ನವದೆಹಲಿ: ಮನೆಯಿಂದ ಕೆಲಸ ಮಾಡಲು ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಅವರು ಯಾವುದೇ ಆದೇಶ ಮಾಡಿಲ್ಲ. ಅವರು ಕೇವಲ ವರ್ಕ್ ಫ್ರಮ್ ಹೋಮ್ (work from home) ಅವಕಾಶವನ್ನು ಪರಿಗಣಿಸುವಂತೆ ಮನವಿ ಮಾಡಿದ್ದಾರೆ ಎಂದು ಕೇಂದ್ರ ಸರ್ಕಾರ (central govt) ಸ್ಪಷ್ಟನೆ ನೀಡಿದೆ. ಜಾಗತಿಕ ಮಟ್ಟದಲ್ಲಿ ತೈಲ ಬೆಲೆ (oil price) ಏರಿಕೆಯಾಗುತ್ತಿರುವುದರಿಂದ ಇತ್ತೀಚೆಗೆ ಅವರು ಇಂಧನ ಉಳಿತಾಯ ಕರೆ ನೀಡಿದ್ದು, ಈ ಹಿನ್ನೆಲೆಯಲ್ಲಿ ಅವರು ಮನೆಯಿಂದ ಕೆಲಸ ಮಾಡುವ ಆಯ್ಕೆಯನ್ನು ನೋಡುವಂತೆ ಹೇಳಿದ್ದರು. ಇದು ಕಡ್ಡಾಯವೇನಲ್ಲ.
ಇಂಧನ ಬಳಕೆಯನ್ನು ಕಡಿಮೆ ಮಾಡಲು, ವಿದೇಶಗಳಿಂದ ಆಮದು, ವಿದೇಶ ಪ್ರಯಾಣ ಸೇರಿದಂತೆ ಅನಗತ್ಯ ಖರ್ಚುಗಳನ್ನು ತಪ್ಪಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಮನವಿ ಮಾಡಿದ್ದರು. ಇದರೊಂದಿಗೆ ಕಂಪೆನಿಗಳು ಮನೆಯಿಂದ ಕೆಲಸ ಮಾಡುವ ಅವಕಾಶವನ್ನು ಪರಿಗಣಿಸಬಹುದಾಗಿ ಹೇಳಿದ್ದರು. ಆದರೆ ಇದು ಕಡ್ಡಾಯವಲ್ಲ. ಈ ನಿಟ್ಟಿನಲ್ಲಿ ಯಾವುದೇ ರೀತಿಯಲ್ಲಿ ಕಠಿಣ ನೀತಿ ಅಳವಡಿಸಲು ಅವರು ಹೇಳಿಲ್ಲ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.
ಬೆಂಗಾವಲು ವಾಹನಗಳ ಕಡಿತ: ಪ್ರಧಾನಿ ಮೋದಿ, ಸಚಿವರು, ವಿಐಪಿಗಳಿಗೆ ಕೇವಲ 4 ಕಾರು
ಇರಾನ್ ಮತ್ತು ಯುಎಸ್ ನಡುವಿನ ಸಂಘರ್ಷದ ಕಾರಣದಿಂದ ಜಾಗತಿಕ ಮಟ್ಟದಲ್ಲಿ ಇಂಧನ ಬೆಲೆಗಳು ಹೆಚ್ಚಾಗುತ್ತಿವೆ. ಈ ಹಿನ್ನೆಲೆಯಲ್ಲಿ ಕಂಪೆನಿಗಳು ದೊಡ್ಡ ಪ್ರಮಾಣದಲ್ಲಿ ದೂರದ ಕೆಲಸಗಾರರನ್ನು ತಗೆದು ಹಾಕಬಹುದು ಎನ್ನುವ ಊಹಾಪೋಹ ಹೆಚ್ಚಾಗಿದ್ದರಿಂದ ಸರ್ಕಾರವು ಈ ಸ್ಪಷ್ಟನೆಯನ್ನು ನೀಡಿದೆ.
ಪ್ರಧಾನಿ ಮೋದಿ ಅವರ ಹೇಳಿಕೆಗಳನ್ನು ತಪ್ಪಾಗಿ ಅರ್ಥೈಸಲಾಗಿದೆ. ಇದಕ್ಕಾಗಿ ಕೆಲವೆಡೆ ಕಠಿಣ ಕ್ರಮಗಳನ್ನು ಅಳವಡಿಸಿಕೊಳ್ಳುವ ಸಾಧ್ಯತೆ ಇದೆ. ಅಲ್ಲದೆ ಸರ್ಕಾರಿ ವೆಚ್ಚವನ್ನು ಕಡಿತಗೊಳಿಸುವ ಸಲುವಾಗಿ ಕಲ್ಯಾಣ ಯೋಜನೆಗಳನ್ನು ಕಡಿಮೆ ಮಾಡುವ ಅಥವಾ ಮೂಲಸೌಕರ್ಯಗಳ ಮೇಲಿನ ಹೂಡಿಕೆಗಳನ್ನು ನಿಯಂತ್ರಿಸುವ ಊಹಾಪೋಹಗಳು ಉಂಟಾಗಿದ್ದು, ಈ ನಿಟ್ಟಿನಲ್ಲಿ ಯಾವುದೇ ಪ್ರಸ್ತಾಪವಿಲ್ಲ ಎಂದು ಕೇಂದ್ರ ಸರ್ಕಾರವು ತಿಳಿಸಿದೆ.
ನಂದಿಗ್ರಾಮವನ್ನು ಬಿಟ್ಟುಕೊಟ್ಟ ಬಂಗಾಳ ಸಿಎಂ ಸುವೇಂದು ಅಧಿಕಾರಿ: ಭವಾನಿಪುರ ಶಾಸಕರಾಗಿ ಪ್ರಮಾಣ ವಚನ
ನಾಗರಿಕರು ಮತ್ತು ಕಂಪನಿಗಳು ದೇಶದ ಸಂಪನ್ಮೂಲಗಳನ್ನು ಬಹಳ ಎಚ್ಚರಿಕೆಯಿಂದ ಬಳಸಬೇಕು. ಈ ನಿಟ್ಟಿನಲ್ಲಿ ಎಲ್ಲರನ್ನು ಪ್ರೋತ್ಸಾಹಿಸಬೇಕು. ಜೊತೆಗೆ ದೇಶದ ಆರ್ಥಿಕ ಬೆಳವಣಿಗೆಯನ್ನು ಕಾಪಾಡಿಕೊಳ್ಳುವತ್ತ ಗಮನ ಹರಿಸಬೇಕಿದೆ. ಹೀಗಾಗಿ ಹೆಚ್ಚಿನ ಇಂಧನ ಬಳಕೆ ತಪ್ಪಿಸಲು ಸಾಧ್ಯವಿರುವಲ್ಲಿ ಸಾರ್ವಜನಿಕ ಸಾರಿಗೆಯನ್ನು ಬಳಸಲು, ಮನೆಯಿಂದ ಕೆಲಸ ಅಥವಾ ವರ್ಚುವಲ್ ಸಭೆಗಳನ್ನು ನಡೆಸಲು ಪ್ರಧಾನಿ ಮೋದಿ ಮನವಿ ಮಾಡಿದ್ದರು. ಈ ಮನವಿಯನ್ನು ಜವಾಬ್ದಾರಿಯುತ ಬಳಕೆಗೆ ಕರೆ ಎನ್ನುವಂತೆ ಪರಿಗಣಿಸಲು ಕೇಂದ್ರ ಸರ್ಕಾರ ಹೇಳಿದೆ.