ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Readers Colony: ಶಕ್ತಿಶಾಲಿಯ ಅಶಕ್ತತೆ

ನಾವು ಯಶಸ್ಸನ್ನು ಸಾಧಿಸಲು ಯತ್ನಿಸುವಾಗ, ನಮ್ಮ ಆಪ್ತರನ್ನು ಕಡೆಗಣಿಸುವುದು ಅಥವಾ ನಮ್ಮ ವೈಯಕ್ತಿಕ ಮೌಲ್ಯಗಳಲ್ಲಿ ರಾಜಿ ಮಾಡಿಕೊಳ್ಳುವುದು ಸಾಮಾನ್ಯ. ಇಂಥ ಸನ್ನಿವೇಶಗಳನ್ನು ಎದುರಿಸು ವಾಗ ಹೇಗೆ ಸಮತೋಲನವನ್ನು ಕಾಯ್ದುಕೊಳ್ಳಬೇಕು ಎಂಬುದರ ಬಗ್ಗೆಯೂ ಈ ಲೇಖನ ಸಂದೇಶ ವನ್ನು ನೀಡುವುದಲ್ಲದೆ, ಉತ್ತಮ ಜೀವನಕ್ಕೆ ಸೂಕ್ತವಾದ ಮಾರ್ಗವನ್ನೂ ಸೂಚಿಸುತ್ತದೆ.

ಓದುಗರ ಓಣಿ

ರಂಗಸ್ವಾಮಿ ಮೂಕನಹಳ್ಳಿ ಅವರು ಬರೆದ ‘ವ್ಯಕ್ತಿಯೊಬ್ಬ ಶಕ್ತಿಶಾಲಿ ಆದಂತೆಲ್ಲಾ ಅದೆಷ್ಟು ಅಶಕ್ತ’ ಎಂಬ ಲೇಖನವು (ಆ.೨೬) ನಿಜಕ್ಕೂ ಉತ್ತಮವಾಗಿದ್ದು ಚಿಂತನಾಪ್ರಚೋದಕವಾಗಿತ್ತು. ‘ಶಕ್ತಿ’ ಮತ್ತು ‘ಅಶಕ್ತತೆ’ ಎಂಬ ವಿರೋಧಾತ್ಮಕ ಭಾವನೆಗಳನ್ನು ಲೇಖಕರು ಅತ್ಯಂತ ಸೂಕ್ಷ್ಮವಾಗಿ, ಮನಮುಟ್ಟು ವಂತೆ ವಿವರಿಸಿದ್ದಾರೆ. ವ್ಯಕ್ತಿಯು ಬಾಹ್ಯವಾಗಿ ಶಕ್ತಿಶಾಲಿ ಆಗುತ್ತಿದ್ದಂತೆ ಆಂತರಿಕವಾಗಿ ಹೇಗೆ ದುರ್ಬಲನಾಗುತ್ತಾನೆ ಎಂಬುದು ನಮ್ಮನ್ನು ಆಳವಾಗಿ ಆಲೋಚಿಸುವಂತೆ ಮಾಡುವುದಲ್ಲದೆ ಜೀವನ ಪಾಠವನ್ನೂ ಹೇಳುತ್ತದೆ.

ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಪ್ರತಿಯೊಬ್ಬರೂ ಅಧಿಕಾರ ಮತ್ತು ಯಶಸ್ಸಿನ ಹಿಂದೆ ಓಡುತ್ತಾರೆ. ಇಂಥವರು ತಮ್ಮ ಆಂತರಿಕ ನೆಮ್ಮದಿ, ಮಾನವೀಯ ಸಂಬಂಧಗಳು ಮತ್ತು ವೈಯಕ್ತಿಕ ಶಾಂತಿ ಯನ್ನು ಹೇಗೆ ಕಳೆದುಕೊಳ್ಳುತ್ತಾರೆ ಎಂಬುದನ್ನು ಈ ಲೇಖನವು ಪರಿಣಾಮಕಾರಿಯಾಗಿ ಚಿತ್ರಿಸಿದೆ.

ನಾವು ಯಶಸ್ಸನ್ನು ಸಾಧಿಸಲು ಯತ್ನಿಸುವಾಗ, ನಮ್ಮ ಆಪ್ತರನ್ನು ಕಡೆಗಣಿಸುವುದು ಅಥವಾ ನಮ್ಮ ವೈಯಕ್ತಿಕ ಮೌಲ್ಯಗಳಲ್ಲಿ ರಾಜಿ ಮಾಡಿಕೊಳ್ಳುವುದು ಸಾಮಾನ್ಯ. ಇಂಥ ಸನ್ನಿವೇಶಗಳನ್ನು ಎದುರಿಸುವಾಗ ಹೇಗೆ ಸಮತೋಲನವನ್ನು ಕಾಯ್ದುಕೊಳ್ಳಬೇಕು ಎಂಬುದರ ಬಗ್ಗೆಯೂ ಈ ಲೇಖನ ಸಂದೇಶವನ್ನು ನೀಡುವುದಲ್ಲದೆ, ಉತ್ತಮ ಜೀವನಕ್ಕೆ ಸೂಕ್ತವಾದ ಮಾರ್ಗವನ್ನೂ ಸೂಚಿಸುತ್ತದೆ.

ಇದನ್ನೂ ಓದಿ: Readers Colony: ಇದು ‘ಟಿವಿ’ ರಾಮಾಯಣ!

ಒಟ್ಟಾರೆಯಾಗಿ ಈ ಲೇಖನವು ಕೇವಲ ಒಂದು ಓದುವ ಅನುಭವವಾಗಿರದೆ, ನಮ್ಮ ಅಂತರಂಗ ವನ್ನು ಅವಲೋಕಿಸಿಕೊಳ್ಳಲು ಪ್ರೇರೇಪಿಸುತ್ತದೆ. ‘ಈ ಬದುಕು ನಮ್ಮದೇ, ಅದನ್ನು ನಮ್ಮ ಇಚ್ಛೆಗೆ ಅನುಸಾರವಾಗಿ ಮತ್ತು ನೆಮ್ಮದಿಯಿಂದ ರೂಪಿಸಿಕೊಳ್ಳೋಣ’ ಎಂಬ ಸಂದೇಶವನ್ನು ಇದು ನೀಡುತ್ತದೆ.

- ಹೊಸ್ಮನೆ ಮುತ್ತು, ಬೆಂಗಳೂರು

ಮಿಥ್ಯಾಚಾರ ಬೇಡ ಬಾನು

ಮುಷ್ತಾಕ್ ಅವರು ಮುಸ್ಲಿಮರಾದ ಕಾರಣ, ಶ್ರೀ ಚಾಮುಂಡೇಶ್ವರಿಯ ಪೂಜೆಯ ಮೂಲಕ ನಡೆಯುವ ದಸರಾ ಮಹೋತ್ಸವದ ಉದ್ಘಾಟನೆಯನ್ನು ಅವರು ಮಾಡಬಾ ರದು ಎಂಬ ಮಾತು ಸರಿಯಲ್ಲ. ಕನ್ನಡ ತಾಯಿಯನ್ನು ‘ನಿತ್ಯೋತ್ಸವ, ತಾಯಿ ನಿತ್ಯೋತ್ಸವ’ ಎಂದು ಆರಾಧಿಸಿದವರು ಮುಸ್ಲಿಮರೇ ಆಗಿದ್ದ ನಿಸಾರ್ ಅಹ್ಮದ್ ಎಂಬುದು ಸ್ಮರಣೀಯ. ಆದರೆ, ದೇವಿಯ ಆರಾಧನೆಯ ಬಗ್ಗೆಯೇ ಆಗಲಿ, ಅದು ನಡೆಯುವ ಸನಾತನ ಧರ್ಮದ ಪಾರಂಪರಿಕ ರೀತಿಗಳ ಬಗ್ಗೆಯೇ ಆಗಲಿ, ಅಶ್ರದ್ಧೆ-ಅಸಹನೆಗಳಿದ್ದಲ್ಲಿ ಬಾನು ಮುಷ್ತಾಕ್ ಅವರು ದಸರಾದ ಉದ್ಘಾಟನೆಯಿಂದ ಹಿಂದೆ ಸರಿಯಬೇಕು. ಒಳಗೊಂದು ಹೊರಗೊಂದು ಎಂಬ ಮಿಥ್ಯಾಚಾರ ರಾಜಕಾರಣಿಗಳಿಗಷ್ಟೇ ಸೀಮಿತವಾಗಿರಲಿ, ಸಾಹಿತಿಗಳಿಗೂ ಸಂಕ್ರಮಿಸುವುದು ಬೇಡ.

- ಜಿ.ಎಲ್.ಕೃಷ್ಣ, ಬೆಂಗಳೂರು