Viral Video: ಹಾಸ್ಟೆಲ್ನಲ್ಲಿ 12ನೇ ತರಗತಿ ವಿದ್ಯಾರ್ಥಿಗೆ ಸಹಪಾಠಿಗಳಿಂದ ಪದೇ ಪದೆ ಕಪಾಳಮೋಕ್ಷ; ವಿಡಿಯೊ ವೈರಲ್
12ನೇ ತರಗತಿಯ ವಿದ್ಯಾರ್ಥಿಯೊಬ್ಬನನ್ನು ನಾಲ್ವರು ಸಹಪಾಠಿಗಳು ಸೇರಿ ಹಾಸ್ಟೆಲ್ ಕೋಣೆಯೊಳಗೆ ಥಳಿಸಿರುವ ಆಘಾತಕಾರಿ ವಿಡಿಯೊ ವೈರಲ್ ಆಗಿದೆ. ಗುಜರಾತ್‌ನ ಜುನಾಗಢದಲ್ಲಿ ಈ ಘಟನೆ ನಡೆದಿದೆ. ಇದೀಗ ಥಳಿಸಿದವರ ವಿರುದ್ಧ ಬಾಲ ನ್ಯಾಯಾಲಯ ಕಾಯ್ದೆಯಡಿ ದೂರು ದಾಖಲಾಗಿದೆ.

-

ಗಾಂಧಿನಗರ: ಜುಲೈ 26ರಂದು ಕಬಡ್ಡಿ ಪಂದ್ಯದ ವೇಳೆ ಜಗಳ ನಡೆದ ಒಂದು ದಿನದ ನಂತರ, 12ನೇ ತರಗತಿಯ ವಿದ್ಯಾರ್ಥಿಯೊಬ್ಬನನ್ನು ನಾಲ್ವರು ಸಹಪಾಠಿಗಳು ಹಾಸ್ಟೆಲ್ ಕೋಣೆಯೊಳಗೆ ಥಳಿಸಿದ್ದಾರೆ. ಗುಜರಾತ್ (Gujarat)ನ ಜುನಾಗಢದಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ಈ ಹಲ್ಲೆಯ ದೃಶ್ಯವನ್ನು ಒಬ್ಬ ವಿದ್ಯಾರ್ಥಿ ಸೆರೆ ಹಿಡಿದಿದ್ದು, ನಂತರ ಅದನ್ನು ಸಾಮಾಜಿಕ ಮಾಧ್ಯಮದಲ್ಲಿ (Viral Video) ಹಂಚಿಕೊಳ್ಳಲಾಯಿತು.
ದೂರಿನ ಪ್ರಕಾರ, ಭಾಗಿಯಾಗಿರುವ ಎಲ್ಲ ಹುಡುಗರು ಹಾಸ್ಟೆಲ್‍ನಲ್ಲಿ ವಾಸಿಸುವ ವಿದ್ಯಾರ್ಥಿಗಳು. ಘಟನೆಯ ನಂತರ ಭಯಭೀತರಾದ ಸಂತ್ರಸ್ತ, ಹಾಸ್ಟೆಲ್ ಅಧಿಕಾರಿಗಳಿಗೆ ತನಗೆ ಹುಷಾರಿಲ್ಲ ಎಂಬ ಕಾರಣ ತಿಳಿಸಿ ತನ್ನ ತಂದೆಯೊಂದಿಗೆ ಹೊರಟು ಹೋಗಿದ್ದಾನೆ. ಶಾಲಾ ಆಡಳಿತ ಮಂಡಳಿಯು ಈ ವಿಷಯವನ್ನು ಮರೆಮಾಚಲು ಪ್ರಯತ್ನಿಸಿದೆ ಎಂದು ಅವನ ಕುಟುಂಬ ಆರೋಪಿಸಿದೆ. ಸುಮಾರು ಒಂದು ತಿಂಗಳ ನಂತರ, ಸಂತ್ರಸ್ತನ ತಂದೆಗೆ ವಿಚಾರ ತಿಳಿದಾಗ, ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಜತೆಗೆ ವಿಡಿಯೊವನ್ನು ಸಾಕ್ಷಿಯಾಗಿ ಸಲ್ಲಿಸಿದರು.
ದೂರು ಮತ್ತು ವೈರಲ್ ವಿಡಿಯೊ ಆಧರಿಸಿ, ನಾಲ್ವರು ವಿದ್ಯಾರ್ಥಿಗಳ ವಿರುದ್ಧ ಬಾಲ ನ್ಯಾಯ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದ್ದು, ಶಾಲಾ ಆಡಳಿತ ಮಂಡಳಿಯ ಪಾತ್ರದ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿ ಹಿತೇಶ್ ಧಂಧಲಿಯಾ ತಿಳಿಸಿದ್ದಾರೆ. ಜುಲೈ 26ರಂದು, ಕಬಡ್ಡಿ ಪಂದ್ಯದ ಸಮಯದಲ್ಲಿ ಮಾತಿನ ಚಕಮಕಿ ನಡೆಯಿತು. ನಂತರ ನಾಲ್ವರು ವಿದ್ಯಾರ್ಥಿಗಳು ಜುಲೈ 27ರಂದು ಸಂತ್ತಸ್ತನ ಮೇಲೆ ಹಲ್ಲೆ ನಡೆಸಿದ್ದಾರೆ. ವೈರಲ್ ಆದ ವಿಡಿಯೊವನ್ನು ಆಧರಿಸಿ, ಬಾಲಾಪರಾಧಿ ನ್ಯಾಯ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿ ಹೇಳಿದ್ದಾರೆ.
ವಿಡಿಯೊ ವೀಕ್ಷಿಸಿ:
Heartbreaking footage from Junagadh, Gujarat, reveals students brutally assaulting a younger guy in a private hostel, sparking outrage and calls for action against bullying
— Ghar Ke Kalesh (@gharkekalesh) September 4, 2025
https://t.co/GspTASilzl
ಇವನು ನನ್ನ ಮಗ. ನಾನು ಉಪ್ಲೆಟಾದಲ್ಲಿ ವಾಸಿಸುತ್ತಿದ್ದೇನೆ. ಕಳೆದ ತಿಂಗಳು, ನನ್ನ ಮಗನನ್ನು ಹಾಸ್ಟೆಲ್‌ನಲ್ಲಿ ಕೆಲವು ಹುಡುಗರು ಹೊಡೆದಿದ್ದರು. ಇನ್‌ಸ್ಟಾಗ್ರಾಮ್ ಮೂಲಕ ನನಗೆ ವಿಷಯ ತಿಳಿಯಿತು. ಶಾಲಾ ಆಡಳಿತ ಮಂಡಳಿ ನಮಗೆ ಯಾವುದೇ ಮಾಹಿತಿ ನೀಡಲಿಲ್ಲ ಮತ್ತು ಅದನ್ನು ಮರೆಮಾಡಲು ಪ್ರಯತ್ನಿಸಿತು. ನಾನು ಅವರನ್ನು ಭೇಟಿ ಮಾಡಲು ಹೋದಾಗ, ಅವರು ನನ್ನನ್ನು ಭೇಟಿಯಾಗಲಿಲ್ಲ, ನನ್ನ ಕರೆಗಳನ್ನು ಸ್ವೀಕರಿಸಲಿಲ್ಲ ಎಂದು ಬಾಲಕನ ತಂದೆ ವಿಮಲ್ ಚೊಂಚಾ ಆರೋಪಿಸಿದರು.
ಈ ಘಟನೆಯ ಬಗ್ಗೆ ನಮಗೆ ಎರಡು ದಿನಗಳ ಹಿಂದೆಯಷ್ಟೇ ತಿಳಿಯಿತು. ಶಾಲೆಗೆ ಹಲ್ಲೆ ನಡೆದ ಮರುದಿನವೇ ವಿಷಯ ತಿಳಿದಿತ್ತು. ಆದರೆ ಹಲ್ಲೆ ನಡೆಸಿದ ಹುಡುಗರನ್ನು ನಮಗೆ ತಿಳಿಸದೆ ತಕ್ಷಣ ಮನೆಗೆ ಕಳುಹಿಸಲಾಯಿತು. ನಮ್ಮ ಮಗುವಿಗೆ ಏನಾದರೂ ಸಂಭವಿಸಿದ್ದರೆ, ಯಾರು ಹೊಣೆಗಾರರಾಗುತ್ತಿದ್ದರು? ಅಂತಹ ಶಾಲೆಗಳನ್ನು ಮುಚ್ಚಬೇಕು ಎಂದು ಪೋಷಕರು ಆಗ್ರಹಿಸಿದ್ದಾರೆ.
ಅಹಮದಾಬಾದ್‌ನಲ್ಲಿ, ಇತ್ತೀಚಿನ ಘಟನೆಯಲ್ಲಿ ಪೋಷಕರು ತಮ್ಮ ಮಗನನ್ನು ಕಳೆದುಕೊಂಡರು. ಈಗ ನ್ಯಾಯ ಬಂದರೂ ಏನು ಪ್ರಯೋಜನ? ಶಾಲಾ ಆಡಳಿತ ಮಂಡಳಿಯೇ ಹೊಣೆ ಮತ್ತು ಅಂತಹ ಶಾಲೆಗಳು ತಮ್ಮ ಮಾನ್ಯತೆಯನ್ನು ತೆಗೆಯಬೇಕು ಎಂದು ಪೋಷಕರು ಆಗ್ರಹಿಸಿದ್ದಾರೆ. ವಡೋದರಾದಲ್ಲಿ ನಡೆದ ಇದೇ ರೀತಿಯ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದ್ದು, ಅಲ್ಲಿ ವಿದ್ಯಾರ್ಥಿಯೊಬ್ಬ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಹೀಗಾಗಿ ಶಾಲೆಗಳಲ್ಲಿ ಮಕ್ಕಳ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತವಾಗಿದೆ.
ಇದನ್ನೂ ಓದಿ: Viral Video: ಇನ್‌ಸ್ಟಾಗ್ರಾಮ್ ರೀಲ್‌ಗಾಗಿ ಮುಳುಗುವ ನಾಟಕ: ಪೊಲೀಸರು ‘ಶವ’ ತೆಗೆಯಲು ಬಂದಾಗ ಎದ್ದ ವ್ಯಕ್ತಿ