ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Whirlpool: ಕೇವಲ 10 ನಿಮಿಷಗಳಲ್ಲಿ ಫ್ರೀಜರ್ ಅನ್ನು ಫ್ರಿಜ್‌ ಆಗಿಸುವ ವರ್ಲ್‌ಪೂಲ್ ರೆಫ್ರಿಜರೇಟರ್

ವಿಶ್ವದ ಪ್ರಸಿದ್ಧ ವರ್ಲ್‌ಪೂಲ್ ಕಾರ್ಪೊರೇಷನ್‌ನ ಅಧೀನ ಸಂಸ್ಥೆಯಾಗಿರುವ ವರ್ಲ್‌ಪೂಲ್ ಆಫ್ ಇಂಡಿಯಾ ಭಾರತದ ಅತ್ಯಂತ ವೇಗದ ಕನ್ವರ್ಟೆಬಲ್ ರೆಫ್ರಿಜಿರೇಟರ್ ಅನ್ನು ಬಿಡುಗಡೆ ಮಾಡಿದೆ. ಈ ಫ್ರಿಜ್‌ ಕೇವಲ 10 ನಿಮಿಷಗಳಲ್ಲಿ ಫ್ರೀಜರ್ ಅನ್ನು ಫ್ರಿಜ್ ಆಗಿ ಪರಿವರ್ತಿಸಲಿದೆ.

Whirlpool

ಬೆಂಗಳೂರು: ಗೃಹೋಪಯೋಗಿ ಸಾಧನಗಳ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಮತ್ತು ವಿಶ್ವದ ಪ್ರಸಿದ್ಧ ವರ್ಲ್‌ಪೂಲ್ ಕಾರ್ಪೊರೇಷನ್‌ನ ಅಧೀನ ಸಂಸ್ಥೆಯಾಗಿರುವ ವರ್ಲ್‌ಪೂಲ್ ಆಫ್ ಇಂಡಿಯಾ ಭಾರತದ ಅತ್ಯಂತ ವೇಗದ ಕನ್ವರ್ಟೆಬಲ್ ರೆಫ್ರಿಜಿರೇಟರ್ ಅನ್ನು ಬಿಡುಗಡೆ ಮಾಡಿದೆ (Whirlpool Launches New Refrigerator). ಈ ಫ್ರಿಡ್ಜ್‌ ಕೇವಲ 10 ನಿಮಿಷಗಳಲ್ಲಿ ಫ್ರೀಜರ್ ಅನ್ನು ಫ್ರಿಡ್ಜ್‌ ಆಗಿ ಪರಿವರ್ತಿಸಲಿದೆ. ಭಾರತದ ಅತಿ ವೇಗದ ಕನ್ವರ್ಟಬಲ್ ಫ್ರಿಜ್ ಶ್ರೇಣಿ ಈಗ ಸಂಪೂರ್ಣ ಆಹಾರ ಸಂರಕ್ಷಣೆಯೊಂದಿಗೆ ನಿಮ್ಮ ಮನೆಯ ಅಗತ್ಯಗಳಿಗೆ ಅನುಗುಣವಾಗಿ ರೂಪುಗೊಂಡಿದೆ. ಇದರಲ್ಲಿ ಎರಡು ಪಟ್ಟು ಹೆಚ್ಚು ವಿಟಮಿನ್‌ ಶೇಖರಣಾ ಸಾಮರ್ಥ್ಯವಿದೆ ಮತ್ತು ಮೈಕ್ರೋಬ್ಲಾಕ್ ತಂತ್ರಜ್ಞಾನವನ್ನು ಒಳಗೊಂಡಿದ್ದು, 99% ಬ್ಯಾಕ್ಟೀರಿಯಾ ಬೆಳವಣಿಗೆಯನ್ನು ತಡೆಯುತ್ತದೆ. ಆಹಾರವನ್ನು ಹೆಚ್ಚು ಕಾಲ ತಾಜಾ ಮತ್ತು ಸುರಕ್ಷಿತವಾಗಿಡಲು ಸಹಾಯ ಮಾಡುತ್ತದೆ. ಬಳಕೆದಾರರು ತಮ್ಮ ಜೀವನಶೈಲಿಗೆ ಅನುಗುಣವಾಗಿ ಫ್ರಿಜ್ ಸೆಟ್ಟಿಂಗ್‌ಗಳನ್ನು ಕಸ್ಟಮೈಸ್ ಮಾಡಿಕೊಳ್ಳುವ ಆಪ್ಚನ್ ಕೂಡ ಇರಲಿದೆ.

ವೈಶಿಷ್ಟ್ಯ

  • ಫ್ರೀಜರ್‌ನಿಂದ ಫ್ರಿಡ್ಜ್‌ಗೆ ಕೇವಲ 10 ನಿಮಿಷಗಳಲ್ಲಿ ಪರಿವರ್ತನೆಗೊಳ್ಳುತ್ತದೆ.
  • 10-ಇನ್-1 ಕನ್ವರ್ಟಿಬಲ್ ಮೋಡ್‌ಗಳು; ಪ್ರತಿ ಅವಶ್ಯಕತೆಗೆ ಸೂಕ್ತವಾದ ಕೂಲಿಂಗ್ ವ್ಯವಸ್ಥೆ.
  • 6th ಸೆನ್ಸ್ ತಂತ್ರಜ್ಞಾನ: ವೈಶಿಷ್ಟ್ಯಪೂರ್ಣ 6th ಸೆನ್ಸ್ ತಂತ್ರಜ್ಞಾನ ಇದೆ.
  • ಪ್ರೀಮಿಯಂ ಎಸ್ಟೆಟಿಕ್ಸ್: ಅಡುಗೆಮನೆಗೆ ಸೂಕ್ತವಾದ ವಿನ್ಯಾಸ ಹೊಂದಿದೆ.
  • ಅತ್ಯುತ್ತಮ ಅನುಕೂಲತೆ: ವಿಶಾಲವಾದ ವಿನ್ಯಾಸ, ಸ್ಮಾರ್ಟ್ ಶೇಖರಣಾ ವ್ಯವಸ್ಥೆ ಇದೆ.

ಭಾರತದ ಅತ್ಯಂತ ವೇಗದ ಕನ್ವರ್ಟೆಬಲ್ ಶ್ರೇಣಿಯ ರೆಫ್ರಿಜರೇಟರ್‌ಗಳ ಬಗ್ಗೆ ಮಾತಾಡಿದ ವರ್ಲ್‌ಪೂಲ್ ಆಫ್ ಇಂಡಿಯಾದ ಮಾರ್ಕೆಟಿಂಗ್ ಉಪಾಧ್ಯಕ್ಷ ನಕುಲ್ ತಿವಾರಿ ''ಕೇವಲ 10 ನಿಮಿಷಗಳಲ್ಲಿ ಫ್ರೀಜರ್‌ನಿಂದ ಫ್ರಿಡ್ಜ್‌ಗೆ ತಕ್ಷಣ ಪರಿವರ್ತನೆಯಾಗುವ ಸಾಮರ್ಥ್ಯದೊಂದಿಗೆ, ಇಂಟೆಲಿಫ್ರೆಶ್ ಪ್ರೋ ಶ್ರೇಣಿಯ ಕನ್ವರ್ಟಬಲ್ ಟಾಪ್ ಮೌಂಟ್ (ಫ್ರಾಸ್ಟ್-ಫ್ರೀ) ಫ್ರಿಡ್ಜ್‌ ಪರಿಚಯಿಸುವುದಕ್ಕೆ ನಾವು ಉತ್ಸುಕರಾಗಿದ್ದೇವೆ. ಭಾರತದಲ್ಲಿನ ಅತಿವೇಗದ ಕನ್ವರ್ಟಬಲ್ ಫ್ರಿಡ್ಜ್ ಈಗ ಇನ್ನೂ ಹೆಚ್ಚು ಸೌಲಭ್ಯ ಮತ್ತು ಉಪಯುಕ್ತತೆಯನ್ನು ಒದಗಿಸಲಿದೆʼʼ ಎಂದಿದ್ದಾರೆ.

ಇದನ್ನು ಓದಿ:Viral News: ಇಂಟರ್‌ವ್ಯೂಗೆ 25 ನಿಮಿಷ ಬೇಗ ಬಂದು ಕೆಲಸ ಕಳೆದುಕೊಂಡ ಅಭ್ಯರ್ಥಿ; ಮಾಲೀಕ ನೀಡಿದ ಕಾರಣವೇನು ನೋಡಿ

ವರ್ಲ್‌ಪೂಲ್ ಫ್ರಿಡ್ಜ್‌ಗಳು 235 ಲೀಟರ್‌ನಿಂದ 327 ಲೀಟರ್‌ವರೆಗೆ ವಿಭಿನ್ನ ಸಾಮರ್ಥ್ಯಗಳಲ್ಲಿ ಲಭ್ಯವಿದ್ದು, 2 ಸ್ಟಾರ್‌ಗಳಿಂದ 3 ಸ್ಟಾರ್‌ಗಳವರೆಗೆ ರೇಟಿಂಗ್ ಹೊಂದಿದೆ. ಗೃಹೋಪಯೋಗಿ ಮಾರುಕಟ್ಟೆ ಮತ್ತು ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಖರೀದಿಗೆ ಲಭ್ಯ. 35,000 ರೂ.ಯಿಂದ ಪ್ರಾರಂಭವಾಗುವ ಈ ಫ್ರಿಡ್ಜ್‌ಗಳನ್ನು ವರ್ಲ್‌ಪೂಲ್‌ನ ಅಧಿಕೃತ ವೆಬ್‌ಸೈಟ್ ಮತ್ತು ಭಾರತಾದ್ಯಂತದ ಪ್ರಮುಖ ಆನ್‌ಲೈನ್ ರಿಟೇಲರ್‌ಗಳಲ್ಲಿ ಖರೀದಿಸಬಹುದು.