Viral Video: ರೆಸ್ಟೋರೆಂಟ್‍ಗೆ ಪ್ರವೇಶ ನಿರಾಕರಿಸಿದ್ದಕ್ಕೆ ಬೌನ್ಸರ್ ಮೇಲೆ ಹಲ್ಲೆ; ವಿಡಿಯೊ ವೈರಲ್
A Man Attacks Bouncer: ರೆಸ್ಟೋರೆಂಟ್ ಒಂದರಲ್ಲಿ ಭಾನುವಾರ ತಡರಾತ್ರಿ ವ್ಯಕ್ತಿಯೊಬ್ಬರಿಗೆ ಪ್ರವೇಶ ನಿರಾಕರಿಸಿದ ನಂತರ ಬೌನ್ಸರ್ ಮೇಲೆ ಹಲ್ಲೆ ನಡೆಸಲಾಗಿದೆ. ಪ್ರವೇಶ ನಿರಾಕರಿಸಿದಾಗ ಸಿಬ್ಬಂದಿಯೊಂದಿಗೆ ಮಾತಿನ ಚಕಮಕಿಯಾಗಿ ವಿವಾದ ಪ್ರಾರಂಭವಾಯಿತು. ಯೆರವಾಡಾದ ಜನಪ್ರಿಯ ಎಲಿಫೆಂಟ್ & ಕಂ. ರೆಸ್ಟೋರೆಂಟ್ ಮತ್ತು ಬಾರ್ ಹೊರಗೆ ಈ ಘಟನೆ ನಡೆದಿದೆ.

-

ಮುಂಬೈ: ಮಹಾರಾಷ್ಟ್ರದ ಯೆರವಾಡಾದ ಜನಪ್ರಿಯ ರೆಸ್ಟೋರೆಂಟ್‌ನಲ್ಲಿ ಭಾನುವಾರ ತಡರಾತ್ರಿ ವ್ಯಕ್ತಿಯೊಬ್ಬರಿಗೆ ಪ್ರವೇಶ ನಿರಾಕರಿಸಿದ ನಂತರ ಬೌನ್ಸರ್ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ (Viral Video). ಈ ಘಟನೆ ರಾತ್ರಿ 10:30 ರ ಸುಮಾರಿಗೆ ಎಲಿಫೆಂಟ್ & ಕಂ. ರೆಸ್ಟೋರೆಂಟ್ ಮತ್ತು ಬಾರ್ ಹೊರಗೆ ನಡೆದಿದ್ದು, ಜಗಳಕ್ಕೆ ಕಾರಣವಾಯಿತು.
ಪೊಲೀಸರ ಪ್ರಕಾರ, ಪ್ರವೇಶ ನಿರಾಕರಿಸಿದಾಗ ಸಿಬ್ಬಂದಿಯೊಂದಿಗೆ ಮಾತಿನ ಚಕಮಕಿಯಾಗಿ ವಿವಾದ ಪ್ರಾರಂಭವಾಯಿತು. ಈ ವೇಳೆ ಪರಸ್ಪರ ಹಲ್ಲೆ ನಡೆಸಿದ್ದಾರೆ. ಇದರ ವಿಡಿಯೊವನ್ನು ಸ್ಥಳದಲ್ಲಿದ್ದವರು ಚಿತ್ರೀಕರಿಸಿದ್ದಾರೆ. ನಂತರ ಆ ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ. ಘಟನೆಯ ನಂತರ ಪುಣೆ ನಿವಾಸಿ ಬೌನ್ಸರ್ ಮಯೂರ್ ಮಧುಕರ್ ಫಡ್ತಾರೆ (27) ಯೆರವಡಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ವಿಡಿಯೊ ವೀಕ್ಷಿಸಿ:
ಆತನ ಹೇಳಿಕೆಯ ಆಧಾರದ ಮೇಲೆ, ಪೊಲೀಸರು ವಡ್ಗಾಂವ್ಶೇರಿಯ ಅಖಿಲ್ ಅಶೋಕ್ ಕುಮಾರ್ (27) ಮತ್ತು ಮುಲ್ಶಿ ತಾಲ್ಲೂಕಿನ ಪಿರಂಗುಟ್‌ನ ಆತನ ಸಹಚರ ಕೈಲ್ ಎಡ್ವರ್ಡ್ ಕಮ್ಮಿನ್ಸ್ (24) ಎಂಬ ಇಬ್ಬರು ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಇವರಿಬ್ಬರ ವಿರುದ್ಧ ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸೆಕ್ಷನ್ 115 (ಸ್ವಯಂಪ್ರೇರಿತವಾಗಿ ನೋವುಂಟುಮಾಡುವುದು) ಮತ್ತು 3(5) (ಸಾಮಾನ್ಯ ಉದ್ದೇಶವನ್ನು ಪೂರೈಸಲು ಹಲವಾರು ವ್ಯಕ್ತಿಗಳು ಮಾಡಿದ ಕೃತ್ಯಗಳು) ಅಡಿಯಲ್ಲಿ ಆರೋಪ ಹೊರಿಸಲಾಗಿದೆ.
ಪೊಲೀಸ್ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.
ಇದೇ ರೀತಿಯ ಘಟನೆ ರಾಜಸ್ಥಾನದಲ್ಲೂ ನಡೆದಿತ್ತು. ರೆಸ್ಟೋರೆಂಟ್‍ವೊಂದರಲ್ಲಿ ಸಿಬ್ಬಂದಿ ಮತ್ತು ಗ್ರಾಹಕರ ನಡುವೆ ಹೊಡೆದಾಟ ನಡೆದಿತ್ತು. ಇದರ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗಿತ್ತು. ನಹರ್‌ಗಢದ ಐತಿಹಾಸಿಕ ಕೋಟೆಯಲ್ಲಿರುವ ಜೈಪುರದ ಪದವ್ ರೆಸ್ಟೋರೆಂಟ್‌ನಲ್ಲಿ ಈ ಘಟನೆ ನಡೆದಿತ್ತು. ಮಹಿಳೆಯರ ಗುಂಪು ಮತ್ತು ರೆಸ್ಟೋರೆಂಟ್ ಸಿಬ್ಬಂದಿಯ ನಡುವೆ ಕ್ಷುಲ್ಲಕ ಕಾರಣಕ್ಕಾಗಿ ಪ್ರಾರಂಭವಾದ ಜಗಳವು ತೀವ್ರ ವಾಗ್ವಾದಕ್ಕೆ ತಿರುಗಿ ಪರಸ್ಪರ ಹೊಡೆದಾಟಕ್ಕೆ ಕಾರಣವಾಯಿತು.
ಇದನ್ನೂ ಓದಿ: Viral Video: ರೆಸ್ಟೋರೆಂಟ್ ಉದ್ಯೋಗಿಗಳ ಮೇಲೆ ಖಾಕಿಗಳ ಅಟ್ಟಹಾಸ- ಶಾಕಿಂಗ್ ವಿಡಿಯೊ ಇಲ್ಲಿದೆ