ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Ajit Pawar: ಅಜಿತ್‌ ಪವಾರ್‌ ರಾಜಕೀಯ ಬೆನ್ನೆಲುಬು ಈಕೆ; ಪತ್ನಿ ಸುನೇತ್ರಾ ಪವಾರ್‌ ಬಗ್ಗೆ ನಿಮಗೆಷ್ಟು ಗೊತ್ತು?

ಮಹಾರಾಷ್ಟ್ರದ ಬಾರಾಮತಿ ಏರ್ಪೋರ್ಟ್ ಬಳಿ ವಿಮಾನಾಪಘಾತದಲ್ಲಿ ದುರ್ಮರಣ ಅಪ್ಪಿದ ಉಪಮುಖ್ಯಮಂತ್ರಿ ಹಾಗೂ ಎನ್​ಸಿಪಿ ಮುಖ್ಯಸ್ಥ ಅಜಿತ್ ಪವಾರ್ ತುಂಬು ಕುಟುಂಬವನ್ನು ತ್ಯಜಿಸಿದ್ದು, ಪವಾರ್ ರಾಜಕೀಯ ಜೀವನಕ್ಕೆ ಒಂದು ರೀತಿಯಲ್ಲಿ ಅವರ ಕೂಡು ಕುಟುಂಬ ಶಕ್ತಿಯಾಗಿದ್ದರು. ಪವಾರ್ ಪತ್ನಿ ಸುನೇತ್ರಾ ಪವಾರ್, ಹಿರಿಯ ಪುತ್ರ ಪಾರ್ಥ್ ಪವಾರ್ ಹಾಗೂ ಕಿರಿಯ ಪುತ್ರ ಜಯ್ ಪವಾರ್ ಇದ್ದಾರೆ. ಕುಟುಂಬದೊಂದಿಗೆ ಅವರು ಸಾರ್ವಜನಿಕ ಕಾರ್ಯಕ್ರಮಗಳು, ರ್ಯಾಲಿ ಹಾಗೂ ಸಭೆಗಳಲ್ಲಿ ನಿಯಮಿತವಾಗಿ ಕಾಣಿಸಿಕೊಳ್ಳುತ್ತಿದ್ದರು.

ಪವಾರ್ ದಂಪತಿ

ಮುಂಬೈ: ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಹಿರಿಯ ನಾಯಕ ಅಜಿತ್ ಪವಾರ್ ಅವರು ಪ್ರಯಾಣಿಸುತ್ತಿದ್ದ ವಿಮಾನವು ಬಾರಾಮತಿಗೆ ತೆರಳುವ ವೇಳೆ ತಾಂತ್ರಿಕ ದೋಷದಿಂದ ಅಪಘಾತಕ್ಕೀಡಾಗಿದ್ದು, ಹಾರಾಟದ ಮಧ್ಯೆ ನಿಯಂತ್ರಣ ತಪ್ಪಿದ ವಿಮಾನವು ಪತನಗೊಂಡು ತಕ್ಷಣವೇ ಬೆಂಕಿಗೆ ಆಹುತಿಯಾಗಿದೆ. ಈ ದುರ್ಘಟನೆಯಲ್ಲಿ ಮಹಾರಾಷ್ಟ್ರದ ರಾಜಕೀಯ ಚಾಣಕ್ಯ ನಿಧನರಾಗಿದ್ದು, ಈ ಭೀಕರ ದುರಂತದಲ್ಲಿ ಅಜಿತ್ ಪವಾರ್ ಸೇರಿದಂತೆ ವಿಮಾನದಲ್ಲಿದ್ದ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಅಜಿತ್ ಪವಾರ್ ಅವರ ಕುಟುಂಬ ಪರಿಚಯ

ಅಜಿತ್ ಪವಾರ್ ಅವರ ಕುಟುಂಬದಲ್ಲಿ ಪತ್ನಿ ಸುನೇತ್ರಾ ಪವಾರ್, ಹಿರಿಯ ಪುತ್ರ ಪಾರ್ಥ್ ಪವಾರ್ ಹಾಗೂ ಕಿರಿಯ ಪುತ್ರ ಜಯ್ ಪವಾರ್ ಇದ್ದಾರೆ. ಕುಟುಂಬದೊಂದಿಗೆ ಅವರು ಸಾರ್ವಜನಿಕ ಕಾರ್ಯಕ್ರಮಗಳು, ರ್ಯಾಲಿ ಹಾಗೂ ಸಭೆಗಳಲ್ಲಿ ನಿಯಮಿತವಾಗಿ ಕಾಣಿಸಿಕೊಳ್ಳುತ್ತಿದ್ದರು.

ಪತ್ನಿ ಸುನೇತ್ರಾ ಪವಾರ್ ಚುನಾವಣಾ ಪ್ರಚಾರದಲ್ಲಿ ಅವರ ಜೊತೆ ಸಕ್ರಿಯವಾಗಿ ಭಾಗವಹಿಸುತ್ತಿದ್ದರು. ರಾಜಕೀಯವಾಗಿ ಪರಿಚಿತ ಮುಖವಾಗಿರುವ ಇವರು ಮಹಾರಾಷ್ಟ್ರದ ಮಾಜಿ ಸಚಿವ ಪದಮ್‌ಸಿಂಹ ಪಾಟೀಲ್ ಅವರ ಸಹೋದರಿ. 2010ರಲ್ಲಿ ‘ಭಾರತೀಯ ಪರಿಸರ ವೇದಿಕೆ’ ಎಂಬ ಎನ್‌ಜಿಒ ಸ್ಥಾಪಿಸಿ ಸಾವಯವ ಕೃಷಿ, ಮಣ್ಣಿನ ಸಂರಕ್ಷಣೆ, ವರ್ಮಿ ಕಾಂಪೋಸ್ಟ್, ಗ್ರಾಮೀಣ ಅಭಿವೃದ್ಧಿ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ‘ವಿದ್ಯಾ ಪ್ರತಿಷ್ಠಾನ’ದ ಟ್ರಸ್ಟಿಯಾಗಿರುವ ಅವರು, 2011ರಿಂದ ವಿಶ್ವ ಉದ್ಯಮಶೀಲತೆ ವೇದಿಕೆಯ ಥಿಂಕ್ ಟ್ಯಾಂಕ್ ಸದಸ್ಯೆಯಾಗಿ ಸೇವೆ ಸಲ್ಲಿಸಿದ್ದಾರೆ. ನಿರ್ಮಲ ಗ್ರಾಮ ಪುರಸ್ಕಾರ, ಸೈಬರ್ ಗ್ರಾಮ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳು ಅವರಿಗೆ ಲಭಿಸಿದ್ದವು.

ಹಿರಿಯ ಪುತ್ರ ಪಾರ್ಥ್ ಪವಾರ್ ಕೂಡ ರಾಜಕೀಯಕ್ಕೆ ಪ್ರವೇಶಿಸಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದರೂ ಸೋಲನುಭವಿಸಿದ್ದರು. ಆದರೂ ತಂದೆಗೆ ರಾಜಕೀಯವಾಗಿ ಬೆಂಬಲ ನೀಡುತ್ತಿದ್ದರು. ಕಿರಿಯ ಪುತ್ರ ಜಯ್ ಪವಾರ್ ಸಾರ್ವಜನಿಕವಾಗಿ ಹೆಚ್ಚು ಕಾಣಿಸಿಕೊಳ್ಳದಿದ್ದರೂ ಕುಟುಂಬದ ಕಾರ್ಯಗಳಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದರು. ಜಯ್ ಪವಾರ್ ಖ್ಯಾತ ಉದ್ಯಮಿಯ ಪುತ್ರಿ ಋತುಜಾ ಪಾಟೀಲ್ ಅವರನ್ನು ವಿವಾಹವಾಗಿದ್ದಾರೆ.

Ajit Pawar Death: ರನ್‌ವೇಗೆ 100 ಮೀಟರ್‌ ಮೊದಲೇ ನೆಲಕ್ಕಪ್ಪಳಿಸಿದ ಅಜಿತ್‌ ಪವಾರ್‌ ವಿಮಾನ

ಕುಟುಂಬದ ಇತರ ಸದಸ್ಯರಲ್ಲಿ ಅಣ್ಣ ಶ್ರೀನಿವಾಸ್ ಪವಾರ್ ಖ್ಯಾತ ಉದ್ಯಮಿಯಾಗಿದ್ದಾರೆ. ಇಬ್ಬರು ಸಹೋದರರ ನಡುವೆ ಉತ್ತಮ ಬಾಂಧವ್ಯವಿತ್ತು. ಸಹೋದರಿ ವಿಜಯಾ ಪಾಟೀಲ್ ಕೂಡ ಕುಟುಂಬದೊಂದಿಗೆ ಆಪ್ತ ಸಂಬಂಧ ಹೊಂದಿದ್ದರು. ಅಜಿತ್ ಪವಾರ್ ಅವರ ಚಿಕ್ಕಪ್ಪ ಶರದ್ ಪವಾರ್ ಮಹಾರಾಷ್ಟ್ರ ರಾಜಕಾರಣದ ಪ್ರಮುಖ ಮತ್ತು ಪ್ರಭಾವಶಾಲಿ ನಾಯಕನಾಗಿ ಗುರುತಿಸಿಕೊಂಡಿದ್ದಾರೆ.

ಅಪಘಾತದ ನಿಖರ ಕಾರಣವನ್ನು ಪತ್ತೆ ಹಚ್ಚಲು ನಾಗರಿಕ ವಿಮಾನಯಾನ ಇಲಾಖೆ ಹಾಗೂ ತನಿಖಾ ಸಂಸ್ಥೆಗಳು ಪರಿಶೀಲನೆ ಆರಂಭಿಸಿವೆ. ರಾಜ್ಯದ ರಾಜಕೀಯ ವಲಯದಲ್ಲಿ ಈ ಸುದ್ದಿ ಭಾರೀ ಆಘಾತ ಮೂಡಿಸಿದ್ದು, ಎಲ್ಲ ಪಕ್ಷಗಳ ನಾಯಕರು ಹಾಗೂ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.

ರಾಜಕೀಯ ಜೀವನ ಮತ್ತು ಆಸ್ತಿ ವಿವರ

ಮೂರು ದಶಕಗಳ ಕಾಲ ನಿರಂತರವಾಗಿ ಶಾಸಕರಾಗಿದ್ದ ಅಜಿತ್ ಪವಾರ್, ಮಹಾರಾಷ್ಟ್ರದಲ್ಲಿ ಅತಿಹೆಚ್ಚು ಬಾರಿ ಉಪಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ದಾಖಲೆಯನ್ನೂ ಹೊಂದಿದ್ದರು. ಅನುಭವೀ ಹಾಗೂ ಪ್ರಭಾವಿ ನಾಯಕನಾಗಿ ರಾಜ್ಯ ರಾಜಕಾರಣದಲ್ಲಿ ಪ್ರಮುಖ ಸ್ಥಾನ ಪಡೆದಿದ್ದರು. ಅತ್ಯಂತ ಶ್ರೀಮಂತ ರಾಜಕಾರಣಿಗಳಲ್ಲೊಬ್ಬರಾಗಿಯೂ ಅವರು ಗುರುತಿಸಿಕೊಂಡಿದ್ದರು.

2024ರ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ಸಲ್ಲಿಸಿದ ಅಫಿಡವಿಟ್‌ನಲ್ಲಿ, ಅಜಿತ್ ಪವಾರ್ ಮತ್ತು ಅವರ ಪತ್ನಿ ಸುನೇತ್ರಾ ಪವಾರ್ ಒಟ್ಟಾರೆ ಸುಮಾರು 124 ಕೋಟಿ ರೂ ಮೌಲ್ಯದ ಆಸ್ತಿ ಹೊಂದಿರುವುದಾಗಿ ಘೋಷಿಸಿದ್ದರು.