Satva Developers: ಭಾರತದ ಅತಿದೊಡ್ಡ ರೀಟ್ ಐಪಿಒ : 6200 ಕೋಟಿ ರೂ ಮೊತ್ತದ ಐಪಿಒಗೆ ಸತ್ವ ಡೆವಲಪರ್ಸ್ ಸಜ್ಜು
ರಿಯಲ್ ಎಸ್ಟೇಟ್ ಸಂಸ್ಥೆಯಾದ ಸತ್ವ ಡೆವಲಪರ್ಸ್ ಹಾಗೂ ಬ್ಲಾಕ್‌ಸ್ಟೋನ್ ಬೆಂಬಲಿತ ರಿಯಲ್ ಎಸ್ಟೇಟ್ ಇನ್ವೆಸ್ಟ್‌ಮೆಂಟ್ ಟ್ರಸ್ಟ್ ಕೆಆರ್‌ಟಿ (ನಾಲೆಡ್ಜ್ ರಿಯಾಲ್ಟಿ ಟ್ರಸ್ಟ್) ಗುರುವಾರ ಮಾರ್ಚ್ 6 ರಂದು ಆರಂಭಿಕ ಸಾರ್ವಜನಿಕ ಹಂಚಿಕೆ (ಐಪಿಒ) ಮೂಲಕ 6200 ಕೋಟಿ ರೂ ಮೊತ್ತ ಸಂಗ್ರಹಕ್ಕೆ ಸೆಬಿಗೆ (ಸೆಕ್ಯೂರಿಟಿ ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ)ಗೆ ದಾಖಲೆಗಳನ್ನು ಸಲ್ಲಿಕೆ ಮಾಡಿದೆ.
ಸತ್ವ ಡೆವಲಪರ್ಸ್ -
Vishakha Bhat
Mar 7, 2025 1:34 PM
ಬೆಂಗಳೂರು: ರಿಯಲ್ ಎಸ್ಟೇಟ್ ಸಂಸ್ಥೆಯಾದ ಸತ್ವ ಡೆವಲಪರ್ಸ್ (Satva Developers) ಹಾಗೂ ಬ್ಲಾಕ್‌ಸ್ಟೋನ್ ಬೆಂಬಲಿತ ರಿಯಲ್ ಎಸ್ಟೇಟ್ ಇನ್ವೆಸ್ಟ್‌ಮೆಂಟ್ ಟ್ರಸ್ಟ್ ಕೆಆರ್‌ಟಿ (ನಾಲೆಡ್ಜ್ ರಿಯಾಲ್ಟಿ ಟ್ರಸ್ಟ್) ಗುರುವಾರ ಮಾರ್ಚ್ 6 ರಂದು ಆರಂಭಿಕ ಸಾರ್ವಜನಿಕ ಹಂಚಿಕೆ (ಐಪಿಒ) ಮೂಲಕ 6200 ಕೋಟಿ ರೂ ಮೊತ್ತ ಸಂಗ್ರಹಕ್ಕೆ ಸೆಬಿಗೆ (ಸೆಕ್ಯೂರಿಟಿ ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ)ಗೆ ದಾಖಲೆಗಳನ್ನು ಸಲ್ಲಿಕೆ ಮಾಡಿದೆ. ಬಹು ನಿರೀಕ್ಷಿತ ಭಾರತದ ಅತಿದೊಡ್ಡ ರೀಟ್ ಐಪಿಒ ಸದ್ಯದಲ್ಲೆ ಮಾರುಕಟ್ಟೆ ಪ್ರವೇಶಿಸಲಿದೆ.
ರಿಯಲ್ ಎಸ್ಟೇಟ್ ಇನ್ವೆಸ್ಟ್‌ಮೆಂಟ್ ಟ್ರಸ್ಟ್ (ಆರ್‌ಇಐಟಿ)ನಲ್ಲಿ ಬ್ಲಾಕ್‌ಸ್ಟೋನ್ ಹಾಗೂ ಸತ್ವ 55: 45 ರಷ್ಟು ಪಾಲುದಾರಿಕೆಯನ್ನು ಹೊಂದಿದ್ದು, ನೆಟ್ ಆಪರೇಟಿಂಗ್ ಆದಾಯ (ಎನ್‌ಒಐ) 4300 ಕೋಟಿ ರೂ ಹಾಗೂ ಒಟ್ಟೂ ಆಸ್ತಿ ಮೌಲ್ಯ (ಜಿಎವಿ) 60,000 ಕೋಟಿ ರೂ ಮೂಲಕ ಭಾರತದ ಅತಿದೊಡ್ಡ ಆಫೀಸ್ ರಿಯಲ್ ಎಸ್ಟೇಟ್ ಇನ್ವೆಸ್ಟ್‌ಮೆಂಟ್ ಟ್ರಸ್ಟ್ ಆಗಿ ಹೊರಹೊಮ್ಮಲಿದೆ.
ಐಪಿಒ ಹಂಚಿಕೆಯನ್ನು ಬುಕ್ ಬಿಲ್ಡಿಂಗ್ ಪ್ರಕ್ರಿಯೆ ಮೂಲಕ ನಡೆಸಲಿದ್ದು ಶೇ. 75ರಷ್ಟು ಹಂಚಿಕೆ ಸಾಂಸ್ಥಿಕೆ ಹೂಡಿಕೆದಾರರಿಗೆ ಹಾಗೂ ಶೇ. 25ರಷ್ಟು ಹಂಚಿಕೆ ಸಾಂಸ್ಥಿಕವಲ್ಲದ ಹೂಡಿಕೆದಾರರಿಗೆ ಲಭ್ಯವಿರಲಿದೆ .
ಈ ಸುದ್ದಿಯನ್ನೂ ಓದಿ: Share Market: ಕೊನೆಗೂ ಚೇತರಿಸಿಕೊಂಡ ಷೇರು ಮಾರುಕಟ್ಟೆ; ಸೆನ್ಸೆಕ್ಸ್, ನಿಫ್ಟಿ ಜಿಗಿತ
ಆರು ನಗರಗಳಲ್ಲಿ ಪ್ರಾಪರ್ಟಿ ಹೊಂದಿರುವ ಕೆಆರ್‌ಟಿ
ಹೈದರಾಬಾದ್, ಬೆಂಗಳೂರು, ಮುಂಬೈ, ಚೆನ್ನೈ, ಗುರುಗ್ರಾಮ್ ಹಾಗೂ ಅಹಮದಾಬಾದ್ ಸೇರಿ 6 ನಗರಗಳಲ್ಲಿ ಒಟ್ಟೂ 48 ಮಿಲಿಯನ್ ಚದರ ಅಡಿಯ ವ್ಯಾಪ್ತಿಯ 30 ಗ್ರೇಡ್ ಎ ಆಫೀಸ್‌ಗಳನ್ನು ಹೊಂದಿದ್ದು ಅದರಲ್ಲಿ 37.1 ಚದರ್ ಅಡಿ ಪೂರ್ಣಗೊಂಡಿರುವ ಕಟ್ಟಡ ಹಾಗೂ 2.8 ಚದರ್ ಅಡಿ ನಿರ್ಮಾಣ ಹಂತದ ಕಟ್ಟಡ ಹಾಗೂ 8.2 ಚದರ ಅಡಿ ಭವಿಷ್ಯದ ಕಾಮಗಾರಿಗೆ ಮೀಸಲಿಟ್ಟ ಆಸ್ತಿಯಾಗಿದೆ. ಕೆಆರ್‌ಟಿ (ನಾಲೆಡ್ಜ್ ರಿಯಾಲಿಟಿ ಟ್ರಸ್ಟ್) ಭಾರತದ ಅತಿದೊಡ್ಡ ವಿಸ್ತರಿತ ಕಚೇರಿ (ಆಫೀಸ್) ರೀಟ್ (ಆರ್‌ಇಐಟಿ) ಆಗಿದೆ. ಬೆಂಗಳೂರು, ಹೈದ್ರಾಬಾದ್ ಹಾಗೂ ಮುಂಬೈ ನಲ್ಲಿಯೇ ಶೇ. 95ರಷ್ಟು ಮೌಲ್ಯವನ್ನು ಇದು ಹೊಂದಿದೆ.