ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಹುದ್ದೆ ಬಿಡುವವರೆಗೂ ನಿದ್ದೆ ಮಾಡದಂತೆ ಮಾಡುತ್ತೇವೆ: ಜ್ಞಾನೇಶ್ ಕುಮಾರ್‌ಗೆ ರಾಹುಲ್ ಗಾಂಧಿ ಎಚ್ಚರಿಕೆ

ಮುಖ್ಯ ಚುನಾವಣೆ ಆಯುಕ್ತರಾದ ಜ್ಞಾನೇಶ್ ಕುಮಾರ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ರಕ್ಷಿಸುತ್ತಿದೆ. ನಿಮಗೆ ನಿದ್ದೆ ಬರುತ್ತಿಲ್ಲ ಎಂಬುದು ನಮಗೆ ಗೊತ್ತಿದೆ. ನೀವು ಹುದ್ದೆಯನ್ನು ತ್ಯಜಿಸುವವರೆಗೆ ನಾವು ಹೋರಾಟವನ್ನು ಮಾಡುತ್ತೇವೆ ಎಂದು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಜ್ಞಾನೇಶ್ ಕುಮಾರ್ ಅವರಿಗೆ ಎಚ್ಚರಿಕೆಯನ್ನು ನೀಡಿದ್ದಾರೆ.

ಕೇಂದ್ರ ಸರ್ಕಾರದಿಂದ ಜ್ಞಾನೇಶ್ ಕುಮಾರ್‌ಗೆ ರಕ್ಷಣೆ: ವಿಪಕ್ಷಗಳ ಆರೋಪ

ಸಂಗ್ರಹ ಚಿತ್ರ -

ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ (Chief Election Commission) ಜ್ಞಾನೇಶ್ ಕುಮಾರ್ (Gyanesh Kumar) ಅವರನ್ನು ಹುದ್ದೆಯಿಂದ ಕೆಳಗಿಳಿಯುವಂತೆ ಮಾಡುತ್ತೇವೆ ಎಂದು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Leader of Opposition Rahul Gandhi) ಸೋಮವಾರ ಪ್ರತಿಜ್ಞೆ ಮಾಡಿದರು. ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅವರು, ಮುಖ್ಯ ಚುನಾವಣೆ ಆಯುಕ್ತರನ್ನು ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಅವರ ನೇತೃತ್ವದ ಕೇಂದ್ರ ಸರ್ಕಾರ ರಕ್ಷಿಸುತ್ತಿದೆ. ಚುನಾವಣಾ ಮುಖ್ಯಸ್ಥರಿಗೆ ಈಗ ನಿದ್ದೆ ಬರುತ್ತಿಲ್ಲ ಎಂಬುದು ನಮಗೆ ಗೊತ್ತಿದೆ ಎಂದರು.

ಚುನಾವಣಾ ಆಯೋಗದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ನಿಮಗೆ ನಿದ್ದೆ ಬರುತ್ತಿಲ್ಲ ಎಂಬುದು ನಮಗೆ ಗೊತ್ತು. ನೀವು ಹುದ್ದೆ ಬಿಡುವಂತೆ ನಾವು ಮಾಡುತ್ತೇವೆ. ಚುನಾವಣಾ ಅಕ್ರಮಗಳ ಆರೋಪದ ವಿರುದ್ಧದ ಪ್ರತಿಭಟನೆಗಳನ್ನು ಹತ್ತಿಕ್ಕಲು 30,000ದಷ್ಟು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿ ದೆಹಲಿಯನ್ನು ಕೋಟೆಯನ್ನಾಗಿ ಕೇಂದ್ರ ಸರ್ಕಾರ ಮಾಡಿದೆ ಎಂದು ಆರೋಪಿಸಿದರು.

ʼʼಪೊಲೀಸರು ಮೆಟ್ಟಿಲು ಮೂಲಕ ಎಳೆದೊಯ್ದರು, ಈಗಲೂ ಗೃಹ ಬಂಧನದಲ್ಲಿರಿಸಿದ್ದಾರೆʼʼ: ಧ್ರುವ್ ರಾಠಿ ಗಂಭೀರ ಆರೋಪ

ಕಳೆದ 10-12 ವರ್ಷಗಳಿಂದ ಬೆಳೆಯುತ್ತಿದ್ದ ಪ್ರತಿರೋಧವು ಈಗ ಸಾರ್ವಜನಿಕ ಚಳುವಳಿಯಾಗಿ ರೂಪುಗೊಳ್ಳುತ್ತಿದೆ ಎಂದ ಅವರು, ನಮ್ಮ ತಂತ್ರವೇ ಬೇರೆ. ಅಲ್ಲಿ ಪೊಲೀಸ್ ವಲಯ ಇರಬೇಕೆಂದು ನಾವು ಬಯಸುತ್ತೇವೆ. ಪ್ರಧಾನಿ ಮೋದಿ ಅವರು ಜ್ಞಾನೇಶ್ ಕುಮಾರ್ ಅವರನ್ನು ರಕ್ಷಿಸುತ್ತಿದ್ದಾರೆ ಎಂಬುದು ದೇಶಕ್ಕೆ ತಿಳಿಯಬೇಕು ಎಂದು ನಾವು ಬಯಸುತ್ತೇವೆ ಎಂದರು.

ಸರ್ಕಾರದೊಳಗಿನ ಜನರು ವಿರೋಧ ಪಕ್ಷದೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಹೇಳಿದ ರಾಹುಲ್ ಗಾಂಧಿ, 200 ಸರ್ಕಾರಿ ಅಧಿಕಾರಿಗಳು ತಮ್ಮೊಂದಿಗೆ ಸಂಪರ್ಕದಲ್ಲಿದ್ದಾರೆ. ನಮ್ಮ ಬಳಿ ಪ್ರಧಾನಿ ನರೇಂದ್ರ ಮೋದಿ ಅವರ 'ಜನ್ಮಪತ್ರಿಕೆ' ಇದೆ. ಅವರಿಗೆ ಅದು ಗೊತ್ತು, ನನಗೂ ಅದು ಗೊತ್ತು ಎಂದು ಹೇಳಿದರು.

ಜ್ಞಾನೇಶ್ ಕುಮಾರ್ ಅವರಿಂದ ತಮಗೆ ಸಂದೇಶಗಳು ಬಂದಿದ್ದವು. ಅವರಿಗೆ ಸಾಕ್ಷಿದಾರರಾಗಿ ಬದಲಾಗುವಂತೆ ಕೇಳಿಕೊಂಡಿದ್ದೆ ಎಂದ ರಾಹುಲ್ ಗಾಂಧಿ ಆ ಸಂದೇಶಗಳಲ್ಲಿದ್ದ ವಿಷಯಗಳೇನು ಅಥವಾ ಜ್ಞಾನೇಶ್ ಕುಮಾರ್ ಯಾವ ರೀತಿಯ ಮಾಹಿತಿಯನ್ನು ನೀಡಿದರು ಎಂಬುದನ್ನು ವಿವರಿಸಲಿಲ್ಲ.

ಜಂತರ್ ಮಂತರ್ ತಲುಪಲು ಪ್ರಯತ್ನಿಸುತ್ತಿದ್ದ ಪ್ರತಿಭಟನಾಕಾರರ ಮೇಲೆ ವಿಧಿಸಲಾದ ನಿರ್ಬಂಧಗಳನ್ನು ಪ್ರಶ್ನಿಸಿದ ಅವರು, ಜನರ ಚಳುವಳಿಯನ್ನು ತಡೆಯಲಾಗುತ್ತಿದೆ. ದೆಹಲಿ ಈಗ ಒಂದು ಕೋಟೆಯಂತಾಗಿದೆ. ಯುವ ಪ್ರತಿಭಟನಾಕಾರರ ವಿರುದ್ಧ ಬಲಪ್ರಯೋಗ ಮಾಡುವಂತೆ ತಮ್ಮನ್ನು ಏಕೆ ಕೇಳಲಾಗುತ್ತಿದೆ ಎಂದು ಪೊಲೀಸ್ ಸಿಬ್ಬಂದಿ ಪ್ರಶ್ನಿಸುತ್ತಿದ್ದಾರೆ ಎಂದು ಹೇಳಿದರು.

ಶೇಕಡಾ 50 ರಷ್ಟು ಪೊಲೀಸ್ ಸಿಬ್ಬಂದಿ ಖಾಸಗಿಯಾಗಿ ಈ ಚಳುವಳಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ನೀವು ಮಾಡುತ್ತಿರುವುದು ಸರಿ ಎಂದು ಹೇಳುತ್ತಿದ್ದಾರೆ. ಇದನ್ನು ತಿಳಿಸಲು ನನಗೆ ಸಂತೋಷವಾಗುತ್ತಿದೆ. ನೀವು ಒಂದು ಕಡೆಯಿದ್ದರೆ ಮೋದಿ, ಶಾ, ದೋವಲ್ ಮತ್ತು ಜ್ಞಾನೇಶ್ ಕುಮಾರ್ ಇನ್ನೊಂದು ಕಡೆಯಿದ್ದಾರೆ. 'ಇಂಡಿಯಾ' ಮೈತ್ರಿಕೂಟದ ನಾಯಕರು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಿದ್ದಾರೆ. ಭಾರತದ ಮುಖ್ಯ ನ್ಯಾಯಮೂರ್ತಿಗಳು ಇದನ್ನು ಮಾಡುವಂತೆ ಸೂಚಿಸಿದ್ದಾರೆ ಎಂದರು.

Gold Price Today On October 12, 2026: ನವರಾತ್ರಿಯ ಎರಡನೇ ದಿನ ಆಭರಣಪ್ರಿಯರಿಗೆ ಗುಡ್‌ನ್ಯೂಸ್‌; ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ

ದೆಹಲಿಯಲ್ಲಿ ಸಿಜೆಪಿ ನೇತೃತ್ವದಲ್ಲೂ ಪ್ರತಿಭಟನೆ ನಡೆಯುತ್ತಿದ್ದು, ಈ ಹಿನ್ನೆಲೆಯಲ್ಲಿ ರಾಷ್ಟ್ರ ರಾಜ್ಯಧಾನಿಯಾದ್ಯಂತ ಭಾರಿ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿದೆ. ಈ ನಡುವೆ ಜಂತರ್ ಮಂತರ್ ತಲುಪಲು ಪ್ರಯತ್ನಿಸುತ್ತಿದ್ದ ಅನೇಕ ಪ್ರತಿಭಟನಾಕಾರರನ್ನು ವಿವಿಧೆಡೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.