ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಆಸ್ತಿಗಾಗಿ ಪ್ರತಿದಿನ ಮಾನಸಿಕ, ದೈಹಿಕ ಹಿಂಸೆ: ಪತ್ನಿಯ ದೌರ್ಜನ್ಯ ವಿವರಿಸಿ ಆತ್ಮಹತ್ಯೆಗೆ ಶರಣಾದ ಬಿಜೆಪಿ ನಾಯಕನ ಪುತ್ರ; ಕೊನೆಯ ವಿಡಿಯೊ ವೈರಲ್‌

Meerut: ಪತ್ನಿ ಮತ್ತು ಪತ್ನಿ ಮನೆಯವರ ಕಿರುಕುಳ ತಾಳಲಾರದೆ ಮದುವೆಯ ಮೊದಲ ವಾರ್ಷಿಕೋತ್ಸವದ ಮುನ್ನ ದಿನಾ ವ್ಯಕ್ತಿಯೊಬ್ಬರು ವಿಷ ಸೇವಿಸಿ ಅತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಭಾನುವಾರ ಉತ್ತರ ಪ್ರದೇಶದ ಮೀರತ್‌ನಲ್ಲಿ ನಡೆದಿದೆ. ಮೃತರನ್ನು ಬಿಜೆಪಿ ನಾಯಕ, 26 ವರ್ಷದ ಪ್ರವಲ್‌ ಗುಪ್ತ ಎಂದು ಗುರುತಿಸಲಾಗಿದೆ.

ಪ್ರವಲ್‌ ಗುಪ್ತ ಮತ್ತು ಸಾಂದರ್ಭಿಕ ಚಿತ್ರ

ಲಖನೌ, ನ. 3: ಪತ್ನಿ ಮತ್ತು ಪತ್ನಿ ಮನೆಯವರ ಕಿರುಕುಳ ತಾಳಲಾರದೆ ಮದುವೆಯ ಮೊದಲ ವಾರ್ಷಿಕೋತ್ಸವದ ಮುನ್ನ ದಿನಾ ವ್ಯಕ್ತಿಯೊಬ್ಬರು ವಿಷ ಸೇವಿಸಿ ಅತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಭಾನುವಾರ (ನವೇಂಬರ್‌ 1) ಉತ್ತರ ಪ್ರದೇಶದ ಮೀರತ್‌ನಲ್ಲಿ (Meerut) ನಡೆದಿದೆ. ಮೃತರನ್ನು 26 ವರ್ಷದ ಪ್ರವಲ್‌ ಗುಪ್ತ ಎಂದು ಗುರುತಿಸಲಾಗಿದೆ. ಸಾವಿಗೆ ಮುನ್ನ ಅವರು ವಿಡಿಯೊವೊಂದನ್ನು ಮಾಡಿದ್ದು, ಅದರಲ್ಲಿ ತನ್ನ ಸಾವಿಗೆ ಪತ್ನಿ ಸ್ನೇಹಾ ಗುಪ್ತ ಆಕೆಯ ಮನೆಯವರು ಕಾರಣ ಎಂದು ತಿಳಿಸಿದ್ದಾರೆ. ಆಸ್ತಿಯನ್ನು ಪತ್ನಿಯ ಹೆಸರಿಗೆ ವರ್ಗಾಯಿಸುವಂತೆ ತನಗೆ ಪ್ರತಿದಿನ ದೈಹಿಕ, ಮಾನಸಿಕ ಕಿರುಕುಳ ನೀಡಲಾಗುತ್ತಿದೆ ಎಂದು ಅವರು ವಿಡಿಯೊದಲ್ಲಿ ವಿವರಿಸಿದ್ದಾರೆ.

ಮೃತ ಪ್ರವಲ್‌ ಗುಪ್ತ ಬಿಜೆಪಿ ನಾಯಕ, ಕಂಕರ್‌ಖೇರಾ ಮಂಡಲ ಉಪಾಧ್ಯಕ್ಷ ರಾಜೀವ್‌ ಗುಪ್ತ ಅವರ ಪುತ್ರ. ಕೊನೆಯ ವಿಡಿಯೊದಲ್ಲಿ ಪ್ರವಲ್‌ ಗುಪ್ತ ತಮ್ಮ ಸಾವಿನ ಕಾರಣ ವಿವರಿಸಿದ್ದಾರೆ. ʼʼನಾನಿವತ್ತು ಜೀವನವನ್ನು ಕೊನೆಗೊಳಿಸುತ್ತಿದ್ದೇನೆ. ಈ ನಿರ್ಧಾರ ಕೈಗೊಳ್ಳಲು ಮುಖ್ಯ ಕಾರಣ ನನ್ನ ಪತ್ನಿ ಸ್ನೇಹಾ ಗುಪ್ತ ಮತ್ತು ಆಕೆಯ ಕುಟುಂಬʼʼ ಎಂದು ತಿಳಿಸಿದ್ದಾರೆ. ಪ್ರವಲ್‌ ಮತ್ತು ಸ್ನೇಹಾ ಅವರ ವಿವಾಗ 2025ರ ನವೆಂಬರ್‌ 2ರಂದು ನಡೆದಿತ್ತು.

ಪ್ರವಲ್‌ ಗುಪ್ತ ಕೊನೆಯ ವಿಡಿಯೊ:



ನಿರಂತರ ದೌರ್ಜನ್ಯ

ಆಸ್ತಿಯನ್ನು ತನ್ನ ಹೆಸರಿಗೆ ವರ್ಗಾಯಿಸುವಂತೆ ಆಗ್ರಹಿಸಿ ಸ್ನೇಹಾ ಮತ್ತು ಅಕೆಯ ಮನೆಯವರು ನಿರಂತರ ದೈಹಿಕ ಹಲ್ಲೆ ನಡೆಸುತ್ತಿದ್ದರು ಎಂದು ಪ್ರವಲ್‌ ವಿಡಿಯೊದಲ್ಲಿ ಆರೋಪಿಸಿದ್ದಾರೆ. ಸೀದು ಹೋದ ರೋಟಿ ಬಡಿಸುತ್ತಿದ್ದ ಆಕೆ ಈ ಬಗ್ಗೆ ಪ್ರಶ್ನಿಸಿದಾಗ ಜಗಳವಾಡುತ್ತಿದ್ದುದಾಗಿ ತಿಳಿಸಿದ್ದಾರೆ. ಅಲ್ಲದೆ ಹೆತ್ತವರಿಂದ ದೂರವಾಗಿ ಪ್ರತ್ಯೇಕ ವಾಸಿಸುವಂತೆ ಒತ್ತಡ ಹೇರುತ್ತಿದ್ದಳು ಎಂದು ತಮ್ಮ ಮೇಲಾದ ದೌರ್ಜನ್ಯವನ್ನು ಪ್ರವಲ್‌ ಗುಪ್ತ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ಮೀರತ್‌ ಘಟನೆ ಬೆನ್ನಲ್ಲೇ ಮತ್ತೊಂದು ಬೆಚ್ಚಿ ಬೀಳಿಸೋ ಘಟನೆ! ಪತ್ನಿಯ ಪ್ರಿಯಕರನನ್ನು ಜೀವಂತ ಸಮಾಧಿ ಮಾಡಿದ ಪತಿರಾಯ

ಕೊನೆಗೆ ಪ್ರವಲ್‌ ತಮ್ಮ ಕುಟುಂಬಸ್ಥರಿಂದ ದೂರವಾಗಿ ಸ್ನೇಹಾ ಜತೆ ವಾಸಿಸಲು ಪ್ರಾರಂಭಿಸಿದ್ದರು. ಇತ್ತೀಚೆಗೆ ಈ ದಂಪತಿಗೆ ಹೆಣ್ಣು ಮಗವೊಂದು ಜನಿಸಿತ್ತು. ಆಗ ಮತ್ತೆ ತಮ್ಮ ಹೆತ್ತವರ ಬಳಿಗೆ ಮರಳಲು ಪ್ರವಲ್‌ ಮುಂದಾಗಿದ್ದರು. ಈ ಬಗ್ಗೆ ತಿಳಿಸಿದಾಗ ಸ್ನೇಹಾ ಮತ್ತೆ ತಗಾದೆ ತೆಗೆದಿದ್ದಳು ಎಂದು ವಿಡಿಯೊದಲ್ಲಿ ತಿಳಿಸಲಾಗಿದೆ.

ಮಗುವಿನ ಆರೈಕೆ ಮಾಡಲು ತಮ್ಮ ತಾಯಿ ಮುಂದಾದಾಗ ಅವರ ಮೇಲೂ ಸ್ನೇಹಾ ಹಲ್ಲೆ ನಡೆಸಿದ್ದಾಳೆ. ಸಂಪೂರ್ಣ ಸಂಬಳ ಆಕೆಗೆ ನೀಡಿದರೂ ತಮ್ಮ ಹೆತ್ತವರೊಂದಿಗೆ ಒರಟಾಗಿ ನಡೆದುಕೊಳ್ಳುತ್ತಿದ್ದಳು. ಸಹೋದರಿ ಜತೆಯೂ ತಗಾದೆ ತೆಗೆಯುತ್ತಿದ್ದಳು ಎಂದು ಆರೋಪಿಸಲಾಗಿದೆ.

ಪತ್ನಿಗೆ ಆಕೆಯ ಹೆತ್ತವರ ಸಾಥ್‌

ಪ್ರವಲ್‌ ಗಾಜಿಯಾಬಾದ್‌ನ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದು, ಪತ್ನಿ ಸ್ನೇಹಾಗೆ ಆಕೆಯ ಹೆತ್ತವರು ಸಂಪೂರ್ಣ ಬೆಂಬಲ ನೀಡಿದ್ದಾರೆ. ಸುಳ್ಳು ಆರೋಪಗಳ ಮೂಲಕ ದೂರು ನೀಡುವುದಾಗಿ ಬೆದರಿಕೆ ಒಡ್ಡುತ್ತಿದ್ದರು ಎಂದು ತಿಳಿಸಲಾಗಿದೆ.

ಮಕ್ಕಳ ಮೇಲೆ ದೌರ್ಜನ್ಯ ಎಸಗಿದ ಅಪರಾಧಿ ಚೆನ್ನೈ ಕೇಂದ್ರ ಕಾರಾಗೃಹದಿಂದ ಪರಾರಿ

ನವೆಂಬರ್ 1ರಂದು ವಿಷ ಸೇವಿಸಿದ್ದ ಪ್ರವಲ್ ಮೀರತ್‌ನ ಕಂಟೋನ್ಮೆಂಟ್ ಪ್ರದೇಶದಲ್ಲಿ ಅಸ್ವಸ್ಥ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಪೊಲೀಸರು ಸ್ಥಳಕ್ಕೆ ಆಗಮಿಸಿ ಕುಟುಂಬದವರಿಗೆ ಮಾಹಿತಿ ನೀಡಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಟ್ಟಿದ್ದಾರೆ. ಸದ್ಯ ಈ ಘಟನೆ ದೇಶಾದ್ಯಂತ ಸಂಚಲನ ಮೂಡಿಸಿದೆ.

ದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.

Ramesh Ballamoole

View all posts by this author