ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಭಾರತಕ್ಕೆ ಬಂದಿಳಿದ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್; ಪ್ರಧಾನಿ ನರೇಂದ್ರ ಮೋದಿಯಿಂದ ಸ್ವಾಗತ

Vladimir Putin: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ 2 ದಿನಗಳ ಪ್ರವಾಸಕ್ಕಾಗಿ ಭಾರತಕ್ಕೆ ಆಗಮಿಸಿದರು. ಗುರುವಾರ ಸಂಜೆ 6:35ರ ವೇಳೆಗೆ ಅವರು ದೆಹಲಿಯ ಪಾಲಮ್‌ ವಿಮಾನ ನಿಲ್ದಾಣದಲ್ಲಿ ಬಂದಿಳಿದರು. ಪ್ರಧಾನಿ ನರೇಂದ್ರ ಮೋದಿ ಅವರನ್ನು ಸ್ವಾಗತಿಸಿದರು. ಮೋದಿ ಇಂದು ರಾತ್ರಿ ಪುಟಿನ್‌ ಅವರಿಗಾಗಿ ವಿಶೇಷ ಔತಣ ಕೂಟ ಆಯೋಜಿಸಿದ್ದಾರೆ.

ಭಾರತಕ್ಕೆ ಬಂದಿಳಿದ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್

ವ್ಲಾಡಿಮಿರ್ ಪುಟಿನ್ ಮತ್ತು ನರೇಂದ್ರ ಮೋದಿ -

Ramesh B
Ramesh B Dec 4, 2025 7:14 PM

ದೆಹಲಿ, ಡಿ. 4: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) 2 ದಿನಗಳ ಪ್ರವಾಸಕ್ಕಾಗಿ ಭಾರತಕ್ಕೆ ಆಗಮಿಸಿದರು. ಗುರುವಾರ (ಡಿಸೆಂಬರ್‌ 4) ಸಂಜೆ 6:35ರ ವೇಳೆಗೆ ಅವರು ದೆಹಲಿಯ ಪಾಲಮ್‌ ವಿಮಾನ ನಿಲ್ದಾಣದಲ್ಲಿ ಬಂದಿಳಿದರು. ಪ್ರಧಾನಿ ನರೇಂದ್ರ ಮೋದಿ (Narendra Modi) ಅವರನ್ನು ಸ್ವಾಗತಿಸಿದರು. ಮೋದಿ ಇಂದು ರಾತ್ರಿ ಪುಟಿನ್‌ ಅವರಿಗಾಗಿ ವಿಶೇಷ ಔತಣ ಕೂಟ ಆಯೋಜಿಸಿದ್ದಾರೆ. 2022ರ ಫೆಬ್ರವರಿಯಲ್ಲಿ ರಷ್ಯಾ-ಉಕ್ರೇನ್ ಯುದ್ಧ ಪ್ರಾರಂಭವಾದ ನಂತರ ಪುಟಿನ್ ಅವರ ಮೊದಲ ಭಾರತ ಭೇಟಿ ಇದಾಗಿದೆ.

ಭಾರತ-ರಷ್ಯಾ ವಾರ್ಷಿಕ ಶೃಂಗಸಭೆಯ ಹಿನ್ನೆಲೆಯಲ್ಲಿ ವಿಶ್ವದ ಪ್ರಬಲ ನಾಯಕರಾದ ಮೋದಿ ಮತ್ತು ಪುಟಿನ್‌ ಶುಕ್ರವಾರ (ಡಿಸೆಂಬರ್‌ 5) ಮಾತುಕತೆ ನಡೆಸಲಿದ್ದಾರೆ. ಭಾರತ-ಅಮೆರಿಕ ಮಧ್ಯೆ ಪರೋಕ್ಷ ತೆರಿಗೆ ಯುದ್ಧ ನಡೆಯುತ್ತಿವ ಮಧ್ಯೆ ರಷ್ಯಾ ಅಧ್ಯಕ್ಷ ಭೇಟಿ ನೀಡಿರುವುದು ಗಮನ ಸೆಳೆದಿದೆ.

ಭಾರತಕ್ಕೆ ಬಂದಿಳಿದ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್:



ಆತ್ಮೀಯವಾಗಿ ಸ್ವಾಗತಿಸಿದ ಮೋದಿ

ವಿಶೇಷ ವಿಮಾನದಲ್ಲಿ ಪುಟಿನ್‌ ಪಾಲಮ್‌ ಏರ್‌ ಪೋರ್ಟ್‌ಗೆ ಆಗಮಿಸುತ್ತಿದ್ದಂತೆ ಖುದ್ದು ಮೋದಿ ಆಗಮಿಸಿ, ಶೇಕ್‌ ಹ್ಯಾಂಡ್‌ ಮಾಡಿ ಆತ್ಮೀಯವಾಗಿ ತಬ್ಬಿಕೊಂಡರು. ಆ ಮೂಲಕ 4 ವರ್ಷಗಳ ಬಳಿಕ ಆಗಮಿಸಿದ ರಷ್ಯಾ ಅಧ್ಯಕ್ಷರಿಗೆ ಭರ್ಜರಿ ಸ್ವಾಗತ ದೊರೆಯಿತು. ಪುಟಿನ್‌ ಕೊನೆಯ ಬಾರಿಗೆ ಭಾರತಕ್ಕೆ 2021ರಲ್ಲಿ ಆಗಮಿಸಿದ್ದರು.

ಪುಟಿನ್‌ ಅವರನ್ನು ಸ್ವಾತಿಸಿದ ಮೋದಿ:



ಶುಕ್ರವಾರ ಬೆಳಗ್ಗೆ ಪುಟಿನ್‌ ಅವರಿಗೆ ರಾಷ್ಟ್ರಪತಿ ಭವನದಲ್ಲಿ ಭವ್ಯ ಸ್ವಾಗತ ದೊರೆಯಲಿದೆ. ನಂತರ ಪುಟಿನ್‌ ದೆಹಲಿಯ ರಾಜ್‌ಘಾಟ್‌ನಲ್ಲಿರುವ ಮಹಾತ್ಮಾ ಗಾಂಧಿ ಸಮಾಧಿಗೆ ತೆರಳಿ ಪುಷ್ಪನಮನ ಸಲ್ಲಿಸಲಿದ್ದಾರೆ. ಅನಂತರ ಹೈದ್ರಾಬಾದ್‌ ಹೌಸ್‌ ಮತ್ತು ಭಾರತ ಮಂಟಪಂನಲ್ಲಿ ಮೋದಿ ಅವರೊಂದಿಗೆ ವಿಶೇಷ ಮಾತುಕತೆ ನಡೆಸಲಿದ್ದಾರೆ. ಬಳಿಕ ರಾಷ್ಟ್ರಪತಿ ಭವನದಲ್ಲಿ ಭೋಜನಕೂಟ ಏರ್ಪಡಿಸಲಾಗಿದೆ.

ಒಂದೇ ಕಾರಿನಲ್ಲಿ ತೆರಳಿದ್ದ ಮೋದಿ- ಪುಟಿನ್‌ ಅಂದು ಚರ್ಚಿಸಿದ್ದೇನು? ಕೊನೆಗೂ ರಹಸ್ಯ ಬಿಚ್ಚಿಟ್ಟ ರಷ್ಯಾ ಅಧ್ಯಕ್ಷ

ಪುಟಿನ್‌ ಅವರ ಈ ಭೇಟಿ ಭಾರತ ಮತ್ತು ರಷ್ಯಾ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸುವ ನಿರೀಕ್ಷೆ ಇದೆ. ವ್ಯಾಪಾರ, ರಕ್ಷಣಾ ವಲಯದಲ್ಲಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಹಲವು ಮಹತ್ವ ಒಪ್ಪಂದಗಳಿಗೆ ಎರಡೂ ದೇಶಗಳು ಸಹಿ ಹಾಕಲಿವೆ. ಪುಟಿನ್‌ ಜತೆ ಹಲವು ಅಧಿಕಾರಿಗಳು ಆಗಮಿಸಿದ್ದಾರೆ.

ಪುಟಿನ್‌ ಭೇಟಿ ವೇಳೆ ಸಣ್ಣಪುಟ್ಟ ಪರಮಾಣು ಘಟಕ, ಇನ್ನೂ 3 ಕ್ಷಿಪಣಿನಾಶಕ ಎಸ್‌-4 ವ್ಯವಸ್ಥೆ, ಅತ್ಯಾಧುನಿಕ ಯುದ್ಧ ವಿಮಾನಗಳ ಖರೀದಿ ಬಗ್ಗೆ ಮಾತುಕತೆ ನಡೆಯುವ ಸಾಧ್ಯತೆ ಇದೆ. ಅಲ್ಲದೆ ಮಾನವ ಶಕ್ತಿಯ ವಿನಿಮಯ, ಸುಂಕ ಸಹಿತ-ರಹಿತ ವ್ಯಾಪಾರದ ರೀತಿ ಹೇಗಿರಬೇಕೆಂಬ ಬಗ್ಗೆಯೂ ಚರ್ಚೆ ನಡೆಯಲಿದೆ.

ವಿಶೇಷ ಎಂದರೆ ಭಾರತ ರಷ್ಯಾದಿಂದ ಗರಿಷ್ಠ ಪ್ರಮಾಣದಲ್ಲಿ ತೈಲ ಆಮದು ಮಾಡಿಕೊಳ್ಳುತ್ತಿದೆ. ಇದೇ ನೆಪ ಮಾಡಿಕೊಂಡು ಇತ್ತೀಚೆಗೆ ಅಮೆರಿಕ ಭಾರತದ ಉತ್ಪನ್ನಗಳ ಮೇಲೆ ಶೇ. 50ರಷ್ಟು ತೆರಿಗೆ ಹೇರಿತ್ತು. ಸದ್ಯ ಪುಟಿನ್‌ ಭಾರತ ಭೇಟಿಯನ್ನು ಅಮೆರಿಕ ಸೂಕ್ಷ್ಮವಾಗಿ ಪರಿಶೀಲಿಸುತ್ತಿದೆ.