ಬೆಂಗಳೂರು: ಮಗುವಿನ ಕಲ್ಪನೆಯು ಡ್ರಾಯಿಂಗ್ ಪುಸ್ತಕ ದಾಟಿ ನಗರದ ಒಂದು ಭಾಗವಾದಾಗ ಏನಾಗುತ್ತದೆ? ಮಕ್ಕಳ ದಿನಾಚರಣೆಯಂದು, ‘ಸತ್ವ ಸಿಟಿ: ವರ್ಲ್ಡ್ ಆಫ್ ವಂಡರ್ಸ್’ ಎಂಬ ಉಪಕ್ರಮದ ಮೂಲಕ ಈ ಕಲ್ಪನೆಗೆ ಜೀವ ತುಂಬಿದೆ. ಉತ್ತರ ಬೆಂಗಳೂರಿನಲ್ಲಿ ಸ್ವಾವಲಂಬಿ '15-ನಿಮಿಷದ ನಗರ'ವಾಗಿ ರೂಪುಗೊಳ್ಳುತ್ತಿರುವ ಸಂಸ್ಥೆಯ 50 ಎಕರೆ ವಿಸ್ತೀರ್ಣದ ಸಮಗ್ರ ವಸತಿ ಯೋಜನೆ ‘ಸತ್ವ ಸಿಟಿ’ಯ ಹೊರಾಂಗಣ ಜಾಹೀರಾತುಗಳಾಗಿ ಮಕ್ಕಳ ಕಲಾಕೃತಿಗಳನ್ನು ಈ ಉಪಕ್ರಮದ ಮೂಲಕ ಪರಿವರ್ತಿಸಲಾಗಿದೆ.
ಈ ಉಪಕ್ರಮವು 5–12 ವರ್ಷ ವಯಸ್ಸಿನ ಮಕ್ಕಳನ್ನು 'ಸತ್ವ ಸಿಟಿ' ಪ್ರಚಾರ ಕಥಾಹಂದರದ ಭಾಗ ವಾಗಿದ್ದ, ಸೈಕಲ್ ಸವಾರಿ ಮಾಡುವ ಪುಟ್ಟ ಬಾಲಕ ಆರ್ಯನ್ ನ ಕಥೆಯಿಂದ ಪ್ರೇರಿತವಾದ ಮೂಲ ಕಲಾಕೃತಿಗಳನ್ನು ರಚಿಸಲು ಆಹ್ವಾನಿಸಿತು.
ಪೋಷಕರು ಮತ್ತು ಪಾಲಕರು 'ವಿಸ್ಮಯ ಮತ್ತು ಕಲ್ಪನೆ'ಯ ವಿಷಯಾಧಾರಿತ ತಮ್ಮ ಮಕ್ಕಳ ಕಲಾಕೃತಿಗಳನ್ನು ಹ್ಯಾಶ್ಟ್ಯಾಗ್ ಬಳಸಿ ಮತ್ತು ಸತ್ವ ಗ್ರೂಪ್ನ ಅಧಿಕೃತ ಸಾಮಾಜಿಕ ಜಾಲತಾಣ ಖಾತೆಗಳನ್ನು ಟ್ಯಾಗ್ ಮಾಡುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡರು.
ಇದನ್ನೂ ಓದಿ: Satva Developers: ಭಾರತದ ಅತಿದೊಡ್ಡ ರೀಟ್ ಐಪಿಒ : 6200 ಕೋಟಿ ರೂ ಮೊತ್ತದ ಐಪಿಒಗೆ ಸತ್ವ ಡೆವಲಪರ್ಸ್ ಸಜ್ಜು
ಸೃಜನಶೀಲತೆ, ಮೂಲ ಕಲ್ಪನೆ ಮತ್ತು ವಿಷಯಕ್ಕೆ ಇರುವ ಪ್ರಸ್ತುತತೆಯ ಆಧಾರದ ಮೇಲೆ ಕಲಾ ಕೃತಿಗಳನ್ನು ಆಯ್ಕೆ ಮಾಡಲಾಯಿತು. ಪೋಷಕರ ಲಿಖಿತ ಒಪ್ಪಿಗೆಯೊಂದಿಗೆ, ಆಯ್ಕೆಯಾದ ಕಲಾ ಕೃತಿಗಳನ್ನು ಸತ್ವ ಸಿಟಿಯ ವಿನ್ಯಾಸ ಶೈಲಿಯ ಅಂಶಗಳನ್ನು ಒಳಗೊಳ್ಳುವಂತೆ ಮಾರ್ಪಡಿಸ ಲಾಯಿತು ಮತ್ತು ಈ ಯೋಜನೆಯ ಸುತ್ತಲೂ ನಿರ್ಮಿಸಲು ಉದ್ದೇಶಿಸಿರುವ ಎರಡು ಹೊರಾಂಗಣ ಕಲಾ ಸ್ಥಾಪನೆಗಳಲ್ಲಿ ಪ್ರದರ್ಶಿಸಲಾಯಿತು. ಆ ಮೂಲಕ ಪುಟ್ಟ ಕಲಾವಿದರಿಗೆ ತಮ್ಮ ಸೃಷ್ಟಿಗಳು ನಗರದ ಸೌಂದರ್ಯದ ಭಾಗವಾಗುವುದನ್ನು ಕಣ್ಣಾರೆ ಕಾಣುವ ಅವಕಾಶವನ್ನು ನೀಡಲಾಯಿತು.
ಅಭಿಯಾನದ ಸಮಾರೋಪದ ಭಾಗವಾಗಿ, 8 ವರ್ಷದ ವಿಜೇತೆ ರೇಯಾ ವಿನೋದ್ ಅವರು ನವೆಂಬರ್ 15 ರಂದು ತಮ್ಮ ಕುಟುಂಬದೊಂದಿಗೆ ತಮ್ಮ ಕಲಾಕೃತಿಯನ್ನು ಒಳಗೊಂಡ ಕಲಾ ಸ್ಥಾಪನೆಗೆ ಭೇಟಿ ನೀಡಿದರು. ಕಾಗದದ ಮೇಲೆ ಮೂಡಿದ ಕಲ್ಪನೆಯೊಂದು ಸಾರ್ವಜನಿಕ ಸ್ಥಳದಲ್ಲಿ ಸ್ಥಾನ ಪಡೆದದ್ದು ಮತ್ತು ಕುಟುಂಬದವರೆಲ್ಲರೂ ಒಟ್ಟಾಗಿ ಆ ಕಲಾಕೃತಿಯನ್ನು ಕಣ್ತುಂಬಿಕೊಂಡು ಸಂಭ್ರಮಿಸಲು ಸಾಧ್ಯವಾದದ್ದು ಆ ಪುಟ್ಟ ಕಲಾವಿದೆಗೆ ಅತ್ಯಂತ ವಿಶೇಷ ಕ್ಷಣವಾಗಿತ್ತು.
ಈ ಕುರಿತು ಪ್ರತಿಕ್ರಿಯಿಸಿದ ಸತ್ವ ಗ್ರೂಪ್ ನ ಕಾರ್ಯತಂತ್ರ ವಿಭಾಗದ ಉಪಾಧ್ಯಕ್ಷ ಶಿವಂ ಅಗರ್ವಾಲ್ ಅವರು, “ಸತ್ವದಲ್ಲಿ, ನಾವು ನಿರ್ಮಿಸುವ ಸ್ಥಳಗಳು ಅಂತಿಮವಾಗಿ ಅಲ್ಲಿ ಮತ್ತು ಅದರ ಸುತ್ತಮುತ್ತ ವಾಸಿಸುವ ಜನರಿಗೆ ಸಂಬಂಧಿಸಿವೆ ಎಂದು ನಾವು ನಂಬುತ್ತೇವೆ. ನಮ್ಮ ಮಕ್ಕಳ ದಿನಾಚರಣೆಯ ಉಪಕ್ರಮವಾದ ‘ಸತ್ವ ಸಿಟಿ: ವರ್ಲ್ಡ್ ಆಫ್ ವಂಡರ್ಸ್’ ಮೂಲಕ, ಮಕ್ಕಳು ತಮ್ಮ ಕಲ್ಪನೆಯನ್ನು ವ್ಯಕ್ತಪಡಿಸಲು ಮತ್ತು ತಮ್ಮ ಸೃಜನಶೀಲತೆಯು ಅವರಿಗೆ ಸದಾ ನೆನಪಿನಲ್ಲಿ ಉಳಿಯುವ ರೀತಿ ಯಲ್ಲಿ ಜೀವಂತವಾಗುವುದನ್ನು ನೋಡಲು ಒಂದು ಅವಕಾಶವನ್ನು ಕಲ್ಪಿಸಲು ನಾವು ಬಯಸಿದ್ದೆವು.
ಸಾಂಪ್ರದಾಯಿಕ ಯೋಜನಾ ಪ್ರಚಾರವನ್ನು ಮೀರಿದ ಅನುಭವದಲ್ಲಿ ಕುಟುಂಬಗಳನ್ನು ತೊಡಗಿಸಿಕೊಳ್ಳುವುದು ಮತ್ತು ಮಕ್ಕಳ ಕಲಾಕೃತಿಗಳನ್ನು ಸಾರ್ವಜನಿಕ ಸ್ಥಳಗಳಿಗೆ ತರುವುದು ಮನಸ್ಸಿಗೆ ಹಿತ ನೀಡುವ ವಿಷಯವಾಗಿದೆ. ಈ ಉಪಕ್ರಮವು ಯುವ ಮನಸ್ಸುಗಳನ್ನು ಮುಕ್ತವಾಗಿ ಕನಸು ಕಾಣಲು ಪ್ರೋತ್ಸಾಹಿಸುತ್ತದೆ ಮತ್ತು ಸತ್ವ ಸಿಟಿಯ ಸುತ್ತಮುತ್ತ ಬಲವಾದ ಸಮುದಾಯದ ಭಾವನೆಯನ್ನು ಬೆಳೆಸಲು ಸಹಾಯ ಮಾಡುತ್ತದೆ ಎಂದು ನಾವು ಭಾವಿಸುತ್ತೇವೆ” ಎಂದು ಹೇಳಿದರು.
‘ವರ್ಲ್ಡ್ ಆಫ್ ವಂಡರ್ಸ್’ ಮೂಲಕ, ಸತ್ವ ಗ್ರೂಪ್ ಕುಟುಂಬಗಳು ಮತ್ತು ವಿಸ್ತಾರ ಬೆಂಗಳೂರು ಸಮುದಾಯದೊಂದಿಗೆ ಅರ್ಥಪೂರ್ಣ ಬಾಂಧವ್ಯವನ್ನು ಬೆಳೆಸುವ ಜೊತೆಗೆ ಯುವ ಮನಸ್ಸುಗಳ ಸೃಜನಶೀಲತೆಯನ್ನು ಸಂಭ್ರಮಿಸಲು ಪ್ರಯತ್ನಿಸಿತು. ನಗರದ ಸೌಂದರ್ಯದಲ್ಲಿ ಮಕ್ಕಳ ಕಲಾಕೃತಿ ಗಳಿಗೆ ಸ್ಥಾನ ನೀಡುವ ಮೂಲಕ, ಈ ಉಪಕ್ರಮವು ಸಾಂಪ್ರದಾಯಿಕ ಮಕ್ಕಳ ದಿನಾಚರಣೆ ಯನ್ನು ಮೀರಿ ಕಲ್ಪನೆ, ಕುಟುಂಬಗಳು ಮತ್ತು ಸಮುದಾಯವನ್ನು ಒಗ್ಗೂಡಿಸುವ ಒಂದು ಸಾಮೂಹಿಕ ಅನುಭವವನ್ನು ಸೃಷ್ಟಿಸಿದೆ.
ಅದರ ಅಂತರಾಳದಲ್ಲಿ, ‘ವರ್ಲ್ಡ್ ಆಫ್ ವಂಡರ್ಸ್’ ದೊಡ್ಡ ಪ್ರಭಾವ ಬೀರಬಲ್ಲ ಸಣ್ಣ ಕಲ್ಪನೆಗಳ ಸಂಭ್ರಮವಾಗಿದೆ; ಇದು ಮಗುವಿನ ಕಲ್ಪನೆಗೆ ಈ ಜಗತ್ತಿನಲ್ಲಿ ಒಂದು ವಿಶೇಷ ಸ್ಥಾನವಿದೆ ಎಂಬುದನ್ನು ನಮಗೆ ನೆನಪಿಸುತ್ತದೆ.