Narendra Modi: 'ಧುರಂಧರ್' ಸ್ಟೈಲ್‌ನಲ್ಲಿ ಮೋದಿ; ಪುಟಿನ್, ಟ್ರಂಪ್ ಜೊತೆಗಿನ ವಿಡಿಯೋ ಸಖತ್ ವೈರಲ್
ಮಧ್ಯಪ್ರದೇಶ ಸರ್ಕಾರವು ಪ್ರಧಾನಿ ನರೇಂದ್ರ ಮೋದಿಯವರ ಮಾಂಟೇಜ್ ವೊಂದನ್ನು ಬಿಡುಗಡೆ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಜಾಗತಿಕ ರಾಜಕಾರಣಿಯಾಗಿ ತೋರ್ಪಡಿಸುವ ಈ ವಿಡಿಯೋವು 'ಧುರಂಧರ್' ಚಿತ್ರದ ಹಾಡಿನ ಟ್ರಾಕ್ ಗೆ ಎಡಿಟ್ ಮಾಡಲಾಗಿದೆ. ಸದ್ಯ ಈ ದೃಶ್ಯ ಅಕ್ಷಯ್ ಖನ್ನಾ ನಿರ್ವಹಿಸಿದ 'ರೆಹಮಾನ್ ಡಕಾಯತ್' ಪಾತ್ರದ ಶೈಲಿಯಿಂದ ಸ್ಫೂರ್ತಿ ಪಡೆದಿದೆ. ಸದ್ಯ ಈ ವಿಡಿಯೊ ಭಾರೀ ವೈರಲ್ ಆಗಿದ್ದು ಜನರ ಮೆಚ್ಚುಗೆ ಗಳಿಸಿದೆ.
'ಧುರಂಧರ್' ಸ್ಟೈಲ್‌ನಲ್ಲಿ ಮೋದಿ -
ನವದೆಹಲಿ,ಡಿ.11: ರಣವೀರ್ ಸಿಂಗ್ ನಟನೆಯ ‘ಧುರಂದರ್’ (Dhurandhar Movie) ಸಿನಿಮಾಕ್ಕೆ ಉತ್ತಮ ರೆಸ್ಪಾನ್ಸ್ ಸಿಕ್ತಾ ಇದೆ. ಅದರ ಜೊತೆಗೆ ಭರ್ಜರಿ ಕಲೆಕ್ಷನ್ ಕೂಡ ಮಾಡುತ್ತಿದೆ. ಈ ಚಿತ್ರದ ಹವಾ ದೇಶ ಮಾತ್ರವಲ್ಲದೇ ವಿದೇಶದಲ್ಲೂ ಖ್ಯಾತಿ ಪಡೆಯುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಮಧ್ಯ ಪ್ರದೇಶ ಸರ್ಕಾರವು ಪ್ರಧಾನಿ ನರೇಂದ್ರ ಮೋದಿಯವರ (Narendra Modi) ಮಾಂಟೇಜ್ ವೊಂದನ್ನು ಬಿಡುಗಡೆ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಜಾಗತಿಕ ರಾಜಕಾರಣಿ ಯಾಗಿ ತೋರ್ಪಡಿಸುವ ಈ ವಿಡಿಯೋವು 'ಧುರಂಧರ್' ಚಿತ್ರದ ಹಾಡಿನ ಟ್ರಾಕ್ ಗೆ ಎಡಿಟ್ ಮಾಡಲಾಗಿದೆ. ಸದ್ಯ ಈ ದೃಶ್ಯ ಅಕ್ಷಯ್ ಖನ್ನಾ ನಿರ್ವಹಿಸಿದ 'ರೆಹಮಾನ್ ಡಕಾಯತ್' ಪಾತ್ರದ ಶೈಲಿಯಿಂದ ಸ್ಫೂರ್ತಿ ಪಡೆದಿದೆ. ಸದ್ಯ ಈ ವಿಡಿಯೊ ಭಾರೀ ವೈರಲ್ ಆಗಿದ್ದು ಜನರ ಮೆಚ್ಚುಗೆ ಗಳಿಸಿದೆ.
ಮಧ್ಯಪ್ರದೇಶದ ಸೋಷಿಯಲ್ ಮೀಡಿಯಾ ಖಾತೆಯಾದ @MP_MyGov ಪೇಜ್ ನಲ್ಲಿ ಈ ವಿಡಿಯೋವನ್ನು ಶೇರ್ ಮಾಡಲಾಗಿದೆ. ಈ ಕ್ಲಿಪ್ ನಲ್ಲಿ ಪ್ರಧಾನಿ ಮೋದಿ ಭಾಗಿಯಾದ ವಿವಿಧ G20 ಶೃಂಗಸಭೆಗಳು, ಜಪಾನ್, ಇಂಡೋನೇಷ್ಯಾ, ದಕ್ಷಿಣ ಆಫ್ರಿಕಾ, ಬ್ರೆಜಿಲ್ ನಂತಹ ರಾಷ್ಟ್ರ ನಾಯಕ ರೊಂದಿಗೆ ಸಂವಹನ ನಡೆಸುತ್ತಿರುವ ದೃಶ್ಯ ಕಂಡುಬಂದಿದೆ. ಧುರಂಧರ್ ಚಿತ್ರದ FA9LA ಟ್ರ್ಯಾಕ್‌ಗೆ ಎಡಿಟ್ ಮಾಡಲಾದ ಈ ವಿಡಿಯೊ, ಪ್ರಧಾನಿ ಮೋದಿ ವಿಶ್ವ ನಾಯಕರನ್ನು ಭೇಟಿಯಾಗುವ ಕ್ಷಣಗಳನ್ನು ತೋರಿಸುತ್ತದೆ.
ವಿಡಿಯೋ ನೋಡಿ:
That classic Dhurandhar aura — calm, composed, unmistakably in focus
— MP MyGov (@MP_MyGov) December 9, 2025
🎥 - @mygovindia pic.twitter.com/hviBStaJ5A
ಶೀರ್ಷಿಕೆಯಲ್ಲಿ, "ದಿ OG ಧುರಂಧರ್ ನೀವು ಔರಾ ಫಾರ್ಮಿಂಗ್ ಎಂದು ಹೇಳಿದರೆ, ನಾನು ಮೋದಿ ಯವರ 'ರಿಜ್ 'ಎಂದು ಹೇಳುತ್ತೇನೆ. ಎಂದು ಬರೆಯುವ ಮೂಲಕ ಶೇರ್ ಮಾಡಲಾಗಿದೆ. ವಿಡಿಯೊದಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಮೋದಿ ಮಾತುಕತೆ, ಯುಕೆ ಪ್ರಧಾನಿ ಕೀರ್ ಸ್ಟಾರ್ಮರ್ ಅವರೊಂದಿಗೆ ಹ್ಯಾಂಡ್ ಶೇಖ್ ಮಾಡುವ ದೃಶ್ಯಗಳು ಇವೆ. ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರೊಂದಿಗೆ ಸೌಹಾರ್ದಯುತವಾದ ಆಲಿಂಗನ ಮತ್ತು ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಅವರೊಂದಿಗಿನ ಹಸ್ತಲಾಘವದ ದೃಶ್ಯ ಕೂಡ ಕಂಡು ಬಂದಿದೆ.
ಮಾಜಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೊಂದಿಗಿನ ಮಾತುಕತೆ, G20 ಮತ್ತು COP ಶೃಂಗಸಭೆಗಳಲ್ಲಿ ಅವರ ಉತ್ತಮ ಬಾಂಧವ್ಯವನ್ನು ಎತ್ತಿ ತೋರಿಸಿದೆ. ಈ ವಿಡಿಯೋ ಸನ್ ಗ್ಲಾಸ್ ಮತ್ತು ಬ್ಲಾಕ್ ಜಾಕೆಟ್ ಧರಿಸಿದ ಪ್ರಧಾನಿ ಮೋದಿ ಅವರು ನೇರವಾಗಿ ಕ್ಯಾಮೆರಾದತ್ತ ಬರುವ ಸಿನಿಮೀಯ ದೃಶ್ಯದೊಂದಿಗೆ ಕೊನೆಗೊಳ್ಳುತ್ತದೆ. ಈ ದೃಶ್ಯವನ್ನು ಧುರಂಧರ್ ನ ಗತ್ತು , ಶಾಂತ, ಸಂಯಮ ಎಂದು ಶೀರ್ಷಿಕೆಯಲ್ಲಿ ಮೋದಿಯ ಚಾಣಾಕ್ಷತನ ಬಗ್ಗೆ ಬರೆಯಲಾಗಿದೆ.