಿಗೆ ಅಧಿಕೃತ ದೂರು ನೀಡಿದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.