ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Donald Trump: ಭಾರತ ಶ್ರೇಷ್ಠ ದೇಶ, ಆತ ನನ್ನ ಉತ್ತಮ ಸ್ನೇಹಿತ; ಪಾಕ್‌ ಪ್ರಧಾನಿ ಎದುರೇ ಮೋದಿಯನ್ನು ಹೊಗಳಿದ ಟ್ರಂಪ್‌

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಸೋಮವಾರ ಭಾರತ ಮತ್ತು ಪ್ರಧಾನಿ ನರೇಂದ್ರ ಮೋದಿಯವರನ್ನು (Narendra Modi) ಮತ್ತೆ ಹೊಗಳಿದ್ದಾರೆ. ಭಾರತವು ನನ್ನ ಉತ್ತಮ ಸ್ನೇಹಿತನನ್ನು ಹೊಂದಿರುವ ಉತ್ತಮ ದೇಶ ಎಂದು ಅವರು ಹೇಳಿದರು.

ನೈರೋಬಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಸೋಮವಾರ ಭಾರತ ಮತ್ತು ಪ್ರಧಾನಿ ನರೇಂದ್ರ ಮೋದಿಯವರನ್ನು (Narendra Modi) ಮತ್ತೆ ಹೊಗಳಿದ್ದಾರೆ. ಭಾರತವು ನನ್ನ ಉತ್ತಮ ಸ್ನೇಹಿತನನ್ನು ಹೊಂದಿರುವ ಉತ್ತಮ ದೇಶ ಎಂದು ಅವರು ಹೇಳಿದರು. ಇಸ್ರೇಲ್-ಹಮಾಸ್ ಯುದ್ಧವನ್ನು ಕೊನೆಗೊಳಿಸಿ ಗಾಜಾದಲ್ಲಿ ಕದನ ವಿರಾಮ ಒಪ್ಪಂದದ ನಂತರ ಈಜಿಪ್ಟ್ ನಗರದಲ್ಲಿ ವಿಶ್ವ ನಾಯಕರ ಶೃಂಗಸಭೆಯನ್ನುದ್ದೇಶಿಸಿ ಮಾತನಾಡಿದ ಟ್ರಂಪ್, "ಭಾರತ ಮತ್ತು ಪಾಕಿಸ್ತಾನಗಳು ಒಟ್ಟಿಗೆ ಚೆನ್ನಾಗಿ ಬದುಕುತ್ತವೆ ಎಂದು ನಾನು ಭಾವಿಸುತ್ತೇನೆ ಎಂದು ಅವರು ಹೇಳಿದರು.

ಟ್ರಂಪ್‌ ಮೋದಿ ಅವರನ್ನು ಹೊಗಳುವಾಗ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಸಹ ಉಪಸ್ಥಿತರಿದ್ದರು. ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಅಲ್-ಸಿಸಿ ಅವರೊಂದಿಗೆ ಶರ್ಮ್ ಎಲ್-ಶೇಖ್‌ನಲ್ಲಿ ಗಾಜಾ ಶಾಂತಿ ಶೃಂಗಸಭೆಯನ್ನು ಸಹ-ಆತಿಥ್ಯ ವಹಿಸಿದ್ದ ಟ್ರಂಪ್, ಪಾಕಿಸ್ತಾನದ ಮಿಲಿಟರಿ ನಾಯಕತ್ವವನ್ನು ಶ್ಲಾಘಿಸಿದರು ಮತ್ತು ಪ್ರಾದೇಶಿಕ ಶಾಂತಿ "ಒಳ್ಳೆಯ ಸ್ನೇಹಿತರು ಒಳ್ಳೆಯ ಕೆಲಸಗಳನ್ನು ಮಾಡುವುದರ ಮೇಲೆ ಅವಲಂಬಿತವಾಗಿದೆ" ಎಂದು ಹೇಳಿದರು. ನಂತರ ಮಾತನಾಡಿದ ಭಾರತ ಮತ್ತು ಪಾಕಿಸ್ತಾನ ನಡುವಿನ ಪರಮಾಣು ಸಂಘರ್ಷವನ್ನು ಶಮನಗೊಳಿಸಿದ್ದಕ್ಕಾಗಿ ಟ್ರಂಪ್‌ಗೆ ಸಾರ್ವಜನಿಕವಾಗಿ ಧನ್ಯವಾದ ಅರ್ಪಿಸಿದ್ದಾರೆ. ದಕ್ಷಿಣ ಏಷ್ಯಾದಲ್ಲಿ ಮಾತ್ರವಲ್ಲದೆ ಮಧ್ಯಪ್ರಾಚ್ಯದಲ್ಲಿಯೂ ಲಕ್ಷಾಂತರ ಜೀವಗಳನ್ನು ಉಳಿಸಿದ್ದಕ್ಕಾಗಿ" ಟ್ರಂಪ್ ಅವರನ್ನು ಮತ್ತೊಮ್ಮೆ ನೊಬೆಲ್ ಶಾಂತಿ ಪ್ರಶಸ್ತಿಗೆ ನಾಮನಿರ್ದೇಶನ ಮಾಡಲು ಬಯಸುತ್ತೇನೆ ಎಂದು ಷರೀಫ್ ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ: Donald Trump: ಚೀನಾ ಮೇಲೆ ಮತ್ತೆ ಶೇ.100ರಷ್ಟು ಸುಂಕ ವಿಧಿಸಿದ ಟ್ರಂಪ್‌; ಜಿನ್‌ಪಿಂಗ್ ಜೊತೆಗಿನ ಸಭೆಯೂ ರದ್ದು

ನೊಬೆಲ್ ಶಾಂತಿ ಪ್ರಶಸ್ತಿಯನ್ನು ಕಳೆದುಕೊಂಡ ನಂತರ, ಟ್ರಂಪ್ ಭಾರತ ಮತ್ತು ಪಾಕಿಸ್ತಾನ ನಡುವಿನ ಯುದ್ಧ ಸೇರಿದಂತೆ ಎಂಟು ಯುದ್ಧಗಳನ್ನು ಪರಿಹರಿಸಿರುವುದಾಗಿ ಹೇಳಿಕೊಂಡಿದ್ದಾರೆ, ನೊಬೆಲ್‌ಗಾಗಿ ನಾನು ಇದನ್ನು ಮಾಡಿಲ್ಲ ಎಂದು ಹೇಳಿದ್ದಾರೆ. ಭಾರತ - ಪಾಕಿಸ್ತಾನ ಕದನ ವಿರಾಮವನ್ನು ಘೋಷಿಸಿದ್ದ ಟ್ರಂಪ್‌, ತಾನೇ ಯುದ್ಧ ನಿಲ್ಲಿಸಿದ್ದು ಎಂದು ಹೇಳಿಕೊಂಡಿದ್ದು, ಭಾರತ ಇದನ್ನು ಅಲ್ಲಗಳೆದಿತ್ತು. ಏಪ್ರಿಲ್ 22 ರಂದು 26 ನಾಗರಿಕರ ಸಾವಿಗೆ ಕಾರಣವಾದ ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಭಾರತವು ಮೇ 7 ರಂದು ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದಕ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ಆಪರೇಷನ್ ಸಿಂದೂರ್‌ ನಡೆದಿತ್ತು.