ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

UPI App Down: ತಾಂತ್ರಿಕ ದೋಷ; ಯುಪಿಐ ಪಾವತಿ ಸಾಧ್ಯವಾಗದೆ ಗ್ರಾಹಕರ ಪರದಾಟ

Digital Payment: ಶನಿವಾರ (ಏ. 12) ಬೆಳಗ್ಗೆಯಿಂದ ಭಾರತದಾದ್ಯಂತ ಯುಪಿಐ ಸೇವೆಗಳಲ್ಲಿ ವ್ಯತ್ಯಯ ಉಂಟಾಗಿದೆ. ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದ್ದು, ಬಳಕೆದಾರರು ಡಿಜಿಟಲ್ ವಹಿವಾಟು ನಡೆಸಲು ಪರದಾಡುತ್ತಿದ್ದಾರೆ. ಮಧ್ಯಾಹ್ನದ ವೇಳೆಗೆ ಈ ಯುಪಿಐ ಸಮಸ್ಯೆಗಳ ಬಗ್ಗೆ ಸುಮಾರು 2,358 ದೂರುಗಳು ಬಂದಿವೆ ಎನ್ನಲಾಗಿದೆ.

ಯುಪಿಐ ಪಾವತಿ ಸಾಧ್ಯವಾಗದೆ ಗ್ರಾಹಕರ ಪರದಾಟ

ಸಾಂದರ್ಭಿಕ ಚಿತ್ರ.

Profile Ramesh B Apr 12, 2025 3:58 PM

ಹೊಸದಿಲ್ಲಿ: ಶನಿವಾರ (ಏ. 12) ಬೆಳಗ್ಗೆಯಿಂದ ಭಾರತದಾದ್ಯಂತ ಯುಪಿಐ (Unified Payments Interface) ಸೇವೆಗಳಲ್ಲಿ ವ್ಯತ್ಯಯ ಉಂಟಾಗಿದೆ. ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದ್ದು, ಬಳಕೆದಾರರು ಡಿಜಿಟಲ್ ವಹಿವಾಟು (Digital Payment) ನಡೆಸಲು ಪರದಾಡುತ್ತಿದ್ದಾರೆ. ಹಣ ಪಾವತಿ ಸಾಧ್ಯವಾಗದರೆ ದೇಶಾದ್ಯಂತದ ಗ್ರಾಹಕರು ಕಂಗಾಲಾಗಿದ್ದಾರೆ (UPI App Down). ಸಮಸ್ಯೆಗಳ ಪತ್ತೆ ಹಚ್ಚುವ ಡೌನ್‌ಡಿಟೆಕ್ಟರ್‌ (Downdetector) ವರದಿ ಪ್ರಕಾರ, ಮಧ್ಯಾಹ್ನದ ವೇಳೆಗೆ ಈ ಯುಪಿಐ ಸಮಸ್ಯೆಗಳ ಬಗ್ಗೆ ಸುಮಾರು 2,358 ದೂರುಗಳು ಬಂದಿವೆ ಎನ್ನಲಾಗಿದೆ.

ಗೂಗಲ್ ಪೇ ಬಳಕೆದಾರರು 96 ಸಮಸ್ಯೆಗಳನ್ನು ವರದಿ ಮಾಡಿದ್ದರೆ, ಪೇಟಿಎಂ ಬಳಕೆದಾರರು 23 ಸಮಸ್ಯೆಗಳ ಬಗ್ಗೆ ವಿವರಿಸಿದ್ದಾರೆ. ಈ ಪೈಕಿ ಶೇ. 81ರಷ್ಟು ಪಾವತಿ ಸಾಧ್ಯವಾಗದ ಬಗ್ಗೆ ದೂರು ಬಂದಿದ್ದರೆ, ಶೇ. 17ರಷ್ಟು ಮಂದಿ ಫಂಡ್‌ ಟ್ರಾನ್ಸ್‌ಫರ್ಮ್‌ ಆಗದಿರುವ ಬಗ್ಗೆ ಹೇಳಿದ್ದಾರೆ. ಯುಪಿಐ ಸೇವೆಯನ್ನು ಮೇಲ್ವಿಚಾರಣೆ ನಡೆಸುವ ನ್ಯಾಷನಲ್‌ ಪೇಮೆಂಟ್ಸ್‌ ಕಾರ್ಪೋರೇಷನ್‌ ಆಫ್‌ ಇಂಡಿಯಾ (NPCI) ಈ ಬಗ್ಗೆ ಮಾಹಿತಿ ನೀಡಿ, ತಾಂತ್ರಿಕ ದೋಷದಿಂದ ಈ ಸಮಸ್ಯೆ ಕಂಡು ಬಂದಿದೆ ಎಂದು ತಿಳಿಸಿದೆ.



ಈ ಸುದ್ದಿಯನ್ನೂ ಓದಿ: Facebook, Instagram Down: ಫೇಸ್‌ಬುಕ್‌, ಇನ್‌ಸ್ಟಾಗ್ರಾಂ ಸ್ಥಗಿತ; ಬಳಕೆದಾರರ ಪರದಾಟ

ಈ ಮೂಲಕ ಭಾರತದ ಅತ್ಯಂತ ವ್ಯಾಪಕವಾಗಿ ಬಳಸಲಾಗುವ ಡಿಜಿಟಲ್ ಪಾವತಿ ವ್ಯವಸ್ಥೆಯು ಒಂದು ವಾರದೊಳಗೆ ಎರಡೆರಡು ಬಾರಿ ಸ್ಥಗಿತಕ್ಕೊಳಗಾಗಿರುವ ಬಗ್ಗೆ ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಎನ್‌ಪಿಸಿಐ ಈ ಬಗ್ಗೆ ಎಕ್ಸ್‌ನಲ್ಲಿ ಮಾಹಿತಿ ನೀಡಿ, "ಯುಪಿಐ ಪ್ರಸ್ತುತ ತಾಂತ್ರಿಕ ಸಮಸ್ಯೆಗಳನ್ನು ಎದುರಿಸುತ್ತಿದೆ. ಇದು ಭಾಗಶಃ ಯುಪಿಐ ವಹಿವಾಟು ಕುಸಿತಕ್ಕೆ ಕಾರಣವಾಗಿದೆ. ಸಮಸ್ಯೆಯನ್ನು ಪರಿಹರಿಸಲು ನಾವು ಕೆಲಸ ಮಾಡುತ್ತಿದ್ದೇವೆ" ಎಂದು ತಿಳಿಸಿದೆ. ಸೋಶಿಯಲ್‌ ಮೀಡಿಯಾದಲ್ಲಿ ಹಲವು ತಾವು ಎದುರಿಸುತ್ತಿರುವ ಸಮಸ್ಯೆ ಬಗ್ಗೆ ಹೇಳಿಕೊಂಡಿದ್ದಾರೆ.

ಮಾ. 26ರ ಸಂಜೆ ಭಾರತದಲ್ಲಿ ಯುಪಿಐ ಸರ್ವರ್‌ ಸ್ಥಗಿತವಾಗಿದ್ದು, ಹಣ ಪಾವತಿ ಮಾಡಲು ಸಾಧ್ಯವಾಗದೆ ಲಕ್ಷಾಂತರ ಮಂದಿ ಪರದಾಡಿದ್ದರು. ಈ ಬಗ್ಗೆ ಹಲವರು ಸೋಶಿಯಲ್‌ ಮೀಡಿಯಾದಲ್ಲಿ ಬರೆದುಕೊಂಡಿದ್ದರು. ಗೂಗಲ್ ಪೇ, ಫೋನ್ ಪೇ ಮತ್ತು ಪೇಟಿಎಂನಂತಹ ಜನಪ್ರಿಯ ಪೇಮೆಂಟ್ ಆಪ್ಲಿಕೇಷನ್‌ಗಳ ಹಣ ಪಾವತಿ ಸೇವೆಯಲ್ಲಿ ವ್ಯತ್ಯಯ ಕಂಡುಬಂದಿತ್ತು. ಸ್ಮಾರ್ಟ್‌ ಫೋನ್ ಮೂಲಕ ಆನ್‌ಲೈನ್‌ನಲ್ಲಿ ಹಣವನ್ನು ಕಳುಹಿಸಲು ಸಾಧ್ಯವಾಗದೆ ಗ್ರಾಹಕರು ಹತಾಶರಾಗಿದ್ದರು. ಇದೀಗ ಮತ್ತೆ ಸಮಸ್ಯೆ ಕಂಡು ಬಂದ ಹಿನ್ನೆಲೆಯಲ್ಲಿ ಗ್ರಾಹಕರು ತಲೆ ಮೇಲೆ ಕೈ ಇಟ್ಟು ಕೂತಿದ್ದಾರೆ.