ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಪಶ್ಚಿಮ ಬಂಗಾಳ ಚುನಾವಣೆ: ಮಮತಾ ಬ್ಯಾನರ್ಜಿಯ ಭದ್ರ ಕೋಟೆಯನ್ನು ಭೇದಿಸುವುದೇ ಬಿಜೆಪಿ? ಎಕ್ಸಿಟ್‌ ಪೋಲ್‌ ಹೇಳೋದೇನು?

ಪಶ್ಚಿಮ ಬಂಗಾಳದ ವಿಧಾನ ಸಭಾ ಚುನಾವಣೆಯಲ್ಲಿ ಈ ಬಾರಿ ಬಿಜೆಪಿ ಮುನ್ನಡೆ ಸಾಧಿಸುತ್ತದೆ ಎಂದು ನಾಲ್ಕು ಸಮೀಕ್ಷಾ ವರದಿಗಳು ತಿಳಿಸಿವೆ. ಹೀಗಾಗಿ ಈ ಬಾರಿ ಮಮತಾ ಬ್ಯಾನರ್ಜಿಯವರ ಭದ್ರ ಕೋಟೆಯನ್ನು ಬಿಜೆಪಿ ಭೇದಿಸುವುದೇ ಎನ್ನುವ ಕುತೂಹಲ ಎಲ್ಲರಲ್ಲೂ ಹೆಚ್ಚಾಗಿದೆ. ಇದರಿಂದ ಮತ ಎಣಿಕೆ ವೇಳೆ ಸಾಕಷ್ಟು ಪೈಪೋಟಿ ಕಂಡು ಬರುವ ನಿರೀಕ್ಷೆ ಇದೆ.

ಸಂಗ್ರಹ ಚಿತ್ರ

ಬೆಂಗಳೂರು: ಪಶ್ಚಿಮ ಬಂಗಾಳದ (west bengal) ವಿಧಾನ ಸಭಾ ಚುನಾವಣೆಗೆ (Assembly election) ಸಂಬಂಧಿಸಿ ನಾಲ್ಕು ಸಮೀಕ್ಷಾ ವರದಿಗಳು (West Bengal Exit Poll ) ಕುತೂಹಲಕಾರಿ ಫಲಿತಾಂಶವನ್ನು ಹೊರಹಾಕಿದೆ. ಇದರ ಪ್ರಕಾರ ಆಡಳಿತಾರೂಢ ತೃಣ ಮೂಲ ಕಾಂಗ್ರೆಸ್ (Trinamool Congress) ಮತ್ತು ಬಿಜೆಪಿ (BJP) ನಡುವೆ ತೀವ್ರ ಪೈಪೋಟಿ ಏರ್ಪಟ್ಟು ಬಿಜೆಪಿ ಅಧಿಕಾರಕ್ಕೆ ಮುನ್ಸೂಚನೆಯನ್ನು ಸಮೀಕ್ಷೆಗಳು ನೀಡಿವೆ. ಹೀಗಾಗಿ ಈ ಬಾರಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ (Mamata Banerjee) ಭದ್ರ ಕೋಟೆಯನ್ನು ಬಿಜೆಪಿ ಭೇದಿಸುವುದೇ ಎನ್ನುವ ಕುತೂಹಲ ಎಲ್ಲರಲ್ಲೂ ಹೆಚ್ಚಾಗಿದೆ.

ಪಶ್ಚಿಮ ಬಂಗಾಳದ ಆಕ್ಸಿಸ್ ಮೈ ಇಂಡಿಯಾ ಸಮೀಕ್ಷೆಯನ್ನು ಅಂಕಿ ಅಂಶಗಳ ಸಮೇತ ಗುರುವಾರ ಬಿಡುಗಡೆ ಮಾಡುವುದಾಗಿ ಹೇಳಿದೆ. ಇತರ ಆರು ಸಮೀಕ್ಷೆಗಳಲ್ಲಿ ನಾಲ್ಕು ಸಮೀಕ್ಷೆಗಳಲ್ಲಿ ರಾಜ್ಯದಲ್ಲಿ ಮೊದಲ ಬಾರಿಗೆ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದೆ.

ಪಶ್ಚಿಮ ಬಂಗಾಳದಲ್ಲಿ ಅರಳಲಿದೆ ಕಮಲ; ಕೇರಳಂನಲ್ಲಿ ಎಲ್‌ಡಿಎಫ್‌ನಿಂದ ಯುಡಿಎಫ್‌ ತೆಕ್ಕೆಗೆ ಅಧಿಕಾರ: ಅಸ್ಸಾಂ, ತಮಿಳುನಾಡು, ಪುದುಚೇರಿಯಲ್ಲಿ ಯಾರಿಗೆ ಗದ್ದುಗೆ?

ಒಟ್ಟು 294 ಸ್ಥಾನಗಳನ್ನು ಹೊಂದಿರುವ ಪಶ್ಚಿಮ ಬಂಗಾಳದ ವಿಧಾನ ಸಭೆಯಲ್ಲಿ ಬಹುಮತ ಪಡೆಯಲು 148 ಕ್ಷೇತ್ರಗಳನ್ನು ಗೆಲ್ಲುವುದು ಅತ್ಯಗತ್ಯವಾಗಿದೆ. ಪ್ರಜಾ ಪೋಲ್‌ ಅಂಕಿ ಅಂಶಗಳ ಪ್ರಕಾರ ಬಿಜೆಪಿ 178-208 ಸ್ಥಾನಗಳನ್ನು ಗೆಲ್ಲಲಿದ್ದು ತೃಣಮೂಲ ಕಾಂಗ್ರೆಸ್ 85-110 ಸ್ಥಾನ ಗೆಲ್ಲುವ ಸಾಧ್ಯತೆ ಇದೆ ಎನ್ನಲಾಗಿದೆ.

ಪಿ-ಮಾರ್ಕ್‌ನ ವರದಿ ಪ್ರಕಾರ ಬಿಜೆಪಿ 150-175 ಕ್ಷೇತ್ರಗಳನ್ನು ಮತ್ತು ತೃಣಮೂಲ 118-138 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆ ಇದೆ ಎಂದು ತಿಳಿಸಿದೆ.

ಮ್ಯಾಟ್ರಿಜ್ ಸಮೀಕ್ಷೆ ಪ್ರಕಾರ ಬಿಜೆಪಿ 146-161 ಸ್ಥಾನಗಳನ್ನು ಮತ್ತು ಪೋಲ್ ಡೈರಿ ಸಮೀಕ್ಷೆ ಪ್ರಕಾರ 142-17 ಸ್ಥಾನಗಳನ್ನು ಗಳಿಸಲಿದೆ. ಅದೇ ರೀತಿ ಟಿಎಂಸಿ ಕ್ರಮವಾಗಿ 125-140 ಮತ್ತು99-127 ಸ್ಥಾನಗಳನ್ನು ಗೆಲ್ಲಲಿದೆ ಎಂದು ಹೇಳಿದೆ.

ಜನ್ಮತ್ ಪೋಲ್ಸ್ ವರದಿಯಲ್ಲಿ ತೃಣಮೂಲ ಕಾಂಗ್ರೆಸ್ ಸತತ ಮೂರನೇ ಬಾರಿಗೆ ಭಾರಿ ಬಹುಮತವನ್ನು ಪಡೆಯುತ್ತದೆ. ಮಮತಾ ಬ್ಯಾನರ್ಜಿ ನೇತೃತ್ವದ ಪಕ್ಷಕ್ಕೆ 195 ರಿಂದ 205 ಸ್ಥಾನಗಳು ಮತ್ತು ಬಿಜೆಪಿಗೆ 80-90 ಸ್ಥಾನಗಳು ಸಿಗುತ್ತವೆ ಎಂದು ತಿಳಿಸಿದೆ.

ಪೀಪಲ್ಸ್ ಪಲ್ಸ್ ಕೂಡ ತೃಣಮೂಲ ಕಾಂಗ್ರೆಸ್ 177-187 ಕ್ಷೇತ್ರಗಳನ್ನು ಗೆಲ್ಲುವುದಾಗಿ ಹೇಳಿದ್ದು, ಬಿಜೆಪಿ 85 ರಿಂದ 110ರ ನಡುವೆ ಸ್ಥಾನ ಪಡೆಯಬಹುದು ಎಂದು ತಿಳಿಸಿದೆ.

ಎಲ್ಲಾ ಸಮೀಕ್ಷೆ ವರದಿಗಳು ಕೂಡ ಕಾಂಗ್ರೆಸ್ ಮತ್ತು ಎಡ ಪಕ್ಷಗಳು ಈ ಬಾರಿ ಅತ್ಯಂತ ಕಳಪೆ ಪ್ರದರ್ಶನ ತೋರಲು ಸಜ್ಜಾಗಿವೆ. ಕಾಂಗ್ರೆಸ್‌ 3- 5 ಮತ್ತು ಎಡಪಕ್ಷಗಳು 2-3 ಸ್ಥಾನಗಳನ್ನು ಗೆಲ್ಲುವುದಾಗಿ ತಿಳಿಸಿವೆ.

ದಾಖಲೆ ಬರೆಯುವುದೇ ಬಿಜೆಪಿ?

ಪಶ್ಚಿಮ ಬಂಗಾಳದ ವಿಧಾನ ಸಭಾ ಚುನಾವಣಾ ಫಲಿತಾಂಶದಲ್ಲಿ ಒಂದು ವೇಳೆ ಸಮೀಕ್ಷೆ ವರದಿಗಳು ಸರಿಯಾಗಿದ್ದರೆ ಬಿಜೆಪಿ ಇಲ್ಲಿ ದಾಖಲೆ ಬರೆಯಲಿದೆ. ಕಳೆದ ಒಂದು ದಶಕದ ಅವಧಿಯಲ್ಲಿ ಪಕ್ಷವು ಕೇವಲ ಮೂರು ಸ್ಥಾನಗಳನ್ನು ಗೆದ್ದಿತ್ತು. ಆದರೆ ಈ ಬಾರಿ ಬಹುಮತ ಪಡೆಯುವ ನಿರೀಕ್ಷೆಯನ್ನು ಸಮೀಕ್ಷೆ ವರದಿಗಳು ತಿಳಿಸಿವೆ.

ಪಶ್ಚಿಮ ಬಂಗಾಳದಲ್ಲಿ ಎರಡನೇ ಹಂತದ ಮತದಾನ ವೇಳೆ ಘರ್ಷಣೆ; ಮಮತಾ ಬ್ಯಾನರ್ಜಿ ವಿರುದ್ಧ ಸ್ಪರ್ಧಿಸಿರುವ ಬಿಜೆಪಿ ಅಭ್ಯರ್ಥಿ ಸುವೇಂದು ಅಧಿಕಾರಿ ಮೇಲೆ ಹಲ್ಲೆ

2021ರ ವಿಧಾನಸಭಾ ಚುನಾವಣೆಯಲ್ಲಿ ಟಿಎಂಸಿ 277 ಮತ್ತು ಬಿಜೆಪಿ 77 ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಇದಾದ ಮೂರು ವರ್ಷಗಳ ಅನಂತರ ನಡೆದ ಲೋಕಸಭಾ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ 29 ಸ್ಥಾನಗಳನ್ನು ಗೆದ್ದರೆ ಬಿಜೆಪಿ ಕೇವಲ 12 ಸ್ಥಾನಗಳನ್ನು ಗಳಿಸಿತ್ತು. ಆದರೆ ಈ ಬಾರಿ ವಿಶೇಷ ಮತದಾರರ ಪಟ್ಟಿಯ ತೀವ್ರ ಪರಿಷ್ಕರಣೆಯ ಕಾರಣದಿಂದ ಚುನಾವಣೆಯಲ್ಲಿ 90 ಲಕ್ಷಕ್ಕೂ ಹೆಚ್ಚು ಮತದಾರರನ್ನುಹೊರಗಿಟ್ಟಿರುವುದು ಟಿಎಂಸಿ ಫಲಿತಾಂಶದ ಮೇಲೆ ಪರಿಣಾಮ ಬೀರುವ ಆತಂಕವನ್ನು ಉಂಟು ಮಾಡಿದೆ.

ವಿದ್ಯಾ ಇರ್ವತ್ತೂರು

View all posts by this author