Bihar Shocker: ಆರ್ಕೆಸ್ಟ್ರಾ ಕಾರ್ಯಕ್ರಮವೊಂದರಲ್ಲಿ ನೃತ್ಯ ಮಾಡುತ್ತಿದ್ದ ಯುವಕನನ್ನು ಗುಂಡಿಕ್ಕಿ ಭೀಕರ ಹತ್ಯೆ!
ಬಿಹಾರದ ಗಯಾದಲ್ಲಿ ಸೋಮವಾರ(ಫೆ.3) ತಡರಾತ್ರಿ ವೇದಿಕೆಯಲ್ಲಿ ಕಾರ್ಯಕ್ರಮ ನಡೆಯುವಾಗಲೇ ಯುವಕನೊಬ್ಬ ಗುಂಡಿಗೆ ಬಲಿಯಾಗಿ ಭೀಕರವಾಗಿ ಸಾವನ್ನಪ್ಪಿದ್ದಾನೆ. ವೇದಿಕೆಯಲ್ಲಿ ನೃತ್ಯಗಾರರಿಗೆ ಗೌರವ ಸಂಭಾವನೆ ನೀಡುವಾಗ ಯುವಕನ ಮೇಲೆ ಗುಂಡು ಹಾರಿಸಲಾಗಿದೆ. ಗುಂಡು 27 ವರ್ಷದ ಅಂಜನಿ ಕುಮಾರ್ ತಲೆಗೆ ತಗುಲಿದ್ದು, ವೇದಿಕೆಯಲ್ಲಿಯೇ ಯುವಕ ತಕ್ಷಣ ಮೃತಪಟ್ಟಿದ್ದಾನೆ.
ಪಾಟ್ನಾ: ಬಿಹಾರದ(Bihar ಗಯಾದಲ್ಲಿ(Gaya) ಸೋಮವಾರ(ಫೆ.3) ತಡರಾತ್ರಿ ವೇದಿಕೆಯಲ್ಲಿ ಕಾರ್ಯಕ್ರಮ ನಡೆಯುವಾಗಲೇ ಯುವಕನೊಬ್ಬ ಗುಂಡಿಗೆ ಬಲಿಯಾಗಿ(Shot Dead) ಭೀಕರವಾಗಿ ಸಾವನ್ನಪ್ಪಿದ್ದಾನೆ. ವೇದಿಕೆಯಲ್ಲಿ ನೃತ್ಯಗಾರರಿಗೆ ಗೌರವ ಸಂಭಾವನೆ ನೀಡುವಾಗ ಯುವಕನ ಮೇಲೆ ಗುಂಡು ಹಾರಿಸಲಾಗಿದೆ. ಗುಂಡು 27 ವರ್ಷದ ಅಂಜನಿ ಕುಮಾರ್(Bihar Shocker) ತಲೆಗೆ ತಗುಲಿದ್ದು, ವೇದಿಕೆಯಲ್ಲಿಯೇ ತಕ್ಷಣ ಮೃತಪಟ್ಟಿದ್ದಾನೆ.
ರಾಜಕೀಯ ದ್ವೇಷದಿಂದಾಗಿ ಅಂಜನಿ ಕುಮಾರ್‌ನನ್ನು ಹತ್ಯೆ ಮಾಡಲಾಗಿದೆ ಎಂದು ಅವರ ಕುಟುಂಬ ಆರೋಪಿಸಿದೆ. ದೌದ್‌ನಗರದ ಅಂಗ್ರಾಹಿ ಪಂಚಾಯತ್‌ನ ಮುಖ್ಯಸ್ಥ ಪಿಂಟು ಶರ್ಮಾ ಮತ್ತು ಮಹೇಶ್ ಶರ್ಮಾ ಯುವಕನ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ ಎಂದು ಅವರು ಗಂಭೀರವಾಗಿ ಆರೋಪಿಸಿದ್ದಾರೆ. ಪಿಎಸಿಎಸ್ ಚುನಾವಣೆಯಲ್ಲಿ ಅಂಜನಿ ವಿರೋಧಿ ಅಭ್ಯರ್ಥಿಯನ್ನು ಸಂಪೂರ್ಣವಾಗಿ ಬೆಂಬಲಿಸಿದ್ದರು. ಇದರಿಂದ ಪಿಂಟು ಮತ್ತು ಮಹೇಶ್ ಶರ್ಮಾ ಅವರಿಗೆ ಯುವಕನ ಮೇಲೆ ವೈಯಕ್ತಿಕ ದ್ವೇಷವಿತ್ತು. ದ್ವೇಷದಿಂದಲೇ ಭೀಕರವಾಗಿ ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ. ಹತ್ಯೆ ನಡೆಸಿ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.
तिलक समारोह में युवक की हत्या: मंच पर मारी गोली, अपराधी फरार #Firing #Gaya
— Utkarsh Singh (@utkarshs88) February 4, 2025
गया। कोंच थाना क्षेत्र के तुतुरखी गांव में एक तिलक समारोह के दौरान युवक की गोली मारकर हत्या कर दी गई। मृतक की पहचान कोंच के पाली गांव निवासी 27 वर्षीय अंजनी कुमार के रूप में हुई है। pic.twitter.com/PNX8qlqVPz
ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ. ಗಯಾ ಜಿಲ್ಲೆಯ ಕೊಂಚ್ ಪೊಲೀಸ್ ಠಾಣೆ ವ್ಯಾಪ್ತಿಯ ತುತುರ್ಖಿ ಗ್ರಾಮದಲ್ಲಿ ಈ ಘಟನೆ ನಡೆದಿರುವುದಾಗಿ ವರದಿಯಾಗಿದೆ. ಅಂಜನಿ ಕುಮಾರ್ ಕೊಂಚ್‌ನ ಪಾಲಿ ಗ್ರಾಮದ ನಿವಾಸಿಯಾಗಿದ್ದರು.
ಈ ಸುದ್ದಿಯನ್ನೂ ಓದಿ:UP Horror: ಸರಸವಾಡುತ್ತಲೇ ಉಸಿರುಗಟ್ಟಿಸಿ ಕೊಲೆ; ವಿಚಾರಣೆ ವೇಳೆ ಬಯಲಾಯ್ತು ಭೀಕರ ಸತ್ಯ!
ಕೊಲೆಗೆ ಕಾರಣವೇನೆಂದು ಸಂಪೂರ್ಣವಾಗಿ ತಿಳಿದುಕೊಳ್ಳಲು ಎಲ್ಲಾ ಆಯಾಮಗಳ ತನಿಖೆಗಾಗಿ ವಿಶೇಷ ತಂಡವನ್ನು ರಚಿಸಲಾಗುವುದು ಎಂದು ಟಿಕಾರಿಯ ಉಪ-ವಿಭಾಗೀಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಹತ್ಯೆಯಲ್ಲಿ ಭಾಗಿಯಾಗಿರುವ ಅಪರಾಧಿಗಳನ್ನು ಬಂಧಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.