ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vijay's Rally Stampede: ವಿಜಯ್ ಪಕ್ಷಕ್ಕೆ ಯಾವುದೇ ಪಶ್ಚಾತ್ತಾಪವಿಲ್ಲ; ಕಾಲ್ತುಳಿತದ ಕುರಿತು ಮದ್ರಾಸ್ ಹೈಕೋರ್ಟ್ ಗರಂ

ಕಳೆದ ವಾರ ಕರೂರಿನಲ್ಲಿ ನಡೆದ ಕಾಲ್ತುಳಿತಕ್ಕೆ ಸಂಬಂಧಿಸಿದಂತೆ ದಕ್ಷಿಣ ಭಾರತದ ಸೂಪರ್‌ಸ್ಟಾರ್ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಾರ್ಟಿಯನ್ನು ಮದ್ರಾಸ್ ಹೈಕೋರ್ಟ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ಹಿಟ್ ಅಂಡ್ ರನ್ ಪ್ರಕರಣದಲ್ಲಿ ಟಿವಿಕೆ ಪ್ರಚಾರ ಬಸ್ ಅಪಘಾತಕ್ಕೀಡಾಗಿದೆ ಎಂದು ತೋರಿಸುವ ವೀಡಿಯೊಗಳನ್ನು ಉಲ್ಲೇಖಿಸಿ ನ್ಯಾಯಾಧೀಶರು ಅದನ್ನು ವಶಪಡಿಸಿಕೊಳ್ಳಲು ಆದೇಶಿಸಿದರು.

ಕಾಲ್ತುಳಿತದ ಕುರಿತು ಮದ್ರಾಸ್ ಹೈಕೋರ್ಟ್ ಗರಂ

-

Vishakha Bhat Vishakha Bhat Oct 4, 2025 12:43 PM

ಚೆನ್ನೈ: ಕಳೆದ ವಾರ ಕರೂರಿನಲ್ಲಿ ನಡೆದ ಕಾಲ್ತುಳಿತಕ್ಕೆ ಸಂಬಂಧಿಸಿದಂತೆ ದಕ್ಷಿಣ ಭಾರತದ ಸೂಪರ್‌ಸ್ಟಾರ್ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (ಟಿವಿಕೆ) (Vijay's Rally Stampede) ಪಾರ್ಟಿಯನ್ನು ಮದ್ರಾಸ್ ಹೈಕೋರ್ಟ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ನಟ ವಿಜಯ್ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ನ್ಯಾಯಮೂರ್ತಿ ಸೆಂಥಿಲ್‌ಕುಮಾರ್, ಕರೂರಿನಲ್ಲಿ ರ್ಯಾಲಿಯನ್ನು ಆಯೋಜಿಸಿದ್ದ ಅವರು ಮತ್ತು ಅವರ ಪಕ್ಷದ ನಾಯಕರು 41 ಜನರ ಸಾವಿಗೆ ಕಾರಣವಾದ ದುರಂತದ ನಂತರ ಯಾವುದೇ ಪಶ್ಚಾತ್ತಾಪ ತೋರಿಸದೆ ಸ್ಥಳದಿಂದ ಓಡಿಹೋದರು ಎಂದು ಹೇಳಿದ್ದಾರೆ.

ಹಿಟ್ ಅಂಡ್ ರನ್ ಪ್ರಕರಣದಲ್ಲಿ ಟಿವಿಕೆ ಪ್ರಚಾರ ಬಸ್ ಅಪಘಾತಕ್ಕೀಡಾಗಿದೆ ಎಂದು ತೋರಿಸುವ ವೀಡಿಯೊಗಳನ್ನು ಉಲ್ಲೇಖಿಸಿ ನ್ಯಾಯಾಧೀಶರು ಅದನ್ನು ವಶಪಡಿಸಿಕೊಳ್ಳಲು ಆದೇಶಿಸಿದರು. ರ್ಯಾಲಿಯ ಎಲ್ಲಾ ಸಿಸಿಟಿವಿ ಕ್ಯಾಮೆರಾಗಳನ್ನು, ವಿಶೇಷವಾಗಿ ವಿಜಯ್ ಅವರ ಬಸ್ ಒಳಗೆ ಮತ್ತು ಹೊರಗೆ ಇರುವ ಸಿಸಿಟಿವಿ ಕ್ಯಾಮೆರಾಗಳನ್ನು ವಶಪಡಿಸಿಕೊಳ್ಳುವಂತೆ ಅವರು ಪೊಲೀಸರಿಗೆ ಸೂಚಿಸಿದ್ದಾರೆ. ಪೊಲೀಸ್ ಮಹಾನಿರ್ದೇಶಕ (ಐಜಿಪಿ) ಆಸ್ರಾ ಗರ್ಗ್ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಲು ನ್ಯಾಯಾಲಯ ಆದೇಶಿಸಿದ್ದು, ರಾಜ್ಯ ಸರ್ಕಾರವು ಎಸ್‌ಐಟಿಯೊಂದಿಗೆ ಸಹಕರಿಸುವಂತೆ ಕೇಳಿದೆ.

ಘಟನೆಯ ನಂತರ ಟಿವಿಕೆ ಪಕ್ಷದ ಯಾವೊಬ್ಬ ನಾಯಕನೂ ಜನರ ರಕ್ಷಣೆಗೆ ಬರಲಿಲ್ಲ ಎಂದು ಕೋರ್ಟ್‌ ಹೇಳಿದೆ. ಸ್ಥಳೀಯ ಪೊಲೀಸರ ತನಿಖೆಯ ಬಗ್ಗೆ ನ್ಯಾಯಾಲಯವು ಅತೃಪ್ತಿ ವ್ಯಕ್ತಪಡಿಸಿತು ಮತ್ತು ರಾಜ್ಯವು ಟಿವಿಕೆ ನಾಯಕರ ಮೇಲೆ ಕನಿಕರ ವ್ಯಕ್ತಪಡಿಸುತ್ತಿದೆ ಎಂದು ನ್ಯಾಯಧೀಶರು ತಿಳಿಸಿದ್ದಾರೆ. ವಿಜಯ್ ವಿರುದ್ಧ ಏಕೆ ಪ್ರಕರಣ ದಾಖಲಿಸಲಿಲ್ಲ ಎಂದು ನ್ಯಾಯಾಲ ಪ್ರಶ್ನಿಸಿದೆ. ವಿಜಯ್ ಅವರ ಆಪ್ತ ಸಹಾಯಕ ಮತ್ತು ಅವರ ಪಕ್ಷದ ಮುಖಂಡ ಆನಂದ್ ಮತ್ತು ಸಿ.ಟಿ. ನಿರ್ಮಲ್ ಕುಮಾರ್ ಸೇರಿದಂತೆ ಇಬ್ಬರು ಟಿವಿಕೆ ನಾಯಕರ ಮೇಲೆ ಆರೋಪ ಹೊರಿಸಲಾಗಿದೆ. ಪ್ರತ್ಯೇಕ ವಿಚಾರಣೆಯಲ್ಲಿ, ಮಧುರೈ ಪೀಠವು ಅವರಿಬ್ಬರ ನಿರೀಕ್ಷಣಾ ಜಾಮೀನು ಅರ್ಜಿಗಳನ್ನು ವಜಾಗೊಳಿಸಿತು, ತನಿಖೆ ಪ್ರಾಥಮಿಕ ಹಂತದಲ್ಲಿರುವುದರಿಂದ ಜಾಮೀನು ನೀಡಲು ಸಾಧ್ಯವಿಲ್ಲ ಎಂದು ಹೇಳಿದೆ.

ಈ ಸುದ್ದಿಯನ್ನೂ ಓದಿ: Bomb threat: ತಮಿಳುನಾಡು ಸಿಎಂ ಸ್ಟಾಲಿನ್‌ ನಿವಾಸ, ಬಿಜೆಪಿ ಕಚೇರಿ, ವಿಜಯ್‌, ತ್ರಿಶಾ ಮನೆಗಳಿಗೆ ಬಾಂಬ್‌ ದಾಳಿ ಬೆದರಿಕೆ

ಸೆಪ್ಟೆಂಬರ್ 27 ರ ದುರಂತದ ಬಗ್ಗೆ ಸಿಬಿಐ ತನಿಖೆ ಕೋರಿ ಸಲ್ಲಿಸಲಾದ ಎರಡು ಅರ್ಜಿಗಳನ್ನು ಪೀಠ ವಜಾಗೊಳಿಸಿತು. ಅವುಗಳಲ್ಲಿ ಒಂದು ಕಾಲ್ತುಳಿತದ ಸಂತ್ರಸ್ತರಿಗೆ ಸಂಬಂಧವಿಲ್ಲದ ರಾಜಕಾರಣಿ ಸಲ್ಲಿಸಿದ್ದರೆ, ಇನ್ನೊಂದು ವಿಚಾರಣೆಗೆ ಅರ್ಹವಾಗಿಲ್ಲ ಎಂದು ನ್ಯಾಯಾಲಯ ಹೇಳಿದೆ. ಜನರ ಸುರಕ್ಷತೆಯೇ ಆದ್ಯತೆ ಎಂದು ಒತ್ತಿ ಹೇಳಿದ ನ್ಯಾಯಾಲಯ, ಜೀವಗಳನ್ನು ರಕ್ಷಿಸುವುದು ರಾಜ್ಯ ಸರ್ಕಾರದ ಕೆಲಸ ಎಂದು ಪ್ರತಿಪಾದಿಸಿತ್ತು.