ಚೆನ್ನೈ, ಮೇ 20: ತಮಿಳುನಾಡು ಮುಖ್ಯಮಂತ್ರಿ ವಿಜಯ್ (Joseph Vijay) ಅವರು ತಮ್ಮ ಕೊಠಡಿಯಲ್ಲಿ ವಿಶೇಷಚೇತನ ಸಮುದಾಯದ ಪ್ರತಿನಿಧಿಗಳೊಂದಿಗೆ ನಡೆಸಿದ ಸಭೆಯ ಸಂದರ್ಭದಲ್ಲಿ ಚಿತ್ರೀಕರಿಸಲಾದ ಸೆಲ್ಫಿ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ (Viral Video) ಆಗಿದೆ. ಇದು ಅಧಿಕಾರದ ಅತ್ಯುನ್ನತ ಸ್ಥಾನದಲ್ಲಿನ ನಿಯಮಾವಳಿಗಳು ಮತ್ತು ಭದ್ರತಾ ಮಾನದಂಡಗಳ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ವಿಶೇಷಚೇತನ ವ್ಯಕ್ತಿಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಚರ್ಚಿಸಲು ನಿಯೋಗವು ತಮಿಳುನಾಡು ಸಚಿವಾಲಯದಲ್ಲಿ ಸಿಎಂ ವಿಜಯ್ ಅವರನ್ನು ಭೇಟಿ ಮಾಡಿತ್ತು. ಈ ಸಭೆಯ ಸಮಯದಲ್ಲಿ, ಪ್ರತಿನಿಧಿಗಳಲ್ಲಿ ಒಬ್ಬರು ವಿಡಿಯೊ ರೆಕಾರ್ಡ್ ಮಾಡಿದ್ದು, ಅದರಲ್ಲಿ ಮುಖ್ಯಮಂತ್ರಿಯೂ ಕಾಣಿಸುವಂತೆ ಕ್ಯಾಮರಾವನ್ನು ತಿರುಗಿಸಲಾಗಿದೆ. ನಂತರ ಈ ವಿಡಿಯೊವನ್ನು ಅದೇ ಸಂಸ್ಥೆಯ ಇನ್ನೊಬ್ಬ ಸದಸ್ಯರಿಗೆ ಸೇರಿದ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಪೋಸ್ಟ್ ಮಾಡಲಾಯಿತು. ಅದು ಶೀಘ್ರದಲ್ಲೇ ವೈರಲ್ ಆಗಿದ್ದು, ಬಳಕೆದಾರರ ಗಮನ ಸೆಳೆಯಿತು.
ಇಲ್ಲಿದೆ ವಿಡಿಯೊ:
ವಿಶೇಷ ಚೇತನ ಸಮುದಾಯದ ಕಳವಳಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಈ ಸಭೆಯನ್ನು ಸಕಾರಾತ್ಮಕ ಹೆಜ್ಜೆಯೆಂದು ಪರಿಗಣಿಸಲಾಗಿದ್ದರೂ, ಮುಖ್ಯಮಂತ್ರಿಗಳ ಕಚೇರಿಯಲ್ಲಿ ಈ ದೃಶ್ಯಾವಳಿಯನ್ನು ರೆಕಾರ್ಡ್ ಮಾಡಿ ಪ್ರಸಾರ ಮಾಡಿದ ರೀತಿ ಟೀಕೆಗೆ ಗುರಿಯಾಯಿತು.
ಸಿಎಂ ವಿಜಯ್ - ತ್ರಿಶಾ ಬಗ್ಗೆ ಕೇಳಿದ್ದಕ್ಕೆ ಉರಿದುಬಿದ್ದ ನಟಿ ಮಾಳವಿಕಾ ಮೋಹನನ್; ವಿಡಿಯೋ ವೈರಲ್!
ಪೂರ್ವಾನುಮತಿ ಇಲ್ಲದೆ ಮುಖ್ಯಮಂತ್ರಿ ಕಚೇರಿಯೊಳಗೆ ವಿಡಿಯೊ ಚಿತ್ರೀಕರಣ ಮತ್ತು ಛಾಯಾಗ್ರಹಣವನ್ನು ಸಾಮಾನ್ಯವಾಗಿ ಅನುಮತಿಸಲಾಗುವುದಿಲ್ಲ. ಹೆಚ್ಚಿನ ಸರ್ಕಾರಿ ಸಂಸ್ಥೆಗಳಲ್ಲಿ, ವಿಶೇಷವಾಗಿ ಹಿರಿಯ ಸಾಂವಿಧಾನಿಕ ಪದಾಧಿಕಾರಿಗಳಿರುವ ಕಚೇರಿಗಳಲ್ಲಿ ಚಿತ್ರೀಕರಣವನ್ನು ಅನುಮತಿಸಲ್ಲ. ಕಚೇರಿಯ ಘನತೆ ಹಾಗೂ ಭದ್ರತೆಯನ್ನು ಕಾಪಾಡುವ ಉದ್ದೇಶವನ್ನು ಇದು ಹೊಂದಿದೆ.
ಆದರೆ, ನಿಯೋಗದ ಭೇಟಿಯ ಸಮಯದಲ್ಲಿ ಈ ನಿಯಮ ಉಲ್ಲಂಘನೆಯನ್ನು ನಿರ್ಲಕ್ಷಿಸಲಾಗಿದೆ ಅಥವಾ ನಿರ್ಬಂಧವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿಲ್ಲ ಎಂದು ಕಂಡುಬರುತ್ತದೆ. ಈ ವಿಡಿಯೊ ವೈರಲ್ ಆದ ಬಳಿಕ, ಇದು ವಿಕಲಚೇತನರ ಹಕ್ಕುಗಳ ಹೋರಾಟದ ಕಡೆಗೆ ಗಮನ ಸೆಳೆಯುವ ಜೊತೆಗೆ, ಈ ಭದ್ರತಾ ಲೋಪ ಹೇಗೆ ಸಂಭವಿಸಿತು ಎಂಬ ಬಗ್ಗೆಯೂ ಚರ್ಚೆಗೆ ಕಾರಣವಾಯಿತು.
ವಿಡಿಯೊವನ್ನು ಕೇವಲ ಉತ್ಸಾಹದಿಂದ ಚಿತ್ರೀಕರಿಸಲಾಗಿದೆ. ಆದರೆ, ಇದನ್ನು ಅನಗತ್ಯ ವಿವಾದವನ್ನು ಉಂಟುಮಾಡಲು ಬಳಸಿಕೊಳ್ಳಲಾಗುತ್ತಿದೆ ಎಂದು ತಮಿಳುನಾಡು ವಿಕಲಚೇತನರ ಒಕ್ಕೂಟದ ಮೂಲಗಳು ಆರೋಪಿಸಿವೆ.
ವಿಜಯ್ ಸಿಎಂ ಆಗ್ತಾರೆ ಎಂದು 2 ವರ್ಷದ ಹಿಂದೆಯೇ ಭವಿಷ್ಯ ನುಡಿದಿದ್ದ ನಿರ್ದೇಶಕ
2024ರಲ್ಲೇ ವಿಜಯ್ ಸಿಎಂ ಆಗುತ್ತಾರೆ ಎಂಬ ಭವಿಷ್ಯವನ್ನು ನಿರ್ದೇಶಕ ವೆಂಕಟ್ ಪ್ರಭು ತಿಳಿಸಿದ್ದಾರೆ. ಸಿಎಂ ಜೋಸೆಫ್ ವಿಜಯ್ ಅವರನ್ನು ಭೇಟಿಯಾಗಿ ಶುಭ ಕೋರಿದ ವೆಂಕಟ್ ಪ್ರಭು, ವಿಶೇಷವಾಗಿ ಸಿದ್ಧಪಡಿಸಲಾಗಿದ್ದ ‘TN07 CM 2026’ ನಂಬರ್ ಪ್ಲೇಟ್ ಅನ್ನು ಅವರಿಗೆ ಉಡುಗೊರೆಯಾಗಿ ನೀಡಿದ್ದಾರೆ. ಈ ಅಪರೂಪದ ಕ್ಷಣದ ಫೋಟೋಗಳನ್ನು ನಿರ್ದೇಶಕರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ ವೆಂಕಟ್ ಪ್ರಭು.