ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಎಲ್‌ಪಿಜಿ ಲಭ್ಯತೆ ಬಗ್ಗೆ ಜನರಲ್ಲಿ ಅನಗತ್ಯವಾಗಿ ಭೀತಿ ಮೂಡಿಸಲಾಗುತ್ತಿದೆ: ಪ್ರಧಾನಿ ಮೋದಿ

ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಉಂಟಾಗಿರುವ ಸಂಘರ್ಷದ ಪರಿಣಾಮ ದೇಶಾದ್ಯಂತ ತೈಲ, ಅಡುಗೆ ಅನಿಲ ಬಿಕ್ಕಟ್ಟಿನ ಬಗ್ಗೆ ವದಂತಿಗಳು ದಿನೇ ದಿನೇ ಹೆಚ್ಚಾಗುತ್ತಿದೆ. ಅದರಲ್ಲೂ ಮುಖ್ಯವಾಗಿ ಅಡುಗೆ ಅನಿಲ ಲಭ್ಯತೆ ಅನೇಕರಲ್ಲಿ ಆತಂಕ ಉಂಟು ಮಾಡಿದೆ. ಇದೀಗ ಈ ಕುರಿತು ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ಕೋವಿಡ್ ಕಾಲದಂತೆಯೇ ಈ ಸಮಸ್ಯೆಯನ್ನು ಕೂಡ ನಾವು ಎದುರಿಸುತ್ತೇವೆ ಎಂದು ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ (ಸಂಗ್ರಹ ಚಿತ್ರ)

ನವದೆಹಲಿ: ದೇಶಾದ್ಯಂತ ತೈಲ, ಎಲ್‌ಪಿಜಿ ಲಭ್ಯತೆಯ (LPG crisis) ಬಗ್ಗೆ ಆತಂಕ ಉಂಟು ಮಾಡಲಾಗುತ್ತಿದೆ. ಕೋವಿಡ್ ಕಾಲದಂತೆಯೇ (Covid pandemic) ಈ ಸಮಸ್ಯೆಯನ್ನು ಕೂಡ ನಾವು ಎದುರಿಸುತ್ತೇವೆ. ಎಲ್‌ಪಿಜಿ, ತೈಲ ಬಿಕ್ಕಟ್ಟನ್ನು ಕೂಡ ನಿವಾರಿಸಲಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಹೇಳಿದರು. ಎನ್‌ಎಕ್ಸ್‌ಟಿ ಶೃಂಗಸಭೆಯನ್ನು (NXT Summit) ಉದ್ದೇಶಿಸಿ ಮಾತನಾಡಿದ ಅವರು, ಎಲ್‌ಪಿಜಿ ಲಭ್ಯತೆಯ ಬಗ್ಗೆ ಭೀತಿ ಉಂಟು ಮಾಡುವವರು ಮತ್ತು ಕಾಳಸಂತೆಯಲ್ಲಿ ಮಾರಾಟದ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ನಾವು ಕೋವಿಡ್ ಕಾಲದಂತೆ ಪರಿಸ್ಥಿತಿಯನ್ನು ಎದುರಿಸಬೇಕಾಗಿದೆ. ಹೀಗಾಗಿ ಎಲ್ಲಿಯೂ ಎಲ್‌ಪಿಜಿ ದುರ್ಬಳಕೆ ಆಗದಂತೆ ನೋಡಿಕೊಳ್ಳಬೇಕು. ಅಕ್ರಮವಾಗಿ ಇವುಗಳ ಮಾರಾಟಕ್ಕೆ ತಡೆಯೊಡ್ಡಬೇಕಾಗಿದೆ. ಪರಿಸ್ಥಿತಿಯನ್ನು ಯಾರೂ ದುರ್ಬಳಕೆ ಮಾಡಿಕೊಳ್ಳದಂತೆ ತಡೆಯಲು ರಾಜ್ಯ ಸರ್ಕಾರಗಳನ್ನು ಮೇಲ್ವಿಚಾರಣಾ ಕಾರ್ಯವಿಧಾನಗಳನ್ನು ಬಲಪಡಿಸಬೇಕು ಎಂದು ಹೇಳಿದರು.

ನಿಲ್ಲುತ್ತಿಲ್ಲ ಇರಾನ್‌- ಇಸ್ರೇಲ್‌ ಕದನ; ಮತ್ತೊಂದು ಅಮೆರಿಕದ ಯುದ್ಧ ವಿಮಾನ ಇರಾಕ್‌ನಲ್ಲಿ ಪತನ

ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷದಿಂದ ಉದ್ಭವಿಸಿರುವ ಎಲ್‌ಪಿಜಿ ಕೊರತೆಯನ್ನು ಭಾರತ ನಿವಾರಿಸುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಪ್ರಧಾನಿ ನರೇಂದ್ರ ಮೋದಿ, ಪರಿಸ್ಥಿತಿಯನ್ನು ನಿರ್ವಹಿಸಲು ಜಾಗತಿಕ ಅಡೆತಡೆಗಳು ಭಾರತೀಯ ನಾಗರಿಕರಿಗೆ ಹೊರೆಯಾಗದಂತೆ ನೋಡಿಕೊಳ್ಳಲು ಸರ್ಕಾರ ಬಹು ರಂಗಗಳಲ್ಲಿ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.

ಪ್ರಪಂಚದ ವಿವಿಧ ಭಾಗಗಳಲ್ಲಿ ನಡೆಯುತ್ತಿರುವ ಯುದ್ಧಗಳಿಂದಾಗಿ ನಾಗರಿಕರು ಯಾವುದೇ ಸಮಸ್ಯೆಗಳನ್ನು ಎದುರಿಸಬಾರದು. ನನಗೆ ನಮ್ಮ 140 ಕೋಟಿ ಭಾರತೀಯರಲ್ಲಿ ಸಂಪೂರ್ಣ ವಿಶ್ವಾಸವಿದೆ. ನಮ್ಮ ಸಂಕಲ್ಪ ಸ್ಪಷ್ಟವಾಗಿದೆ. ಪರಿಸ್ಥಿತಿಯನ್ನು ಯಾರೂ ದುರ್ಬಳಕೆ ಮಾಡಿಕೊಳ್ಳಲಾರರು. ಭಾರತವು ತನ್ನ ಇಂಧನ ಭದ್ರತೆಯನ್ನು ಕಾಪಾಡಿಕೊಳ್ಳಲು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದರು.

ಸರ್ಕಾರವು ಜಾಗತಿಕ ನಾಯಕರೊಂದಿಗೆ ನಿರಂತರ ಸಂಪರ್ಕದಲ್ಲಿದೆ. ಪೂರೈಕೆ ಸರಪಳಿಯಲ್ಲಿನ ಅಡಚಣೆಗಳನ್ನು ಪರಿಹರಿಸಲು ಪ್ರಯತ್ನಗಳನ್ನು ಮಾಡುತ್ತಿದೆ ಎಂದ ಅವರು, ಇದು ದೀರ್ಘಕಾಲೀನ ಇಂಧನ ಸಮಸ್ಯೆಯನ್ನು ಬಗೆ ಹರಿಸಲು ಕ್ರಮ ಕೈಗೊಳ್ಳಬೇಕಾದ ಸಮಯ. ಎಥೆನಾಲ್ ಮಿಶ್ರಣವನ್ನು ವಿಸ್ತರಿಸುವ ಮತ್ತು ಜೈವಿಕ ಇಂಧನಗಳನ್ನು ಉತ್ತೇಜಿಸುವ ಮೂಲಕ ಪೆಟ್ರೋಲಿಯಂ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಭಾರತ ಸರ್ಕಾರ ಕಳೆದ ದಶಕದಲ್ಲಿ ಸಾಕಷ್ಟು ಕಾರ್ಯಗಳನ್ನು ಮಾಡಿದೆ ಎಂದರು.

2014ರ ಮೊದಲು ದೇಶದ ಎಥೆನಾಲ್ ಮಿಶ್ರಣ ಸಾಮರ್ಥ್ಯವು ಕೇವಲ ಶೇ. 1- 1.5 ರಷ್ಟಿತ್ತು. ಈಗ ಶೇ. 20ರಷ್ಟಾಗಿದೆ. ಜಾಗತಿಕ ಬಿಕ್ಕಟ್ಟುಗಳಿಗೆ ಸಿದ್ಧತೆಯನ್ನು ಬಲಪಡಿಸಲು ಭಾರತವು ಪೆಟ್ರೋಲಿಯಂ ನಿಕ್ಷೇಪಗಳು ಮತ್ತು ಇಂಧನ ಮೂಲಸೌಕರ್ಯವನ್ನು ಸಾಕಷ್ಟು ವೃದ್ಧಿಸಿದೆ ಎಂದರು.

Gas Shortage: ವಿದ್ಯುತ್ ಉತ್ಪಾದನೆ ಮೇಲೂ ಗ್ಯಾಸ್ ಕೊರತೆ ಕರಿನೆರಳು

ಭಾರತದಲ್ಲಿ ಪೆಟ್ರೋಲಿಯಂ ನಿಕ್ಷೇಪಗಳು ಈಗ 50 ಲಕ್ಷ ಟನ್‌ಗಳನ್ನು ಮೀರಿದೆ. ಇದರೊಂದಿಗೆ ಎಲ್‌ಪಿಜಿ ಸಂಪರ್ಕಗಳ ಸಂಖ್ಯೆ 2014 ರಲ್ಲಿ 14 ಕೋಟಿಯಿಂದ 33 ಕೋಟಿಗೆ ಏರಿದೆ. ಕಳೆದ ದಶಕದಲ್ಲಿ ದೇಶವು ಅನಿಲ ಪೈಪ್‌ಲೈನ್ ಜಾಲಗಳು, ಎಲ್‌ಎನ್‌ಜಿ ಟರ್ಮಿನಲ್‌ಗಳು ಮತ್ತು ಎಲ್‌ಪಿಜಿ ವಿತರಣಾ ಮೂಲಸೌಕರ್ಯಗಳಿಗೆ ಹೆಚ್ಚಿನ ನೀಡುತ್ತಿದೆ. ಜಾಗತಿಕ ಸವಾಲುಗಳ ಹೊರತಾಗಿಯೂ ಭಾರತ ಸ್ಥಿರವಾದ ವೇಗದಲ್ಲಿ ಮುಂದುವರಿಯುತ್ತಿದೆ ಎಂದು ತಿಳಿಸಿದರು.

ವಿದ್ಯಾ ಇರ್ವತ್ತೂರು

View all posts by this author