ನಿರ್ಮಲಾ ಸೀತಾರಾಮನ್ ಅವರು 11 ಗಂಟೆಗೆ ಬಜೆಟ್ ಮಂಡನೆ ಮಾಡಲಿದ್ದಾರೆ. ನಿರ್ಮಲಾ ಸೀತಾರಾಮನ್ ಅವರು ಪ್ರಾದೇಶಿಕ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಸಾಂಪ್ರದಾಯಿಕ ನೇಯ್ಗೆಯ ಸೀರೆಗಳನ್ನು ಆಯ್ಕೆ ಮಾಡುತ್ತಾರೆ. ಕಳೆದ ಬಾರಿ ಕರ್ನಾಟಕದ ಇಳಕಲ್ ಸೀರೆಯುಟ್ಟು ಅವರು ಸಂಸತ್ತಿಗೆ ಬಂದಿದ್ದರು. ಈ ಬಾರಿ ಯಾವ ಬಣ್ಣದ ಸೀರೆ ಧರಿಸಲಿದ್ದಾರೆ ಎನ್ನುವುದು ಪ್ರಶ್ನೆಯಾಗಿದೆ.
Budget 2026 Live: ಕರ್ನಾಟಕದ ಕರಾವಳಿಗೆ ಬಂಪರ್ ಕೊಡುಗೆ; ಕರಾವಳಿಯಲ್ಲಿ ಟ್ರಕ್ಕಿಂಗ್ ಮಾರ್ಗ ಅಭಿವೃದ್ಧಿ ಯೋಜನೆ ಘೋಷಣೆ
Budget Session 2026 Parliament LIVE: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು 2026-27 ನೇ ಸಾಲಿನ ಬಜೆಟ್ ಮಂಡನೆ ಮಾಡಲಿದ್ದಾರೆ. ಇದು ಸೀತಾರಾಮನ್ ಅವರು ಮಂಡಿಸುತ್ತಿರುವ ಸತತ ಒಂಬತ್ತನೇ ಬಜೆಟ್ ಆಗಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ಒಂಬತ್ತನೇ ಬಜೆಟ್ ಆಗಿದೆ. ಕಳೆದ ನಾಲ್ಕು ವರ್ಷಗಳಂತೆ, ಈ ವರ್ಷದ ಬಜೆಟ್ ಅನ್ನು ಕಾಗದರಹಿತ ಸ್ವರೂಪದಲ್ಲಿ ಮಂಡಿಸಲಾಗುವುದು. ಕಳೆದ ಬಾರಿಯಂತೆ ಈ ಬಾರಿಯ ಬಜೆಟ್ ಸಹ ಜನ ಸಾಮಾನ್ಯರ ಬಜೆಟ್ ಆಗಬಹುದು ಎಂದು ನಿರೀಕ್ಷಿಸಲಾಗಿದೆ.
ವಿದೇಶ ಪ್ರವಾಸಕ್ಕೆ ಹೋಗುವವರಿಗೆ ಗುಡ್ ನ್ಯೂಸ್
ವಿದೇಶ ಪ್ರವಾಸಕ್ಕೆ ತೆರಳುವವರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದೆ. ವಿದೇಶ ಯಾತ್ರೆಗಳ ಟಿಸಿಎಸ್ ಶೇ 2 ರಷ್ಟು ಕಡಿತಗೊಳಿಸಲಾಗಿದೆ. ಅಷ್ಟೇ ಅಲ್ಲದೇ ಅನಿವಾಸಿ ಭಾರತೀಯ ಸ್ಥಿರಾಸ್ಥಿ ಮಾರಾಟದ ಮೇಲಿನ ಟಿಸಿಎಸ್ ಕಡಿತಗೊಳಿಸಲಾಗಿದೆ.
ಹೊಸ ಆದಾಯ ತೆರಿಗೆ ಕಾನೂನು ಜಾರಿ
ಎಪ್ರಿ,ಲ್‌ನಿಂದ ಹೊಸ ಆದಾಯ ತೆರಿಗೆ ಕಾನೂನು ಜಾರಿ ಮಾಡಲಾಗಿದೆ. ಮಾರ್ಚ್ 31 ರ ವರೆಗೆ ಆದಾಯ ತೆರಿಗೆ ಸಲ್ಲಿಸಲು ಅವಕಾಶ ನೀಡಲಾಗಿದೆ. ವಿದೇಶದಲ್ಲಿನ ಆಸ್ತಿ ಘೋಷಣೆಗೆ 6 ತಿಂಗಳು ಅವಕಾಶ ನೀಡಲಾಗಿದೆ.
ಮಹಿಳೆಯರು ನಡೆಸುವ ಉದ್ಯಮಗಳಿಗೆ ಶಿ-ಮಾರ್ಟ್
ಗ್ರಾಮೀಣ ಮಹಿಳೆಯರು ನಡೆಸುವ ಉದ್ಯಮಗಳಿಗಾಗಿ ಸ್ವ-ಸಹಾಯ ಉದ್ಯಮಗಳು ಅಂದರೆ ಶಿ-ಮಾರ್ಟ್‌ಗಳನ್ನು ಪ್ರಾರಂಭಿಸಲಾಗುವುದು ಎಂದು ಇಂದಿನ ಬಜೆಟ್‌ನಲ್ಲಿ ಘೋಷಿಸಲಾಗಿದೆ.
ಪ್ರತಿ ಜಿಲ್ಲೆಯಲ್ಲೂ ಬಾಲಕಿಯರ ವಸತಿ ನಿಲಯ
ಪ್ರತಿ ಜಿಲ್ಲೆಯಲ್ಲೂ ಬಾಲಕಿಯರ ವಸತಿ ನಿಲಯ ಸ್ಥಾಪನೆ. ಲಕ್‌ಪತಿ ದೀದಿ ಯೋಜನೆಗೆ ಇನ್ನಷ್ಟು ಉತ್ತೇಜನ ನೀಡುವುದಾಗಿ ನಿರ್ಮಲಾ ಸೋತಾರಾಮನ್ ಘೋಷಣೆ.
ಗೋಡಂಬಿ ಹಾಗೂ ತೆಂಗು ಬೆಳೆಗೆ ಒತ್ತು
ಗೋಡಂಬಿ ಸೇರಿದಂತೆ ಹಲವು ಒಣ ಹಣ್ಣುಗಳ ಬೆಳೆಗೆ ಒತ್ತು ನೀಡಲಾಗುವುದು ಎಂದು ಹಣಕಾಸು ಸಚಿವೆ ಘೋಷಿಸಿದ್ದಾರೆ. ಅಷ್ಟೇ ಅಲ್ಲದೇ ಕೋಕೋ ಹಣ್ಣು ಹಾಗೂ ತೆಂಗಿನ ಬೆಳೆಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುವುದು ಎಂದು ಘೋಷಿಸಲಾಗಿದೆ.
ವಿಶ್ವದರ್ಜೆಯ ಟ್ರೆಕ್ಕಿಂಗ್ಗೆ ಭಾರತದಲ್ಲಿ ಅವಕಾಶ
ಹಿಮಾಚಲ, ಉತ್ತರಾಖಂಡ, ಜಮ್ಮು ಕಾಶ್ಮೀರ 3 ರಾಜ್ಯಗಳಲ್ಲಿ ವಿಶ್ವದರ್ಜೆಯ ಟ್ರೆಕ್ಕಿಂಗ್ಗೆ ಒತ್ತು. 15 ಪ್ರಾಚ್ಯವಸ್ತು ಪ್ರದೇಶಗಳ ಅಭಿವೃದ್ಧಿಗೆ ಒತ್ತು ನೀಡಲಾಗಿದೆ.
ಒಳನಾಡು ಜಲಮಾರ್ಗಗಳತ್ತ ಗಮನ
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ ಬಜೆಟ್ ಭಾಷಣದಲ್ಲಿ ಒಳನಾಡು ಜಲಮಾರ್ಗಗಳಿಗೆ ವಿಶೇಷ ಒತ್ತು ನೀಡಿದ್ದಾರೆ.
- ಮುಂದಿನ ಐದು ವರ್ಷಗಳಲ್ಲಿ 20 ಹೊಸ ರಾಷ್ಟ್ರೀಯ ಜಲಮಾರ್ಗಗಳು.
- ಪಾಟ್ನಾದ ವಾರಣಾಸಿಯಲ್ಲಿ ಹಡಗು ದುರಸ್ತಿ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗುವುದು.
- ಕರಾವಳಿ ಸಾಗಣೆಯ ಪಾಲನ್ನು ಹೆಚ್ಚಿಸಲು ಕರಾವಳಿ ಸರಕು ಯೋಜನೆ.
- ಭಾರತದಲ್ಲಿ ಸಮುದ್ರ ವಿಮಾನಗಳ ತಯಾರಿಕೆಗೆ ಬೆಂಬಲ.
ಕರ್ನಾಟಕದ ಕರಾವಳಿಗೆ ಬಂಪರ್ ಕೊಡುಗೆ
ಕರ್ನಾಟಕದ ಕರಾವಳಿಯಲ್ಲಿ ಟ್ರಕ್ಕಿಂಗ್ ಮಾರ್ಗ ಅಭಿವೃದ್ಧಿ ಯೋಜನೆ
ಮೂಲ ಸೌಕರ್ಯ ಅಭಿವೃದ್ಧಿಗೆ ಒತ್ತು
ಟೈರ್ 2 ಮತ್ತು ಟೈರ್ 3 ನಗರ ಮೂಲ ಸೌಕರ್ಯ ಅಭಿವೃದ್ಧಿಗೆ ಒತ್ತು.
ಔಷಧ ಇನ್ನಷ್ಟು ಅಗ್ಗ
ಕ್ಯಾನ್ಸರ್, ಮಧುಮೇಹ ಔಷಧ ಅಗ್ಗ ಮಾಡಲಾಗುವುದು ಎಂದು ನಿರ್ಮಲಾ ಸೀತಾರಾಮ್ ತಿಳಿಸಿದ್ದಾರೆ.
ರಾಸಾಯನಿಕ ಪಾರ್ಕ್ ಸ್ಥಾಪನೆ
ದೇಶೀಯ ಉತ್ಪಾದನೆಯನ್ನು ಹೆಚ್ಚಿಸಲು, ಆಮದು ಅವಲಂಬನೆಯನ್ನು ಕಡಿಮೆ ಮಾಡಲು 3 ಮೀಸಲಾದ ರಾಸಾಯನಿಕ ಪಾರ್ಕ್ಗಳನ್ನು ಸ್ಥಾಪಿಸುವ ಪ್ರಸ್ತಾಪವನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಣೆ ಮಾಡಿದರು.
7 ಹೈ-ಸ್ಪೀಡ್ ರೈಲು ಕಾರಿಡಾರ್
ಭಾರತವು 7 ಹೈ-ಸ್ಪೀಡ್ ರೈಲು ಕಾರಿಡಾರ್‌ಗಳನ್ನು ಅಭಿವೃದ್ಧಿಪಡಿಸಲಿದೆ ಎಂದು ಸಚಿವೆ ಘೋಷಿಸಿದರು. ಈ ಕಾರಿಡಾರ್‌ಗಳು ಮುಂಬೈ-ಪುಣೆ, ಪುಣೆ-ಹೈದರಾಬಾದ್, ಹೈದರಾಬಾದ್-ಬೆಂಗಳೂರು, ಹೈದರಾಬಾದ್-ಚೆನ್ನೈ, ಚೆನ್ನೈ-ಬೆಂಗಳೂರು, ದೆಹಲಿ-ವಾರಣಾಸಿ ಮತ್ತು ವಾರಣಾಸಿ-ಸಿಲಿಗುರಿ ಆಗಿರುತ್ತವೆ.
2026 ರ ಬಜೆಟ್ ಸರ್ಕಾರದ 3 'ಕರ್ತವ್ಯ'ಗಳಿಂದ ಪ್ರೇರಿತವಾಗಿದೆ
"ಆತ್ಮನಿರ್ಭರವನ್ನು ಪ್ರಧಾನವಾಗಿ ಇಟ್ಟುಕೊಂಡು, ನಾವು ದೇಶೀಯ ಉತ್ಪಾದನಾ ಸಾಮರ್ಥ್ಯ, ಇಂಧನ ಸುರಕ್ಷತೆ ಮತ್ತು ನಿರ್ಣಾಯಕ ಆಮದು ಅವಲಂಬನೆಗಳನ್ನು ಕಡಿಮೆ ಮಾಡಿದ್ದೇವೆ. ಅದೇ ಸಮಯದಲ್ಲಿ, ಸರ್ಕಾರದ ಪ್ರತಿಯೊಂದು ಕ್ರಮದಿಂದ ನಾಗರಿಕರು ಪ್ರಯೋಜನ ಪಡೆಯುವುದನ್ನು ನಾವು ಖಚಿತಪಡಿಸಿದ್ದೇವೆ, ಉದ್ಯೋಗ ಸೃಷ್ಟಿ, ಕೃಷಿ ಉತ್ಪಾದಕತೆ, ಗೃಹ ಖರೀದಿ ಶಕ್ತಿ ಮತ್ತು ಜನರಿಗೆ ಸಾರ್ವತ್ರಿಕ ಸೇವೆಗಳನ್ನು ಬೆಂಬಲಿಸಲು ಸುಧಾರಣೆಗಳನ್ನು ಕೈಗೊಳ್ಳುತ್ತೇವೆ. ಈ ಕ್ರಮಗಳು ಸುಮಾರು 7% ರಷ್ಟು ಹೆಚ್ಚಿನ ಬೆಳವಣಿಗೆಯ ದರವನ್ನು ನೀಡಿವೆ ಮತ್ತು ಬಡತನ ನಿವಾರಣೆ ಮತ್ತು ನಮ್ಮ ಜನರ ಜೀವನದಲ್ಲಿ ಸುಧಾರಣೆಯಲ್ಲಿ ಗಣನೀಯ ಪ್ರಗತಿ ಸಾಧಿಸಲು ನಮಗೆ ಸಹಾಯ ಮಾಡಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.
ಕೈಮಗ್ಗ ವಲಯವನ್ನು ಉತ್ತೇಜಿಸಲು ಮಹಾತ್ಮಾ ಗಾಂಧಿ ಗ್ರಾಮ ಸ್ವರಾಜ್ ಯೋಜನೆ ಘೋಷಣೆ
ಖಾದಿ ಕೈಮಗ್ಗ ವಲಯವನ್ನು ತರಬೇತಿ, ಕೌಶಲ್ಯ, ಉತ್ಪಾದನೆ ಮತ್ತು ಗುಣಮಟ್ಟದ ಪರಿಶೀಲನೆಗಳೊಂದಿಗೆ ಉತ್ತೇಜಿಸಲು ಮಹಾತ್ಮ ಗಾಂಧಿ ಗ್ರಾಮ ಸ್ವರಾಜ್ ಯೋಜನೆಯನ್ನು ಪ್ರಾರಂಭಿಸಲಾಗುವುದು ಎಂದು ಸೀತಾರಾಮನ್ ಹೇಳಿದರು.
"ಆರ್ಥಿಕ ಬೆಳವಣಿಗೆಯನ್ನು ವೇಗಗೊಳಿಸಲು ಮತ್ತು ಉಳಿಸಿಕೊಳ್ಳಲು, ನಾನು ಆರು ಕ್ಷೇತ್ರಗಳಲ್ಲಿ ಮಧ್ಯಸ್ಥಿಕೆಗಳನ್ನು ಪ್ರಸ್ತಾಪಿಸುತ್ತೇನೆ, 7 ಕಾರ್ಯತಂತ್ರದ ವಲಯಗಳಲ್ಲಿ ಉತ್ಪಾದನೆಯನ್ನು ಹೆಚ್ಚಿಸುವುದು, ಪರಂಪರೆಯ ಕೈಗಾರಿಕಾ ವಲಯಗಳನ್ನು ಪುನರುಜ್ಜೀವನಗೊಳಿಸುವುದು, ಮೂಲಸೌಕರ್ಯಕ್ಕೆ ಒತ್ತು ನೀಡುವುದು, ದೀರ್ಘಕಾಲೀನ ಭದ್ರತೆ ಮತ್ತು ಸ್ಥಿರತೆಯನ್ನು ಖಚಿತಪಡಿಸುವುದು, ನಗರ ಆರ್ಥಿಕ ಪ್ರದೇಶಗಳನ್ನು ಅಭಿವೃದ್ಧಿಪಡಿಸುವುದು" ಎಂದರು.
ಸೆಮಿಕಂಡಕ್ಟರ್ ಯೋಜನೆಗೆ 40 ಸಾವಿರ ಕೋಟಿ ರೂ.
ಎಲೆಕ್ಟ್ರಾನಿಕ್ ಬಿಡಿಭಾಗಗಳ ಉತ್ಪಾದನಾ ಯೋಜನೆಯ ವೆಚ್ಚ 40,000 ಕೋಟಿ ರೂ.ಗಳಿಗೆ ಏರಿಕೆ ಮಾಡಲಾಗಿದೆ.
ಖನಿಜ ಕಾರಿಡಾರ್ ಸ್ಥಾಪನೆ
ಒಡಿಶಾ, ಕೇರಳ, ಆಂಧ್ರ ಮತ್ತು ತಮಿಳುನಾಡುಗಳಲ್ಲಿ ಅಪರೂಪದ ಭೂಮಿಯ ಖನಿಜ ಕಾರಿಡಾರ್‌ಗಳನ್ನು ಸ್ಥಾಪನೆ.
ಬಯೋ ಫಾರ್ಮಾ ಶಕ್ತಿ ಯೋಜನೆ 10 ಸಾವಿರ ಕೋಟಿ ರುಪಾಯಿ
ಆರೋಗ್ಯ ಕ್ಷೇತ್ರಕ್ಕೆ ಬಜೆಟ್‌ನಲ್ಲಿ ಭರ್ಜರಿ ಕೊಡುಗೆ ನೀಡಿದ್ದು, ಬಯೋ ಫಾರ್ಮಾ ಶಕ್ತಿ ಯೋಜನೆಯಡಿ 10 ಸಾವಿರ ಕೋಟಿ ರುಪಾಯಿ ಬಿಡುಗಡೆ ಮಾಡಲಾಗಿದೆ. ದೇಶವನ್ನು ಔಷಧ ತಯಾರಿಕಾ ಘಟಕದ ಹಬ್ ಮಾಡಲು ಈ ಯೋಜನೆಯನ್ನು ಜಾರಿ ಮಾಡಲಾಗಿದೆ.
ಬಜೆಟ್ ಮಂಡನೆ ಆರಂಭ
ಸಂಸತ್‌ಗೆ ಆಗಮಿಸಿದ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ಆರಂಭಿಸಿದ್ದಾರೆ.
ಕುಸಿದ ಚಿನ್ನದ ದರ
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸುವ ಮುನ್ನವೇ ಭಾರತದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಸುಮಾರು ಶೇ. 9ರಷ್ಟು ಕುಸಿದಿವೆ.
ಸಂಸತ್ ಭವನಕ್ಕೆ ನಿರ್ಮಲಾ ಸೀತಾರಾಮನ್ ಆಗಮನ
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ತಮ್ಮ ತಂಡದೊಂದಿಗೆ, ಹಣಕಾಸು ಸಚಿವಾಲಯದ ಹೊರಗೆ ಬಜೆಟ್ ಟ್ಯಾಬ್ಲೆಟ್‌ನೊಂದಿಗೆ ಆಗಮಿಸಿದರು. ಸಂಪ್ರದಾಯದಂತೆ ಮೊಸರು ಸಕ್ಕರೆಯನ್ನು ತಿಂದು ಬಜೆಟ್‌ನ ಆಚರಣೆಯನ್ನು ಪ್ರಾರಂಭಿಸಲಾಯಿತು.
ಕಡಿಮೆಯಾಗುತ್ತಾ ಚಿನ್ನ ಬೆಳ್ಳಿ ದರ?
ಸತತವಾಗಿ ಏರಿಕೆ ಕಾಣುತ್ತಿರುವ ಚಿನ್ನ, ಬೆಳ್ಳಿದರದಿಂದ ಗ್ರಾಹಕರು ಕಂಗಾಲಾಗಿದ್ದಾರೆ. ಪ್ರಸ್ತುತ, ಭಾರತದಲ್ಲಿ ಬೆಳ್ಳಿ 7.5 ಪ್ರತಿಶತ ಆಮದು ಸುಂಕಕ್ಕೆ ಒಳಪಟ್ಟಿರುತ್ತದೆ, ಜೊತೆಗೆ 3 ಪ್ರತಿಶತ GST ಕೂಡ ಇದೆ. ಬೆಳ್ಳಿಯ ಮೇಲಿನ ಕಸ್ಟಮ್ಸ್ ಸುಂಕಗಳನ್ನು ಕಡಿಮೆ ಮಾಡುವುದರಿಂದ ಬೆಲೆಗಳು ಕಡಿಮೆಯಾಗುತ್ತವೆ ಮತ್ತು ಬೇಡಿಕೆ ಹೆಚ್ಚಾಗುತ್ತದೆ.
20 ವರ್ಷಗಳ ಬಳಿಕ ಭಾನುವಾರ ಬಜೆಟ್!
2000ನೇ ಇಸವಿಯ ನಂತರ ಕೇಂದ್ರ ಬಜೆಟ್ ಅನ್ನು ಭಾನುವಾರದಂದು ಮಂಡಿಸಲಾಗುತ್ತಿರುವುದು ಇದೇ ಮೊದಲು. ಕೊನೆಯ ಬಾರಿಗೆ ಭಾನುವಾರ ಬಜೆಟ್ ಮಂಡಿಸಿದ್ದು ಫೆಬ್ರವರಿ 28, 1999 ರಂದು. ವಾಜಪೇಯಿ ಆಡಳಿತಾವಧಿಯಲ್ಲಿ, ಹಣಕಾಸು ಸಚಿವ ಯಶವಂತ್ ಸಿನ್ಹಾ ಅವರು ಭಾನುವಾರದಂದು ಬಜೆಟ್ ಮಂಡಿಸಿದ್ದರು. ಇದೀಗ ನಿರ್ಮಲಾ ಸೀತಾರಾಮನ್ ಭಾನುವಾರದಂದು ಈ ಬಾರಿಯ ಬಜೆಟ್ ಮಂಡನೆ ಮಾಡಲಿದ್ದಾರೆ.
ಜನಪರ ಬಜೆಟ್?
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಬಜೆಟ್ ಮಂಡಿಸಲಿದ್ದಾರೆ. ಸರ್ಕಾರ ಈ ಬಜೆಟ್ ಕುರಿತು ಜನಪರ ಬಜೆಟ್ ಎಂದು ಸುಳಿವು ನೀಡಿದ್ದು, ಜನರಿಗೆ ಬಜೆಟ್ ಮೇಲೆ ಇನ್ನಷ್ಟು ನಿರೀಕ್ಷೆ ಹೆಚ್ಚಾಗಿದೆ.