ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಮುಂಗಾರು ಮಳೆಯಲ್ಲಿ ಮಾನ್ಸೂನ್‌ ರಾಗ

ಮುಂಗಾರು ಮಳೆಯಲ್ಲಿ ಮಾನ್ಸೂನ್‌ ರಾಗ

ಮುಂಗಾರು ಮಳೆಯಲ್ಲಿ ಮಾನ್ಸೂನ್‌ ರಾಗ

Profile Vishwavani News Sep 16, 2022 4:17 PM
image-0d5e574d-6982-4a86-870b-451e094a8dec.jpg
ಹೊಸ ರಿದಂ ಮೂಲಕ ಸದ್ಧು ಮಾಡುತ್ತಿರುವ ಮಾನ್ಸೂನ್ ರಾಗ ಚಂದನವನದಲ್ಲಿ ಅಪಾರ ನಿರೀಕ್ಷೆ ಮೂಡಿಸಿದೆ. ರಚ್ಚು-ಡಾಲಿಯ ಜೋಡಿ ಬೆಳ್ಳಿತೆರೆಯಲ್ಲಿ ಮೋಡಿ ಮಾಡಲಿದೆ. ಸಂಗೀತದ ಮೂಲಕವೇ ಮನಸೂರೆಗೊಳ್ಳುತ್ತಿರುವ ಮಾನ್ಸೂನ್ ರಾಗದಲ್ಲಿ ರಚ್ಚು ವಿಭಿನ್ನ ಪಾತ್ರದಲ್ಲಿ ನಟಿಸಿದ್ದು, ಮುದ್ದಾಗಿ ಕಂಗೊಳಿಸಿದ್ದಾರೆ. ಮಳೆಯಲ್ಲಿ ಮಧುರ ರಾಗ ಹಾಡುತ್ತಿರುವ ರಚಿತಾ ತಮ್ಮ ಪಾತ್ರದ ಬಗ್ಗೆ ವಿ.ಸಿನಿಮಾಸ್‌ನೊಂದಿಗೆ ಮಾತ ನಾಡಿದ್ದಾರೆ. ಪ್ರಶಾಂತ್.ಟಿ.ಆರ್ ವಿ.ಸಿನಿಮಾಸ್ : ಈ ರೀತಿಯ ಪಾತ್ರ ಒಪ್ಪಿಕೊಳ್ಳಲು ಕಾರಣ ? ರಚಿತಾ : ನಾನು ಈ ಹಿಂದೆ ಇದೇ ಚಿತ್ರತಂಡದೊಂದಿಗೆ ಪುಷ್ಪಕ ವಿಮಾನ ಚಿತ್ರದಲ್ಲಿ ಕೆಲಸ ಮಾಡಿದ್ದೆ. ಚಿತ್ರತಂಡದ ಕಾರ್ಯ ವೈಖರಿ ತುಂಬಾ ಹಿಡಿಸಿತು. ಯಾವುದೇ ಪಾತ್ರವನ್ನು ಅದ್ಭುತವಾಗಿ ತೆರೆಗೆ ತರುತ್ತಾರೆ. ಫ್ಯಾಷನೆಟ್ ಆಗಿ ಕೆಲಸ ಮಾಡುತ್ತಾರೆ. ಈ ಪಾತ್ರದ ಬಗ್ಗೆ ನನಗೆ ಮೊದಲು ಹೇಳಿದಾಗ ನಾನು ಏನು ರಿಯಾಕ್ಷನ್ ನೀಡಲಿಲ್ಲ. ಆದರೆ ನಿರ್ದೇಶಕ ರವೀಂದ್ರನಾಥ್ ಅವರು ಪಾತ್ರವನ್ನು ಅದ್ಭುತವಾಗಿ ತರುತ್ತಾರೆ ಎಂಬ ನಂಬಿಕೆ ನನ್ನಲ್ಲಿತ್ತು. ಹಾಗಾಗಿಯೇ ನಟಿಸಲು ಒಪ್ಪಿದೆ. ಅಂದುಕೊಂಡಂತೆ ಅದ್ಭುತವಾಗಿಯೇ ಚಿತ್ರ ಮೂಡಿ ಬಂದಿದೆ. ವಿ.ಸಿ: ಮಾನ್ಸೂನ್ ರಾಗದಲ್ಲಿ ಗಂಗೂಬಾಯಿ ಕಾಥಿಯವಾಡಿ ಶೇಡ್ ಇದೆಯಲ್ಲ ? ರಚಿತಾ : ಗಂಗೂಬಾಯಿ ಕಾಥಿಯವಾಡಿ ಸಿನಿಮಾಗೂ ಮೊದಲೇ ಮಾಡಿದ ಸಿನಿಮಾವಿದು. ಕರೋನಾದಿಂದ ನಮ್ಮ ಸಿನಿಮಾದ ಬಿಡುಗಡೆ ತಡವಾಯಿತು. ಆ ಚಿತ್ರಕ್ಕೂ ಮಾನ್ಸೂನ್ ರಾಗಕ್ಕೂ ಸಾಮ್ಯತೆ ಇಲ್ಲ. ಇಲ್ಲಿ ಎಲ್ಲಾ ಪಾತ್ರಗಳಿಗೂ ಅದರದ್ದೇ ಆದ ಪ್ರಾಮುಖ್ಯತೆ ಇದೆ. ಪಾತ್ರದ ಪ್ರಸೆಂಟೇಷನ್ ತುಂಬಾ ಚೆನ್ನಾಗಿದೆ. ವಿ.ಸಿ : ಈ ಚಿತ್ರದಲ್ಲಿ ನಿಮ್ಮ ಪಾತ್ರದ ಬಗ್ಗೆ ಹೇಳುವುದಾದರೆ ? ರಚಿತಾ : ನಾನು ಈ ಚಿತ್ರದಲ್ಲಿ ಸೆಕ್ಸ್ ವರ್ಕರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಸೆಕ್ಸ್ ವರ್ಕರ್ ಅಂದಾಕ್ಷಣ ಇಲ್ಲಿ ಯಾವುದೇ ಅಸಭ್ಯತೆ ಇಲ್ಲ. ಇದೊಂದು ವಿಭಿನ್ನ ಪಾತ್ರ ಚಿತ್ರದುದಕ್ಕೂ ನನ್ನ ಪಾತ್ರ ಜೀವಿಸುತ್ತದೆ. ಅದನ್ನು ಮನಮುಟ್ಟುವಂತೆ ತೆರೆಯಲ್ಲಿ ಬಿಂಬಿಸಲಾಗಿದೆ. ಮನರಂಜನೆಯೇ ಚಿತ್ರದ ಪ್ರಮುಖ ಉದ್ದೇಶವಾಗಿದೆ. ವಿ.ಸಿ : ನಿಮ್ಮ ಹಾಗೂ ಡಾಲಿ ಅವರ ಕಾಂಬಿನೇಷನ್ ಬಗ್ಗೆ ಹೇಳುವುದಾದರೆ ? ರಚಿತಾ : ನಮ್ಮಿಬ್ಬರ ಕಾಂಬಿನೇಷನ್ ಚೆನ್ನಾಗಿದೆ. ಡಾಲಿ ಧನಂಜಯ ಅವರು ನಿಜವಾ ಗಿಯೂ ನಟ ರಾಕ್ಷಸನೆ ಸರಿ. ಅವರ ಪಾತ್ರ ವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಇಲ್ಲಿ ಪ್ರತಿ ಪಾತ್ರಗಳು ಜೀವಂತವಾ ಗಿವೆ. ಮಾನ್ಸೂನ್ ರಾಗದ ಬಹುತೇಕ ಚಿತ್ರೀಕರಣ ಮಳೆಯಲ್ಲಿಯೇ ನಡೆದಿದೆ. ಈ ಚಿತ್ರವನ್ನು ಮಾನ್ಸೂನ್ ಟೈಮ್‌ನಲ್ಲೇ ಶೂಟ್ ಮಾಡಿದ್ದೆವು. ಈಗ ಈ ಸಮಯದಲ್ಲಿಯೇ ರಿಲೀಸ್ ಆಗುತ್ತಿರುವುದು ಖುಷಿ ತಂದಿದೆ. ವಿ.ಸಿ :ನಿಮ್ಮ ಕಾಸ್ಟ್ಯೂಮ್ ಕೂಡ ವಿಭಿನ್ನವಾಗಿದೆಯಲ್ಲ ? ರಚಿತಾ: ಚಿತ್ರದ ಕಥೆಗೆ ತಕ್ಕಂತೆ ಹಳೆಯ ಕಾಲದ ಕಾಸ್ಟ್ಯೂಮ್ ಅನ್ನು ಈ ಚಿತ್ರದಲ್ಲಿ ಬಳಸಲಾಗಿದೆ. ಚಿತ್ರದುದಕ್ಕೂ ನಾನು ಸೀರೆಯುಟ್ಟು ಕಂಗೊಳಿಸಿ ದ್ದೇನೆ. ಆ ಕಾಸ್ಟ್ಯೂಮ್ ನನಗೂ ತುಂಬಾ ಹಿಡಿಸಿತು. ಹೊಸತನ ತಂದಿತು. ವಿಭಿನ್ನತೆಯ ನೆಲೆಗಟ್ಟು ಮಾನ್ಸೂನ್ ರಾಗ ಇಡೀ ಕುಟುಂಬ ಸಮೇತ ನೋಡಬಹುದಾದ ಅದ್ಬುತ ಪ್ರೇಮ ಕಥೆಯ ಸಿನಿಮಾ. ಸಾಮಾನ್ಯನ ದಿನನಿತ್ಯದ ಬದುಕಿನ ಪಾತ್ರವೇ ಈ ಚಿತ್ರದಲ್ಲಿದೆ. ಇಲ್ಲಿ ನಾನು ಮುಗ್ಧ ಯವಕನ ಪಾತ್ರದಲ್ಲಿ ನಟಿಸಿದ್ದೇನೆ. ಈ ಚಿತ್ರದಲ್ಲಿ ಅಚ್ಯುತ್ ಕುಮಾರ್ ಹಾಗೂ ಸುಹಾಸಿನಿ ಅವರೆ ನಿಜವಾದ ನಾಯಕ, ನಾಯಕಿ. ಚಿತ್ರದ ಕಥೆಯೆ ನನಗೆ ಸಾಹಿತ್ಯ ಬರೆಯಲು ಪ್ರೇರಣೆಯಾಯಿತು ಎನ್ನುತ್ತಾರೆ ಡಾಲಿ ಧನಂಜಯ.