ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ದುಬೈಗೆ ತೆರಳುತ್ತಿದ್ದ ಸ್ಪೈಸ್‌ಜೆಟ್ ವಿಮಾನಗಳು ವಿಳಂಬ: ದೆಹಲಿ ಏರ್‌ಪೋರ್ಟ್‌ನಲ್ಲಿ ಭುಗಿಲೆದ್ದ ಪ್ರಯಾಣಿಕರ ಆಕ್ರೋಶ

SpiceJet Flights to Dubai Delayed: ದೆಹಲಿಯಿಂದ ದುಬೈಗೆ ತೆರಳಬೇಕಿದ್ದ ಎರಡು ಸ್ಪೈಸ್‌ಜೆಟ್ ವಿಮಾನಗಳು ವಿಳಂಬವಾದ ಕಾರಣ ಪ್ರಯಾಣಿಕರಲ್ಲಿ ಗೊಂದಲ ಸೃಷ್ಟಿಯಾಯಿತು. ಹೀಗಾಗಿ ವಿಮಾನ ನಿಲ್ದಾಣದಲ್ಲೇ ಪ್ರಯಾಣಿಕರು ಧರಣಿ ನಡೆಸಿದರು. ತಾಂತ್ರಿಕ ಕಾರಣಗಳಿಂದ ವಿಮಾನಗಳು ವಿಳಂಬವಾಗಿವೆ ಎಂದು ವಿಮಾನಯಾನ ಸಂಸ್ಥೆಯ ಅಧಿಕೃತ ಹೇಳಿಕೆ ತಿಳಿಸಿದೆ.

ದೆಹಲಿ ವಿಮಾನ ನಿಲ್ದಾಣದಿಂದ ಹೊರಡಬೇಕಿದ್ದ ಸ್ಪೈಸ್‌ಜೆಟ್ ವಿಮಾನಗಳ ವಿಳಂಬ

ದೆಹಲಿ, ಸೆ. 15: ರಾಷ್ಟ್ರ ರಾಜಧಾನಿ ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ (Indira Gandhi International Airport) ದುಬೈಗೆ ತೆರಳಬೇಕಿದ್ದ ಎರಡು ಸ್ಪೈಸ್‌ಜೆಟ್ ವಿಮಾನಗಳು ವಿಳಂಬವಾದ (flight delay) ಕಾರಣ ಪ್ರಯಾಣಿಕರಲ್ಲಿ ಆತಂಕ ಸೃಷ್ಟಿಯಾಯಿತು. ಹೀಗಾಗಿ ವಿಮಾನ ನಿಲ್ದಾಣದಲ್ಲೇ ಪ್ರಯಾಣಿಕರು ಧರಣಿ ನಡೆಸಿದರು. ಎಸ್‌ಜಿ 5111 ಮತ್ತು ಎಸ್‌ಜಿ 5105 ವಿಮಾನಗಳು ಕ್ರಮವಾಗಿ ಸೋಮವಾರ (ಸೆಪ್ಟೆಂಬರ್‌14) ಬೆಳಗ್ಗೆ ಮತ್ತು ಸಂಜೆ ದುಬೈಗೆ ಹೊರಡಬೇಕಿತ್ತು. ಆದರೆ ಹಾರಾಟವನ್ನು ಹಲವು ಬಾರಿ ಮರು ನಿಗದಿಪಡಿಸಲಾಯಿತು.

ಕಾರ್ಯಾಚರಣೆಯ ಕಾರಣಗಳಿಂದ ವಿಮಾನಗಳು ವಿಳಂಬವಾಗಿವೆ ಎಂದು ವಿಮಾನಯಾನ ಸಂಸ್ಥೆಯ ಅಧಿಕೃತ ಹೇಳಿಕೆ ತಿಳಿಸಿದೆ. ದೆಹಲಿಯಿಂದ ದುಬೈಗೆ ಕಾರ್ಯನಿರ್ವಹಿಸುತ್ತಿದ್ದ ಸ್ಪೈಸ್‌ಜೆಟ್ ವಿಮಾನಗಳಾದ ಎಸ್‌ಜಿ 5111 ಮತ್ತು ಎಸ್‌ಜಿ 5105 ವಿಳಂಬವಾಗಿದೆ.

ಇಲ್ಲಿದೆ ಪ್ರಯಾಣಿಕರು ಧರಣಿ ನಡೆಸುತ್ತಿರುವ ವಿಡಿಯೊ:



ತೊಂದರೆಗೊಳಗಾದ ಪ್ರಯಾಣಿಕರಿಗೆ ಪರ್ಯಾಯ ವಿಮಾನಗಳನ್ನು ವ್ಯವಸ್ಥೆ ಮಾಡಲಾಗುತ್ತಿದೆ. ಉಂಟಾಗುವ ಅನಾನುಕೂಲತೆಯನ್ನು ಕಡಿಮೆ ಮಾಡಲು ವಿಮಾನಯಾನ ಸಂಸ್ಥೆಯು ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಸ್ಪೈಸ್‌ಜೆಟ್ ವಕ್ತಾರರು ತಿಳಿಸಿದ್ದಾರೆ.

ಅಮೃತಸರ ವಿಮಾನ ನಿಲ್ದಾಣದಿಂದ ದುಬೈಗೆ ತೆರಳುವ ಸ್ಪೈಸ್‌ಜೆಟ್ ವಿಮಾನ 18 ಗಂಟೆ ವಿಳಂಬ

ವಿಮಾನಗಳ ಹಾರಾಟಕ್ಕೆ ಈಗಾಗಲೇ ಸಮಯ ನಿಗದಿಯಾಗಿದ್ದು, ಮಂಗಳವಾರ (ಸೆಪ್ಟೆಂಬರ್‌ 15) ಸಂಜೆ ಐಜಿಐ ವಿಮಾನ ನಿಲ್ದಾಣದಿಂದ ಹೊರಡಲಿವೆ ಎಂದು ಸಂಬಂಧಿಸಿದ ಮೂಲಗಳು ದೃಢಪಡಿಸಿವೆ. ವಿಮಾನಗಳಲ್ಲಿ ಒಂದಾದ ಎಸ್‌ಜಿ 5111 ತನ್ನ ಪ್ರಯಾಣಿಕರ ಬೋರ್ಡಿಂಗ್ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದು, ಮಧ್ಯಾಹ್ನ 1 ಗಂಟೆಗೆ ಹೊರಡಲು ಸಿದ್ಧವಾಗಿತ್ತು. ಇನ್ನೊಂದೆಡೆ, ವಿಮಾನ ಎಸ್‌ಜಿ 5105 ಇಂದು ಸಂಜೆ ಹೊರಡಲು ಸಿದ್ಧವಾಗಿದೆ.

ಈ ವಿಳಂಬದಿಂದ ಸುಮಾರು 200 ಪ್ರಯಾಣಿಕರು ತೊಂದರೆಗೀಡಾಗಿದ್ದಾರೆ. ಸೋಮವಾರ ಸಂಜೆಯಿಂದ ದೆಹಲಿ ವಿಮಾನ ನಿಲ್ದಾಣದ ಟರ್ಮಿನಲ್ 3ರ ವಿವಿಧ ಸ್ಥಳಗಳಲ್ಲಿ ಪ್ರಯಾಣಿಕರು ಪ್ರತಿಭಟನೆ ನಡೆಸಿದರು. ದೆಹಲಿ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರು ಧರಣಿ ನಡೆಸುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಮುಂಬೈ-ಗೋವಾ ಸ್ಪೈಸ್‌ಜೆಟ್ ವಿಮಾನ 6 ಗಂಟೆ ವಿಳಂಬ

ಇನ್ನು ಮುಂಬೈಯಿಂದ ಗೋಸವಾಕ್ಕೆ ತೆರಳಬೇಕಿದ್ದ ಸ್ಪೈಸ್‌ಜೆಟ್ ವಿಮಾನವೊಂದು 6 ಗಂಟೆ ವಿಳಂಬವಾದ ಘಟನೆ ಇತ್ತೀಚೆಗೆ ನಡೆದಿದ್ದು, ಸೂಕ್ತ ಮಾಹಿತಿ ನೀಡದೆ ಸಿಬ್ಬಂದಿ ನಿರ್ಲಕ್ಷ್ಯ ವಹಿಸಿದ್ದರು. ಸರಿಯಾದ ಮಾಹಿತಿ ನೀಡದೆ ಹಾಗೂ ಮೂಲಭೂತ ಸೌಕರ್ಯ ಒದಗಿಸದೆ ಪ್ರಯಾಣಿಕರನ್ನು ದೀರ್ಘ ಕಾಲದವರೆಗೆ ಕಾದು ಕೂರಿಸಲಾಗಿದೆ ಎಂದು ಆರೋಪಿಸಲಾಗಿತ್ತು. ಕ್ಯಾಪ್ಟನ್ ಅವರನ್ನು ಪದೇ ಪದೆ ವಿನಂತಿಸಿದರೂ ವಿಳಂಬಕ್ಕೆ ಕಾರಣ ನೀಡಿಲ್ಲ ಎಂದು ಪ್ರಯಾಣಿಕರು ದೂರಿದ್ದರು.

ತಮ್ಮ ವಿಮಾನ ಯಾವಾಗ ಹೊರಡುತ್ತದೆ ಎಂಬುದರ ಕುರಿತು ಯಾವುದೇ ಸ್ಪಷ್ಟ ಮಾಹಿತಿ ಇಲ್ಲದೆ ದೀರ್ಘವಾಗಿ ಕಾಯಬೇಕಾಯಿತು. ಈ ಸಮಯದಲ್ಲಿ ಯಾವುದೇ ಆಹಾರ ಅಥವಾ ಉಪಹಾರಗಳನ್ನು ಒದಗಿಸಿಲ್ಲ ಎಂದು ಪ್ರಯಾಣಿಕರು ಆರೋಪಿಸಿದ್ದರು. ವಿಮಾನಯಾನ ಸಂಸ್ಥೆಯ ಈ ನಡೆಗೆ ಪ್ರಯಾಣಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.