ʼʼಸಾಧಕರಾಗಬೇಕಾದರೆ ಶಾರ್ಟ್‌ಕಟ್ ಬಳಸಬೇಡಿʼʼ: ಜೆನ್ ಝೀಗಳಿಗೆ ಪ್ರಧಾನಿ ನರೇಂದ್ರ ಮೋದಿ ಕರೆ
ರೀಲ್ ಪ್ರಿಯರು ಹೆಚ್ಚಾಗುತ್ತಿದ್ದಾರೆ. ಜೀವನದಲ್ಲಿ ಶಾರ್ಟ್‌ಕಟ್ ಬಳಸಬೇಡಿ. ಇದರಿಂದ ಅಪಾಯವಿದೆ. ಆದಷ್ಟು ಆತ್ಮಚರಿತ್ರೆಗಳನ್ನು ಓದಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಜೆನ್ ಝೀಗಳಿಗೆ ಕರೆ ನೀಡಿದ್ದಾರೆ. ದೆಹಲಿಯಲ್ಲಿ ಬುಧವಾರ ನಡೆದ ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಆತ್ಮಚರಿತ್ರೆ 'ಟ್ರೈಯಂಫ್ ಆಫ್ ದಿ ಇಂಡಿಯನ್ ರಿಪಬ್ಲಿಕ್: ಮೈ ಲೈಫ್, ಮೈ ಸ್ಟ್ರಗಲ್ಸ್' ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಸಂಗ್ರಹ ಚಿತ್ರ -
ನವದೆಹಲಿ: ಸಾಮಾಜಿಕ ಮಾಧ್ಯಮಗಳ (Social media) ಪ್ರಭಾವಿಗಳ ಬಗ್ಗೆ ಎಚ್ಚರದಿಂದಿರಿ. ಜೀವನದಲ್ಲಿ ಶಾರ್ಟ್‌ಕಟ್‌ಗಳನ್ನು ತೆಗೆದುಕೊಳ್ಳುವುದನ್ನು ತಪ್ಪಿಸಿ ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಜೆನ್ ಝೀಗಳಿಗೆ (Gen Z) ಕರೆ ನೀಡಿದ್ದಾರೆ. ದೆಹಲಿಯಲ್ಲಿ ಬುಧವಾರ ನಡೆದ ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ (Former President Ram Nath Kovind) ಅವರ ಆತ್ಮಚರಿತ್ರೆ 'Triumph of the Indian Republic: My Life, My Struggles' ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿ, ತ್ವರಿತ ತೃಪ್ತಿಯ ಯುಗದಲ್ಲಿ ಯುವ ಜನರು ಎಚ್ಚರಿಕೆಯಿಂದ ಇರುವಂತೆ ತಿಳಿಸಿದ್ದಾರೆ.
ಜೆನ್ ಝೀಗಳು ತಮ್ಮ ಯುವ ಸಂಪರ್ಕ ಅಭಿಯಾನದಲ್ಲಿ ಇನ್‌ಸ್ಟಾಗ್ರಾಮ್ ಅನ್ನು ಕೇಂದ್ರವಾಗಿಸಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಎಚ್ಚರಿಕೆಯನ್ನು ನೀಡಿದ್ದಾರೆ.
ಮ.ಪ್ರ.ದಲ್ಲಿ ವನ್ಯ ಸಂಘರ್ಷ, 8 ತಿಂಗಳಲ್ಲಿ 50 ಜನ, 45 ಹುಲಿಗಳ ಸಾವು
ಜೀವನದಲ್ಲಿ ಸುಲಭ ಹಾದಿಯನ್ನು ಹಿಡಿಯಬೇಡಿ. ದೀರ್ಘ, ಹೆಚ್ಚು ಅರ್ಥಪೂರ್ಣ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳಬೇಕು. ಕೆಲವು ಜನರು ಪಾದಚಾರಿ ಮಾರ್ಗಗಳನ್ನು ಬಳಸುವ ಬದಲು ರೈಲ್ವೆ ಹಳಿಗಳನ್ನು ದಾಟುತ್ತಾರೆ. ಯಾಕೆಂದರೆ ಅದು ಅವರಿಗೆ ತ್ವರಿತ ದಾರಿಯೆಂದು ಕಾಣುತ್ತದೆ. ಆದರೆ ಅಲ್ಲಿ ಚಿತ್ರಿಸಲಾಗಿರುವ ಎಚ್ಚರಿಕೆಯು ದೊಡ್ಡ ಪಾಠವನ್ನೇ ಹೇಳುತ್ತದೆ ಎಂದರು.
‘Shortcut will cut you short’, says PM Modi in Delhi as he urges youth to shun shortcuts in age of reels, social media. pic.twitter.com/a9l4ylMaJB
— Ayushi Agarwal (@ayu_agarwal94) August 12, 2026
ಶಾರ್ಟ್‌ಕಟ್ ಗಳು ನಿಮ್ಮ ದಿಕ್ಕು ತಪ್ಪಿಸುತ್ತದೆ. ಇದರಲ್ಲಿ ನಿಮ್ಮನ್ನು ಸೆಳೆಯುವ ಪ್ರಭಾವಿಗಳ ಬಗ್ಗೆ ಎಚ್ಚರಿಕೆ ವಹಿಸಬೇಕು. ಜೀವನದಲ್ಲಿ ಸಾಧನೆ ಮಾಡಲು ಬಯಸಿದರೆ ನೀವು ಮೆಚ್ಚುವ ವ್ಯಕ್ತಿಯ ಆತ್ಮಚರಿತ್ರೆಯನ್ನು ಖಂಡಿತವಾಗಿಯೂ ಓದಿ ಎಂದು ತಿಳಿಸಿದರು.
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹಿನ್ನೆಲೆಯಲ್ಲಿ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜಿನಾಮೆಯನ್ನು ಆಗ್ರಹಿಸಿ ಇತ್ತೀಚೆಗೆ ಕಾಕ್ರೋಚ್ ಜನತಾ ಪಕ್ಷದ ನೇತೃತ್ವದಲ್ಲಿ ನಡೆದ ವಿದ್ಯಾರ್ಥಿ ಪ್ರತಿಭಟನೆಗಳ ವೇಳೆ ಬಳಸಿರುವ ಕಿರಿಯರ ಭಾಷೆ ಮತ್ತು ಸ್ವರೂಪಗಳಿಂದ ಪ್ರಭಾವಿತರಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ಬಳಿಕ ಹೆಚ್ಚು ಸೆಲ್ಫಿ ಶೈಲಿಯ ವಿಡಿಯೊಗಳನ್ನು ಹಂಚಿಕೊಳ್ಳುತ್ತಿದ್ದಾರೆ.
ʼʼಅರುಣಾಚಲ ಪ್ರದೇಶ ಯಾವತ್ತಿದ್ದರೂ ಭಾರತಕ್ಕೆ ಸೇರಿದ್ದುʼʼ: ಚೀನಾಕ್ಕೆ ವಿದೇಶಾಂಗ ಸಚಿವಾಲಯದಿಂದ ತಿರುಗೇಟು
ಅಲ್ಲದೇ ಅವರು ತಮ್ಮ ವಿಡಿಯೊದಲ್ಲಿ ಹಾಯ್, ಫ್ರೆಂಡ್ಸ್ ನಂತಹ ಪದಬಳಕೆಯನ್ನು ಹೆಚ್ಚು ಮಾಡುತ್ತಿದ್ದಾರೆ. ಬಿಜೆಪಿ ಮತ್ತು ಅದರ ಪೋಷಕ ಸಂಘಟನೆಯಾದ ಆರ್‌ಎಸ್‌ಎಸ್ ಕೂಡ ಯುವಜನರ ಸಂಪರ್ಕವನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ತುಣುಕು ವಿಡಿಯೊಗಳ ಮೂಲಕ ಮಂತ್ರಿಗಳು ಮತ್ತು ಸರ್ಕಾರಿ ಇಲಾಖೆಗಳು ಕಿರಿಯರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ವಿದೇಶಾಂಗ ಸಚಿವಾಲಯ ಕೂಡ ಇತ್ತೀಚೆಗೆ ಸ್ನ್ಯಾಪ್‌ಚಾಟ್‌ನಲ್ಲಿ ತನ್ನ ಖಾತೆ ತೆರೆದಿದೆ.