ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಕೆಂಪುಕೋಟೆಯಲ್ಲಿನ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ನೀವಿದ್ದ ಸ್ಥಳದಲ್ಲೇ ವೀಕ್ಷಿಸುವುದು ಹೇಗೆ? ಇಲ್ಲಿದೆ ಡೀಟೇಲ್ಸ್‌

80th Independence Day: ಭಾರತವು 2026ರ ಆಗಸ್ಟ್ 15ರಂದು 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲು ಸಜ್ಜಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿಯ ಕೆಂಪುಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಲಿದ್ದಾರೆ ಮತ್ತು ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ. ಆಗಸ್ಟ್ 15 ರಂದು ದೂರದರ್ಶನ ಜಾಲದಾದ್ಯಂತ ಸ್ವಾತಂತ್ರ್ಯ ದಿನಾಚರಣೆಯನ್ನು ಪ್ರಸಾರ ಮಾಡಲಾಗುವುದು.

ಸಾಂದರ್ಭಿಕ ಚಿತ್ರ

ನವದೆಹಲಿ, ಆ.11: ಭಾರತವು 2026ರ ಆಗಸ್ಟ್ 15ರಂದು 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು (80th Independence Day) ಆಚರಿಸಲು ಸಜ್ಜಾಗಿದೆ. ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ದೆಹಲಿಯ ಕೆಂಪುಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಲಿದ್ದಾರೆ ಮತ್ತು ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ. ಸಮಾರಂಭದಲ್ಲಿ ಸುಮಾರು 27,000 ಜನರು ಭಾಗವಹಿಸಲಿದ್ದು, ಇದರಲ್ಲಿ ವಿವಿಧ ಕ್ಷೇತ್ರಗಳ 5,000 ವಿಶೇಷ ಅತಿಥಿಗಳು, ಸಾರ್ವಜನಿಕರು ಮತ್ತು ದೇಶದ ಯುವಕರು ಸೇರಿದ್ದಾರೆ.

ಆಗಸ್ಟ್ 15 ರಂದು ನಡೆಯುವ ಸಮಾರಂಭವನ್ನು ವೀಕ್ಷಿಸಲು ಬಯಸುತ್ತೀರಾ? ಆದರೆ ಕೆಂಪು ಕೋಟೆಗೆ ಬರಲು ಸಾಧ್ಯವಾಗುತ್ತಿಲ್ಲವೇ? ಟಿವಿ ಮತ್ತು ಆನ್‌ಲೈನ್‌ನಲ್ಲಿ ಉಚಿತವಾಗಿ ನೀವು ನೇರಪ್ರಸಾರ ವೀಕ್ಷಿಸಬಹುದು.

ದೂರದರ್ಶನ ಪ್ರಸಾರಗಳು:

ಆಗಸ್ಟ್ 15 ರಂದು ದೂರದರ್ಶನ ಜಾಲದಾದ್ಯಂತ ಸ್ವಾತಂತ್ರ್ಯ ದಿನಾಚರಣೆಯನ್ನು ಪ್ರಸಾರ ಮಾಡಲಾಗುವುದು. ದೂರದರ್ಶನದ ಅಧಿಕೃತ ಪ್ರಕಟಣೆಯ ಪ್ರಕಾರ, ನೇರ ಪ್ರಸಾರವು ಬೆಳಗ್ಗೆ 6:30 ಕ್ಕೆ ಪ್ರಾರಂಭವಾಗುತ್ತದೆ. ವೀಕ್ಷಕರು ಡಿಡಿ ನ್ಯಾಷನಲ್‌ನಲ್ಲಿ ಸಮಾರಂಭವನ್ನು ನೇರಪ್ರಸಾರ ವೀಕ್ಷಿಸಬಹುದು.

ಕೆಂಪುಕೋಟೆಯಲ್ಲಿ ಇದೇ ಮೊದಲ ಬಾರಿ 'ವಂದೇ ಮಾತರಂ'!

ಆದರೆ ಡಿಡಿ ನ್ಯೂಸ್ ಮತ್ತು ಇತರ ದೂರದರ್ಶನ ಚಾನೆಲ್‌ಗಳು ಸಹ ರಾಷ್ಟ್ರೀಯ ಆಚರಣೆಗಳನ್ನು ಪ್ರಸಾರ ಮಾಡುತ್ತವೆ. ಡಿಡಿ ನ್ಯಾಷನಲ್ ಮತ್ತು ಡಿಡಿ ನ್ಯೂಸ್ ಪ್ರಸಾರ ಭಾರತಿಯ ರಾಷ್ಟ್ರೀಯ ವಾಹಿನಿಗಳಾಗಿದ್ದು, ಡಿಡಿ ಫ್ರೀಡಿಶ್‌ನಲ್ಲಿ ಯಾವುದೇ ಮಾಸಿಕ ಚಂದಾದಾರಿಕೆ ಶುಲ್ಕವಿಲ್ಲದೆ ಉಚಿತವಾಗಿ ಟಿವಿ ಕಾರ್ಯಕ್ರಮಗಳನ್ನು ವೀಕ್ಷಿಸಬಹುದು. ಇತರ ಟಿವಿ ಚಾನೆಲ್‌ಗಳು ಸಹ ಪ್ರಧಾನಿ ಮೋದಿಯವರ ಭಾಷಣವನ್ನು ನೇರಪ್ರಸಾರ ಮಾಡಲಿವೆ.

ಭಾಷಣವನ್ನು ಟಿವಿಯಲ್ಲಿ ನೋಡಲು ಆಗುವುದಿಲ್ಲವೇ? ಚಿಂತೆ ಬೇಡ. ಈ ಕಾರ್ಯಕ್ರಮವನ್ನು ವಿವಿಧ ವೇದಿಕೆಗಳಲ್ಲಿ ಆನ್‌ಲೈನ್‌ನಲ್ಲಿ ನೇರಪ್ರಸಾರ ಮಾಡಲಾಗುತ್ತದೆ. ದೂರದರ್ಶನದ ಅಧಿಕೃತ ಯೂಟ್ಯೂಬ್ ಚಾನೆಲ್ 2026 ರ ಸ್ವಾತಂತ್ರ್ಯ ದಿನಾಚರಣೆಯನ್ನು ನೇರಪ್ರಸಾರ ಮಾಡಲು ಸಜ್ಜಾಗಿದೆ. ಪ್ರಸಾರ ಭಾರತಿಯ ದೂರದರ್ಶನ ಚಾನೆಲ್‌ಗಳನ್ನು ಹೊಂದಿರುವ ವೇದಿಕೆಯಾದ ವೇವ್ಸ್, ಸ್ವಾತಂತ್ರ್ಯ ದಿನಾಚರಣೆ ಸೇರಿದಂತೆ ರಾಷ್ಟ್ರೀಯ ಕಾರ್ಯಕ್ರಮಗಳನ್ನು ನೇರ ಪ್ರಸಾರ ಮಾಡುತ್ತದೆ.

ಒಟ್ಟಿನಲ್ಲಿ ಈ ಎಲ್ಲಾ ವೇದಿಕೆಗಳು ಸ್ವಾತಂತ್ರ್ಯೋತ್ಸವ ಕಾರ್ಯಕ್ರಮವನ್ನು ಉಚಿತವಾಗಿ ನೇರ ಪ್ರಸಾರ ಮಾಡುತ್ತವೆ. ಈಗ ನೀವು ಆರಾಮವಾಗಿ ಕುಳಿತು, ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮವನ್ನು ನೀವಿರುವ ಸ್ಥಳದಲ್ಲೇ ವೀಕ್ಷಿಸಬಹುದು.

ಭಾರತದ ಅಧಿಕೃತ ರಾಷ್ಟ್ರ ಧ್ವಜ ತಯಾರಾಗುವ ಏಕೈಕ ತಾಣ ಯಾವುದು ಗೊತ್ತೆ? ಇದು ಕರ್ನಾಟಕದಲ್ಲೇ ಇದೆ!

ಸ್ವಾತಂತ್ರ್ಯೋತ್ಸವ ಆಚರಣೆಗೆ ಭರದ ಸಿದ್ಧತೆ

ದೇಶದ 80ನೇ ಸ್ವಾತಂತ್ರ್ಯೋತ್ಸವಕ್ಕೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಭರದ ಸಿದ್ಧತೆ ನಡೆಯುತ್ತಿದೆ. ಆಗಸ್ಟ್ 15ರಂದು ಶನಿವಾರ ನವದೆಹಲಿಯ ಕೆಂಪುಕೋಟೆಯಲ್ಲಿ ಅದ್ಧೂರಿಯಾಗಿ ಸ್ವಾತಂತ್ರ್ಯೋತ್ಸವ ಸಮಾರಂಭ ನಡೆಯಲಿದೆ. ಈ ವರ್ಷದ ವಿಶೇಷ ಆಕರ್ಷಣೆಯಾಗಿ ದೇಶದ ರಾಷ್ಟ್ರೀಯ ಗೀತೆ ‘ವಂದೇ ಮಾತರಂ’ ಅನ್ನು ಸಂಪೂರ್ಣವಾಗಿ ಹಾಡಲಾಗುತ್ತದೆ.

ಇನ್ನು ಕೆಂಪುಕೋಟೆ ಸುತ್ತಮುತ್ತ ಪಾರ್ಕಿಂಗ್ ಸೌಲಭ್ಯ ಸೀಮಿತವಾಗಿರುವ ಹಿನ್ನೆಲೆಯಲ್ಲಿ ಆಗಸ್ಟ್ 15ರಂದು ದೆಹಲಿ ಮೆಟ್ರೋ ಸೇವೆ ಬೆಳಗ್ಗೆ 4 ಗಂಟೆಯಿಂದಲೇ ಆರಂಭವಾಗಲಿದೆ. ಪರೇಡ್‌ನ ಆಸನ ವ್ಯವಸ್ಥೆ ಮತ್ತು ಸಂಪೂರ್ಣ ಕಾರ್ಯಕ್ರಮದ ವೇಳಾಪಟ್ಟಿ ಕುರಿತು ಅಧಿಕೃತ ಮಾಹಿತಿ ಬಿಡುಗಡೆಯಾಗಬೇಕಿದೆ. ಪರೇಡ್‌ನ ಮಾರ್ಗ ಮತ್ತು ಪಾರ್ಕಿಂಗ್ ನಕ್ಷೆಯನ್ನು ಸಂಬಂಧಿತ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ.

ಟಿಕೆಟ್, ಪ್ರವೇಶ ನಿಯಮಗಳು, ಸಮಯ ಹಾಗೂ ಇತರ ಮಾಹಿತಿಗಾಗಿ ಅಧಿಕೃತ ಸರ್ಕಾರಿ ಪೋರ್ಟಲ್‌ನಲ್ಲಿನ ಇತ್ತೀಚಿನ ಮಾಹಿತಿಯನ್ನೇ ಪರಿಶೀಲಿಸುವುದು ಉತ್ತಮ.