Shweta Basu:17ರ ವಯಸ್ಸಿನಲ್ಲೇ ಸ್ಟಾರ್, 23ನೇ ವಯಸ್ಸಲ್ಲಿ ಅರೆಸ್ಟ್, ಮದುವೆಯಾಗಿ 9 ವರ್ಷಕ್ಕೆ ಡಿವೋರ್ಸ್! ಯಾರು ಆ ನಟಿ?
ಬಾಲ ಕಲಾವಿದೆಯಾಗಿ ಚಿತ್ರರಂಗಕ್ಕೆ ಕಾಲಿಟ್ಟ ನಟಿ ಶ್ವೇತಾ ಬಸು ಆರಂಭದಲ್ಲೇ ಉತ್ತಮ ಖ್ಯಾತಿಯನ್ನು ಗಳಿಸಿದ್ದರು. ಆದರೆ ಅವರ ಸಿನಿ ಕೆರಿಯರ್ ಹೆಚ್ಚು ಕಾಲ ಉಳಿಯಲಿಲ್ಲ. ಕೆಲವೊಂದು ವೈಯಕ್ತಿಕ ವಿವಾದದಲ್ಲಿ ಸಿಲುಕಿ ಸಿನಿಮಾದಿಂದ ಸಂಪೂರ್ಣ ದೂರ ಉಳಿದಿದ್ದರು..



ಒಂದು ಕಾಲದಲ್ಲಿ ಟಾಲಿವುಡ್ನ ಸೆನ್ಸೇಶನ್ ಆಗಿದ್ದ ಶ್ವೇತಾ ಬಸು ತೆಲುಗು ಹಾಗೂ ತಮಿಳಿನ ಕೆಲ ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ಕೆಲವೊಂದು ವೈಯಕ್ತಿಕ ವಿವಾದಗಳ ನಂತರ ಚಲನಚಿತ್ರಗಳಿಂದ ದೂರ ಉಳಿದಿದ್ದರು. ಆದರೆ ಇತ್ತೀಚೆಗೆ ಅವರು OTT ಮೂಲಕ ಮತ್ತೆ ರೀ ಎಂಟ್ರಿ ನೀಡಿದ್ದಾರೆ.

ಶ್ವೇತಾ ಬಸು 2008 ರಲ್ಲಿ ಬಿಡುಗಡೆಯಾದ ಕೋತ ಬಂಗಾರು ಲೋಕಂ ಚಿತ್ರದ ಮೂಲಕ ಚಿತ್ರರಂಗಕ್ಕೆ ಪ್ರವೇಶಿಸಿದರು. ಅವರು ತಮ್ಮ ಮೊದಲ ಚಿತ್ರದಲ್ಲೇ ಹೆಚ್ಚು ಕ್ರೇಜ್ ಗಳಿಸಿದ್ದರು.17ನೇ ವಯಸ್ಸಿಗೆ ಸ್ಟಾರ್ ಹೀರೋಯಿನ್ ಆದರು.. ಆದರೆ 23 ನೇ ವಯಸ್ಸಿನಲ್ಲಿ ಅವರು ವೇಶ್ಯಾವಾಟಿಕೆ ಪ್ರಕರಣದಲ್ಲಿ ಸಿಕ್ಕಿಬಿದ್ದರು ಆ ಬಳಿಕ ಅವರ ಕ್ರೇಜ್ ಸ್ವಲ್ಪ ಮಟ್ಟಿಗೆ ಕಡಿಮೆಯಾಯಿತು.

ಶ್ವೇತಾ ಬಸು ಪ್ರಸಾದ್ ಅವರು 2002 ರಲ್ಲಿ ಮಕ್ಡಿ ಎಂಬ ಹಿಂದಿ ಚಿತ್ರದಲ್ಲಿ ಬಾಲನಟಿಯಾಗಿ ನಟಿಸಿದ್ದರು. ಈ ಚಿತ್ರಕ್ಕಾಗಿ ಶ್ವೇತಾ ಅವರಿಗೆ ಅತ್ಯುತ್ತಮ ಬಾಲನಟಿ ರಾಷ್ಟ್ರ ಪ್ರಶಸ್ತಿ ಲಭಿಸಿದೆ. 2008 ರಲ್ಲಿ ಬಿಡುಗಡೆಯಾದ ಕೋತ ಬಂಗಾರು ಚಿತ್ರದಲ್ಲಿ ನಟಿಸಿ ಸ್ಟಾರ್ ಪಟ್ಟ ಗಳಿಸಿದ್ದರು. ಈ ಚಿತ್ರದ ನಂತರ ತೆಲುಗಿನಲ್ಲಿ ಶ್ವೇತಾ ದೊಡ್ಡ ನಾಯಕಿಯಾಗುತ್ತಾರೆ ಎಂದು ಎಲ್ಲರೂ ಭಾವಿಸಿದ್ದರು.

2014 ರಲ್ಲಿ ಹೈದರಾಬಾದ್ನ ಹೋಟೆಲ್ ನಲ್ಲಿ ನಟಿ ಶ್ವೇತಾ ಅವರನ್ನು ವೇಶ್ಯಾವಾಟಿಕೆ ಪ್ರಕರಣದಲ್ಲಿ ಬಂಧಿಸಲಾಗಿತ್ತು. ಈ ಪ್ರಕರಣ ಇಡೀ ಟಾಲಿವುಡ್ನ್ನೇ ಬೆಚ್ಚಿಬೀಳಿಸಿತ್ತು. ಆ ಬಳಿಕ ಶ್ವೇತಾ ಬಸು ಪ್ರಸಾದ್ ಕ್ರೇಜ್ ಕಡಿಮೆಯಾಗುತ್ತದೆ. ಯಾವುದೇ ದೊಡ್ಡ ಸಿನಿಮಾ ಆಫರ್ಗಳು ಬರದೇ ರೈಡ್, ಕ್ಯಾಸ್ಕೋ, ಮುಂತಾದ ಚಿತ್ರಗಳಲ್ಲಿ ಸಣ್ಣ ಪಾತ್ರ ಮಾಡಿದ್ದರು. ಆದರೆ ಈ ಸಿನಿಮಾದಲ್ಲಿ ಯಾವುದೇ ಯಶಸ್ಸು ಕಾಣಲಿಲ್ಲ.

ಇದಾದ ಕೆಲವು ತಿಂಗಳ ನಂತರ, ಶ್ವೇತಾ ಚಲನಚಿತ್ರ ನಿರ್ಮಾಪಕ ರೋಹಿತ್ ಮಿತ್ತಲ್ ಅವರನ್ನು ಶ್ವೇತಾ ರಹಸ್ಯವಾಗಿ ಮದುವೆಯಾದರು ಆದರೆ ದಂಪತಿ 9 ವರ್ಷಗಳ ಮದುವೆಯ ನಂತರ ವಿಚ್ಛೇದನ ಪಡೆದರು. ಕೊನೆಯ ಬಾರಿಗೆ 2022 ರಲ್ಲಿ ಇಂಡಿಯಾ ಲಾಕ್ಡೌನ್ ಎನ್ನುವ ಚಿತ್ರದಲ್ಲಿ ನಟಿಸಿದ್ದರು. ಅದಾದ ಬಳಿಕ ಶ್ವೇತಾ ಒಟಿಟಿ ಸರಣಿಗಳಲ್ಲಿ ನಿರತರಾಗಿದ್ದಾರೆ. ಕೊನೆಯದಾಗಿ ತೆಲುಗಿನಲ್ಲಿ ಮೆಗಾಸ್ಟಾರ್ ಅವರ ಮಾಜಿ ಅಳಿಯ ಕಲ್ಯಾಣ್ ದೇವ್ ನಾಯಕನಾಗಿ ನಟಿಸಿದ 'ವಿಜೇತ' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.