ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಐಪಿಎಲ್‌ಗೆ ಸೇರ್ಪಡೆಯಾದ ಮುಜರಬಾನಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಪಾಕ್‌ ನಿರ್ಧಾರ

Blessing Muzarabani: ಟಿ20 ವಿಶ್ವಕಪ್‌ನಲ್ಲಿ ಮುಜರಬಾನಿ ಉತ್ತಮ ಉತ್ತಮ ಪ್ರದರ್ಶನ ನೀಡಿದ್ದರು. ತಂಡ ಸೂಪರ್ 8 ಹಂತವನ್ನು ತಲುಪಲು ಸಹಾಯ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಮುಜರಬಾನಿ ಆರು ಪಂದ್ಯಗಳಲ್ಲಿ 13 ವಿಕೆಟ್‌ಗಳನ್ನು ಕಬಳಿಸಿದರು. ಕೇವಲ ಒಂದು ವಿಕೆಟ್‌ ಅಂತರದಿಂದ ಜಂಟಿಯಾಗಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಳ್ಳವ ಅವಕಾಶದಿಂದ ವಂಚಿತರಾದರು.

ಮುಜರಬಾನಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಪಾಕ್‌ ಕ್ರಿಕೆಟ್‌ ನಿರ್ಧಾರ

Muzurbani -

Abhilash BC
Abhilash BC Mar 14, 2026 11:10 AM

ಕರಾಚಿ, ಮಾ.14: ಮುಂಬರುವ ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್ಎಲ್) ಗಾಗಿ ಇಸ್ಲಾಮಾಬಾದ್ ಯುನೈಟೆಡ್ ಜೊತೆಗಿನ ಒಪ್ಪಂದದಿಂದ ಹಿಂದೆ ಸರಿದು ಐಪಿಎಲ್‌ ಆಡಲು ನಿರ್ಧರಿಸಿದ ಜಿಂಬಾಬ್ವೆಯ ವೇಗಿ ಬ್ಲೆಸ್ಸಿಂಗ್ ಮುಜರಬಾನಿ(Blessing Muzarabani) ವಿರುದ್ಧ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಕಾನೂನು ಕ್ರಮ ಕೈಗೊಳ್ಳಲು ಸಿದ್ಧತೆ ನಡೆಸುತ್ತಿದೆ ಎಂದು ಜಿಯೋಸೂಪರ್ ವರದಿ ಮಾಡಿದೆ.

ಮಾರ್ಚ್ 26 ರಿಂದ ಮೇ 3 ರವರೆಗೆ ನಿಗದಿಯಾಗಿದ್ದ ಪಂದ್ಯಾವಳಿಗಾಗಿ ಶಮರ್ ಜೋಸೆಫ್ ಬದಲಿಗೆ ಮುಜರಬಾನಿ ಯುನೈಟೆಡ್ ತಂಡದ ಜತೆ 11 ಮಿಲಿಯನ್ ಮೊತ್ತಕ್ಕೆ ಒಪ್ಪಂದ ಮಾಡಿಕೊಂಡಿದ್ದರು. ಆದಾಗ್ಯೂ, ಅವರು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡಕ್ಕೆ ಸೇರ್ಪಡೆಗೊಳ್ಳಲು ನಿರ್ಧರಿಸಿದರು. ಈ ವರ್ಷದ ಆರಂಭದಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಶಿಫಾರಸಿನ ಮೇರೆಗೆ ಫ್ರಾಂಚೈಸಿಯಿಂದ ಮುಸ್ತಾಫಿಜುರ್ ರೆಹಮಾನ್ ಅವರನ್ನು ಬಿಡುಗಡೆ ಮಾಡಲಾಯಿತು. ಅವರ ಬದಲಿಗೆ ಮುಜರಬಾನಿ ಕೆಕೆಆರ್‌ಗೆ ಸೇರ್ಪಡೆಗೊಂಡರು.

ಮುಜರಬಾನಿ ಅವರ ಪಿಎಸ್ಎಲ್ ಒಪ್ಪಂದವನ್ನು ಮುರಿಯುವ ನಿರ್ಧಾರಕ್ಕೆ ಪಿಸಿಬಿಯಿಂದ ದೃಢ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಒಪ್ಪಂದ ಉಲ್ಲಂಘನೆಯ ಆಧಾರದ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದಿದೆ. ಹಿಂದಿನ ಋತುವಿನಲ್ಲಿ ಪೆಶಾವರ್ ಝಲ್ಮಿ ತಂಡಕ್ಕೆ ಆಯ್ಕೆಯಾಗಿದ್ದ ದಕ್ಷಿಣ ಆಫ್ರಿಕಾದ ಆಲ್‌ರೌಂಡರ್ ಕಾರ್ಬಿನ್ ಬಾಷ್, ನಂತರ ಬದಲಿ ಆಟಗಾರನಾಗಿ ಮುಂಬೈ ಇಂಡಿಯನ್ಸ್‌ಗೆ ಸೇರಿದ್ದರು. ಪಿಎಸ್‌ಎಲ್ ಬದ್ಧತೆಗಳಿಂದ ಹಿಂದೆ ಸರಿದ ನಂತರ, ಬಾಷ್‌ಗೆ ಪಾಕ್‌ ಕಿಕೆಟ್‌ ಮಂಡಳಿ ಲೀಗ್‌ನಲ್ಲಿ ಆಡದಂತೆ ಒಂದು ವರ್ಷದ ನಿಷೇಧ ಹೇರಿತ್ತು.

ಎಲ್‌ಪಿಜಿ ಬಿಕ್ಕಟ್ಟು; ಐಪಿಎಲ್ ನಿರ್ವಹಣೆಯ ಮೇಲೆ ಪರಿಣಾಮ ಬೀರುತ್ತದೆಯೇ?

ಟಿ20 ವಿಶ್ವಕಪ್‌ನಲ್ಲಿ ಮುಜರಬಾನಿ ಉತ್ತಮ ಉತ್ತಮ ಪ್ರದರ್ಶನ ನೀಡಿದ್ದರು. ತಂಡ ಸೂಪರ್ 8 ಹಂತವನ್ನು ತಲುಪಲು ಸಹಾಯ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಮುಜರಬಾನಿ ಆರು ಪಂದ್ಯಗಳಲ್ಲಿ 13 ವಿಕೆಟ್‌ಗಳನ್ನು ಕಬಳಿಸುವ ಮೂಲಕ ಜಂಟಿಯಾಗಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಲು ಕೇವಲ ಒಂದು ವಿಕೆಟ್ ಅಂತರ ಕಾಯ್ದುಕೊಂಡರು.

ಕಳೆದ ಆವೃತ್ತಿಯ ಐಪಿಎಲ್‌ನಲ್ಲಿ ಅವರು ಆರ್‌ಸಿಬಿ ತಂಡದಲ್ಲಿದ್ದರು. ಆದರೆ ಪಂದ್ಯ ಆಡುವ ಅವಕಾಶ ಸಿಕ್ಕಿರಲಿಲ್ಲ. ಮತೀಶ ಪತಿರಾಣ ಮತ್ತು ಹರ್ಷಿತ್ ರಾಣಾ ಅವರ ಗಾಯದಿಂದಾಗಿ ಸಂಕಷ್ಟದಲ್ಲಿದ್ದ ಕೋಲ್ಕತಾ ತಂಡದ ವೇಗದ ಬೌಲಿಂಗ್ ವಿಭಾಗಕ್ಕೆ ಮುಜರಬಾನಿ ಅವರ ಸೇರ್ಪಡೆ ದೊಡ್ಡ ಬಲ ನೀಡಲಿದೆ.