ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Readers Colony: ಇದು ವಿಶಿಷ್ಠ ನಡೆ

ವಿವಿಧ ಕ್ಷೇತ್ರಗಳ ತಜ್ಞರು, ಜನಸಾಮಾನ್ಯರು, ವಿದ್ಯಾರ್ಥಿಗಳು ಜತೆಯಾಗಿ ಹಳ್ಳಿಗಳಿಗೆ ಸಾಗಿ ಅಲ್ಲಿಯ ಜನರೊಡನೆ ಬೆರೆತು ಅವರ ಸಂವೇದನೆ-ವೇದನೆಗಳಿಗೆ ಕಿವಿಯಾಗುವ ‘ನಮ್ಮ ನಡೆ, ಅಂತರಂಗದ ಕಡೆಗೆ’ ಹೆಸರಿನ ಪಾದಯಾತ್ರೆಯೊಂದು ಡಿ.27ರಂದು ಧಾರವಾಡ ನಗರದಿಂದ ಆರಂಭವಾಗಿದೆ. ಈ ನಡೆ ಅತ್ಯಂತ ಸ್ವಾಗತಾರ್ಹವಾದುದು.

ಓದುಗರ ಓಣಿ

ವಿವಿಧ ಕ್ಷೇತ್ರಗಳ ತಜ್ಞರು, ಜನಸಾಮಾನ್ಯರು, ವಿದ್ಯಾರ್ಥಿಗಳು ಜತೆಯಾಗಿ ಹಳ್ಳಿಗಳಿಗೆ ಸಾಗಿ ಅಲ್ಲಿಯ ಜನರೊಡನೆ ಬೆರೆತು ಅವರ ಸಂವೇದನೆ-ವೇದನೆಗಳಿಗೆ ಕಿವಿಯಾಗುವ ‘ನಮ್ಮ ನಡೆ, ಅಂತರಂಗದ ಕಡೆಗೆ’ ಹೆಸರಿನ ಪಾದಯಾತ್ರೆಯೊಂದು ಡಿ.27ರಂದು ಧಾರವಾಡ ನಗರದಿಂದ ಆರಂಭವಾಗಿದೆ. ಈ ನಡೆ ಅತ್ಯಂತ ಸ್ವಾಗತಾರ್ಹವಾದುದು.

ಕರ್ನಾಟಕದ ವಿವಿಧ ಹಳ್ಳಿಗಳ ರಾಷ್ಟ್ರೀಕೃತ ಬ್ಯಾಂಕ್ ಮತ್ತು ಗ್ರಾಮೀಣ ಬ್ಯಾಂಕ್ ಶಾಖೆಗಳಲ್ಲಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿರುವ ನಾನು ಕಂಡುಕೊಂಡಿರುವ ಅನುಭವಸಿದ್ಧ ಸತ್ಯ ವೆಂದರೆ, ನಿಜವಾದ ಭಾರತವು ಹಳ್ಳಿಗಳಲ್ಲಿದೆ. ಭಾರತದ ಭಾಷೆ, ಸಂಸ್ಕೃತಿ, ಅಭಿವೃದ್ಧಿ, ವಿಕಾಸ ಇವುಗಳ ಬೇರುಗಳು ಹಳ್ಳಿಗಳಲ್ಲಿವೆ. ಆದರೆ, ನಿರುದ್ಯೋಗ, ನಗರಾಕರ್ಷಣೆ, ಅನಪೇಕ್ಷಿತ ರಾಜಕಾರಣ, ಮೂಲಸೌಕರ್ಯಗಳ ಕೊರತೆ, ಶಿಕ್ಷಣ ಮತ್ತು ಆರೋಗ್ಯ ಸೌಲಭ್ಯಗಳ ಕಡೆಗಣನೆ, ಬೆಳೆಗಳ ಬೆಲೆ ನಿರ್ಣಯದ ಸಮಸ್ಯೆಗಳು ಮುಂತಾದ ರಾಸಾಯನಿಕ ವಿಷಗಳು ಈ ಬೇರುಗಳಿಗೆ ಮಾರಕವಾಗಿವೆ.

ಸರಕಾರಿ ಆಡಳಿತ ವ್ಯವಸ್ಥೆಗಳು ತಮ್ಮ ಕರ್ತವ್ಯಗಳನ್ನು ನಿಸ್ಪೃಹವಾಗಿ ಮತ್ತು ಪರಿಣಾಮಕಾರಿ ಯಾಗಿ ನಿರ್ವಹಿಸುತ್ತಿಲ್ಲ. ನಗರ ಪ್ರದೇಶಗಳ ವಿವಿಧ ಕ್ಷೇತ್ರಗಳ ಜನರು ಹಳ್ಳಿಗಳಿಗೆ ಹೋಗಿ ಅಲ್ಲಿನ ಜನರೊಂದಿಗೆ ಬೆರೆತು ಅವರ ಕೌಶಲಗಳನ್ನು ಗಮನಿಸಿದಾಗ, ಸಮಸ್ಯೆಗಳನ್ನು ಆಲಿಸಿದಾಗ, ಹಳ್ಳಿಗ ರಿಗೆ ಏನಲ್ಲದಿದ್ದರೂ ಸಾಂತ್ವನವಾದರೂ ಸಿಕ್ಕೇ ಸಿಗುತ್ತದೆ.

ಇದನ್ನೂ ಓದಿ: Readers Colony: ಅಪೂರ್ವ ಕಥಾನಕ

ನಗರವಾಸಿಗಳ ನಡೆಯ ಇಂಥ ಅಭಿಯಾನಗಳು ವ್ಯಾಪಕತೆ ಮತ್ತು ಸಂಖ್ಯೆಗಳಲ್ಲಿ ಹೆಚ್ಚಾಗುತ್ತ ಹೋದಂತೆ ಗ್ರಾಮ ಮತ್ತು ನಗರಗಳ ಮಧ್ಯೆ ಅರಿವಿನ ಗಟ್ಟಿ ಸೇತುವೆಯೊಂದು ನಿರ್ಮಾಣ ವಾಗುತ್ತದೆ. ಕಾಲಕ್ರಮದಲ್ಲಿ ಆ ಸೇತುವೆಯ ಮೂಲಕ, ಆಡಳಿತ ವ್ಯವಸ್ಥೆಯೂ ಸೇರಿದಂತೆ ಹಲವು ಮೂಲಗಳಿಂದ ಹಳ್ಳಿಗಳಿಗೆ ಅವಶ್ಯ ನೆರವು, ಪರಿಹಾರ, ಯೋಜನೆಗಳು ಸಾಗಿ ಬಂದು ಸಮರ್ಥವಾಗಿ ಜಾರಿಗೊಳ್ಳುವ ಸಾಧ್ಯತೆ ಇದೆ. ಇಂಥ ವಿಶಿಷ್ಟ ನಡೆಗಳು ಎಡೆ ವಿಸ್ತರಿಸಲಿ.

- ಎಚ್. ಆನಂದರಾಮ ಶಾಸ್ತ್ರೀ , ಬೆಂಗಳೂರು

ಆಡದಿದ್ರೆ ಮೈದಾನವೇಕೆ?

ವಿಜಯ್ ಹಜಾರೆ ಟ್ರೋಫಿಯ ಕ್ರಿಕೆಟ್ ಪಂದ್ಯದಲ್ಲಿ ಆಡಲು ವಿರಾಟ್ ಕೊಹ್ಲಿ ಬರುತ್ತಾರೆ, ಅವರನ್ನು ನೋಡಲು ಅಭಿಮಾನಿಗಳು ಸೇರುತ್ತಾರೆ ಎಂಬ ಕಾರಣಕ್ಕೆ ಸರಕಾರವು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಆಡಲು ಅನುಮತಿ ನೀಡಲಿಲ್ಲ. ಇದಕ್ಕೆ ಕೆಲವೇ ತಿಂಗಳು ಗಳ ಹಿಂದೆ ನಡೆದ ಕಾಲ್ತುಳಿತ ಪ್ರಕರಣವೇ ಕಾರಣ.

ಈ ದುರಂತಕ್ಕೆ ಅಭಿಮಾನಿಗಳ ನೂಕುನುಗ್ಗಲು, ಆರ್ʼಸಿಬಿ ತಂಡದ ತರಾತುರಿಯ ಆಯೋಜನೆ, ಮುನ್ನೆಚ್ಚರಿಕೆ ವಹಿಸದ ಸರಕಾರ, ಪೋಲೀಸ್ ಇಲಾಖೆ ಎಲ್ಲವೂ ಕಾರಣ. ಹಾಗೆಂದು ಕ್ರಿಕೆಟ್ ಅಂಗಳದಲ್ಲಿ ಕ್ರಿಕೆಟ್ ಆಡುವುದನ್ನೇ ಬಂದ್ ಮಾಡಿಬಿಟ್ಟರೆ ಅದು ಇರುವುದಾದರೂ ಏಕಾಗಿ? ರೈಲು, ಬಸ್, ವಿಮಾನಗಳ ಅಪಘಾತ ಆದರೆ ಅವುಗಳನ್ನೇ ನಿಲ್ಲಿಸುತ್ತಾರೆಯೇ? ಕಳೆದ ವರ್ಷ ತಿರುಮಲ ದಲ್ಲಿ ಕಾಲ್ತುಳಿತ ಆಯಿತೆಂದು ದೇವಾಲಯವನ್ನೇ ಮುಚ್ಚಲಾಗುವುದೇ? ನಟನೊಬ್ಬನ ಭಾಷಣ ದಲ್ಲಿ ದುರಂತ ಸಂಭವಿಸಿತೆಂದು ನಟರ ಭಾಷಣ ನಿಲ್ಲಿಸಲಾದೀತೇ? ಪ್ರಧಾನಿ ನರೇಂದ್ರ ಮೋದಿ, ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯ ನಾಥ್ ಮುಂತಾದವರನ್ನು ಕಣ್ತುಂಬಿಕೊಳ್ಳಲೂ ಅವರ ರೋಡ್ ಶೋಗಳಲ್ಲಿ ಜನ ಭಾಗವಹಿಸು ತ್ತಾರೆ.

ಅವನ್ನೂ ನಿಷೇಧಿಸಲು ಸಾಧ್ಯವೇ? ಇವೆಲ್ಲವನ್ನೂ ತಡೆಯುವುದು ಸಾಧ್ಯವಿಲ್ಲ. ಹಾಗಾಗಿ ದುರಂತ ಸಂಭವಿಸದಂತೆ ಎಲ್ಲ ರೀತಿಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡು ಚಿನ್ನಸ್ವಾಮಿ ಕ್ರೀಡಾಂಗಣ ದಲ್ಲಿ ರಣಜಿ, ಐಪಿಎಲ್ ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟ್ ಆಡುವುದಕ್ಕೆ ಅನುಮತಿ ನೀಡಿ ಕ್ರಿಕೆಟ್ ಅಭಿಮಾನಿಗಳಿಗೆ ಆಟ ವೀಕ್ಷಿಸಲು ಅನುವಾಗುವಂತೆ ಸರಕಾರ ಕ್ರಮ ಕೈಗೊಳ್ಳಲಿ.

- ಪತ್ತಂಗಿ ಎಸ್. ಮುರಳಿ, ಬೆಂಗಳೂರು