ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಅಮೃತಸರ ವಿಮಾನ ನಿಲ್ದಾಣದಿಂದ ದುಬೈಗೆ ತೆರಳುವ ಸ್ಪೈಸ್‌ಜೆಟ್ ವಿಮಾನ 18 ಗಂಟೆ ವಿಳಂಬ: ಪರದಾಡಿದ ಪ್ರಯಾಣಿಕರು

SpiceJet Flight Delayed: ಪಂಜಾಬ್‌ನ ಅಮೃತಸರದ ಶ್ರೀ ಗುರು ರಾಮ್‌ದಾಸ್ ಜೀ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಡಬೇಕಿದ್ದ ಸ್ಪೈಸ್‌ಜೆಟ್ ವಿಮಾನವು ಆರಂಭದಲ್ಲಿ ಬೆಳಗ್ಗೆ 8 ಗಂಟೆಗೆ ಹೊರಡುವ ನಿರೀಕ್ಷೆಯಿತ್ತು. ನಂತರ ನಿರ್ಗಮನ ಸಮಯವನ್ನು ಬೆಳಗ್ಗೆ 11 ಗಂಟೆಗೆ ಮುಂದೂಡಲಾಯಿತು. ಕೊನೆಗೆ 18 ಗಂಟೆ ಪ್ರಯಾಣಿಕರು ಕಾಯುವಂತಾಯಿತು.

ಅಮೃತಸರ ವಿಮಾನ ನಿಲ್ದಾಣದಲ್ಲಿ 18 ಗಂಟೆ ಸ್ಪೈಸ್‌ಜೆಟ್ ವಿಳಂಬ

ಪಂಜಾಬ್‌ನ ಅಮೃತಸರ ಏರ್‌ಪೋರ್ಟ್‌ನಲ್ಲಿ 18 ಗಂಟೆ ವಿಮಾನ ವಿಳಂಬವಾಗಿ ಪರದಾಡಿದ ಪ್ರಯಾಣಿಕರು -

Priyanka P
Priyanka P Aug 30, 2026 8:10 PM

ಚಂಡೀಗಢ, ಆ. 30: ಪಂಜಾಬ್‌ನ ಅಮೃತಸರದಿಂದ (Amritsar) ದುಬೈಗೆ ತೆರಳುವ ಸ್ಪೈಸ್‌ಜೆಟ್ ವಿಮಾನ (SpiceJet Flight) ಸುಮಾರು 17-18 ಗಂಟೆಗಳ ಕಾಲ ವಿಳಂಬವಾಗಿದ್ದು, ಪ್ರಯಾಣಿಕರು ಬಿಸಿಲಿನಲ್ಲೇ ವಿಮಾನ ನಿಲ್ದಾಣದಲ್ಲಿ ಕಾಯಬೇಕಾಯಿತು (SpiceJet delay). ಅಮೃತಸರದ ಶ್ರೀ ಗುರು ರಾಮ್‌ದಾಸ್ ಜೀ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿಮಾನವು ಆರಂಭದಲ್ಲಿ ಬೆಳಗ್ಗೆ 8 ಗಂಟೆಗೆ ಹೊರಡುವ ನಿರೀಕ್ಷೆಯಿತ್ತು. ನಂತರ ನಿರ್ಗಮನ ಸಮಯವನ್ನು ಬೆಳಗ್ಗೆ 11 ಗಂಟೆಗೆ ಮುಂದೂಡಲಾಯಿತು. ಬಳಿಕ ಮರುದಿನ ಬೆಳಗಿನ ಜಾವ 2 ಗಂಟೆಗೆ ಹೊರಡಲಿದೆ ಎಂದು ತಿಳಿಸಲಾಯಿತು ಎಂದು ಪ್ರಯಾಣಿಕರು ತಿಳಿಸಿದ್ದಾರೆ.

ದೀರ್ಘ ವಿಳಂಬಕ್ಕೆ ಸ್ಪಷ್ಟ ವಿವರಣೆ ನೀಡಲಾಗಿಲ್ಲ. ಕಾಯುವ ಸಮಯದಲ್ಲಿ ವಿಮಾನಯಾನ ಸಿಬ್ಬಂದಿ ಸಹಕಾರ ನೀಡಲಿಲ್ಲ ಎಂದು ಪ್ರಯಾಣಿಕರು ಆರೋಪಿಸಿದ್ದಾರೆ. ಕೆಲವು ಪ್ರಯಾಣಿಕರು ತಮಗೆ ಹೋಟೆಲ್ ಅಥವಾ ಪರ್ಯಾಯ ಪ್ರಯಾಣ ವ್ಯವಸ್ಥೆಗಳ ಬಗ್ಗೆ ಸ್ಪಷ್ಟ ಮಾಹಿತಿಯನ್ನು ನೀಡಲಾಗಿಲ್ಲ ಎಂದು ಹೇಳಿದ್ದಾರೆ.

ಸ್ಪೈಸ್‌ಜೆಟ್ ವಿಮಾನ ವಿಳಂಬ:



ಇನ್ನು, ತನ್ನ ಆರು ವರ್ಷದ ಮಗಳೊಂದಿಗೆ ಲುಧಿಯಾನದಿಂದ ಅಮೃತಸರಕ್ಕೆ ಪ್ರಯಾಣಿಸಿದ ಅಂಚಲ್ ಸೂದ್, ವಿಮಾನವು ಆರಂಭದಲ್ಲಿ ಬೆಳಗ್ಗೆ 8 ಗಂಟೆಗೆ ತೆರಳುವುದಾಗಿ ಹೇಳಲಾಗಿತ್ತು. ನಂತರ ನಿರ್ಗಮನವನ್ನು ಬೆಳಗ್ಗೆ 11 ಗಂಟೆಗೆ ಬದಲಾಯಿಸಲಾಯಿತು. ನಂತರ ಮರುದಿನ ಬೆಳಗ್ಗೆ 2 ಗಂಟೆಗೆ ವಿಮಾನ ಹೊರಡಲಿದೆ ಎಂದು ಮೆಸೇಜ್ ಮೂಲಕ ತಿಳಿಸಲಾಯಿತು ಎಂದು ಹೇಳಿದರು.

ಛತ್ತೀಸ್‌ಗಢದ ಏರ್‌ಪೋರ್ಟ್‌ನಲ್ಲಿ ವಿಮಾನ ಲ್ಯಾಂಡಿಂಗ್ ವೇಳೆ ಟೈರ್ ಸ್ಫೋಟ: ತಪ್ಪಿದ ಭಾರಿ ದುರಂತ

ಪದೇ ಪದೆ ವಿಮಾನದ ಸಮಯ ಬದಲಾಗಿದ್ದರಿಂದ ಅಂಚಲ್ ಮತ್ತು ಅವರ ಮಗಳು ವಿಮಾನ ನಿಲ್ದಾಣದಲ್ಲಿ ಸುಮಾರು 18 ಗಂಟೆಗಳ ಕಾಲ ಕಾಯಬೇಕಾಯಿತು. ವಿಮಾನ ವಿಳಂಬವಾಗಲು ಕಾರಣ ತಿಳಿಯಲು ವಿಮಾನಯಾನ ಸಂಸ್ಥೆಯ ಗ್ರಾಹಕ ಸಹಾಯವಾಣಿಯನ್ನು ಸಂಪರ್ಕಿಸಿರುವುದಾಗಿ ಸೂದ್ ಹೇಳಿದ್ದಾರೆ. ವಿಮಾನದಲ್ಲಿ ತಾಂತ್ರಿಕ ಸಮಸ್ಯೆ ಇದೆ ಎಂದು ಅವರಿಗೆ ತಿಳಿಸಲಾಗಿದೆ ಎನ್ನಲಾಗಿದೆ.

ಹಲವು ದಿನಗಳಿಂದ ವಿಮಾನದ ತಾಂತ್ರಿಕ ಸಮಸ್ಯೆ ಎದುರಿಸುತ್ತಿದ್ದರೆ, ಪ್ರಯಾಣಿಕರಿಗೆ ಮೊದಲೇ ಏಕೆ ತಿಳಿಸಲಿಲ್ಲ ಎಂದು ಅವರು ಪ್ರಶ್ನಿಸಿದರು. ಇಷ್ಟು ದೀರ್ಘ ವಿಳಂಬವನ್ನು ಎದುರಿಸುತ್ತಿರುವ ಪ್ರಯಾಣಿಕರಿಗೆ ಸೂಕ್ತ ವ್ಯವಸ್ಥೆಯನ್ನೂ ಮಾಡಿಲ್ಲ ಎಂದು ತಿಳಿಸಿದರು. ಆರು ವರ್ಷದ ಮಗುವಿನೊಂದಿಗೆ ಪ್ರಯಾಣಿಸುತ್ತಿದ್ದ ಅವರು, ವಿಮಾನ ನಿಲ್ದಾಣದಲ್ಲಿ ಸೆಖೆಯಲ್ಲಿ ಇರುವುದು ಕಷ್ಟವಾಗಿತ್ತು ಎಂದು ಹೇಳಿದರು.

ತರಬೇತಿ ಹಾರಾಟದ ವೇಳೆ ಕಾನ್ಪುರದಲ್ಲಿ ವಿಮಾನ ಅಪಘಾತ; ಕರ್ನಾಟಕದ ಪೈಲಟ್‌ ಅಭಿಷೇಕ್ ಪೂಜಾರಿ ಬಲಿ

ಫಾಗ್ವಾರಾದಿಂದ ದುಬೈಗೆ ಪ್ರಯಾಣಿಸುತ್ತಿದ್ದ ದೀಪಕ್ ಕುಮಾರ್ ಕೂಡ ತಮ್ಮ ಭಯಾನಕ ಅನುಭವ ಬಿಚ್ಚಿಟ್ಟಿದ್ದಾರೆ. ವಿಮಾನಕ್ಕಾಗಿ ಅಮೃತಸರ ಏರ್‌ಪೋರ್ಟ್‌ ತಲುಪಲು ಸುಮಾರು 250 ಕಿಲೋ ಮೀಟರ್ ಪ್ರಯಾಣಿಸಿದ್ದೇನೆ ಎಂದು ಹೇಳಿದರು. ಕುಮಾರ್ ಅವರ ವಿಮಾನವು ಬೆಳಗ್ಗೆ 8:40ಕ್ಕೆ ನಿಗದಿಯಾಗಿತ್ತು. ನಂತರ ನಿರ್ಗಮನವನ್ನು ಬೆಳಗ್ಗೆ 11 ಗಂಟೆಗೆ ಮತ್ತು ನಂತರ 2:30ಕ್ಕೆ ಬದಲಾಯಿಸಲಾಯಿತು. ಪರಿಷ್ಕೃತ ನಿರ್ಗಮನ ಸಮಯವನ್ನು ಸಹ ದೃಢೀಕರಿಸಲಾಗಿಲ್ಲ ಎಂದು ಅವರು ಹೇಳಿದರು.

ವಿಮಾನಯಾನ ಸಂಸ್ಥೆಯ ಸಹಾಯವಾಣಿಯು ತಾಂತ್ರಿಕ ಸಮಸ್ಯೆಯಿಂದಾಗಿ ವಿಳಂಬವಾಗಿದೆ ಎಂದು ಕುಮಾರ್ ಹೇಳಿದ್ದಾರೆ. ವಿಮಾನ ವೇಳಾಪಟ್ಟಿಯ ಮೇಲೆ ಪರಿಣಾಮ ಬೀರುವ ತಾಂತ್ರಿಕ ಸಮಸ್ಯೆ ಇದ್ದಾಗ, ಪ್ರಯಾಣಿಕರಿಗೆ ಮೊದಲೇ ಏಕೆ ಎಚ್ಚರಿಕೆ ನೀಡಲಿಲ್ಲ ಎಂದು ಅವರು ಪ್ರಶ್ನಿಸಿದರು.