ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

IPL 2026: ಗುಜರಾತ್‌ ಟೈಟನ್ಸ್‌ ತಂಡಕ್ಕೆ ಮ್ಯಾಥ್ಯೂ ಹೇಡನ್‌ ಬ್ಯಾಟಿಂಗ್‌ ಕೋಚ್‌!

IPL 2026: ಮುಂಬರುವ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ನಿಮಿತ್ತ ಗುಜರಾತ್‌ ಟೈಟನ್ಸ್‌ ತಂಡಕ್ಕೆ ಬ್ಯಾಟಿಂಗ್‌ ಕೋಚ್‌ ಆಗಿ ಆಸ್ಟ್ರೇಲಿಯಾ ಮಾಜಿ ಆರಂಭಿಕ ಮ್ಯಾಥ್ಯೂ ಹೇಡನ್‌ ನೇಮಕಗೊಂಡಿದ್ದಾರೆ. ಈ ವಿಷಯವನ್ನು ಗುಜರಾತ್‌ ಟೈಟನ್ಸ್‌ ತಂಡ ತನ್ನ ಸೋಶಿಯಲ್‌ ಮೀಡಿಯಾದಲ್ಲಿನ ಪೋಸ್ಟ್‌ ಮೂಲಕ ಬಹಿರಂಗಪಡಿಸಿದೆ.

ಗುಜರಾತ್‌ ಟೈಟನ್ಸ್‌ಗೆ ಮ್ಯಾಥ್ಯೂ ಹೇಡನ್‌ ಬ್ಯಾಟಿಂಗ್‌ ಕೋಚ್‌!

ಮ್ಯಾಥ್ಯೂ ಹೇಡನ್‌ ಗುಜರಾತ್‌ ಟೈಟನ್ಸ್‌ಗೆ ಬ್ಯಾಟಿಂಗ್‌ ಕೋಚ್‌. -

Profile
Ramesh Kote Mar 10, 2026 4:52 PM

ನವದೆಹಲಿ: ಮುಂಬರುವ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2026) ಟೂರ್ನಿಯ ನಿಮಿತ್ತ ಗುಜರಾತ್‌ ಟೈಟನ್ಸ್‌ (Gujrat Titans) ತಂಡಕ್ಕೆ ಬ್ಯಾಟಿಂಗ್‌ ಕೋಚ್‌ ಆಗಿ ಆಸ್ಟ್ರೇಲಿಯಾ ಮಾಜಿ ಆರಂಭಿಕ ಮ್ಯಾಥ್ಯೂ ಹೇಡನ್‌ (Matthew Hayden)ನೇಮಕಗೊಂಡಿದ್ದಾರೆ. ಮಾರ್ಚ್‌ 10 ರಂದು ತನ್ನ ಸೋಶಿಯಲ್‌ ಮೀಡಿಯಾ ಖಾತೆಗಳಲ್ಲಿ ಪೋಸ್ಟ್‌ ಹಾಕುವ ಮೂಲಕ ಗುಜರಾತ್‌ ತಂಡ ಈ ಮಾಹಿತಿಯನ್ನು ನೀಡಿದೆ. ಅಂತಾರಾಷ್ಟ್ರೀಯ ಹಾಗೂ ಐಪಿಎಲ್‌ ಸೇರಿದಂತೆ ಫ್ರಾಂಚೈಸಿ ಲೀಗ್‌ಗಳಲ್ಲಿ ಅಪಾರ ಅನುಭವವನ್ನು ಹೊಂದಿರುವ ಮ್ಯಾಥ್ಯೂ ಹೇಡನ್‌ ಅವರ ಸೇರ್ಪಡೆಯಾಗುವ ಗುಜರಾತ್‌ ಕೋಚಿಂಗ್‌ ವಿಭಾಗಕಕ್ಕೆ ಇದೀಗ ಆನೆ ಬಲ ಬಂದಂತಾಗಿದೆ. ಈ ಆವೃತ್ತಿಯಲ್ಲಿಯೂ ಶುಭಮನ್‌ ಗಿಲ್‌ ನಾಯಕತ್ವದಲ್ಲಿ ಗುಜರಾತ್‌ ಕಣಕ್ಕೆ ಇಳಿಯಲಿದೆ.

ಕಳೆದ 2025ರ ಐಪಿಎಲ್‌ ಟೂರ್ನಿಯಲ್ಲಿ ಶುಭಮನ್‌ ಗಿಲ್‌ ನಾಯಕತ್ವದ ಗುಜರಾತ್‌ ಟೈಟನ್ಸ್‌ ತಂಡ, ಮೂರನೇ ಸ್ಥಾನದ ಮೂಲಕ ಟೂರ್ನಿಯಲ್ಲಿ ತನ್ನ ಅಭಿಯಾನವನ್ನು ಮುಗಿಸಿತ್ತು. ಈ ಟೂರ್ನಿಯಲ್ಲಿ ಎಲಿಮಿನೇಟರ್‌ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ಎದುರು ಸೋಲುವ ಮೂಲಕ ಗುಜರಾತ್‌ ಟೈಟನ್ಸ್‌ ತಂಡ ಟೂರ್ನಿಯಿಂದ ಹೊರ ಬಿದ್ದಿತ್ತು. ಮ್ಯಾಥ್ಯೂ ಹೇಡನ್‌ ಆಗಮನದಿಂದ ಗುಜರಾತ್‌ ತಂಡ ಇದೀಗ ತನ್ನ ಬ್ಯಾಟಿಂಗ್‌ ವಿಭಾಗ ಇನಷ್ಟು ಬಲಿಷ್ಠವಾಗುವ ಸಾಧ್ಯತೆ ಇದೆ.

ಟಿ20 ವಿಶ್ವಕಪ್‌ ಚಾಪಿಯನ್ಸ್‌ ಭಾರತ ತಂಡಕ್ಕೆ 131 ಕೋಟಿ ರು ನಗದು ಬಹುಮಾನ ಘೋಷಿಸಿದ ಬಿಸಿಸಿಐ!

ಮ್ಯಾಥ್ಯೂ ಹೇಡನ್‌ ಅವರ ನೇಮಕದ ಬಗ್ಗೆ ಗುಜರಾತ್‌ ಟೈಟನ್ಸ್‌ ತಂಡದ ನಿರ್ದೇಶಕ ವಿಕ್ರಮ್‌ ಸೋಲಂಕಿ ಮಾತನಾಡಿ, ಆಸ್ಟ್ರೇಲಿಯಾ ದಿಗ್ಗಜ ಅನುಭವದ ಮೇಲೆ ಫ್ರಾಂಚೈಸಿ ನಂಬಿಕೆಯನ್ನು ಇಟ್ಟಿದೆ. ಅವರ ಮಾರ್ಗದರ್ಶನ ನಿಜಕ್ಕೂ ತಂಡದ ಬ್ಯಾಟಿಂಗ್‌ ಫಿಲಾಸಫಿಯನ್ನು ಮುಂದಕ್ಕೆ ತರಲಿದೆ ಎಂದಿದ್ದಾರೆ.

"ನಮ್ಮ ಪಯಣದ ನಿರ್ಣಾಯಕ ಸಮಯದಲ್ಲಿ ಮ್ಯಾಥ್ಯೂ ಹೇಡನ್‌ ಅವರ ನೇಮಕವಾಗಿದೆ. ದೀರ್ಘಕಾಲಿಕ ಯಶಸ್ಸು ಮತ್ತು ಅತ್ಯುತ್ತಮವಾದುದ್ದಕ್ಕೆ ಬದ್ಧವಾಗಿರುವ ಫ್ರಾಂಚೈಸಿಯಾಗಿ, ನಮ್ಮ ಕ್ರಿಕೆಟ್ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವತ್ತ ನಾವು ಸದಾ ಗಮನಹರಿಸಿದ್ದೇವೆ. ಅಗ್ರ ದರ್ಜೆಯಲ್ಲಿನ ಅವರ ಅನುಭವದ ಜೊತೆಗೆ, ಉದಯೋನ್ಮುಖ ಪ್ರತಿಭೆಗಳಿಗೆ ಮಾರ್ಗದರ್ಶನ ನೀಡುವ ಅವರ ಸಾಮರ್ಥ್ಯವು ಮುಂದಿನ ಋತುಗಳಲ್ಲಿ ನಮ್ಮ ಬ್ಯಾಟಿಂಗ್ ಗುರುತನ್ನು ರೂಪಿಸುವಲ್ಲಿ ಮಹತ್ವದ ಪಾತ್ರವಹಿಸಲಿದೆ ಎಂದು ಫ್ರಾಂಚೈಸಿ ತಿಳಿಸಿದೆ," ಎಂದು ವಿಕ್ರಮ್‌ ಸೋಲಂಕಿ ತಿಳಿಸಿದ್ದಾರೆ.



ಮ್ಯಾಥ್ಯೂ ಹೇಡನ್‌ ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್‌ ವೃತ್ತಿ ಜೀವನದಲ್ಲಿ ಆಸ್ಟ್ರೇಲಿಯಾ ಪರ ಆಡಿದ ಎಲ್ಲಾ ಸ್ವರೂಪದಲ್ಲಿ 273 ಪಂದ್ಯಗಳನ್ನು ಆಡಿದ್ದಾರೆ ಹಾಗೂ 15000ಕ್ಕೂ ಅಧಿಕ ರನ್‌ಗಳನ್ನು ಗಳಿಸಿದ್ದಾರೆ. 2000ರ ದಶಕದ ಅತ್ಯಂತ ಅಪಾಯಕಾರಿ ಆರಂಭಿಕ ಬ್ಯಾಟ್ಸ್‌ಮನ್‌ಗಳಲ್ಲಿ ಇವರು ಕೂಡ ಒಬ್ಬರಾಗಿದ್ದರು. ಆಸ್ಟ್ರೇಲಿಯಾ ತಂಡದ ಹಲವು ಐಸಿಸಿ ಟ್ರೋಫಿಗಳ ಗೆಲುವಿನಲ್ಲಿ ಹೇಡನ್‌ ಕೂಡ ಭಾಗಿಯಾಗಿದ್ದಾರೆ.

'ಕಾಯುವ ಸಮಯ ಮುಗಿದಿದೆ'; ಮಾರ್ಚ್‌ 28ಕ್ಕೆ ಐಪಿಎಲ್‌ ಆರಂಭ

ಇವರ ಆಕ್ರಮಣಕಾರಿ ಬ್ಯಾಟಿಂಗ್‌ ಶೈಲಿಯು ವೈಟ್‌ಬಾಲ್‌ ಕ್ರಿಕೆಟ್‌ನಲ್ಲಿ ಪವರ್‌ಪ್ಲೇನಲ್ಲಿ ಹೆಚ್ಚಿನ ರನ್‌ಗಳನ್ನು ಕಲೆ ಹಾಕಲು ನೆರವು ನೀಡಿತ್ತು. ಇದೀಗ ಆಧುನಿಕ ಕ್ರಿಕೆಟ್‌ ಶೈಲಿಗೆ ತಕ್ಕಂತೆ ಬ್ಯಾಟ್ಸ್‌ಮನ್‌ಗಳನ್ನು ರೂಪಿಸಲು ಮ್ಯಾಥ್ಯೂ ಹೇಡನ್‌ ಗುಜರಾತ್‌ ಟೈಟನ್ಸ್‌ ತಂಡದಲ್ಲಿ ನೆರವು ನೀಡಲಿದ್ದಾರೆ.