ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vice President of India: ಉಪರಾಷ್ಟ್ರಪತಿಗಳ ಚುನಾವಣೆ ಹೇಗೆ ನಡೆಯಿತು..? ಅವರಿಗೆ ಸಿಗುವ ಸಂಬಳ ಎಷ್ಟು? ಅವರಿಗೆ ಯಾವೆಲ್ಲಾ ಸೌಲಭ್ಯಗಳು ಸಿಗುತ್ತೆ?

ಜಗದೀಪ್‌ ಧನಕರ್‌ ಅವರು ಉಪರಾಷ್ಟ್ರಪತಿ ಹುದ್ದೆಗೆ ರಾಜೀನಾಮೆ ನೀಡಿದ್ದು, ಇಂದು ಹೊಸ ಉಪರಾಷ್ಟ್ರಪತಿ ಆಯ್ಕೆಗೆ ಚುನಾವಣೆ ನಡೆದಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಾಜೀನಾಮೆ ಅಂಗೀಕರಿಸಿದ ಮರುದಿನವೇ ಚುನಾವಣಾ ಆಯೋಗ ವೈಸ್‌ ಪ್ರೆಸಿಡೆಂಟ್‌ ಆಯ್ಕೆಗೆ ಪ್ರಕ್ರಿಯೆಯನ್ನು ಶುರುಮಾಡಿತು. ಉಪರಾಷ್ಟ್ರಪತಿ ಚುನಾವಣೆ ಪ್ರಕ್ರಿಯೆ ಹೇಗಿರುತ್ತೆ? ಯಾರೆಲ್ಲಾ ಮತ ಹಾಕ್ತಾರೆ? ದೇಶದ ಎರಡನೇ ಅತ್ಯುನ್ನತ ಸಾಂವಿಧಾನಿಕ ಹುದ್ದೆಯೇರಲು ಏನೆಲ್ಲಾ ಅರ್ಹತೆಗಳಿರಬೇಕು? ಇವರ ವೇತನ ಎಷ್ಟು? ಉಪರಾಷ್ಟ್ರಪತಿಯಾದ್ರೆ ಏನೆಲ್ಲಾ ಸೌಲಭ್ಯಗಳು ಸಿಗುತ್ತವೆ? ಎಂಬುದನ್ನು ಈ ವಿಡಿಯೋದಲ್ಲಿ ನೋಡೋಣ ಬನ್ನಿ..

ಉಪರಾಷ್ಟ್ರಪತಿಯಾದ್ರೆ ಏನೆಲ್ಲಾ ಸೌಲಭ್ಯಗಳು ಸಿಗುತ್ತವೆ?

ಸಾಂದರ್ಭಿಕ ಚಿತ್ರ -

Profile Sushmitha Jain Sep 9, 2025 9:17 PM

ನವದೆಹಲಿ: ಜಗದೀಪ್ ಧನಕರ್ (Jagdeep Dhankhar) ಜುಲೈ 2025ರಲ್ಲಿ ಆರೋಗ್ಯ ಕಾರಣಗಳಿಂದ ರಾಜೀನಾಮೆ ನೀಡಿದ ನಂತರ, ಭಾರತದ ಹೊಸ ಉಪರಾಷ್ಟ್ರಪತಿಯ (Vice-President ) ಚುನಾವಣೆಗಾಗಿ ಸಂಸತ್‌ನ (Parliament) ಲೋಕಸಭೆ ಮತ್ತು ರಾಜ್ಯಸಭೆಯ ಸದಸ್ಯರು ಇಂದು (ಸೆಪ್ಟೆಂಬರ್ 9) ಬೆಳಗ್ಗೆ 10 ರಿಂದ ಸಂಜೆ 5 ರವರೆಗೆ ಸಂಸತ್ ಭವನದಲ್ಲಿ ಮತದಾನ ನಡೆಸಿದ್ದಾರೆ.

ಈ ಮಧ್ಯೆ ಉಪರಾಷ್ಟ್ರಪತಿ ಎಷ್ಟು ಸಂಬಳ ಪಡೆಯುತ್ತಾರೆ?, ಅವರಿಗೆ ಏನೆಲ್ಲಾ ಸೌಲಭ್ಯ ಸಿಗುತ್ತದೆ ಎಂಬ ಪ್ರಶ್ನೆ ಅನೇಕ ಜನರಿಗೆ ಕಾಡುತ್ತಿದೆ. ಇಂಥ ಸಮಯದಲ್ಲಿ ಇಂತಹ ಪಶ್ನೆ ಬರೋದು ಕೂಡ ಸಹಜ. ಇದು ಸಂಸತ್ತಿನ ಮುಖ್ಯಸ್ಥರ ಹುದ್ದೆ, ಮತ್ತು ಇದು ಗೌರವಾನ್ವಿತ ಹುದ್ದೆಯೂ ಹೌದು. ವಾಸ್ತವವಾಗಿ, ಅವರು ಪಡೆಯುವ ಸಂಬಳ ಉಪಾಧ್ಯಕ್ಷರಾಗಿ ಅಲ್ಲ, ರಾಜ್ಯಸಭೆಯ ಅಧ್ಯಕ್ಷರಾಗಿ. ಹಾಗಾದ್ರೆ ಬನ್ನಿ ಈ ಹುದ್ದೆಯನ್ನು ಅಲಂಕರಿಸುವವರಿಗೆ ಏನೆಲ್ಲಾ ಸೌಲಭ್ಯ ಸಿಗಲಿದೆ ಎಂದು ನೋಡೋಣ.

ಅಧಿಕಾರಾವಧಿ

ಉಪರಾಷ್ಟ್ರಪತಿಯು ಭಾರತದ ಎರಡನೇ ಉನ್ನತ ಸಾಂವಿಧಾನಿಕ ಹುದ್ದೆಯಾಗಿದ್ದು, ರಾಜ್ಯಸಭೆಯ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸುತ್ತಾರೆ. ರಾಷ್ಟ್ರಪತಿಯ ಹುದ್ದೆ ಖಾಲಿಯಾದರೆ, ಉಪರಾಷ್ಟ್ರಪತಿಯು ತಾತ್ಕಾಲಿಕ ರಾಷ್ಟ್ರಪತಿಯಾಗಿ ಕಾರ್ಯನಿರ್ವಹಿಸುತ್ತಾರೆ. ಉಪರಾಷ್ಟ್ರಪತಿಯ ಅವಧಿಯು ಐದು ವರ್ಷಗಳಾಗಿದ್ದು, ಮರು ಚುನಾಯಿತರಾಗುವ ಅವಕಾಶವಿದೆ. ಹೊಸಬರು ಹುದ್ದೆ ಸ್ವೀಕರಿಸದಿದ್ದರೆ, ಪ್ರಸ್ತುತ ಉಪರಾಷ್ಟ್ರಪತಿಯು ಕಾರ್ಯನಿರ್ವಹಣೆಯನ್ನು ಮುಂದುವರಿಸುತ್ತಾರೆ.

ಚುನಾವಣಾ ಪ್ರಕ್ರಿಯೆ

ಉಪರಾಷ್ಟ್ರಪತಿಯ ಚುನಾವಣೆಯು ಲೋಕಸಭೆ ಮತ್ತು ರಾಜ್ಯಸಭೆಯ ಚುನಾಯಿತ ಮತ್ತು ನಾಮನಿರ್ದೇಶಿತ ಸದಸ್ಯರನ್ನೊಳಗೊಂಡ ಚುನಾವಣಾ ಕಾಲೇಜಿನ ಮೂಲಕ ನಡೆಯುತ್ತದೆ. ಸಂವಿಧಾನದ 66ನೇ ವಿಧಿಯ ಅಡಿಯಲ್ಲಿ, ಸಿಂಗಲ್ ಟ್ರಾನ್ಸ್‌ಫರಬಲ್ ವೋಟ್ ವ್ಯವಸ್ಥೆಯ ಮೂಲಕ ಪ್ರಮಾಣಾನುಗುಣ ಪ್ರಾತಿನಿಧ್ಯದ ಆಧಾರದ ಮೇಲೆ ಮತದಾನ ನಡೆಯುತ್ತದೆ. ಸದಸ್ಯರು ರಹಸ್ಯ ಮತದಾನದ ಮೂಲಕ ತಮ್ಮ ಆದ್ಯತೆಯ ಅಭ್ಯರ್ಥಿಗಳಿಗೆ ಮತ ಹಾಕುತ್ತಾರೆ. ಮೊದಲ ಆದ್ಯತೆಯಿಂದ ಕೋಟಾವು ತುಂಬದಿದ್ದರೆ, ಮತಗಳನ್ನು ಮುಂದಿನ ಆದ್ಯತೆಗೆ ವರ್ಗಾಯಿಸಲಾಗುತ್ತದೆ.

ಈ ಸುದ್ದಿಯನ್ನು ಓದಿ: Vice President: ದೇಶದ ಮೂರು ಉನ್ನತ ಹುದ್ದೆಯನ್ನು ಪಡೆದ ಏಕೈಕ ವ್ಯಕ್ತಿ ಯಾರು ಗೊತ್ತೇ?

ಯಾರೆಲ್ಲಾ ಭಾಗವಹಿಸುತ್ತಾರೆ?

ಈ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿ ಸಿ.ಪಿ. ರಾಧಾಕೃಷ್ಣನ್ ಮತ್ತು ಇಂಡಿಯಾ ಒಕ್ಕೂಟದ ಅಭ್ಯರ್ಥಿ ಬಿ. ಸುದರ್ಶನ್ ರೆಡ್ಡಿ ಸ್ಪರ್ಧಿಸಿದ್ದಾರೆ. ಒಟ್ಟು 782 ಸಂಸದೀಯ ಸದಸ್ಯರು ಮತದಾನದಲ್ಲಿ ಭಾಗವಹಿಸಿದ್ದು, ಬಿಜೆಡಿ ಮತ್ತು ಬಿಆರ್‌ಎಸ್‌ನಂತಹ ಕೆಲವು ಪಕ್ಷಗಳು ಮತದಾನದಿಂದ ದೂರವಿದೆ.

ಸೌಲಭ್ಯಗಳು ಮತ್ತು ವೇತನ

ಉಪರಾಷ್ಟ್ರಪತಿಗೆ ಪ್ರತ್ಯೇಕ ವೇತನವಿಲ್ಲ; ರಾಜ್ಯಸಭೆಯ ಅಧ್ಯಕ್ಷರಾಗಿ ತಿಂಗಳಿಗೆ 4 ಲಕ್ಷ ರೂ. ಸಿಗುತ್ತದೆ. ಇದರ ಜೊತೆಗೆ ವಸತಿ, ವೈದ್ಯಕೀಯ ಸೇವೆ, ಪ್ರಯಾಣ ಭತ್ಯೆ, ಕಚೇರಿ ವೆಚ್ಚ, ಭದ್ರತೆ, ದೂರವಾಣಿ ಸೇವೆ, ಮತ್ತು 50% ಪಿಂಚಣಿಯ ಸೌಲಭ್ಯವಿದೆ. ಹೊಸ ಉಪರಾಷ್ಟ್ರಪತಿಯು ದೆಹಲಿಯ ವೈಸ್ ಪ್ರೆಸಿಡೆಂಟ್ ಎನ್‌ಕ್ಲೇವ್‌ನಲ್ಲಿ ವಾಸಿಸಲಿದ್ದಾರೆ.

ರಾಜಕೀಯ ಮಹತ್ವ

ಈ ಚುನಾವಣೆಯು ಭಾರತದ ಗಣತಂತ್ರದ ಸ್ಥಿರತೆ ಮತ್ತು ಸಂಸದೀಯ ಕಾರ್ಯನಿರ್ವಹಣೆಗೆ ಪ್ರಮುಖವಾಗಿದೆ. ಉಪರಾಷ್ಟ್ರಪತಿಯು ರಾಜ್ಯಸಭೆಯ ಶಿಸ್ತು, ಕಾರ್ಯಕಲಾಪಗಳು ಮತ್ತು ಪಕ್ಷಾಂತರ ನಿಷೇಧ ಕಾನೂನಿನ ಅಡಿಯಲ್ಲಿ ಸದಸ್ಯರ ಅನರ್ಹತೆಯಂತಹ ವಿಷಯಗಳಲ್ಲಿ ಅಂತಿಮ ಅಧಿಕಾರ ಹೊಂದಿರುತ್ತಾರೆ.