ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ವ್ಯಾಪಾರ ಒಪ್ಪಂದದ ಬಳಿಕ ಪಿಒಕೆ, ಜಮ್ಮು, ಕಾಶ್ಮೀರ ಸೇರಿಸಿ ಸಂಪೂರ್ಣ ಭಾರತದ ನಕ್ಷೆ ಬಿಡುಗಡೆ ಮಾಡಿದ ಅಮೆರಿಕ

ಭಾರತದೊಂದಿಗಿನ ವ್ಯಾಪಾರ ಒಪ್ಪಂದದ ಬಳಿಕ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ತಂಡವು ವ್ಯಾಪಾರದ ವರ್ಣನೆಯನ್ನು ಮಾಡುವ ಭಾರತದ ಸಂಪೂರ್ಣ ನಕ್ಷೆಯನ್ನು ಬಿಡುಗಡೆ ಮಾಡಿದೆ. ಇದು ಪಾಕಿಸ್ತಾನ ಆಕ್ರಮಿತ ಕಾಶ್ಮೀರ (POK), ಚೀನಾ ತನ್ನದೆಂದು ಹೇಳುವ ಅಕ್ಸಾಯ್ ಚಿನ್ ಸೇರಿದಂತೆ ಸಂಪೂರ್ಣ ಜಮ್ಮು ಮತ್ತು ಕಾಶ್ಮೀರವನ್ನು ದೇಶದ ಭಾಗವಾಗಿ ತೋರಿಸುವ ನಕ್ಷೆಯಾಗಿದೆ.

ಸಂಗ್ರಹ ಚಿತ್ರ

ನವದೆಹಲಿ: ಭಾರತ ಮತ್ತು ಅಮೆರಿಕ ವ್ಯಾಪಾರ ಒಪ್ಪಂದದ (US- India trade deal) ಬಳಿಕ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (US President Donald Trump) ಅವರ ತಂಡವು ಭಾರತದೊಂದಿಗಿನ ವ್ಯಾಪಾರದ ವರ್ಣನೆಯನ್ನು ಮಾಡುವ ಭಾರತದ ಸಂಪೂರ್ಣ ನಕ್ಷೆಯನ್ನು (map of India) ಬಿಡುಗಡೆ ಮಾಡಿದೆ. ಇದು ಪಾಕಿಸ್ತಾನ ಆಕ್ರಮಿತ ಕಾಶ್ಮೀರ ( Pakistan-occupied Kashmir ), ಚೀನಾ ತನ್ನದೆಂದು ಹೇಳುವ ಭಾರತದ ಭೂಭಾಗ ಅಕ್ಸಾಯ್ ಚಿನ್ (Aksai Chin region) ಸೇರಿದಂತೆ ಸಂಪೂರ್ಣ ಜಮ್ಮು ಮತ್ತು ಕಾಶ್ಮೀರವನ್ನು (Jammu and Kashmir) ಒಳಗೊಂಡಿದೆ. ನವದೆಹಲಿ ಮತ್ತು ವಾಷಿಂಗ್ಟನ್ ನಡುವೆ ಶನಿವಾರ ಮಧ್ಯಂತರ ವ್ಯಾಪಾರ ಒಪ್ಪಂದದ ಚೌಕಟ್ಟನ್ನು ಘೋಷಿಸುತ್ತಿದ್ದಂತೆ ಅಮೆರಿಕ ಹಂಚಿಕೊಂಡಿರುವ ಭಾರತದ ಈ ನಕ್ಷೆಯು ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗಿದೆ.

ಅಮೆರಿಕದ ವ್ಯಾಪಾರ ಪ್ರತಿನಿಧಿ ಕಚೇರಿಯು ವ್ಯಾಪಾರ ಒಪ್ಪಂದದ ವಿವರಗಳನ್ನು ಭಾರತದ ನಕ್ಷೆಯ ಮೂಲಕ ವರ್ಣಿಸಿದೆ. ಇದರಲ್ಲಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಸೇರಿದಂತೆ ಸಂಪೂರ್ಣ ಜಮ್ಮು ಮತ್ತು ಕಾಶ್ಮೀರವನ್ನು ದೇಶದ ಭಾಗವಾಗಿ ತೋರಿಸಲಾಗಿದೆ. ಇದರೊಂದಿಗೆ ಚೀನಾ ತನ್ನ ಪ್ರದೇಶದ ಭಾಗವೆಂದು ಹೇಳಿಕೊಳ್ಳುವ ಅಕ್ಸಾಯ್ ಚಿನ್ ಕೂಡ ಇದು ಒಳಗೊಂಡಿದೆ.

ಆಲ್ಕೋಹಾಲಿಕ್‌ ಪಾನೀಯ, ಸೌಂದರ್ಯವರ್ಧಕ, ಮೆಡಿಕಲ್‌ ಕಿಟ್‌ ; ಸುಂಕಕ್ಕೆ ಒಳಪಡದ ಅಮೆರಿಕದ ಉತ್ಪನ್ನಗಳಿವು

ಈ ಭಾಗಗಳನ್ನು ಭಾರತ ಯಾವಾಗಲೂ ತನ್ನದೇ ಎಂದು ಸಮರ್ಥಿಸಿಕೊಂಡಿದೆ. ಇದಕ್ಕೆ ಅಮೆರಿಕದ ಅನುಮೋದನೆಯ ಅಗತ್ಯವಿಲ್ಲದಿದ್ದರೂ ಅಮೆರಿಕದ ಈ ನಿಲುವು ಉದ್ದೇಶಪೂರ್ವಕವಾಗಿ ಅಥವಾ ಆಕಸ್ಮಿಕವಾಗಿ ನಡೆದಿದ್ದರೂ ಇದು ಪಾಕಿಸ್ತಾನಕ್ಕೆ ಬಲವಾದ ರಾಜತಾಂತ್ರಿಕ ಸಂಕೇತವನ್ನು ನೀಡಿದೆ.

ಈ ನಕ್ಷೆ ಏಕೆ ಮುಖ್ಯ?

ಅಮೆರಿಕ ಬಿಡುಗಡೆ ಮಾಡಿದ ಈ ನಕ್ಷೆ ಪಾಕಿಸ್ತಾನದ ಕಳವಳಕ್ಕೆ ಕಾರಣವಾಗಿದೆ. ಪಾಕಿಸ್ತಾನವು ಯಾವಾಗಲೂ ಪಿಒಕೆಯನ್ನು ತನ್ನದೆಂದು ಅಲ್ಲದೇ ಇಲ್ಲೇ ಅದು ಸ್ಪಷ್ಟ ಗಡಿ ರೇಖೆಯನ್ನು ಹೊಂದಿದೆ. ಆದರೆ ಈಗ ಟ್ರಂಪ್ ಆಡಳಿತ ಬಿಡುಗಡೆ ಮಾಡಿರುವ ಈ ನಕ್ಷೆ ಪಾಕಿಸ್ತಾನದ ಹಕ್ಕುಗಳನ್ನು ಪ್ರಶ್ನಿಸುವಂತಿದೆ.

ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ಒಪ್ಪಂದವು ಈಗಾಗಲೇ ಪಾಕಿಸ್ತಾನ ಆಡಳಿತಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಈ ನಡುವೆ ಇದೀಗ ಬಿಡುಗಡೆಯಾಗಿರುವ ನಕ್ಷೆ ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗಿದೆ. ಇತ್ತೀಚೆಗೆ ಕಾಶ್ಮೀರವನ್ನು ಭಾರತ ಬಿಟ್ಟು ಕೊಡಲೇಬೇಕು. ಇದಕ್ಕಾಗಿ ಬೇರೆ ಆಯ್ಕೆಯೇ ಇಲ್ಲ ಎಂದು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಪಾಕಿಸ್ತಾನ ನಾಯಕರಾದ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್, ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಹೇಳಿಕೆ ನೀಡಿದ ಬೆನ್ನಲ್ಲೇ ಅಮೆರಿಕ ಈ ನಕ್ಷೆಯನ್ನು ಬಿಡುಗಡೆ ಮಾಡಿದೆ.



ಸಾಕಷ್ಟು ಒತ್ತಡದ ಬಳಿಕ ಪೂರ್ಣಗೊಂಡಿರುವ ಈ ವ್ಯಾಪಾರ ಒಪ್ಪಂದದಿಂದ ಭಾರತ ಮತ್ತು ಅಮೆರಿಕ ನಡುವಿನ ಹದಗೆಟ್ಟಿದ್ದ ಸಂಬಂಧ ಮತ್ತೆ ಹಳಿಗೆ ಬಂದಂತಾಗಿದೆ. ಇದರ ಬೆನ್ನಲ್ಲೇ ಅಮೆರಿಕ ಬಿಡುಗಡೆ ಮಾಡಿರುವ ಈ ನಕ್ಷೆ ಮೂಲಕ ಡೊನಾಲ್ಡ್ ಟ್ರಂಪ್ ಅವರು ಭಾರತ ಮತ್ತು ಪಾಕಿಸ್ತಾನವನ್ನು ಮರು ಹೈಫನೇಟ್ ಮಾಡಲು ಪ್ರಯತ್ನಿಸಿದರು, ಜಾರ್ಜ್ ಡಬ್ಲ್ಯೂ ಬುಷ್ ಆಡಳಿತವು ಇದನ್ನು ಮಾಡಿತ್ತು. ಬಳಿಕ ಬಂದ ಅಧ್ಯಕ್ಷರು ಇದನ್ನು ನಿರ್ಲಕ್ಷಿಸಿದ್ದರು. ಈ ನಕ್ಷೆಯು ಲಡಾಖ್‌ನ ಈಶಾನ್ಯ ಭಾಗದಲ್ಲಿರುವ ವಿವಾದಿತ ಅಕ್ಸಾಯ್ ಚಿನ್ ಪ್ರದೇಶವನ್ನು ಭಾರತದ ಭಾಗವೆಂದು ತೋರಿಸುತ್ತದೆ. ಭಾರತ ಆಕ್ಷೇಪಣೆ ಮಾಡುತ್ತಿದ್ದರೂ ಚೀನಾ ಇದರ ಮೇಲೆ ತನ್ನ ಹಕ್ಕು ಸಾಧಿಸಿದೆ.

ಪಾಕ್‌ ಮೇಲೆ ಸೇಡು ತೀರಿಸಿಕೊಳ್ತಾ ಬಲೂಚಿಸ್ತಾನ? ನಮಾಜ್‌ ಮಾಡುತ್ತಿದ್ದವರನ್ನೇ ಟಾರ್ಗೆಟ್‌ ಮಾಡಿದ್ಯಾಕೆ?

ಯುಎಸ್ ಸೇರಿದಂತೆ ಜಾಗತಿಕ ಸಂಸ್ಥೆಗಳು ಭಾರತದ ನಕ್ಷೆಯನ್ನು ತಪ್ಪಾಗಿ ಬಳಸುವುದಕ್ಕೆ ಭಾರತದ ವಿದೇಶಾಂಗ ಸಚಿವಾಲಯ ನಿರಂತರ ಆಕ್ಷೇಪವನ್ನು ವ್ಯಕ್ತಪಡಿಸುತ್ತಿದೆ. ಇದೀಗ ಅಮೆರಿಕದ ಈ ನಡೆ ಭಾರತದ ದೀರ್ಘಕಾಲದ ಕಳವಳವನ್ನು ಪರಿಹಾರ ಮಾಡಿದಂತಿದೆ. ಅಮೆರಿಕ ಬಿಡುಗಡೆ ಮಾಡಿರುವ ಈ ನಕ್ಷೆಗೆ ಭೌಗೋಳಿಕ ರಾಜಕೀಯ ತಜ್ಞರು ಮತ್ತು ರಕ್ಷಣಾ ವಿಶ್ಲೇಷಕರು ಶ್ಲಾಘಿಸಿದ್ದಾರೆ.

ವಿದ್ಯಾ ಇರ್ವತ್ತೂರು

View all posts by this author