ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Readers Colony: ಎಚ್ಚರಿಸುವ ಲೇಖನ

ವಿನಾಯಕ ಭಟ್ಟ ಅಂಬ್ಲಿಹೊಂಡ ಅವರ ‘ವಿದ್ಯಮಾನ’ ಅಂಕಣಬರಹ (ಜ.4) ಸಕಾಲಿಕ ವಾಗಿದೆ. ನಮ್ಮ ರಾಜ್ಯವು ಛತ್ರವಾಗುತ್ತಿದೆ. ಯಾರು ಎಲ್ಲಿಂದ ಬೇಕಾದರೂ ಬಂದು ಇಲ್ಲಿ ಠಿಕಾಣಿ ಹೂಡಿ ದರ್ಪ-ಧಿಮಾಕು ತೋರಿಸಬ ಹುದು ಎನ್ನುವಂತಾಗಿದೆ. ಬಾಂಗ್ಲಾ ನುಸುಳುಕೋರರು ಕರ್ನಾಟಕದಲ್ಲಿ ಗಣನೀಯ ಸಂಖ್ಯೆಯಲ್ಲಿ ಜಮಾಯಿಸುತ್ತಿದ್ದಾರೆ.

Readers Colony: ಎಚ್ಚರಿಸುವ ಲೇಖನ

-

Ashok Nayak
Ashok Nayak Jan 5, 2026 10:35 AM

ಓದುಗರ ಓಣಿ

ವಿನಾಯಕ ಭಟ್ಟ ಅಂಬ್ಲಿಹೊಂಡ ಅವರ ‘ವಿದ್ಯಮಾನ’ ಅಂಕಣಬರಹ (ಜ.4) ಸಕಾಲಿಕ ವಾಗಿದೆ. ನಮ್ಮ ರಾಜ್ಯವು ಛತ್ರವಾಗುತ್ತಿದೆ. ಯಾರು ಎಲ್ಲಿಂದ ಬೇಕಾದರೂ ಬಂದು ಇಲ್ಲಿ ಠಿಕಾಣಿ ಹೂಡಿ ದರ್ಪ-ಧಿಮಾಕು ತೋರಿಸಬ ಹುದು ಎನ್ನುವಂತಾಗಿದೆ. ಬಾಂಗ್ಲಾ ನುಸುಳುಕೋರರು ಕರ್ನಾಟಕದಲ್ಲಿ ಗಣನೀಯ ಸಂಖ್ಯೆಯಲ್ಲಿ ಜಮಾಯಿಸುತ್ತಿದ್ದಾರೆ.

ಕೆಲವರು ತಮ್ಮ ರಾಜಕೀಯ ವಶೀಲಿ ಬಳಸಿಕೊಂಡು ಇಂಥ ಅಕ್ರಮವಾಸಿಗಳನ್ನು ಇಲ್ಲಿ ಸ್ಥಾಪಿಸುತ್ತಿದ್ದಾರೆ. ಕೋಗಿಲು ಬಡಾವಣೆಯಲ್ಲಿನ ಅಕ್ರಮ ಬಾಂಗ್ಲಾವಾಸಿಗಳ ಮನೆಗಳನ್ನು ಗ್ರೇಟರ್ ಬೆಂಗಳೂರು ಅಥಾರಿಟಿಯವರು ತೆರವುಗೊಳಿಸಿದ್ದನ್ನು ಮಾನ್ಯ ಉಪಮುಖ್ಯಮಂತ್ರಿಗಳು ಸಮರ್ಥಿಸಿಕೊಂಡಿದ್ದರು; ಮರುದಿನವೇ ಅಕ್ರಮವಾಸಿಗಳ ಮೇಲೆ ಮಾನವೀಯ ಧಾರೆಯು ಧಾರಾಕಾರವಾಗಿ ಹರಿದು, ಅವರಿಗೆಲ್ಲ ಮನೆ ಕೊಡುವ ಭರವಸೆ ಕೊಟ್ಟರು.

ಕೇರಳದ ಮುಖ್ಯಮಂತ್ರಿ ಮತ್ತು ಪಕ್ಷದ ಕೇರಳ ಪ್ರಧಾನ ಕಾರ್ಯದರ್ಶಿಯವರ ಮಾತಿನ ಇಂಜೆಕ್ಷನ್ ಶೀಘ್ರಫಲ ನೀಡಿದೆ. ಇಲ್ಲಿ ಕೇರಳದವರ‍್ಯಾರೂ ಇಲ್ಲ; ಹಾಗೆ ಸಹಾಯ ಮಾಡಬೇಕೆಂದಿದ್ದಿದ್ದರೆ, ಕೇರಳದಲ್ಲಿ ಜಾಗ ಕೊಟ್ಟು ಪೋಷಿಸಬೇಕಿತ್ತು. ಅದನ್ನು ಬಿಟ್ಟು, ಯಾರದ್ದೋ ದುಡ್ಡಿನಲ್ಲಿ ಹೀಗೆ ಜಾತ್ರೆ ಮಾಡುವುದು ತಪ್ಪು.

ಇದನ್ನೂ ಓದಿ: G N Bhat Column: ತಾಳಮದ್ದಲೆ ಕಲಾಪ್ರಕಾರದ ಇನ್ನೊಂದು ದುರವಸ್ಥೆ

ಮಾತ್ರವಲ್ಲದೆ, ಕನ್ನಡಿಗರೆಡೆಗೆ ಇಲ್ಲದ ಕರುಣೆ ಹೊರರಾಜ್ಯದ, ಅದೂ ಭಾರತ-ವಿರೋಧಿ ಬಾಂಗ್ಲಾದೇಶೀಯರ ಮೇಲೆ ಇರುವುದು ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ. ನಾವು ಭಾರತೀಯರು ಮತ್ತು ಕನ್ನಡಿಗರು ಇನ್ನಾದರೂ ಇಂಥ ಅಪದ್ಧಗಳನ್ನು ವಿರೋಧಿಸಿ ಸರಕಾರದ ನಡೆಯನ್ನು ಖಂಡಿಸಬೇಕು. ಈ ಅಂಕಣಬರಹವು ಕನ್ನಡಿಗರ ಕಣ್ಣು ತೆರೆಸುವಂತಿದೆ.

- ಬಿ.ಎಸ್.ಮೋಹನ್ ಕುಮಾರ್, ಬೆಂಗಳೂರು

ವಸ್ತುನಿಷ್ಠತೆ ಬೇಕು

ತಾಳಮದ್ದಳೆ ಕ್ಷೇತ್ರದ ಬಗೆಗಿನ ಚರ್ಚೆಗೆ ಅವಕಾಶ ಕೊಟ್ಟ ‘ವಿಶ್ವವಾಣಿ’ ಪತ್ರಿಕೆಯ ಕಳಕಳಿ ಮೆಚ್ಚುವಂಥದ್ದು. ಆದರೆ, ಇಲ್ಲಿ ಪ್ರಕಟವಾಗುತ್ತಿರುವ ಹೆಚ್ಚಿನ ಲೇಖನಗಳು, ತಾಳಮದ್ದಳೆ ಯ ಬಗ್ಗೆ ಹೆಚ್ಚಿನ ತಿಳಿವಳಿಕೆ ಇಲ್ಲದವರೇ, ತಮಗೆ ಗೊತ್ತಿದೆ ಎನ್ನುವುದನ್ನು ತೋರಿಸುವು ದಕ್ಕೋಸ್ಕರವೇ ಬರೆದಿರುವಂತೆ ಇದೆ. ತಾಳಮದ್ದಳೆ ಅರ್ಥಧಾರಿಗಳು ಯಾರು? ವೇಷ ಧಾರಿಗಳು, ಪ್ರಸಂಗಕರ್ತರು ಯಾರು? ಎಂಬ ಪರಿಚಯವೇ ಇಲ್ಲದವರು ಬರೆಯುತ್ತಿರು ವಂತೆ ಕಾಣುತ್ತಿದೆ. ಇಂಥ ಚರ್ಚೆ/ಬರಹದಿಂದ ತಾಳಮದ್ದಳೆ, ಯಕ್ಷಗಾನ ಕ್ಷೇತ್ರಕ್ಕೆ ಯಾವು ದೇ ರೀತಿಯ ಪ್ರಯೋಜನ ಇಲ್ಲ. ವಸ್ತುನಿಷ್ಠವಾಗಿ ವಿಮರ್ಶೆ ಮಾಡಿ ಬರೆಯುವವರ ಲೇಖನಗಳು ಬರುವಂತಾಗಲಿ.

- ಡಾ. ಸತ್ಯನಾರಾಯಣ, ಸುಳ್ಯಪದವು

ಸೊಗಸಾದ ಲೇಖನ

S Joshi 0401

ಶ್ರೀವತ್ಸ ಜೋಶಿ ಅವರ, ‘ಲೋಕವೇ ಹೇಳಿದ ಮಾತಿದು...’ ಶೀರ್ಷಿಕೆಯ ‘ತಿಳಿರು ತೋರಣ’ ಅಂಕಣ (ಜ.4) ಸೊಗಸಾಗಿ ಮೂಡಿಬಂದಿದೆ. ‘ಶಿವಪೂಜೆಯಲ್ಲಿ ಕರಡಿಗೆ ಬಿಟ್ರಂತೆ’ ಅನ್ನೋ ಬದಲು ಈಗಲೂ ಕೆಲವರು ‘ಕರಡಿ ಬಿಟ್ರಂತೆ’ ಅಂತ ಹೇಳೋದು ನಿಜ! ಈ ಲೇಖನದ ಮೂಲಕ ಅವರು, ಕನ್ನಡದ ಅನೇಕ ಜನಪ್ರಿಯ ನುಡಿಗಟ್ಟುಗಳು ಹುಟ್ಟಿದ್ದು ಹೇಗೆ, ಅವು ಗಳ ಸರಿಯಾದ ಅರ್ಥವೇನು ಎಂಬುದನ್ನು ಎಲ್ಲರಿಗೂ ಮನವರಿಕೆ ಮಾಡಿ ಕೊಟ್ಟಿದ್ದಾರೆ. ಹೀಗೆ ವಿವಿಧ ವಿಷಯಗಳ ಬಗ್ಗೆ ಬೆಳಕು ಚೆಲ್ಲುವ ಲೇಖನಗಳನ್ನು ಪ್ರತಿವಾರ ಬರೆಯುವ ಶ್ರೀವತ್ಸ ಜೋಶಿಯವರಿಗೂ, ಪ್ರಕಟಿಸುವ ‘ವಿಶ್ವವಾಣಿ’ ಪತ್ರಿಕೆಗೂ ಧನ್ಯವಾದಗಳು.

- ರಾಘವೇಂದ್ರ ಜೋಯಿಸ್, ಮೈಸೂರು