Odisha tragedy: ಒಡಿಶಾದಲ್ಲಿ ಭಾರೀ ದುರಂತ; ಸ್ಥಾವರದಲ್ಲಿ ಕಬ್ಬಿಣ ರಚನೆ ಕುಸಿತ
Odisha Tragedy: ಸಿಮೆಂಟ್ ಕಾರ್ಖಾನೆಯೊಳಗೆ ಕಲ್ಲಿದ್ದಲು ದೊಡ್ಡ ಕಬ್ಬಿಣದ ರಚನೆ ಕುಸಿದು ಬಿದ್ದಿರುವ ಘಟನೆ ಒಡಿಶಾದಲ್ಲಿ ನಡೆದಿದೆ. ಸುಂದರ್‌ಗಢ ಜಿಲ್ಲೆಯ ರಾಜ್‌ಗಂಗ್‌ಪುರದಲ್ಲಿ ಈ ಭೀಕರ ದುರ್ಘಟನೆ ಸಂಭವಿಸಿದ್ದು, ಹಲವಾರು ಕಾರ್ಮಿಕರು ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ.
Source : Hindustan Times
ಭುವನೇಶ್ವರ, ಜನವರಿ 17,2025: ಸಿಮೆಂಟ್ ಕಾರ್ಖಾನೆಯೊಳಗೆ ಕಲ್ಲಿದ್ದಲು ದೊಡ್ಡ ಕಬ್ಬಿಣದ ರಚನೆ ಕುಸಿದು ಬಿದ್ದಿರುವ ಘಟನೆ ಒಡಿಶಾದಲ್ಲಿ ನಡೆದಿದೆ(Odisha Accident). ಸುಂದರ್‌ಗಢ ಜಿಲ್ಲೆಯ ರಾಜ್‌ಗಂಗ್‌ಪುರದಲ್ಲಿ ಈ ಭೀಕರ ದುರ್ಘಟನೆ ಸಂಭವಿಸಿದ್ದು, ಹಲವಾರು ಕಾರ್ಮಿಕರು ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಈ ಘಟನೆಯಲ್ಲಿ ಕೆಲವು ಸಾವುಗಳು ಸಂಭವಿಸುವ ಸಾಧ್ಯತೆ ಇದೆ ಎಂದು ವರದಿಗಳು ಬರುತ್ತಿವೆ ಎಂದು ಸುಂದರ್‌ಗಢ ಶಾಸಕ ರಾಜೇನ್ ಎಕ್ಕಾ ಹೇಳಿದ್ದಾರೆ.
ದಾಲ್ಮಿಯಾ ಭಾರತ್ ಸಿಮೆಂಟ್ ಲಿಮಿಟೆಡ್ ಕಾರ್ಖಾನೆಯಲ್ಲಿ ಈ ಘಟನೆ ಸಂಭವಿಸಿದ್ದು, 12ಕ್ಕೂ ಹೆಚ್ಚು ಕಾರ್ಮಿಕರು ಘಟನಾ ಸ್ಥಳದ ಬಳಿ ಕೆಲಸ ಮಾಡುತ್ತಿದ್ದರು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇನ್ನು ಅವಶೇಷಗಳ ಅಡಿಯಲ್ಲಿ ಎಷ್ಟು ಕಾರ್ಮಿಕರು ಸಿಲುಕಿದ್ದಾರೆಂದು ಕಂಪನಿ ಅಥವಾ ಪೊಲೀಸರಿಗೆ ಖಚಿತವಿಲ್ಲ. ಘಟನೆ ಬಗ್ಗೆ ವರದಿಯಾಗುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಧಾವಿಸಿದ್ದು, ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ.
VIDEO | Several workers were suspected to have been trapped under the debris after a coal hopper, a big iron structure, collapsed inside a cement factory at Rajgangpur in Odisha’s Sundargarh district on Thursday evening. Here's what Sundargarh MLA Rajen Ekka said.
— Press Trust of India (@PTI_News) January 17, 2025
"An accident… pic.twitter.com/CQJPOwSRcn
"ದಾಲ್ಮಿಯಾ ಭಾರತ್ ಸಿಮೆಂಟ್ ಲಿಮಿಟೆಡ್‌ನಲ್ಲಿ ಅಪಘಾತ ಸಂಭವಿಸಿದೆ. ಮಾಹಿತಿ ತಿಳಿದ ತಕ್ಷಣ ನಾವು ಕಾರ್ಖಾನೆಗೆ ಧಾವಿಸಿದೆವು. ಆಡಳಿತ ಡಿಐಜಿ, ಎಸ್‌ಪಿ, ಸಬ್-ಕಲೆಕ್ಟರ್ ಸೇರಿದಂತೆ ಎಲ್ಲಾ ಅಧಿಕಾರಿಗಳು ಕಾರ್ಖಾನೆಯೊಳಗೆ ಇದ್ದಾರೆ. ಜನರಿಗೆ ಸಹಾಯ ಮಾಡಲು ನಾವು ಇಲ್ಲಿದ್ದೇವೆ. ಘಟನೆಯಲ್ಲಿ ಕೆಲವು ಸಾವುಗಳು ಸಂಭವಿಸಿವೆ ಎಂಬ ವರದಿಗಳು ಬರುತ್ತಿವೆ. ಕಾರ್ಖಾನೆ ವ್ಯವಸ್ಥಾಪಕ, ಶಿಫ್ಟ್ ಇನ್‌ಚಾರ್ಜ್ ಮತ್ತು ಸುರಕ್ಷತಾ ಇನ್‌ಚಾರ್ಜ್ ಅವರನ್ನು ಬಂಧಿಸಿ ವಿಚಾರಣೆ ಮಾಡಬೇಕು. ಜನರಿಗೆ ಪರಿಹಾರ ನೀಡಬೇಕು ಮತ್ತು ಚಿಕಿತ್ಸೆ ನೀಡಬೇಕು" ಎಂದು ಸುಂದರಗಢ ಶಾಸಕ ರಾಜೇನ್ ಎಕ್ಕಾ ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Viral Video: ಮೊಸಳೆಯ ಬಾಯಿಯನ್ನೇ ಕಚ್ಚಿ ಸಾವಿನಿಂದ ಪಾರಾದ ಜೀಬ್ರಾ: ಶಾಕಿಂಗ್ ವಿಡಿಯೊ ವೈರಲ್
ಕ್ರೇನ್‌ಗಳ ಸಹಾಯದಿಂದ ಅವಶೇಷಗಳನ್ನು ತೆಗೆದುಹಾಕಲಾಗುತ್ತಿದೆ. ಇಲ್ಲಿಯವರೆಗೆ ಯಾವುದೇ ಸಾವುನೋವು ಅಥವಾ ಗಾಯದ ವರದಿಯಾಗಿಲ್ಲ. ಆದರೆ, ಕಾರ್ಮಿಕರು ಸಾಮಾನ್ಯವಾಗಿ ರಚನೆಯ ಕೆಳಗೆ ಕೆಲಸ ಮಾಡುವುದರಿಂದ ಕೆಲವು ಕಾರ್ಮಿಕರು ಅವಶೇಷಗಳೊಳಗೆ ಸಿಲುಕಿಕೊಂಡಿರಬಹುದು ಎಂದು ನಾವು ಶಂಕಿಸುತ್ತೇವೆ" ಎಂದು ರಾಜಗಂಗ್‌ಪುರ ಪೊಲೀಸ್ ಠಾಣೆಯ ಉಸ್ತುವಾರಿ ಇನ್ಸ್‌ಪೆಕ್ಟರ್ ಮನರಂಜನ್ ಪ್ರಧಾನ್ ತಿಳಿಸಿದರು.
ಘಟನೆ ಬಗ್ಗೆ ಸುದ್ದಿಯಾಗುತ್ತಿದ್ದಂತೆ ನೂರಾರು ಕಾರ್ಮಿಕರು ಮತ್ತು ಸ್ಥಳದಲ್ಲಿ ಕೆಲಸ ಮಾಡುತ್ತಿದ್ದವರ ಕುಟುಂಬ ಸದಸ್ಯರು ಸ್ಥಾವರದ ಹೊರಗೆ ಜಮಾಯಿಸಿದ್ದಾರೆ.