ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ವಿಶ್ವದಲ್ಲೇ ಅತೀ ಹೆಚ್ಚು ಮಿಲಿಟರಿ ಖರ್ಚು ಮಾಡುವ ದೇಶ ಯಾವುದು ಗೊತ್ತೇ? ಭಾರತ ಯಾವ ಸ್ಥಾನದಲ್ಲಿದೆ?

ವಿಶ್ವದಲ್ಲೇ ಮಿಲಿಟರಿಗಾಗಿ ಅತೀ ಹೆಚ್ಚು ಖರ್ಚು ಮಾಡುವ ದೇಶಗಳ ಪಟ್ಟಿಯಲ್ಲಿ ಭಾರತ ಐದನೇ ಸ್ಥಾನದಲ್ಲಿದೆ. 2025ರಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನತೆ ಉಂಟಾದ ಮೇಲೆ ಭಾರತವು ಆದಾಯದ ಅತೀ ಹೆಚ್ಚಿನ ಭಾಗವನ್ನು ಮಿಲಿಟರಿಗಾಗಿ ಖರ್ಚು ಮಾಡುತ್ತಿದೆ. ವಿಶ್ವದಲ್ಲೇ ಅತೀ ಹೆಚ್ಚು ಮಿಲಿಟರಿಗಾಗಿ ಖರ್ಚು ಮಾಡುವ ದೇಶಗಳು ಯಾವುದು ಎನ್ನುವ ಕುರಿತು ಸ್ಟಾಕ್‌ಹೋಮ್ ಅಂತಾರಾಷ್ಟ್ರೀಯ ಶಾಂತಿ ಸಂಶೋಧನಾ ಸಂಸ್ಥೆ (SIPRI) ನೀಡಿರುವ ಮಾಹಿತಿ ಇಲ್ಲಿದೆ.

ಮಿಲಿಟರಿ ಖರ್ಚಿನಲ್ಲಿ ಭಾರತ ಯಾವ ಸ್ಥಾನದಲ್ಲಿದೆ?

ಸಂಗ್ರಹ ಚಿತ್ರ -

ನವದೆಹಲಿ: ಭಾರತ ಮತ್ತು ಪಾಕಿಸ್ತಾನದ ನಡುವೆ 2025ರ ಮೇ ತಿಂಗಳಲ್ಲಿ ಉಂಟಾದ ಉದ್ವಿಗ್ನತೆಯ ಬಳಿಕ ಭಾರತ ತನ್ನ ಆದಾಯದ ಅತೀ ಹೆಚ್ಚಿನ ಭಾಗವನ್ನು ದೇಶದ ಸಂರಕ್ಷಣೆಗಾಗಿ (global military spenders) ವ್ಯಯಿಸುತ್ತಿದೆ. ಸ್ಟಾಕ್‌ಹೋಮ್ ಅಂತಾರಾಷ್ಟ್ರೀಯ ಶಾಂತಿ ಸಂಶೋಧನಾ ಸಂಸ್ಥೆ (Stockholm International Peace Research Institute) ಸೋಮವಾರ ವಾರ್ಷಿಕ ಮೌಲ್ಯಮಾಪನ ವರದಿಯನ್ನು (SIPRI Report) ಬಿಡುಗಡೆ ಮಾಡಿದ್ದು, ಇದರ ಪ್ರಕಾರ ಭಾರತ ವಾರ್ಷಿಕವಾಗಿ ತನ್ನ ಮಿಲಿಟರಿಗಾಗಿ 92.1 ಬಿಲಿಯನ್ ಯುಎಸ್ ಡಾಲರ್ ಅಂದರೆ ಸುಮಾರು 8,80,152 ಲಕ್ಷ ಕೋಟಿ ರೂ. ಖರ್ಚು ಮಾಡಿದ್ದು, ವಿಶ್ವದ ಐದನೇ ಅತಿದೊಡ್ಡ ಮಿಲಿಟರಿ ಖರ್ಚುದಾರನಾಗಿ ಗುರುತಿಸಿಕೊಂಡಿದೆ ಎಂದು ಹೇಳಿದೆ.

ಮಿಲಿಟರಿಗಾಗಿ ಭಾರತವು 2025 ರಲ್ಲಿ 92.1 ಬಿಲಿಯನ್ ಯುಎಸ್ ಡಾಲರ್ ಖರ್ಚು ಮಾಡಿದೆ ಎಂದು ಸ್ಟಾಕ್‌ಹೋಮ್ ಅಂತಾರಾಷ್ಟ್ರೀಯ ಶಾಂತಿ ಸಂಶೋಧನಾ ಸಂಸ್ಥೆ ತನ್ನ ವಾರ್ಷಿಕ ಮೌಲ್ಯಮಾಪನ ವರದಿಯಲ್ಲಿ ತಿಳಿಸಿದೆ. 2026ರ ಜನವರಿ ವೇಳೆಗೆ ಭಾರತವು ಸರಿಸುಮಾರು 190 ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿದ್ದು, ಪಾಕಿಸ್ತಾನದ ಬಳಿ 170 ಪರಮಾಣು ಶಸ್ತ್ರಾಸ್ತ್ರಗಳಿವೆ ಎಂದು ತಿಳಿಸಿದೆ.

ಮೋತಿಲಾಲ್ ಓಸ್ವಾಲ್ ಮ್ಯೂಚುಯಲ್ ಫಂಡ್ ದಿಂದ ಬಿಎಸ್ಇ ಸ್ವಚ್ಛ ಪರಿಸರ ಸೂಚ್ಯಂಕ ನಿಧಿಯನ್ನು ಪ್ರಾರಂಭ ಘೋಷಣೆ

ಪರಮಾಣು ಶಸ್ತ್ರಾಸ್ತ್ರಗಳನ್ನು ರಾಷ್ಟ್ರೀಯ ಶಕ್ತಿಯ ಸಾಧನಗಳಾಗಿ ಪರಿಗಣಿಸಲಾಗುತ್ತದೆ. ಪರಮಾಣು ಶಸ್ತ್ರಾಸ್ತ್ರಗಳ ಸಂಖ್ಯೆ ಮತ್ತು ಅದರ ಬಳಕೆಯನ್ನು ಕಡಿಮೆ ಮಾಡಲು ದಶಕಗಳಿಂದ ಪ್ರಯತ್ನ ನಡೆಯುತ್ತಿದ್ದರೂ ಕೂಡ ಇದನ್ನು ಹೊಂದಿರುವುದು ದೇಶದ ಸುರಕ್ಷತೆಯ ಭಾಗ ಎಂದೇ ಪರಿಗಣಿಸಲ್ಪಟ್ಟಿದೆ.

2025ರಲ್ಲಿ ಉಂಟಾದ ಉದ್ವಿಗ್ನತೆಯ ಬಳಿಕ ಭಾರತವು ತನ್ನ ಪರಮಾಣು ಶಸ್ತ್ರಾಗಾರವನ್ನು ಸ್ವಲ್ಪ ವಿಸ್ತರಿಸಿದೆ. ಅದು ಚೀನಾದ ಗುರಿಗಳನ್ನು ತಲುಪುವ ಸಾಮರ್ಥ್ಯವಿರುವ ದೀರ್ಘ-ಶ್ರೇಣಿಯ ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿಪಡಿಸುವುದರ ಮೇಲೆ ಗಮನ ಹರಿಸುತ್ತಿದೆ. ಪಾಕಿಸ್ತಾನವು ಕೂಡ ಪರಮಾಣು ಶಸ್ತ್ರಾಸ್ತ್ರವನ್ನು ಹೆಚ್ಚಿಸುವುದನ್ನು ಮುಂದುವರಿಸಿದೆ.

1966ರಲ್ಲಿ ಸ್ಥಾಪನೆಯಾದ ಸ್ಟಾಕ್‌ಹೋಮ್ ಅಂತಾರಾಷ್ಟ್ರೀಯ ಶಾಂತಿ ಸಂಶೋಧನಾ ಸಂಸ್ಥೆಯ 60ನೇ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಬಿಡುಗಡೆಯಾದ ವಾರ್ಷಿಕ ವರದಿಯಲ್ಲಿ 2026ರ ಆರಂಭದಲ್ಲಿ ಯುಎಸ್, ರಷ್ಯಾ, ಯುಕೆ, ಫ್ರಾನ್ಸ್, ಚೀನಾ, ಭಾರತ, ಪಾಕಿಸ್ತಾನ, ಉತ್ತರ ಕೊರಿಯಾ ಮತ್ತು ಇಸ್ರೇಲ್ ಒಟ್ಟಾಗಿ ಸುಮಾರು 12,187 ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿವೆ. ಅವುಗಳಲ್ಲಿ 9,745 ಮಿಲಿಟರಿ ಬಳಕೆಗಾಗಿ ಇರಿಸಲಾಗಿದ್ದು, ಉಳಿದವು ಇತರ ಕಾರ್ಯಾಚರಣೆಗಳಿಗೆ ಎಂದು ಹೇಳಿದೆ.

ಮಿಲಿಟರಿ ಖರ್ಚಿನಲ್ಲಿ ಅಮೆರಿಕವು ವಿಶ್ವದ ಅತಿದೊಡ್ಡ ಖರ್ಚುದಾರನಾಗಿದೆ. 2025ರಲ್ಲಿ ಅದರ ಖರ್ಚು 954 ಶತಕೋಟಿ ಡಾಲರ್ ಆಗಿದೆ. 2024 ಕ್ಕೆ ಹೋಲಿಸಿದರೆಅದರ ಖರ್ಚು ಶೇಕಡಾ 7.5ರಷ್ಟು ಕಡಿಮೆಯಾಗಿದ್ದರೂ ಒಟ್ಟು ಜಾಗತಿಕ ಖರ್ಚಿನ ಶೇಕಡಾ 33 ರಷ್ಟಿದೆ.

ಚೀನಾ ಎರಡನೇ ಅತಿದೊಡ್ಡ ಮಿಲಿಟರಿ ಖರ್ಚುದಾರನಾಗಿದ್ದು, ಅದರ ಖರ್ಚು 336 ಶತಕೋಟಿ ಡಾಲರ್, ಮೂರನೇ ಸ್ಥಾನದಲ್ಲಿರುವ ರಷ್ಯಾದ ಮಿಲಿಟರಿ ಖರ್ಚು 190 ಶತಕೋಟಿ ಡಾಲರ್ ಆಗಿದೆ.

ಎಲ್‌ಪಿಜಿ ದರ ಏರಿಕೆ ಸಮರ್ಥಿಸಿಕೊಂಡ ಕೇಂದ್ರ: ಪಾಕಿಸ್ತಾನ, ಬಾಂಗ್ಲಾದೇಶಕ್ಕಿಂತ ಭಾರತದಲ್ಲೇ ಬೆಲೆ ಕಡಿಮೆ ಎಂದ ಸರ್ಕಾರ

ಜರ್ಮನಿ ನಾಲ್ಕನೇ ಅತಿದೊಡ್ಡ ಮಿಲಿಟರಿ ಖರ್ಚುದಾರನಾಗಿದ್ದು, ಭಾರತ ಐದನೇ ಸ್ಥಾನದಲ್ಲಿದೆ. ಭಾರತದ ಮಿಲಿಟರಿ ಖರ್ಚು ಸಾಲಿಗಿಂತ ಶೇ 8.9 ರಷ್ಟು ಹೆಚ್ಚಾಗಿದೆ. ವಿಶ್ವದ ಒಟ್ಟು 15 ಅತಿ ದೊಡ್ಡ ಪ್ರಮಾಣದಲ್ಲಿ ಮಿಲಿಟರಿಗಾಗಿ ಖರ್ಚು ಮಾಡುವ ದೇಶಗಳು 2,304 ಶತಕೋಟಿ ಡಾಲರ್ ಅನ್ನು ಇದಕ್ಕಾಗಿ ವ್ಯಯಿಸುತ್ತಿದೆ. ಈ ಎಲ್ಲಾ ರಾಷ್ಟ್ರಗಳಲ್ಲಿ 2025ರ ಗಾಜಾ ಮತ್ತು ಉಕ್ರೇನ್ ಯುದ್ಧಗಳಲ್ಲಿ ನೇರ ಅಥವಾ ಪರೋಕ್ಷವಾಗಿ ಭಾಗಿಯಾಗಿದ್ದಾರೆ. ಜಾಗತಿಕ ಮಿಲಿಟರಿ ವೆಚ್ಚವು 2025 ರಲ್ಲಿ 2.9 ಟ್ರಿಲಿಯನ್ ಏರಿಕೆಯಾಗಿದೆ. ಇದು ವಿಶ್ವದ ಜಿಡಿಪಿಯ ಶೇಕಡಾ 2.5ರಷ್ಟಾಗಿದೆ ಎಂದು ವರದಿ ತಿಳಿಸಿದೆ.