ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

UP Horror: ಸರಸವಾಡುತ್ತಲೇ ಉಸಿರುಗಟ್ಟಿಸಿ ಕೊಲೆ; ವಿಚಾರಣೆ ವೇಳೆ ಬಯಲಾಯ್ತು ಭೀಕರ ಸತ್ಯ!

ಲೈಂಗಿಕ ಕ್ರಿಯೆ ನಡೆಸುವಂತೆ ಒತ್ತಾಯಿಸಿ ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದ ವ್ಯಕ್ತಿಯಿಂದ ಬೇಸತ್ತ ಮಹಿಳೆ ಉಪಾಯದಿಂದ ಲೈಂಗಿಕ ಕ್ರಿಯೆಯಲ್ಲಿ ತೊಡಗುವಂತೆ ನಟಿಸಿ ಆತನನ್ನು ಉಸಿರುಗಟ್ಟಿಸಿ ಕೊಲೆ(Murder Case) ಮಾಡಿದ್ದಾಳೆ. ವ್ಯಕ್ತಿಯ ಶವ ಆತನ ಮನೆಯ ಬಳಿ ಪತ್ತೆಯಾದ ಎರಡು ದಿನಗಳ ನಂತರ, ಕೊಲೆ ಪ್ರಕರಣದಲ್ಲಿ 32 ವರ್ಷದ ಮಹಿಳೆಯನ್ನು ಫ್ರೆಬವರಿ 2ರಂದು ಪೊಲೀಸರು ಬಂಧಿಸಿದ್ದಾರೆ.

ಸರಸವಾಡುತ್ತಲೇ ವ್ಯಕ್ತಿಯನ್ನು ಉಸಿರುಗಟ್ಟಿಸಿ ಕೊಂದ ಮಹಿಳೆ

UP Horror

Profile pavithra Feb 3, 2025 4:20 PM

ಲಖನೌ: ಉತ್ತರ ಪ್ರದೇಶದ ಬರೇಲಿಯಲ್ಲಿ ಮಹಿಳೆಯೊಬ್ಬಳು ವ್ಯಕ್ತಿಯೊಬ್ಬನನ್ನು ಉಸಿರುಗಟ್ಟಿಸಿ ಕೊಂದಿರುವ ಆಘಾತಕಾರಿ ಘಟನೆ ನಡೆದಿರುವುದಾಗಿ ವರದಿಯಾಗಿದೆ(UP Horror). ಮೃತ ವ್ಯಕ್ತಿ ಇಕ್ಬಾಲ್ ಎಂಬುದಾಗಿ ತಿಳಿದುಬಂದಿದ್ದು, ಆತ ನಿರಂತರವಾಗಿ ಮಹಿಳೆಗೆ ಲೈಂಗಿಕ ಕ್ರಿಯೆ ನಡೆಸುವಂತೆ ಒತ್ತಾಯಿಸಿ ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದರಿಂದ ಆಕೆಗೆ ಬೇರೆ ದಾರಿ ಇರದೆ ಆತನನ್ನು ಕೊಲೆ ಮಾಡಿರುವುದಾಗಿ ಮಹಿಳೆ ಪೊಲೀಸರಿಗೆ ತಿಳಿಸಿದ್ದಾಳೆ.

ಇಕ್ಬಾಲ್ ಶವ ಆತನ ಮನೆಯ ಬಳಿ ಪತ್ತೆಯಾದ ಎರಡು ದಿನಗಳ ನಂತರ, ಕೊಲೆ ಪ್ರಕರಣದಲ್ಲಿ 32 ವರ್ಷದ ಮಹಿಳೆಯನ್ನು ಫೆ.2ರಂದು ಪೊಲೀಸರು ಬಂಧಿಸಿದ್ದಾರೆ. ಇಕ್ಬಾಲ್ ಝರಿ ಜರ್ದೋಸಿ ಕುಶಲಕರ್ಮಿಯಾಗಿದ್ದು, ಹಳ್ಳಿಯಲ್ಲಿ ಮನೆಗಳಿಗೆ ಭೇಟಿ ನೀಡುತ್ತಿದ್ದ ಎಂದು ಮಹಿಳೆ ಪೊಲೀಸರಿಗೆ ತಿಳಿಸಿದ್ದಾಳೆ. ಈ ರೀತಿಯಾಗಿ ಅವರು ಪರಸ್ಪರ ಪರಿಚಯವಾದರು ಮತ್ತು ಮೊಬೈಲ್ ನಂಬರ್‌ ಅನ್ನು ವಿನಿಮಯ ಮಾಡಿಕೊಂಡರು. ಅವರು ಆಗಾಗ್ಗೆ ಫೋನ್‍ನಲ್ಲಿ ಮಾತನಾಡುತ್ತಿದ್ದರು. ಒಂದು ದಿನ, ಇಕ್ಬಾಲ್ ಮಹಿಳೆಯ ಬಳಿ ದೈಹಿಕ ಸಂಬಂಧ ಬೆಳೆಸುವಂತೆ ಒತ್ತಾಯಿಸಿದ್ದಾನೆ. ಅವಳು ಈ ವಿಚಾರವನ್ನು ತನ್ನ ಗಂಡನಿಗೆ ಹೇಳುತ್ತೇನೆ ಎಂದು ಅವನಿಗೆ ಎಚ್ಚರಿಕೆ ನೀಡಿದಾಗ, ಇಕ್ಬಾಲ್ ತನ್ನ ಬಳಿ ಕರೆ ರೆಕಾರ್ಡಿಂಗ್‍ಗಳಿವೆ ಮತ್ತು ಅದನ್ನು ಗಂಡನಿಗೆ ತೋರಿಸಿ ಸಂಸಾರವನ್ನು ನಾಶಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಮಹಿಳೆ ತಿಳಿಸಿದ್ದಾಳೆ.

"ನನಗೆ ಚಿಕ್ಕ ಮಕ್ಕಳಿದ್ದಾರೆ ಆದ್ದರಿಂದ ನಾನು ಇದನ್ನು ಸಹಿಸಿಕೊಂಡಿದ್ದೇನೆ. ಅವನೊಂದಿಗೆ ದೈಹಿಕ ಸಂಬಂಧ ಹೊಂದುವಂತೆ ಅವನು ಅನೇಕ ಬಾರಿ ಬ್ಲ್ಯಾಕ್‌ಮೇಲ್‌ ಮಾಡಿದ್ದಾನೆ. ನಾನು ಇದರಿಂದ ಬೇಸತ್ತಿದ್ದೆ. ಬುಧವಾರ, ಇಕ್ಬಾಲ್ ತನ್ನ ಹೆಂಡತಿಯನ್ನು ಅವಳ ಹೆತ್ತವರ ಮನೆಯಲ್ಲಿ ಬಿಡಲು ಹೋದಾಗ ನಾನು ಅವನನ್ನು ಭೇಟಿಯಾಗುವುದಾಗಿ ಹೇಳಿದೆ ಎಂದು ಆಕೆ ಪೊಲೀಸ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

“ಇಕ್ಬಾಲ್ ತನ್ನ ಗಂಡನಿಗೆ ನಿದ್ರೆ ಬರುವಂತೆ ಮಾಡಲು ಮಹಿಳೆಗೆ ಎರಡು ಮಾತ್ರೆಗಳನ್ನು ನೀಡಿದ್ದಾನೆ. ರಾತ್ರಿ 8 ಗಂಟೆ ಸುಮಾರಿಗೆ ನಾನು ನನ್ನ ಪತಿಗೆ ಚಹಾ ನೀಡಿದೆ. ನಾನು ಮಾತ್ರೆಗಳನ್ನು ಆ ಚಹಾದಲ್ಲಿ ಹಾಕಿದ್ದೆ. ಸ್ವಲ್ಪ ಸಮಯದ ನಂತರ, ಅವರು ನಿದ್ರೆಗೆ ಜಾರಿದ್ದಾರೆ. ರಾತ್ರಿ 11.40ರ ಸುಮಾರಿಗೆ, ನಾನು ಇಕ್ಬಾಲ್ ಅವನೊಂದಿಗೆ ಫೋನಿನಲ್ಲಿ ಮಾತನಾಡಿದೆ ಮತ್ತು ಅವನು ನನ್ನನ್ನು ಬರಲು ಹೇಳಿದನು. ಅವನು ಮನೆಯಲ್ಲಿ ಒಬ್ಬನೇ ಇದ್ದಾನೆ ಎಂದು ಹೇಳಿದನು" ಎಂದು ಆಕೆ ಹೇಳಿದ್ದಾಳೆ.

ಈ ಸುದ್ದಿಯನ್ನೂ ಓದಿ:Double Murder Case: ಬೆಂಗಳೂರಿನಲ್ಲಿ ಡಬಲ್‌ ಮರ್ಡರ್‌, ಪಾರ್ಟಿ ವೇಳೆ ಕೊಲೆ

"ಅವನ ಮನೆಗೆ ಹೋಗುವಾಗ, ಅವನನ್ನು ಇಂದು ಸಾಯಿಸಬೇಕು ಎಂದು ನಾನು ನಿರ್ಧಾರ ಮಾಡಿದ್ದೆ. ಅವನು ನನ್ನೊಂದಿಗೆ ನಿಕಟವಾಗಲು ಶುರು ಮಾಡಿದಾಗ ನಾವು ಪರಸ್ಪರ ಮಾತನಾಡುತ್ತಾ ನಾನು ಅವನ ಕೈಗಳನ್ನು ಬಳಸಿ ಉಸಿರುಗಟ್ಟಿಸಿದೆ. ಅವನು ಸತ್ತಿದ್ದಾನೆಂದು ನನಗೆ ಖಚಿತವಾದ ನಂತರ ನಾನು ಮನೆಗೆ ಮರಳಿದೆ. ನಾನು ಇಕ್ಬಾಲ್ ಬಗ್ಗೆ ತುಂಬಾ ಅಸಮಾಧಾನಗೊಂಡಿದ್ದೆ. ನನ್ನ ಕುಟುಂಬವನ್ನು ರಕ್ಷಿಸಲು ಬಯಸಿದ್ದರಿಂದ ನನಗೆ ಬೇರೆ ಆಯ್ಕೆ ಇರಲಿಲ್ಲ" ಎಂದು ಆಕೆ ಹೇಳಿದ್ದಾಳೆ.