Akshaya Tritiya 2026: ಜೆನ್ ಜಿ ಯುವತಿಯರಿಗಾಗಿ ಬಂತು ವಜ್ರಾಭರಣದ ಫ್ಯಾಷನ್ ಜ್ಯುವೆಲರಿಗಳು
Diamond Fashion Jewellery: ಅಕ್ಷಯ ತೃತೀಯ ಸೀಸನ್ನಲ್ಲಿ ಮಾಡರ್ನ್ ಹಾಗೂ ಜೆನ್ ಜಿ ಯುವತಿಯರು ಇಷ್ಟಪಡುವಂತಹ ಫ್ಯಾಷನ್ ಜ್ಯುವೆಲರಿಗಳು ವಜ್ರಾಭರಣಗಳಲ್ಲೂ ಎಂಟ್ರಿ ನೀಡಿವೆ. ಯಾವ್ಯಾವ ಡಿಸೈನ್ನವು ಹೆಚ್ಚು ಜನಪ್ರಿಯವಾಗಿವೆ? ಈ ಕುರಿತ ವಿವರ ಇಲ್ಲಿದೆ.
ಚಿತ್ರಕೃಪೆ: ಪಿಕ್ಸೆಲ್ -
ಜೆನ್ ಜಿ ಯುವತಿಯರು ಇಷ್ಟಪಡುವಂತಹ ಬಂಗಾರ ಹಾಗೂ ವಜ್ರದ ಫ್ಯಾಷನ್ ಜ್ಯುವೆಲರಿಗಳು ಅಕ್ಷಯ ತೃತೀಯ ಸೀಸನ್ನಲ್ಲಿ ಲಗ್ಗೆ ಇಟ್ಟಿವೆ. ಈ ಮೊದಲು ಕೇವಲ ಆರ್ಟಿಫಿಷಿಯಲ್ ಮೆಟಲ್ನಲ್ಲಿ ದೊರೆಯುತ್ತಿದ್ದ, ಇವು ಇದೀಗ ಊಹೆಗೂ ಮೀರಿದ ಡಿಸೈನ್ನಲ್ಲಿ ಕಾಣಿಸಿಕೊಂಡಿವೆ.
ಜೆನ್ ಜಿ ಹುಡುಗಿಯರ ಫ್ಯಾಷನ್ ಜ್ಯುವೆಲರಿ ಕ್ರೇಝ್
ಮೊದಲಿನಿಂದಲೂ ಫ್ಯಾಷನ್ ಜ್ಯುವೆಲರಿಗಳು ಜೆನ್ ಜಿ ಯುವತಿಯರ ಫೇವರೇಟ್ ಲಿಸ್ಟ್ನಲ್ಲಿವೆ. ಇದಕ್ಕೆ ಕಾರಣ, ವೆಸ್ಟರ್ನ್ ಔಟ್ಫಿಟ್ ಮಾತ್ರವಲ್ಲ, ಎಲ್ಲಾ ಬಗೆಯ ಡ್ರೆಸ್ಕೋಡ್ಗಳಿಗೆ ಇವು ಮ್ಯಾಚ್ ಆಗುತ್ತವೆ. ಜತೆಗೆ ಅತ್ಯಾಕರ್ಷಕವಾಗಿ ಕಾಣಿಸುತ್ತವೆ.
ಸೀಸನ್ನಲ್ಲಿ ಚಾಲ್ತಿಯಲ್ಲಿರುವ ಡಿಸೈನ್ಸ್
ಅಬ್ಸ್ಟ್ರಾಕ್ಟ್ ಡಿಸೈನ್ಸ್, ಜಂಕ್ ಜ್ಯುವೆಲ್ ಡಿಸೈನ್ಸ್, ಸಿಂಪಲ್ ಸ್ಟಡ್ಸ್, ಕ್ರಿಸ್ಟಲ್ ಶೈನಿಂಗ್ ಹ್ಯಾಂಗಿಂಗ್ಸ್, ಬೀಡ್ಸ್ ಓವರ್ಸೈಝ್ ಜ್ಯುವೆಲರಿ, ಜೆಮೆಟ್ರಿಕಲ್ ವಿನ್ಯಾಸ, ಟ್ರಾಪಿಕಲ್ ಡಿಸೈನ್ಸ್, ಫ್ಲೋರಲ್ ಸ್ಟಡ್ಸ್, ಹ್ಯಾಂಗಿಂಗ್ಸ್, ಸೀಸನಬಲ್ ಇಯರಿಂಗ್ಸ್, ನೇಚರ್, ಸನ್-ಮೂನ್-ಸ್ಟಾರ್ ಡಿಸೈನ್ಸ್, ಪರ್ಲ್ ಫ್ಯಾಷನ್ ಜ್ಯುವೆಲರಿ ಸೇರಿದಂತೆ ನಾನಾ ಕಿವಿಯೊಲೆಗಳು, ಪೆಂಡೆಂಟ್ ಹಾಗೂ ಫಿಂಗರ್ ರಿಂಗ್ಗಳು ಈ ಕೆಟಗರಿಯಲ್ಲಿ ಎಂಟ್ರಿ ನೀಡಿವೆ.
ಕಾರ್ಪೋರೇಟ್ ಕ್ಷೇತ್ರದ ಮಹಿಳೆಯರ ಚಾಯ್ಸ್
ಈ ಫ್ಯಾಷನ್ ಜ್ಯುವೆಲರಿಗಳು ಲೈಟ್ವೇಟ್ ಹಾಗೂ ಕೈಗೆಟಕುವ ದರದಲ್ಲಿ ದೊರಕಲಾರಂಭಿಸಿರುವುದು ಸದ್ಯ ಕಾರ್ಪೋರೇಟ್ ಮಹಿಳೆಯರನ್ನು ಸೆಳೆಯುತ್ತಿದೆ. ಲಕ್ಷ ರೂ. ಗಳಿಗಿಂತ ಕಡಿಮೆಗೆ ದೊರಕುತ್ತಿರುವುದರಿಂದ ಕೊಳ್ಳುಗರ ಸಂಖ್ಯೆಯೂ ಹೆಚ್ಚಾಗಿದೆ ಎನ್ನುತ್ತಾರೆ ಜ್ಯುವೆಲರಿ ಶಾಪ್ವೊಂದರ ಮ್ಯಾನೇಜರ್ ರಾಕೇಶ್.
ಖರೀದಿಸುವ ಫ್ಯಾಷನ್ ಜ್ಯುವೆಲರಿಗಳು ಹೀಗಿರಲಿ
- ನೋಡಿದಾಗ ಯೂನಿಕ್ ಡಿಸೈನ್ ಎಂದೆನಿಸಬೇಕು.
- ಇಂಡೋ-ವೆಸ್ಟರ್ನ್ ಲುಕ್ಗೂ ಮ್ಯಾಚ್ ಆಗುವಂತಿರಬೇಕು.
- ಸೂಕ್ಷ್ಮ ಡಿಸೈನ್ಸ್ ಹೊಂದಿರುವುದರಿಂದ ರಫ್ ಬಳಕೆ ಮಾಡಬಾರದು.
- ಸ್ಟಡ್ಸ್ ಡಿಸೈನ್ಸ್ ರಫ್ ಬಳಕೆ ಮಾಡಬಹುದು.
- ವಜ್ರದಾದ್ದಲ್ಲಿ ಮೊದಲು ಮಾಹಿತಿ ಪಡೆದು ಖರೀದಿಸಿ.