BJP national president: ಮುಂದಿನ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆ ಕಗ್ಗಂಟು; ಯಾರೆಲ್ಲಾ ಇದ್ದಾರೆ ರೇಸ್ನಲ್ಲಿ?
ಬಿಜೆಪಿಯ (BJP) ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಯಾರ ಹೆಸರನ್ನು ಫೈನಲ್ ಮಾಡಬೇಕು ಎನ್ನುವ ಗೊಂದಲ ಬಿಜೆಪಿಯಲ್ಲಿ ಪಾಳಯದಲ್ಲಿ ಮುಂದುವರಿದಿದೆ. ಅಧ್ಯಕ್ಷರ ಬದಲಾವಣೆ ಕುರಿತು ಬಿಜೆಪಿಯಲ್ಲಿ ಚರ್ಚೆ ನಡೆಯುತ್ತಿದೆ. ಅಧಿಕೃತವಾಗಿ ಯಾವುದೇ ಘೋಷಣೆ ಬರದಿದ್ದರೂ ಜೂನ್ ಮಧ್ಯಭಾಗದಲ್ಲಿ ಔಪಚಾರಿಕ ಪ್ರಕ್ರಿಯೆಯು ಪ್ರಾರಂಭವಾಗಬಹುದು ಎಂದು ಮೂಲಗಳು ಸೂಚಿಸುತ್ತವೆ.


ನವದೆಹಲಿ: ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ (BJP national president) ಯಾರ ಹೆಸರನ್ನು ಫೈನಲ್ ಮಾಡಬೇಕು ಎನ್ನುವ ಗೊಂದಲ ಬಿಜೆಪಿಯಲ್ಲಿ ಪಾಳಯದಲ್ಲಿ ಮುಂದುವರಿದಿದೆ. ಅಧ್ಯಕ್ಷರ ಬದಲಾವಣೆ ಕುರಿತು ಬಿಜೆಪಿಯಲ್ಲಿ ಚರ್ಚೆ ನಡೆಯುತ್ತಿದೆ. ಅಧಿಕೃತವಾಗಿ ಯಾವುದೇ ಘೋಷಣೆ ಬರದಿದ್ದರೂ ಜೂನ್ ಮಧ್ಯಭಾಗದಲ್ಲಿ ಔಪಚಾರಿಕ ಪ್ರಕ್ರಿಯೆಯು ಪ್ರಾರಂಭವಾಗಬಹುದು ಎಂದು ಮೂಲಗಳು ಸೂಚಿಸುತ್ತವೆ. ಲೋಕಸಭಾ ಚುನಾವಣೆ ಮುಗಿದ ಬೆನ್ನಲ್ಲೇ, ಜೆ.ಪಿ.ನಡ್ಡಾ ಅವರು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯಲಿದ್ದಾರೆ ಎಂದು ವರದಿಯಾಗಿತ್ತು. ಆದರೆ, ಒಂದು ವರ್ಷ ಆಗುತ್ತಾ ಬಂದರೂ, ಗೊಂದಲಕ್ಕೆ ಪರಿಹಾರ ಸಿಗುತ್ತಿಲ್ಲ.
ಆದರೆ ಇತ್ತೀಚೆಗೆ ಮತ್ತೆ ಅಧ್ಯಕ್ಷರ ಬದಲಾವಣೆ ಚರ್ಚೆ ಮತ್ತೆ ಮುನ್ನಲೆಗೆ ಬಂದಿದೆ. ಉತ್ತರ ಪ್ರದೇಶದಲ್ಲಿ ಇತ್ತೀಚೆಗೆ 70 ಜಿಲ್ಲಾಧ್ಯಕ್ಷರ ನೇಮಕ ಘೋಷಣೆ ಮಾಡಿರುವುದು, ಕೇಂದ್ರ ನಾಯಕತ್ವ ಶೀಘ್ರದಲ್ಲೇ ಬಿಜೆಪಿ ಮುಖ್ಯಸ್ಥ ಹುದ್ದೆಯ ಬಗ್ಗೆ ನಿರ್ಧರಿಸಬಹುದು ಎಂಬ ಊಹಾಪೋಹಗಳಿಗೆ ಮತ್ತಷ್ಟು ಪುಷ್ಟಿ ನೀಡಿದೆ. ಆದಾಗ್ಯೂ, ಏಪ್ರಿಲ್ 22 ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಈ ಪ್ರಕ್ರಿಯೆಯು ಸ್ವಲ್ಪ ಸಮಯ ವಿಳಂಬವಾಗಿದೆ ಎಂದು ಹೇಳಲಾಗುತ್ತಿದೆ .ರಾಷ್ಟ್ರೀಯ ಮಟ್ಟದ ನೇಮಕಾತಿಗೂ ಮುನ್ನ, ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ಉತ್ತರಾಖಂಡ ಸೇರಿದಂತೆ ಪ್ರಮುಖ ರಾಜ್ಯಗಳಲ್ಲಿ ಬಿಜೆಪಿ ಹೊಸ ರಾಜ್ಯ ಘಟಕದ ಅಧ್ಯಕ್ಷರನ್ನು ಅಂತಿಮಗೊಳಿಸಬಹುದು ಎಂದು ಪಕ್ಷದ ಮೂಲಗಳು ಹೇಳುತ್ತಿವೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ರೇಸ್ನಲ್ಲಿ ಟಾಪ್ 3 ಸ್ಪರ್ಧಿಗಳು
ಒಡಿಶಾದ ಪ್ರಮುಖ ಒಬಿಸಿ ನಾಯಕರಾದ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ , ತಮ್ಮ ಸಂಘಟನಾ ಚಾತುರ್ಯ ಮತ್ತು ಕೇಂದ್ರ ನಾಯಕತ್ವದ ಸಾಮೀಪ್ಯಕ್ಕೆ ಹೆಸರುವಾಸಿಯಾಗಿದ್ದು, ಪಕ್ಷದ ಅಧ್ಯಕ್ಷ ಹುದ್ದೆಯ ಸ್ಪರ್ಧೆಯಲ್ಲಿರುವ ಪ್ರಮುಖ ನಾಯಕರಲ್ಲಿ ಒಬ್ಬರು. ಮತ್ತೊಬ್ಬ ಪ್ರಬಲ ಆಕಾಂಕ್ಷಿ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ಈಗ ಕೇಂದ್ರ ಸಚಿವರಾಗಿರುವ ಅವರನ್ನು ತಳಮಟ್ಟದ ಅನುಭವ ಹೊಂದಿರುವ ಜನನಾಯಕ ಎಂದು ಪರಿಗಣಿಸಲಾಗಿದೆ. ಇತ್ತೀಚೆಗೆ ಹರಿಯಾಣ ಮುಖ್ಯಮಂತ್ರಿ ಹುದ್ದೆಯಿಂದ ಕೇಂದ್ರ ಸಚಿವ ಸಂಪುಟಕ್ಕೆ ವರ್ಗಾವಣೆಗೊಂಡ ಮನೋಹರ್ ಲಾಲ್ ಖಟ್ಟರ್ , ನಿರಂತರತೆ ಮತ್ತು ಆಡಳಿತಾತ್ಮಕ ಅನುಭವವನ್ನು ಹೊಂದಿದ್ದಾರೆ.
ಸಂಘಕ್ಕಿದೆ ಫುಲ್ ಪವರ್
ಬಿಜೆಪಿಯಲ್ಲಿ ಉನ್ನತ ಸ್ಥಾನಕ್ಕೇರಿರುವವರೆಲ್ಲರೂ ಸಂಘದ ಒಡನಾಟವನ್ನು ಹೊಂದಿದ್ದಾರೆ. ಬಿಜೆಪಿಯಲ್ಲಿ ಸಂಘದ ಮಾತೇ ಬಹುತೇಕ ಅಂತಿಮ. ಆಯಕಟ್ಟಿನ ಸಂಘ ಮತ್ತು ಬಿಜೆಪಿ ನಡುವಿನ ರಾಷ್ಟ್ರಾಧ್ಯಕ್ಷ ಸ್ಥಾನಕ್ಕೆ ತಾವು ಸೂಚಿಸುವ ವ್ಯಕ್ತಿಯೇ ಆಗಬೇಕು ಎನ್ನುವುದು ಸಂಘದ ಪ್ರಮುಖರ ನಿಲುವು. ಅಮಿತ್ ಶಾ ಹಾಗೂ ಮೋದಿ ಬಿಜೆಪಿಯಲ್ಲಿ ಎಲ್ಲಾ ಆಗುಹೋಗುಗಳ ಮೇಲೆ ಸಂಪೂರ್ಣ ಹಿಡಿತ ಇರಬೇಕು ಎನ್ನುವ ಲೆಕ್ಕಾಚಾರವನ್ನು ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ. ಕಗ್ಗಂಟಾಗಿರುವ ರಾಷ್ಟ್ರೀಯ ಅಧ್ಯಕ್ಷ ಸ್ಥಾನ ಇನ್ನು ಕೆಲವು ದಿನಗಳಲ್ಲಿ ಬದಲಾಗುವುದಂತು ಸತ್ಯ.