Amitabh Bachchan: ಅಮಿತಾಬ್ ಬಚ್ಚನ್ ಹ್ಯಾಂಡ್‌ಸಮ್ ಆಗಿದ್ದಾರೆ ಎಂದ ಕೆಬಿಸಿ ಮಹಿಳಾ ಸ್ಪರ್ಧಿ: ಇದಕ್ಕೆ ಬಿಗ್ ಬಿ ರಿಯಾಕ್ಷನ್ ಹೇಗಿತ್ತು?
ಕೌನ್ ಬನೇಗಾ ಕರೋಡ್ ಪತಿ (ಕೆಬಿಸಿ) 17ನೇ ಸೀಸನ್ ಆರಂಭವಾಗಿ ದೊಡ್ಡ ಮಟ್ಟಿಗೆ ಸುದ್ದಿ ಮಾಡುತ್ತಿದೆ. ಕೋಟಿ ರೂ. ಗೆಲ್ಲುವ ಕನಸು ಹೊತ್ತ ಸ್ಪರ್ಧಿಗಳಿಗೆ ಪ್ರಶ್ನೆಗಳನ್ನು ಕೇಳುತ್ತಲೇ ಮನೋರಂಜನೆ ನೀಡುವ ಕ್ವಿಜ್ ಮಾಸ್ಟರ್ ಅಮಿತಾಬ್ ಬಚ್ಚನ್ ಅವರನ್ನು ಈ ಶೋ ಮೂಲಕ ಅಭಿಮಾನಿಗಳು ಬಹಳ ಮೆಚ್ಚಿಕೊಂಡಿದ್ದಾರೆ. ಈ ಬಾರಿಯ ಸೀಸನ್‌ನ ಎಪಿಸೋಡ್ ಒಂದರಲ್ಲಿ ಅಮಿತಾಬ್ ಬಚ್ಚನ್ ಫನ್ನಿ ಹೇಳಿಕೆ ನೀಡಿದ್ದು ಸದ್ಯ ಈ ವಿಡಿಯೊ ವೈರಲ್ ಆಗುತ್ತಿದೆ.

Amitabh Bachchan -

ಮುಂಬೈ: ಬಾಲಿವುಡ್‌ನ ಜನಪ್ರಿಯ ನಟ ಅಮಿತಾಬ್ ಬಚ್ಚನ್ (Amitabh Bachchan) ಸಿನಿಮಾ ಜತೆಗೆ ಹಾಗೂ ರಿಯಾಲಿಟಿ ಶೋ ಮೂಲಕವೂ ಪ್ರೇಕ್ಷಕರ ಗಮನ ಸಳೆದಿದ್ದಾರೆ. 80-90ರ ದಶಕದ ಬಾಲಿವುಡ್ ಸಿನಿಮಾಗಳಲ್ಲಿ ನಾಯಕನಾಗಿ ಮಿಂಚಿದ ಅವರು ಈಗಲೂ ಮುಖ್ಯ ಪತ್ರಗಲಲ್ಲಿ ನಟಿಸುತ್ತಿದ್ದಾರೆ. ಅವರು ನಡೆಸಿಕೊಂಡು ಬರು ಕೌನ್ ಬನೇಗಾ ಕರೋಡ್ ಪತಿ (ಕೆಬಿಸಿ) ಶೋ ಕೂಡ ಜನಪ್ರಿಯವಾಗಿದ್ದು, ಇದೀಗ 17ನೇ ಸೀಸನ್ ನಡೆಯುತ್ತಿದೆ. ಕೋಟಿ ರೂ. ಗೆಲ್ಲುವ ಕನಸು ಹೊತ್ತ ಸ್ಪರ್ಧಿಗಳಿಗೆ ಪ್ರಶ್ನೆಗಳನ್ನು ಕೇಳುತ್ತಲೇ ಮನೋರಂಜನೆ ನೀಡುವ ಕ್ವಿಜ್ ಮಾಸ್ಟರ್ ಅಮಿತಾಬ್ ಬಚ್ಚನ್ ಅವರನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಈ ಬಾರಿಯ ಸೀಸನ್‌ನ ಎಪಿಸೋಡ್ ಒಂದರಲ್ಲಿ ನಟ ಅಮಿತಾಬ್ ಬಚ್ಚನ್ ಫನ್ನಿ ಹೇಳಿಕೆ ನೀಡಿದ್ದು ಸದ್ಯ ಈ ವಿಡಿಯೊ ವೈರಲ್ ಆಗಿದೆ.
ಸೀಸನ್ 17ರ ಸಂಚಿಕೆಗಳು ಬಹಳ ಚೆನ್ನಾಗಿ ಮೂಡಿ ಬರುತ್ತಿದ್ದು, ಇತ್ತೀಚೆಗಷ್ಟೆ ಸ್ಪರ್ಧಿಯೊಬ್ಬರ ಜತೆಗೆ ನಟ ಅಮಿತಾಬ್ ಬಚ್ಚನ್ ಕಾಮಿಡಿಯಾಗಿ ಮಾತನಾಡಿದ್ದು ಗಮನ ಸೆಳೆಯುತ್ತಿದೆ. ಬಿಗ್ ಬಿ ಎದುರು ಹಾಟ್ ಸೀಟಿನಲ್ಲಿ ಕುಳಿತಿರುವ ಮಹಿಳಾ ಸ್ಪರ್ಧಿಯು ಅಮಿತಾಬ್ ಬಚ್ಚನ್ ಅವರ ಪರ್ಸನಾಲಿಟಿ ಬಗ್ಗೆ ಬಹಿರಂಗ ಹೇಳಿಕೆ ನೀಡಿದ್ದು ವಿಡಿಯೊದಲ್ಲಿ ಕಂಡು ಬಂದಿದೆ.
ಈ ಮಹಿಳಾ ಸ್ಪರ್ಧಿ ಬಿಗ್ ಬಿ ಅಮಿತಾಬ್ ಬಚ್ಚನ್ ಅವರ ಎದುರಿನ ಹಾಟ್ ಸೀಟಿನಲ್ಲಿ ಕುಳಿತು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಸರ್, ನೀವು ತುಂಬಾ ಸುಂದರವಾಗಿ ಕಾಣುತ್ತಿದ್ದೀರಿ ಎಂದು ಅವರು ಹೇಳಿದ್ದಾರೆ.
ಇದನ್ನು ಓದಿ:Hello 123 Movie: ʼಹಲೋ 123' ಮೂಲಕ ಸ್ಯಾಂಡಲ್‌ವುಡ್‌ಗೆ ಭುವನ್ ಪೊನ್ನಣ್ಣ ರೀ ಎಂಟ್ರಿ; ಯೋಗರಾಜ್ ಭಟ್ ಸಾಥ್
ಬಳಿಕ ಮಹಿಳಾ ಸ್ಪರ್ಧಿ ತಮ್ಮ ಮಾತನ್ನು ಮುಂದುವರಿಸಿ, ಸರ್ ನಾನು ನಿಜ ಹೇಳ್ತಿದ್ದೇನೆ. ನೀವು ನ್ಯಾಚುರಲ್ ಆಗಿಯೇ ಬಹಳ ಸುಂದರವಾಗಿ ಕಾಣುತ್ತಿದ್ದೀರಿ. ನಿಮಗೆ ದೃಷ್ಟಿ ತೆಗೆಯಲು ನನ್ನಿಂದ ಸಾಧ್ಯವಾಗುತ್ತಿಲ್ಲ. ಹೀಗಾಗಿ ನೀವು ಮೇಕಪ್ ಏಕೆ ಮಾಡಿ ಕೊಳ್ಳಬೇಕು? ನೀವು ಮೇಕಪ್, ಟಚಪ್ ಏನು ಮಾಡುವ ಅಗತ್ಯವಿಲ್ಲ ಎಂದು ನಾನು ಭಾವಿಸುತ್ತೇನೆ ಎಂದು ಮಹಿಳಾ ಸ್ಪರ್ಧಿ ಅಮಿತಾಬ್ ಬಚ್ಚನ್ ಅವರ ಸರಳ ವ್ಯಕ್ತಿತ್ವ ಹಾಗೂ ಸೌಂದರ್ಯದ ಬಗ್ಗೆ ಮಾತನಾಡಿದ್ದಾರೆ.
ಇದಕ್ಕೆ ಹಾಸ್ಯಮಯವಾಗಿ ಪ್ರತಿಕ್ರಿಯಿಸಿದ ಅಮಿತಾಬ್ ಬಚ್ಚನ್, ಹೌದು, ನನಗೂ ಹೀಗೆ ಅನಿಸುತ್ತೆ. ನೀವು ಇದನ್ನು ಇಲ್ಲಿನ ಮೇಕಪ್ ಆರ್ಟಿಸ್ಟ್‌ಗೆ ಹೇಳಿ. ಅವರು ಯಾಕೆ ಬಂದು ನನಗೆ ಈ ರೀತಿ ತೊಂದರೆ ನೀಡುತ್ತಾರೆ ಎಂಬುದೆ ಗೊತ್ತಾಗುತ್ತಿಲ್ಲ ಎಂದು ಹೇಳಿದರು. ಇದನ್ನು ಕೇಳಿ ಇತರ ಸಹ ಸ್ಪರ್ಧಿಗಳು ಕೂಡ ನಕ್ಕಿದ್ದಾರೆ. ಸದ್ಯ ಈ ಹೇಳಿಕೆಗಳ ಬಗ್ಗೆ ಸೋಶಿಯಲ್ ಮಿಡಿಯಾದಲ್ಲಿ ನಾನಾ ಕಾಮೆಂಟ್ ಬಂದಿವೆ. ಇದನ್ನು ಅಮಿತಾಬ್ ಬಚ್ಚನ್ ಪತ್ನಿ ಜಯಾ ಬಚ್ಚನ್ ನೋಡಿದರೆ ಅವರ ರಿಯಾಕ್ಷನ್ ಏನಾಗಿರಬಹುದು ಎಂದು ನೆಟ್ಟಿಗರೊಬ್ಬರು ತಮಾಷೆಯಾಗಿ ಪ್ರಶ್ನಿಸಿದ್ದಾರೆ.