ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Haryana Horror: ಮೀರತ್‌ ಘಟನೆ ಬೆನ್ನಲ್ಲೇ ಮತ್ತೊಂದು ಬೆಚ್ಚಿ ಬೀಳಿಸೋ ಘಟನೆ! ಪತ್ನಿಯ ಪ್ರಿಯಕರನನ್ನು ಜೀವಂತ ಸಮಾಧಿ ಮಾಡಿದ ಪತಿರಾಯ

Haryana Horror: ಪತ್ನಿ ಪರ ಪುರುಷನೊಂದಿಗೆ ಅನೈತಿಕ ಸಂಬಂಧ ಹೊಂದಿರುವುದಕ್ಕೆ ಅಸಮಾಧಾನಗೊಂಡು ಪತಿ ವ್ಯಕ್ತಿಯನ್ನು ಗುಂಡಿಯೊಳಗೆ ಹಾಕಿ ಜೀವಂತ ಸಮಾಧಿ ಮಾಡಿದ್ದಾನೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಿದ ಪೊಲೀಸರು ಕೇಸ್‌ ದಾಖಲಿಸಿಕೊಂಡಿದ್ದಾರೆ. ಈ ಬಗ್ಗೆ ವಿವರ ಇಲ್ಲಿದೆ.

ಜೀವಂತ ಸಮಾಧಿ! ಇದು ದೇಶವನ್ನೇ ಬೆಚ್ಚಿಬೀಳಿಸೋ ಮತ್ತೊಂದು ಕೇಸ್‌

Profile Sushmitha Jain Mar 27, 2025 2:55 PM

ಹರಿಯಾಣ: ಇತ್ತೀಚೆಗೆ ಮೀರತ್ ನಲ್ಲಿ ನಡೆದ ಸೌರಭ್ ರಜಪೂತ್ ಕೊಲೆಯನ್ನೇ ಹೋಲುವ ಮತ್ತೊಂದು ಆಘಾತಕಾರಿ ಘಟನೆ ಹರಿಯಾಣದಲ್ಲಿ ನಡೆದಿದೆ. ಹೌದು ತನ್ನ ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ವ್ಯಕ್ತಿಯನ್ನು ಜೀವಂತ ಸಮಾಧಿ ಮಾಡಿರುವ ಘಟನೆ ಹರ್ಯಾಣದ ರೋಹ್ಟಕ್ನಲ್ಲಿ(Haryana murder Case) ನಡೆದಿದೆ. ಹರ್ದೀಪ್(40) ಎಂಬ ವ್ಯಕ್ತಿ ಈ ದುಷ್ಕೃತ್ಯ ಎಸಗಿದ್ದು, ತನ್ನ ಪತ್ನಿಯೊಂದಿಗೆ ಜಗದೀಪ್ (45) ಎಂಬ ವ್ಯಕ್ತಿ ಅನೈತಿಕ ಸಂಬಂಧ ಹೊಂದಿದ್ದಾನೆ ಶಂಕಿಸಿ ತನ್ನ ಹೊಲದಲ್ಲಿ 7 ಅಡಿ ಆಳದ ಗುಂಡಿ ತೋಡಿ ಜೀವಂತವಾಗಿ ಹೂತು ಹಾಕಿದ್ದಾನೆ. ಜಗದೀಪ್ ರೋಹ್ಟಕ್‌ನ ಬಾಬಾ ಮಸ್ತ್‌ನಾಥ್ ವಿಶ್ವವಿದ್ಯಾಲಯದಲ್ಲಿ ಶಿಕ್ಷಕನಾಗಿದ್ದು, ಮೂರು ವರ್ಷಗಳಿಂದ ಜನತಾ ಕಾಲೋನಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಎನ್ನಲಾಗಿದ್ದು, ಪೊಲೀಸರ ಹಂಚಿಕೊಂಡಿರುವ ಮಾಹಿತಿ ಪ್ರಕಾರ ಪ್ರಮುಖ ಆರೋಪಿ ರಾಜ್‌ಕರನ್ , ಜಗದೀಪ್ ಫೋನ್‌ನಲ್ಲಿ ತನ್ನ ಪತ್ನಿಯ ಫೋಟೋ ನೋಡಿದ್ದಾನೆ.

ಇದರಿಂದ ಕುಪಿತಗೊಂಡ ರಾಜ್‌ಕರನ್ ಮನಸ್ಸಲ್ಲಿ ತನ್ನ ಪತ್ನಿ ಹಾಗೂ ಜಗದೀಪ್ ಇಬ್ಬರ ಮಧ್ಯೆ ಅನೈತಿಕ ಸಂಬಂಧ ಇದೆ ಎಂಬ ಅನುಮಾನ ಮೂಡಿದೆ. ಈ ಹಿನ್ನಲೆ ರಾಜ್‌ಕರನ್ ಜಗದೀಪ್ ಅನ್ನು ಹತ್ಯೆಗೈಲು ಮುಂದಾಗಿದ್ದು, ಹರ್ದೀಪ್ ಮತ್ತು ಅವನ ಕೆಲವು ಸ್ನೇಹಿತರು ಸಂಚು ರೂಪಿಸಿ ಕೊಲೆ ಮಾಡಿದ್ದಾರೆ ಎಂದಿದ್ದಾರೆ.

ಕಿಡ್ನಾಪ್ ಮಾಡಿ ಹತ್ಯೆ

ಮೊದಲು ಜಗದೀಪ್ನನ್ನು ಸ್ನೇಹಿತರ ಸಹಾಯದಿಂದ ಕಿಡ್ನಾಪ್ ಮಾಡಿಸಿದ್ದು, ಕೈಕಾಲುಗಳನ್ನು ಕಟ್ಟಿ, ಮನಸೋಇಚ್ಛೆ ಥಳಿಸಿದ್ದಾರೆ. ನಂತರ ತನ್ನ ಹೊಲದಲ್ಲಿ ಈ ಹಿಂದೆಯೇ ತೋಡಲಾಗಿದ 7 ಅಡಿ ಆಳದ ಗುಂಡಿ ತೋಡಿ ಜೀವಂತವಾಗಿ ಹೂತು ಹಾಕಿದ್ದಾನೆ. ಕಳೆದ ಡಿಸೆಂಬರ್ನಲ್ಲಿ ಜಗದೀಪ್ ಅನ್ನು ಕೊಲೆ ಮಾಡ್ಡಿದು, ಮೂರು ತಿಂಗಳು ತಡವಾಗಿ ಈ ಘಟನೆ ಬೆಳಕಿಗೆ ಬಂದಿದೆ.

ಈ ಸುದ್ದಿಯನ್ನು ಓದಿ: Viral Video: ಕ್ಲಬ್‍ನಲ್ಲಿ ಭುಗಿಲೆದ್ದ ಜಗಳ; ವ್ಯಕ್ತಿಯ ತಲೆಯ ಮೇಲೆ ಗ್ಲಾಸ್‌ ಒಡೆದು ಕ್ರೌರ್ಯ ಮೆರೆದ ಕಿಡಿಗೇಡಿಗಳು!

ತನಿಖೆ ನೆಡಸಿದ ಪೊಲೀಸರು ಆರೋಪಿ ಹರ್ದೀಪ್ ಬಂಧಿಸಿದ್ದಾರೆ. ಜಗದೀಪ್ ಮೃತದೇಹವನ್ನು ಸೋಮವಾರ ಹೊಲದಿಂದ ವಶಪಡಿಸಿಕೊಳ್ಳಲಾಗಿದೆ. ಹೊಲದಲ್ಲಿ ಗುಂಡಿ ತೋಡಿ ಶಿಕ್ಷನನ್ನು ಜೀವಂತ ಸಮಾಧಿ ಮಾಡಿದ್ದ, ಆದರೆ ಕೊಳವೆ ಬಾವಿಗಾಗಿ ಗುಂಡಿ ತೋಡಲಾಗಿದೆ ಎಂದು ಸಬೂಬು ಹೇಳಿದ್ದ. ಇನ್ನೂ ಕೊಲೆಯಾದ 10 ದಿನಗಳ ನಂತರ ಜನವರಿ 3 ರಂದು, ಶಿವಾಜಿ ಕಾಲೋನಿ ಪೊಲೀಸ್ ಠಾಣೆಯಲ್ಲಿ ಜಗದೀಪ್ ನಾಪತ್ತೆ ದೂರು ದಾಖಲಾಗಿತ್ತು.

ಆದರೆ ಜಗದೀಪ್ ಅವರ ಕರೆ ದಾಖಲೆಗಳನ್ನು ಪರಿಶೀಲಿಸುವವರೆಗೂ ಪೊಲೀಸರಿಗೆ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಬಳಿಕ, ಹರ್ದೀಪ್ ಮತ್ತು ಅವನ ಸ್ನೇಹಿತ ಧರ್ಮಪಾಲ್ ರನ್ನು ಬಂಧಿಸಿ ವಿಚಾರಿಸಿದಾಗ ಸಾಕಷ್ಟು ಸಾಕ್ಷಿಗಳು ದೊರೆತಿದ್ದು. ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಖಾಕಿ ವಶಕ್ಕೆ ಪಡೆಡಿದ್ದಾರೆ. ಪೊಲೀಸ್ ಅಧಿಕಾರಿಗಳು ಇಬ್ಬರನ್ನೂ ವಿಚಾರಣೆಗೆ ಒಳಪಡಿಸಿದರು. ವಿಚಾರಣೆಯ ಸಮಯದಲ್ಲಿ, ಇಬ್ಬರೂ ಕೊಲೆಯ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ್ದಾರೆ .